ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!

Published : Dec 04, 2025, 08:26 PM IST
 amar subramanya apple new ai chief microsoft google

ಸಾರಾಂಶ

ಬೆಂಗಳೂರಿನ ಎಂಜಿನಿಯರ್ ಅಮರ್ ಸುಬ್ರಹ್ಮಣ್ಯ ಅವರನ್ನು ಆಪಲ್ ತನ್ನ ಕೃತಕ ಬುದ್ಧಿಮತ್ತೆ (AI) ವಿಭಾಗದ ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಈ ಹಿಂದೆ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ದೈತ್ಯ ಕಂಪನಿಗಳಲ್ಲಿ ಸೇವೆ ಸಲ್ಲಿಸಿದ್ದ ಅಮರ್, ಈಗ ಆಪಲ್‌ನ AI ಮಾಡೆಲ್‌ ಸಂಶೋಧನೆಯನ್ನು ಮುನ್ನಡೆಸಲಿದ್ದಾರೆ.

ಬೆಂಗಳೂರು (ಡಿ.4): ಭಾರತೀಯ ಮೂಲದ ಅದರಲ್ಲೂ ಬೆಂಗಳೂರಿನ ಎಂಜಿನಿಯರ್ ಅಮರ್ ಸುಬ್ರಹ್ಮಣ್ಯ ಅವರನ್ನು ಆಪಲ್ ತನ್ನ AI (ಕೃತಕ ಬುದ್ಧಿಮತ್ತೆ) ಉಪಾಧ್ಯಕ್ಷರನ್ನಾಗಿ ನೇಮಿಸಿದೆ. ಅವರು ಮೇ 2026 ರಲ್ಲಿ ನಿವೃತ್ತರಾಗಲಿರುವ ಜಾನ್ ಗಿಯಾನಾಂಡ್ರಿಯಾ ಅವರ ಸ್ಥಾನವನ್ನು ವಹಿಸಿಕೊಳ್ಳಲಿದ್ದಾರೆ. ಅಮರ್ ಈ ಹಿಂದೆ ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಪ್ರಮುಖ ಕಂಪನಿಗಳಲ್ಲಿ ಕೆಲಸ ಮಾಡಿದ್ದಾರೆ. ಅವರ ಬಹುತೇಕ ವಿದ್ಯಾಭ್ಯಾಸ ಬೆಂಗಳೂರಿನಲ್ಲಿಯೇ ನಡೆದಿತ್ತು.

ಸುದ್ದಿ ಸಂಸ್ಥೆಯ ಪ್ರಕಾರ, ಈ ವರ್ಷದ ಆರಂಭದಲ್ಲಿ, ಆಪಲ್ "ನಮ್ಮ ಕೃತಕ ಬುದ್ಧಿಮತ್ತೆ (AI) ಮಾಡೆಲ್‌ ಸಿರಿಯನ್ನು ಅಪ್‌ಗ್ರೇಡ್ ಮಾಡುವ ಕೆಲಸ ಮಾಡುತ್ತಿದ್ದೇವೆ. ಇದು 2026 ರವರೆಗೆ ತೆಗೆದುಕೊಳ್ಳಬಹುದು" ಎಂದು ಹೇಳಿದೆ. ಸುಬ್ರಹ್ಮಣ್ಯ ಆಪಲ್‌ನ ಫೌಂಡೇಷನಲ್‌ ಮಾಡೆಲ್‌ ಮತ್ತು ML ಸಂಶೋಧನೆಯನ್ನು ಮುನ್ನಡೆಸುತ್ತಾರೆ ಮತ್ತು ಕಂಪನಿಯ ಸಾಫ್ಟ್‌ವೇರ್ ಮುಖ್ಯಸ್ಥ ಕ್ರೇಗ್ ಫೆಡೆರಿಘಿಗೆ ನೇರವಾಗಿ ವರದಿ ಮಾಡುತ್ತಾರೆ.

