ದೇಶದ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ, ಮಹಿಳೆಯರೇ ಹೆಚ್ಚು!

By Suvarna News  |  First Published Jan 21, 2022, 7:02 PM IST

ಡಿಸೆಂಬರ್ 2021ರ ವೇಳೆಗೆ ಭಾರತದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ ತಲುಪಿದೆ. ಅದರಲ್ಲಿ ಮಹಿಳೆಯರೇ ಹೆಚ್ಚು ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ ಹೇಳಿದೆ.


ಬೆಂಗಳೂರು(ಜ.21): ಡಿಸೆಂಬರ್ 2021ರ ವೇಳೆಗೆ ಭಾರತದಲ್ಲಿರುವ ನಿರುದ್ಯೋಗಿಗಳ ಸಂಖ್ಯೆ 5.3 ಕೋಟಿ ತಲುಪಿದೆ. ಅದರಲ್ಲಿ ಮಹಿಳೆಯರೇ ಹೆಚ್ಚು ಎಂದು ಭಾರತೀಯ ಆರ್ಥಿಕತೆಯ ಮೇಲ್ವಿಚಾರಣೆ ಕೇಂದ್ರ (Centre for Monitoring Indian Economy - CMIE) ಹೇಳಿದೆ. ಇವರಲ್ಲಿ 3.5 ಕೋಟಿ ನಿರುದ್ಯೋಗಿಗಳು ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದಾರೆ ಮತ್ತು 1.7 ಕೋಟಿ ಜನರು ಕೆಲಸ ಮಾಡಲು ಸಿದ್ಧರಿದ್ದರೂ ಕೆಲಸ ಹುಡುಕಲು ಮನಸ್ಸು ಮಾಡಿಲ್ಲ ಎಂದು ಸಿಎಂಐಇ ತನ್ನ ವರದಿಯಲ್ಲಿ ತಿಳಿಸಿದೆ.

ಭಾರತವು ನಿರುದ್ಯೋಗ (Unemployment) ದರದಲ್ಲಿರುವ ಶೇ. 7.9 ಜನರಿಗೆ ಅಥವಾ ಡಿಸೆಂಬರ್ 2021ರಲ್ಲಿ ಕಂಡು ಬಂದಿರುವ 3.5 ಕೋಟಿ ಜನರಿಗೆ ತಕ್ಷಣವೇ ಉದ್ಯೋಗವನ್ನು ಒದಗಿಸಬೇಕಾಗಿದೆ. ಯಾರು ಸಕ್ರಿಯವಾಗಿ ಉದ್ಯೋಗ  ಹುಡುಕುತ್ತಿದ್ದಾರೋ ಅವರಿಗೆ ಕೆಲಸ ಒದಗಿಸಬೇಕು ಎಂದು ಸಿಎಂಐಇ ತನ್ನ ಸಾಪ್ತಾಹಿಕ ವಿಶ್ಲೇಷಣೆಯಲ್ಲಿ ಒತ್ತಾಯಿಸಿದೆ.

Tap to resize

Latest Videos

undefined

ಹೆಚ್ಚುವರಿ 1.7 ಕೋಟಿ ಜನರಿಗೆ ಉದ್ಯೋಗವನ್ನು ಒದಗಿಸುವುದು ಕೂಡ ಅಷ್ಟೇ ಮುಖ್ಯವಾದ ಸವಾಲಾಗಿದೆ. ಇವರು ಕೆಲಸ ಲಭ್ಯವಿದ್ದರೆ ಕೆಲಸ ಮಾಡಲು ಸಿದ್ಧರಿದ್ದಾರೆ, ಆದರೆ ಕೆಲಸಕ್ಕಾಗಿ ಸಕ್ರಿಯವಾಗಿ ಹುಡುಕುತ್ತಿಲ್ಲ ಅಷ್ಟೇ ಎಂದಿದ್ದಾರೆ.

ಸರಕಾರಿ ಶಾಲೆಯಲ್ಲಿ ನ್ಯಾನೊ ಉಪಗ್ರಹ ನಿರ್ಮಾಣಕ್ಕೆ 1.90 ಕೋಟಿ ರೂ. ಬಿಡುಗಡೆ

ಸಿಎಂಐಇ ಪ್ರಕಾರ ಡಿಸೆಂಬರ್ 2021ರಲ್ಲಿ ಸಕ್ರಿಯವಾಗಿ ಕೆಲಸ ಹುಡುಕುತ್ತಿದ್ದ 3.5 ಕೋಟಿ ನಿರುದ್ಯೋಗಿಗಳಲ್ಲಿ ಶೇ. 23 ಅಂದರೆ 80 ಲಕ್ಷದಷ್ಟು ಜನರು ಮಹಿಳೆಯರು, ಇನ್ನು 1.7 ಕೋಟಿ ಮಂದಿ ಪ್ಯಾಸಿವ್ ಆಗಿ ನಿರುದ್ಯೋಗಿಗಳಾಗಿದ್ದು, ಶೇ 53ರಷ್ಟು ಅಂದರೆ 90 ಲಕ್ಷ ಮಹಿಳೆಯರು ಸಕ್ರಿಯವಾಗಿ ಕೆಲಸಕ್ಕಾಗಿ ಹುಡುಕದಿದ್ದರೂ ಅವರಿಗೆ ಉದ್ಯೋಗ ಮಾಡುವ ಸಾಮರ್ಥ್ಯ ಹೊಂದಿದ್ದಾರೆ.

