ಬೆಂಗಳೂರು ಕಂಪೆನಿಯಲ್ಲಿ ಡಿಫರೆಂಟ್ ಜಾಬ್‌, ಜೋಕ್ ಮಾಡೋದಷ್ಟೇ ಕೆಲ್ಸ, ಭರ್ತಿ 1 ಲಕ್ಷ ರೂ. ಸಂಬಳ!

Published : Mar 22, 2023, 03:39 PM ISTUpdated : Mar 22, 2023, 04:07 PM IST
ಬೆಂಗಳೂರು ಕಂಪೆನಿಯಲ್ಲಿ ಡಿಫರೆಂಟ್ ಜಾಬ್‌, ಜೋಕ್ ಮಾಡೋದಷ್ಟೇ ಕೆಲ್ಸ, ಭರ್ತಿ 1 ಲಕ್ಷ ರೂ. ಸಂಬಳ!

ಸಾರಾಂಶ

ನಿಮ್ಗೆ ಸಿಕ್ಕಾಪಟ್ಟೆ ಹ್ಯೂಮರ್ ಸೆನ್ಸ್ ಇದ್ಯಾ? ಯಾವ ವಿಚಾರದಲ್ಲೂ ಜೋಕ್ ಮಾಡಬಲ್ಲಿರಾ? ಹಾಗಿದ್ರೆ ಇಲ್ ಕೇಳಿ. ಬರೀ ಜೋಕ್ ಮಾಡ್ತಿದ್ರೆ ಸಾಕು. ತಿಂಗಳಿಗೆ ಭರ್ತಿ ಒಂದು ಲಕ್ಷ ರೂ. ಸ್ಯಾಲರಿ ಸಿಗುತ್ತೆ. ಅರೆ, ಇದೇನ್ ಹೇಳ್ತಿದ್ದೀರಪ್ಪಾ ಅಂತ ಗಾಬರಿಯಾಗ್ಬೇಡಿ. ಇಲ್ಲಿದೆ ಹೆಚ್ಚಿನ ಮಾಹಿತಿ.

ಇತ್ತೀಚಿನ ವರ್ಷಗಳಲ್ಲಿ ಯಾವುದೇ ವಿಷಯವಿರಲಿ ಅದನ್ನು ಮೀಮ್ಸ್ ಮಾಡಿ ವೈರಲ್ ಮಾಡುವುದು ಸಾಮಾನ್ಯವಾಗಿದೆ. ಸೋಷಿಯಲ್, ಪೊಲಿಟಿಕಲ್, ಸಿನಿಮಾ ಹೀಗೆ ಎಲ್ಲಾ ರೀತಿಯ ಘಟನೆಗಳು ಮೀಮ್ಸ್‌ನಿಂದ ವೈರಲ್ ಆಗುತ್ತವೆ. ಇಂಥಾ ಮೀಮ್ಸ್‌ಗಳು ಬಹುಬೇಗನೇ ಜನರನ್ನು ತಲುಪುತ್ತವೆ. ಹೀಗಾಗಿಯೇ ಬೆಂಗಳೂರು ಮೂಲದ ಕಂಪೆನಿಯೊಂದು ಮೀಮ್ಸ್‌ ಆಫೀಸರ್‌ನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಬೆಂಗಳೂರಿನ ಹಣಕಾಸು ಸೇವೆಗಳ ಕಂಪನಿ ಸ್ಟಾಕ್‌ಗ್ರೋ ತಿಂಗಳಿಗೆ 1 ಲಕ್ಷ ರೂ. ಸಂಬಳದೊಂದಿಗೆ ಮುಖ್ಯ ಮೆಮೆ ಆಫೀಸರ್ (ಸಿಎಂಒ) ಹುದ್ದೆಗೆ ಪೋಸ್ಟ್ ಮಾಡುತ್ತಿರುವುದಾಗಿ ಜಾಹೀರಾತು ನೀಡಿದ್ದು, ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ.

