Bengaluru Udyoga Mela 2022 ಮೇ 21 ರಂದು ಉದ್ಯೋಗ ಮೇಳ, ಆಸಕ್ತರು ಅರ್ಜಿ ಸಲ್ಲಿಸಿ

By Suvarna News  |  First Published May 18, 2022, 9:57 AM IST

ಮೇ 21 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ (Job fire) ಆಯೋಜನೆಯಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು.


ಬೆಂಗಳೂರು (ಮೇ.18): ಮೇ 21 ರಂದು ಬೆಂಗಳೂರಿನಲ್ಲಿ ಉದ್ಯೋಗ ಮೇಳ (Job fire) ಆಯೋಜನೆಯಾಗಿದ್ದು, ಆಸಕ್ತರು ಅರ್ಜಿ ಸಲ್ಲಿಸಬಹುದು. ಜಿಲ್ಲಾ ಉದ್ಯೋಗ ವಿನಿಮಯ ಕಛೇರಿಗಳು, ಬೆಂಗಳೂರು ಮ್ಯಾಜಿಕ್ ಬಸ್ ಇಂಡಿಯಾ ಫೌಂಡೇಶನ್ ಹಾಗೂ ಯುವಿಎ ಡಿಜಿಟಲ್ ಇವರ ಸಹಯೋಗದಲ್ಲಿ ದಿನಾಂಕ: 21-05-2022 ರ ಶನಿವಾರ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ಸೆಂಟ್ ಜೋಸೆಫ್ ಕಾಲೇಜ್ ನಂ.36, ಲಾಂಗ್ ಪೋರ್ಡ್ ರಿಂಗ್ ರೋಡ್, ಲಾಂಗ್ ಪೋರ್ಡ್ ಗಾರ್ಡನ್, ಬೆಂಗಳೂರು – 560027 ಇಲ್ಲಿ ಉದ್ಯೋಗ ಮೇಳವನ್ನು ಆಯೋಜಿಸಲಾಗಿದೆ.

ಕನಿಷ್ಟ 18 ರಿಂದ ಗರಿಷ್ಟ 40 ವಯೋಮಿತಿಯೊಳಗಿನ ಆಸಕ್ತ ಉದ್ಯೋಗಕಾಂಕ್ಷಿಗಳು ತಮ್ಮ ವಿದ್ಯಾಭ್ಯಾಸಕ್ಕೆ ಸಂಬಂಧಿಸಿದ ದಾಖಲೆಗಳು, ಆಧಾರ್ ಕಾರ್ಡ್, 10 ವೈಯುಕ್ತಿಕ ವಿವರದ ಮಾಹಿತಿ ಒಳಗೊಂಡ ಪತ್ರಗಳು (ಬಯೋಡೇಟಾ) ಹಾಗೂ ಪಾಸ್‍ಪೋರ್ಟ್ ಅಳತೆಯ ಭಾವಚಿತ್ರದೊಂದಿಗೆ ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಬಹುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ 9980853738, 9916181705 ಮತ್ತು 8197239971 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.

Tap to resize

Latest Videos

INDIAN ARMY RECRUITMENT 2022: ಟೆಕ್ನಿಕಲ್ ಗ್ರಾಜುಯೇಟ್ ಕೋರ್ಸ್‌ಗಳಿಗೆ ಅಧಿಸೂಚನೆ

ಏಪ್ರಿಲ್‌ನಲ್ಲಿ 88 ಲಕ್ಷ ಜನರಿಗೆ ದೇಶದಲ್ಲಿ ಹೊಸ ಉದ್ಯೋಗ!: ಕಳೆದ ಏಪ್ರಿಲ್‌ನಲ್ಲಿ ದಾಖಲೆಯ 1.68 ಲಕ್ಷ ಕೋಟಿ ರು. ಜಿಎಸ್‌ಟಿ ಸಂಗ್ರಹವಾಗಿ ದೇಶದ ಆರ್ಥಿಕತೆ ಚಿಗಿತುಕೊಂಡಿರುವ ಸಿಹಿ ಸುದ್ದಿ ಬೆನ್ನಲ್ಲೇ, ಏಪ್ರಿಲ್‌ ತಿಂಗಳಿನಲ್ಲಿ ದೇಶಾದ್ಯಂತ 88 ಲಕ್ಷ ಜನರು ಹೊಸದಾಗಿ ಉದ್ಯೋಗ ಪಡೆದುಕೊಂಡಿದ್ದಾರೆ ವರದಿಯೊಂದು ತಿಳಿಸಿದೆ.

ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ (ಸಿಎಂಐಇ) ಬಿಡುಗಡೆ ಮಾಡಿರುವ ವರದಿ ಅನ್ವಯ, ಕಳೆದ ಏಪ್ರಿಲ್‌ನಲ್ಲಿ 88 ಲಕ್ಷ ಜನರು ಹೊಸದಾಗಿ ಉದ್ಯೋಗ ಪಡೆದುಕೊಳ್ಳುವುದರೊಂದಿಗೆ ಒಟ್ಟು ಉದ್ಯೋಗ ಹೊಂದಿರುವವರ ಸಂಖ್ಯೆ 43.72 ಕೋಟಿಗೆ ತಲುಪಿದೆ. 2020ರಲ್ಲಿ ಕೋವಿಡ್‌ ಸಾಂಕ್ರಾಮಿಕ ಕಾಣಿಸಿಕೊಂಡ ಬಳಿಕ ಯಾವುದೇ ತಿಂಗಳೊಂದರಲ್ಲಿ ಇಷ್ಟುಪ್ರಮಾಣದ ಜನರು ದೇಶದಲ್ಲಿ ಹೊಸದಾಗಿ ಉದ್ಯೋಗ ವರ್ಗಕ್ಕೆ ಸೇರಿಕೊಂಡಿದ್ದು ಇದೇ ಮೊದಲು ವರದಿ ಹೇಳಿದೆ.

BECIL Recruitment 2022: ಖಾಲಿ ಇರುವ 86 ಹುದ್ದೆಗಳಿಗೆ ಅರ್ಜಿ ಆಹ್ವಾನ

ದುಡಿಯುವ ವಯೋಮಾನದ ಜನರು ಹೊಸದಾಗಿ ಪ್ರತಿ ತಿಂಗಳು ಉದ್ಯೋಗ ಪಡೆಯುವ ಪ್ರಮಾಣ ಸಾಮಾನ್ಯವಾಗಿ 20 ಲಕ್ಷಕ್ಕಿಂತ ಹೆಚ್ಚಿಗೆ ಆಗುವುದು ಸಾಧ್ಯವಿಲ್ಲ. ಅದರ ಹೊರತಾಗಿಯೂ ಅದು 88 ಲಕ್ಷಕ್ಕೆ ತಲುಪಿದೆ ಎಂದರೆ, ಈ ಹಿಂದೆ ಉದ್ಯೋಗ ಕಳೆದುಕೊಂಡ ಹಲವರು ಮರಳಿ ಉದ್ಯೋಗ ಪಡೆದುಕೊಂಡಿದ್ದಾರೆ ಎಂದರ್ಥ. ಏಪ್ರಿಲ್‌ಗೂ ಹಿಂದಿನ ಮೂರು ತಿಂಗಳಲ್ಲಿ 1.2 ಕೋಟಿ ಉದ್ಯೋಗ ನಷ್ಟವಾಗಿತ್ತು ಎಂದು ವರದಿ ಹೇಳಿದೆ.

ಜೊತೆಗೆ 2020-22ರ ಹಣಕಾಸು ವರ್ಷದಲ್ಲಿ ಹೀಗೆ ಮಾಸಿಕ ಹೊಸದಾಗಿ ಉದ್ಯೋಗ ವಲಯಕ್ಕೆ ಸೇರ್ಪಡೆಗೊಂಡವರ ಪ್ರಮಾಣ ಸರಾಸರಿ 20 ಲಕ್ಷ ಇತ್ತು ಎಂದು ವರದಿ ಹೇಳಿದೆ.

  • ಆರ್ಥಿಕತೆ ಮತ್ತಷ್ಟುಚೇತರಿಕೆಗೆ ಪುರಾವೆ
  • ದುಡಿಯುವ ವಯೋಮಾನದವರಿಗೆ ನೌಕರಿ ಸಿಗುತ್ತದೆ
  • ಮಾಸಿಕ 20 ಲಕ್ಷಕ್ಕಿಂತ ಹೆಚ್ಚು ಉದ್ಯೋಗ ಸಿಗುವುದಿಲ್ಲ
  • ಏಪ್ರಿಲ್‌ನಲ್ಲಿ 88 ಲಕ್ಷ ಮಂದಿಗೆ ನೌಕರಿ ದೊರೆತಿದೆ
  • ಇದರರ್ಥ ಉದ್ಯೋಗ ಕಳೆದುಕೊಂಡಿದ್ದವರಿಗೆ ನೌಕರಿ ಸಿಕ್ಕಿದೆ
  • ಹಿಂದಿನ 3 ತಿಂಗಳಲ್ಲಿ 1.2 ಕೋಟಿ ಉದ್ಯೋಗ ಲಭಿಸಿತ್ತು
  • ಸೆಂಟರ್‌ ಫಾರ್‌ ಮಾನಿಟರಿಂಗ್‌ ಇಂಡಿಯನ್‌ ಎಕಾನಮಿ ವರದಿ
  • ಯಾವ ವಲಯದಲ್ಲಿ ಉದ್ಯೋಗ
  • ಕೈಗಾರಿಕಾ ವಲಯ 55 ಲಕ್ಷ
  • ಸೇವಾ ವಲಯ 67 ಲಕ್ಷ
  • ಇತರೆ ವಲಯ 08 ಲಕ್ಷ
  • ಕೃಷಿ ವಲಯ 52 ಲಕ್ಷ
click me!