ಇಷ್ಟು ದೊಡ್ಡ ಸಂಖ್ಯೆಯಲ್ಲಿ ಮಹಿಳೆಯರು ಉದ್ಯೋಗ ಮಾಡುವ ಸಾಮರ್ಥ್ಯ ಇದ್ದರೂ ಸಕ್ರಿಯವಾಗಿ ಕೆಲಸಕ್ಕೆ ಏಕೆ ಅಪ್ಲೈ ಮಾಡುತ್ತಿಲ್ಲ ಅಥವಾ ಉದ್ಯೋಗ ಅರಸಲು ಬೇರೆ ಪ್ರಯತ್ನ ಏಕೆ ಮಾಡುತ್ತಿಲ್ಲ. ಇದನ್ನು ಪತ್ತೆ ಹಚ್ಚುವುದು ಮುಖ್ಯವಾಗಿದೆ. ಉದ್ಯೋಗ ಲಭ್ಯ ಇಲ್ಲ ಎಂಬ ಕಾರಣವೋ ಅಥವಾ ಕೆಲಸಕ್ಕೆ ಸೇರುವುದಕ್ಕೆ ಸಾಮಾಜಿಕ ಬೆಂಬಲದ ಕೊರತೆಯೋ ಎಂಬ ಚರ್ಚೆ ನಡೆಯುತ್ತಿದೆ.

PRASAR BHARATI RECRUITMENT 2022: ಪ್ರಸಾರ ಭಾರತಿಯಲ್ಲಿನ ವಿವಿಧ ಹುದ್ದೆಗಳಿಗೆ ಇಂದೇ ಅರ್ಜಿ ಸಲ್ಲಿಸಿ

2020ರ ಸಾಂಕ್ರಾಮಿಕ ಕಾಲದಲ್ಲಿ ಜಾಗತಿಕ ಉದ್ಯೋಗ ದರ ಶೇ. 55 ಹಾಗೂ 2019ರಲ್ಲಿ ಶೇ. 58 ಎಂದು ವಿಶ್ವ ಬ್ಯಾಂಕ್ ಹೇಳಿದೆ. ಮತ್ತು ಇದರಲ್ಲಿ ಭಾರತದಲ್ಲಿ ಶೇ. 43ರಷ್ಟು ಇತ್ತು ಎಂದಿದೆ. ಅದಲ್ಲದೆ, ಸಿಎಂಐಇ ಭಾರತದ ಉದ್ಯೋಗ ದರವನ್ನು ಶೇ. 38ಕ್ಕೆ ನಿಗದಿಪಡಿಸಿದೆ ಎಂದು ಸಿಎಂಐಇ, ತನ್ನ ವರದಿಯಲ್ಲಿ ವಿಶ್ವಬ್ಯಾಂಕ್‌ನ ಡೇಟಾವನ್ನು ಉಲ್ಲೇಖಿಸಿದೆ.

ಭಾರತದ ನಿರುದ್ಯೋಗ ಸಮಸ್ಯೆಯು ಅದರ ನಿರುದ್ಯೋಗ ದರದಲ್ಲಿ ಪ್ರತಿಫಲಿಸುವುದಿಲ್ಲ. ಇದರ ಸಮಸ್ಯೆ ಕಡಿಮೆ ಉದ್ಯೋಗ ದರ ಮತ್ತು ಅದರ ನಿರುತ್ಸಾಹಗೊಂಡ ಯುವ ಮಹಿಳಾ ಕಾರ್ಮಿಕ ಶಕ್ತಿಯಾಗಿದೆ, ಎಂದು ಸಿಎಂಐಇ ವಿಶ್ಲೇಷಿಸಿದೆ.

IFFCO Recruitment 2022: ಇಫ್ಕೊನಲ್ಲಿ ಬಿಸಿಎ ಪಾಸಾದವರಿಗೆ ಉದ್ಯೋಗವಕಾಶ

ಸಿಎಂಐಇ ಪ್ರಕಾರ, ಭಾರತದ ಶ್ರೀಮಂತಿಕೆಯ ಹಾದಿ ಇರುವುದು ಹತ್ತಿರಹತ್ತಿರ ಶೇ 60ರಷ್ಟು ಜನಸಂಖ್ಯೆಗೆ ಉದ್ಯೋಗ ಹುಡುಕುವುದರಲ್ಲಿ. “ಜಾಗತಿಕ ಉದ್ಯೋಗ ದರದ ಗುಣಮಟ್ಟವನ್ನು ತಲುಪಬೇಕು ಅಂದರೆ ಭಾರತವು ಹೆಚ್ಚುವರಿಯಾಗಿ 18.75 ಕೋಟಿ ಜನರನ್ನು ನೇಮಕಾತಿ ಮಾಡಬೇಕು,” ಎಂದು ಹೇಳಿದೆ.

HCL Recruitment 2022: ಈ ತ್ರೈಮಾಸಿಕ ವರ್ಷದಲ್ಲಿ 22 ಸಾವಿರ ಫ್ರೆಶರ್‌ ಗಳ ನೇಮಕ

click me!