ಮೀಮ್ಸ್ ಆಫೀಸರ್ ಹುದ್ದೆ, ತಿಂಗಳಿಗೆ ಭರ್ತಿ 1 ಲಕ್ಷ ರೂ. ಸಂಬಳ
ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಂಡಿರುವ ಪೋಸ್ಟ್‌ನ ಪ್ರಕಾರ, ಕಂಪನಿಯು ಸ್ಟಾಕ್ ಮಾರುಕಟ್ಟೆಯ ಆಳವಾದ ಜ್ಞಾನವನ್ನು ಹೊಂದಿರುವ ಅಭ್ಯರ್ಥಿಯನ್ನು ಹುಡುಕುತ್ತಿದೆ. ಅಭ್ಯರ್ಥಿ ಮೀಮ್ಸ್‌ನ್ನು ಚಮತ್ಕಾರಿ ರೀತಿಯಲ್ಲಿ ಪ್ರಸ್ತುತಪಡಿಸಬಹುದು. ಈ ಮೂಲಕ ಗ್ರಾಹಕರನ್ನು (Customers) ಸೆಳೆಯಬೇಕು. ಸದ್ಯ ಈ ಪೋಸ್ಟ್‌ಗೆ 200ಕ್ಕೂ ಹೆಚ್ಚು ಅಕೇಶನ್‌ಗಳು ಬಂದಿವೆ ಎಂದು ತಿಳಿದುಬಂದಿದೆ. ಇದು ಫುಲ್‌ ಟೈಮ್‌ ಹುದ್ದೆಯಾಗಿದೆ.

ದಿನಿವಿಡೀ ಸುಮ್ನೆ ಕ್ಯಾಂಡಿ ತಿನ್ತಿದ್ರೆ ಸಾಕು, ವರ್ಷಕ್ಕೆ 61 ಲಕ್ಷ ರೂ. ಸ್ಯಾಲರಿ !

ಹಣಕಾಸಿನ ಬಗ್ಗೆ ಮೀಮ್ಸ್ ತಯಾರಿಸುವ ಜಾಬ್‌
ಉದ್ಯೋಗವನ್ನು (Job) ಮಾಡಲು ಬಯಸುವ ಅಭ್ಯರ್ಥಿಯು ಹಣಕಾಸು ಮತ್ತು ವಿನೋದವನ್ನು ಸಲೀಸಾಗಿ ಸಂಪರ್ಕಿಸಲು ಶಕ್ತರಾಗಿರಬೇಕು. ಎಲ್ಲಾ ಉಲ್ಲಾಸದ ವಿಷಯಗಳಿಗೆ ಗೀಳನ್ನು ಹೊಂದಿರಬೇಕು ಮತ್ತು ಬ್ರ್ಯಾಂಡ್‌ನ ಸಂದೇಶದೊಂದಿಗೆ ಸಿಂಕ್ ಆಗಿ ಟ್ರೆಂಡ್‌ಗಳನ್ನು ವೈರಲ್ ವಿಷಯವಾಗಿ ಪರಿವರ್ತಿಸುವ ಕೌಶಲ್ಯವನ್ನು (Talent) ಹೊಂದಿರಬೇಕು. ವ್ಯಕ್ತಿಯು ವ್ಯಂಗ್ಯದ ತೀಕ್ಷ್ಣವಾದ ಅರ್ಥವನ್ನು ಹೊಂದಿರಬೇಕು ಮತ್ತು ನೀರಸ ಹಣಕಾಸಿನ ಪರಿಕಲ್ಪನೆಗಳನ್ನು ಸೃಜನಶೀಲ ಪೋಸ್ಟ್‌ಗಳಾಗಿ ಪರಿವರ್ತಿಸಲು ಸಾಧ್ಯವಾಗಬೇಕು ಎಂದು ತಿಳಿಸಲಾಗಿದೆ. StockGroನ ಗೋಚರತೆಯನ್ನು ಹೆಚ್ಚಿಸಲು ವ್ಯಕ್ತಿ ಕ್ಯುರೇಟಿಂಗ್, ಐಡಿಯಾಟಿಂಗ್ ಮತ್ತು ಮೇಮ್‌ಗಳನ್ನು ಹಂಚಿಕೊಳ್ಳುವುದನ್ನು ಒಳಗೊಂಡಿರುತ್ತದೆ.