16 ವರ್ಷಗಳ ಕಾಲ ಗೂಗಲ್‌ನಲ್ಲಿ ಕೆಲಸ

ಮೈಕ್ರೋಸಾಫ್ಟ್‌ನಲ್ಲಿ ಕಾರ್ಪೊರೇಟ್ ಉಪಾಧ್ಯಕ್ಷ ಹುದ್ದೆಯನ್ನು ತೊರೆದ ನಂತರ ಸುಬ್ರಹ್ಮಣ್ಯ ಇತ್ತೀಚೆಗೆ ಆಪಲ್‌ಗೆ ಸೇರಿದರು. ಇದಕ್ಕೂ ಮೊದಲು, ಅವರು ಗೂಗಲ್‌ನಲ್ಲಿ ಸುಮಾರು 16 ವರ್ಷಗಳ ಕಾಲ ಕೆಲಸ ಮಾಡಿದ್ದರು. ಅಲ್ಲಿ ಅವರು ಗೂಗಲ್‌ನ AI ಮಾದರಿ ಜೆಮಿನಿಯನ್ನು ಮುನ್ನಡೆಸಿದರು. ಬೆಂಗಳೂರಿನಲ್ಲಿ ಜನಿಸಿದ್ದ ಅಮರ್ ಸುಬ್ರಹ್ಮಣ್ಯ ತಮ್ಮ ಆರಂಭಿಕ ಶಿಕ್ಷಣವನ್ನು ಉದ್ಯಾನನಗರಿಯಲ್ಲಿಯೇ ಪೂರೈಸಿದ್ದರು.

ಅವರನ್ನು AI (ಕೃತಕ ಬುದ್ಧಿಮತ್ತೆ) ಮತ್ತು ಯಂತ್ರ ಕಲಿಕೆಯ ಮಾಸ್ಟರ್ ಎಂದು ಪರಿಗಣಿಸಲಾಗುತ್ತದೆ. ಅವರು 2001 ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಬಿಇ (ಬ್ಯಾಚುಲರ್ ಆಫ್ ಎಂಜಿನಿಯರಿಂಗ್) (ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರಿಂಗ್) ಪಡೆದರು. ಪದವಿ ಪಡೆದ ನಂತರ, ಅಮರ್ ಸ್ಪೀಚ್‌ ರೆಕಗ್ನಿಷನ್‌, ನೈಸರ್ಗಿಕ ಭಾಷಾ ಸಂಸ್ಕರಣೆ (NLP) ಮತ್ತು ಹ್ಯೂಮನ್‌ ಆಕ್ಟಿವಿಟಿ ವಿಶ್ಲೇಷಣೆಯಲ್ಲಿ ಕೆಲಸ ಮಾಡಿದರು.

2007 ರಲ್ಲಿ, ಅವರು ಮೈಕ್ರೋಸಾಫ್ಟ್ ಗ್ರಾಜುಯೇಟ್ ಫೆಲೋಶಿಪ್ ಪಡೆದರು, ಅಲ್ಲಿ ಅವರು ಮಷಿನ್‌ ಲರ್ನಿಂಗ್‌ ಮತ್ತು ಇತರ ವಿಷಯಗಳಲ್ಲಿ ಕೆಲಸ ಮಾಡಿದರು. 2025 ರಲ್ಲಿ, ಮೈಕ್ರೋಸಾಫ್ಟ್ ಗೂಗಲ್‌ನ ಡೀಪ್‌ಮೈಂಡ್‌ನಿಂದ 20 ಜನರನ್ನು ನೇಮಿಸಿಕೊಂಡಿತು. ಅವರಲ್ಲಿ ಅಮರ್ ಕೂಡ ಇದ್ದರು. ಅವರನ್ನು ಮೈಕ್ರೋಸಾಫ್ಟ್‌ನಲ್ಲಿ AI ಉಪಾಧ್ಯಕ್ಷರನ್ನಾಗಿ ನೇಮಿಸಲಾಯಿತು.

ಮೈಕ್ರೋಸಾಫ್ಟ್ ಸೇರಿದ ನಂತರ, ಅಮರ್ ಲಿಂಕ್ಡ್ಇನ್ ಪೋಸ್ಟ್‌ನಲ್ಲಿ, "ಗೂಗಲ್‌ಗೆ ಹೋಲಿಸಿದರೆ, ಮೈಕ್ರೋಸಾಫ್ಟ್‌ನಲ್ಲಿರುವ ಜನರು ಹೆಚ್ಚು ಒಳ್ಳೆಯವರು. ಇಲ್ಲಿ ಯಾವುದೇ ಸ್ಪರ್ಧೆಯಿಲ್ಲ. ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಾರೆ. ಯಾವುದೇ ಅಹಂಕಾರವಿಲ್ಲ, ಮತ್ತು ಕನಸುಗಳು ದೊಡ್ಡವು' ಎಂದು ಬರೆದಿದ್ದರು.

 

PREV
Read more Articles on
click me!

Recommended Stories

ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?
ಟಿಸಿಎಸ್ ಮತ್ತೊಂದು ಕರಾಳ ಮುಖ: ಕೆಲಸಕ್ಕೆ ಸೇರಿದ ಮೊದಲ ದಿನವೇ ಉದ್ಯೋಗಿಗೆ ಕಾದಿತ್ತು ಶಾಕ್!