ಆನ್‌ಲೈನ್ ಟ್ರೇಡಿಂಗ್ ಪ್ಲಾಟ್‌ಫಾರ್ಮ್ ಲಿಂಕ್ಡ್‌ಇನ್‌ನಲ್ಲಿ ಉದ್ಯೋಗಕ್ಕಾಗಿ ಇನ್ನು ಮುಂದೆ ಅರ್ಜಿಗಳನ್ನು ಸ್ವೀಕರಿಸುತ್ತಿಲ್ಲವಾದರೂ, ಜನರು ತಮ್ಮ ಸ್ನೇಹಿತರನ್ನು ಕೆಲಸಕ್ಕೆ ಶಿಫಾರಸು ಮಾಡಬಹುದು ಮತ್ತು ಅವರ ರೆಫರಲ್ ಅನ್ನು ನೇಮಿಸಿಕೊಂಡರೆ ಐಪ್ಯಾಡ್ ಗೆಲ್ಲುವ ಅವಕಾಶವನ್ನು ಪಡೆಯಬಹುದು. ಸ್ಟಾಕ್ ಸಿಮ್ಯುಲೇಶನ್ ಅಪ್ಲಿಕೇಶನ್ ಯುವ ಪೀಳಿಗೆಯ ಮೇಲೆ ಅದರ ಪ್ರಭಾವದಿಂದಾಗಿ ತಿಂಡಿ ಮಾಡಬಹುದಾದ ಮೇಮ್‌ಗಳ ಮೂಲಕ ತನ್ನ ಬ್ರ್ಯಾಂಡ್ ಉಪಸ್ಥಿತಿಯನ್ನು ಹರಡುವ ಮಾರ್ಕೆಟಿಂಗ್ ಗಿಮಿಕ್‌ನ್ನು ಪ್ರಸ್ತುತಪಡಿಸುತ್ತಿದೆ. 

ದಿನಿವಿಡೀ ಸುಮ್ನೆ ಕ್ಯಾಂಡಿ ತಿನ್ತಿದ್ರೆ ಸಾಕು, ವರ್ಷಕ್ಕೆ 61 ಲಕ್ಷ ರೂ. ಸ್ಯಾಲರಿ !

ಸ್ಟಾಕ್‌ಗ್ರೋ ಸಂಸ್ಥಾಪಕ ಮತ್ತು ಸಿಇಒ ಅಜಯ್ ಲಖೋಟಿಯಾ ಮಾತನಾಡಿ, 'ಮೀಮ್ಸ್ ಎಂಬುದು ಇತ್ತೀಚಿನ ವರ್ಷಗಳಲ್ಲಿ ಎಲ್ಲರನ್ನೂ ಆಕರ್ಷಿಸುತ್ತಿರುವ ವಿಷಯವಾಗಿದೆ. ಹೀಗಾಗಿ ಇಂಥಾ ಹುದ್ದೆಯನ್ನು ಸೃಷ್ಟಿಸಿರುವುದಾಗಿ ಹೇಳಿಕೊಂಡಿದ್ದಾರೆ. ಮುಖ್ಯ ಮೀಮ್ಸ್‌ ಅಧಿಕಾರಿಯ ಎಂಬುದು ಸ್ಪಲ್ಪ ವಿಚಿತ್ರವಾದ ಹುದ್ದೆಯಾದರೂ, ನಾವು ಜನರೊಂದಿಗೆ ಸಂಪರ್ಕ ಹೊಂದಲು ಇದು ಅಗತ್ಯವಿದೆ. ಮೀಮ್ಸ್‌ಗಳು ಬಳಕೆದಾರರಲ್ಲಿ ಉತ್ಸಾಹವನ್ನು ಮೂಡಬಹುದು ಎಂದು ನಾವು ಅಂದುಕೊಂಡಿದ್ದೇವೆ. ಮೀಮ್ಸ್ ಆಫೀಸರ್ ನೇಮಕದ ಬಳಿಕ ಜನರ ಪ್ರತಿಕ್ರಿಯೆಗಳನ್ನು ತಿಳಿಯಲು ನಾವು ಕಾತುರರಾಗಿದ್ದೇವೆ ಎಂದು ಅಜಯ್ ಲಖೋಟಿಯಾ ಹೇಳಿದರು.

ಅಭ್ಯರ್ಥಿಗೆ ಇರಬೇಕಾದ ಅರ್ಹತೆ ಏನು?
ಹಣಕಾಸು, ಸ್ಟಾಕ್ ಮಾರುಕಟ್ಟೆ ಬಗ್ಗೆ ಜ್ಞಾನ ಇರಬೇಕು. ಹಣಕಾಸು ಮತ್ತು ಫನ್ನಿ ಟ್ರೆಂಡ್‌ಗಳ ಬಗ್ಗೆ ಲಿಂಕ್‌ ಮಾಡಬಲ್ಲ ಸೃಜನಶೀಲತೆ ಇರಬೇಕು. ಫನ್ನಿ ಅನ್ನಿಸುವ ಹಾಗೂ ಹಣಕಾಸು ಸಂಬಂಧಿತ ಮೀಮ್ಸ್‌ಗಳನ್ನು ಸೃಷ್ಟಿಸಬೇಕು. ಹೆಚ್ಚಿನ ಹಾಸ್ಯ ಪ್ರಜ್ಞೆ ಇರಬೇಕು. ಸಂವಹನಾ ಕೌಶಲ, ಟೀಮ್‌ ಸ್ಪಿರಿಟ್‌ನಲ್ಲಿ ಕೆಲಸ ಮಾಡುವ ಸ್ವಭಾವ ಇರಬೇಕು. ನಕ್ಕು ನಗಿಸಬಲ್ಲ ಮೀಮ್ಸ್‌ಗಳು ಅದೇ ವೇಳೆ ಹಣಕಾಸು ವಿಷಯಗಳನ್ನೂ ಒಳಗೊಂಡಿರಬೇಕು. ಅದ್ಭುತವಾಗಿ ಬರೆಯಲು ಗೊತ್ತಿರಬೇಕು ಎಂದು ಸ್ಟಾಕ್‌ ಗ್ರೊ ಕಂಪನಿಯ ಸಿಇಒ ಅಜಯ್‌ ಲಾಖೋಟಿಯಾ ತಿಳಿಸಿದ್ದಾರೆ.

ಛೀ! ಈ ವಾಸನೆ ತಗೊಂಡ್ರೆ ತಿಂಗಳಿಗೆ 1.5 ಲಕ್ಷ ರೂ. ಸಂಬಳ ಕೊಡ್ತಾರಂತೆ...

PREV
Read more Articles on
click me!

Recommended Stories

ಬೆಂಗಳೂರಿನ ಅಮರ್‌ ಸುಬ್ರಹ್ಮಣ್ಯ ಆಪಲ್‌ ಎಐ ಟೀಮ್‌ಗೆ ಉಪಾಧ್ಯಕ್ಷ!
ಸರಾಸರಿ ಮಾಸಿಕ ವೇತನ: ದೇಶದಲ್ಲಿಯೇ 2ನೇ ಸ್ಥಾನದಲ್ಲಿ ಕರ್ನಾಟಕ, ಸಿಗೋ ಸ್ಯಾಲರಿ ಎಷ್ಟು?