ಬೇರೆ ಬೇರೆ ಬೆಡ್ ಮೇಲೆ 'ಖಾಸಗಿ ಕ್ಷಣ' ಕಳೆಯುವ ದಂಪತಿಗೆ 2.22 ಲಕ್ಷ ಸಂಭಾವನೆ !

By Suvarna News  |  First Published Nov 27, 2020, 2:32 PM IST

ಇದೊಂದು ವಿಚಿತ್ರ ಜಾಬ್ ಆಫರ್.  ಕಂಪನಿಯೊಂದು ತನ್ನ ಹಾಸಿಗೆಗಳು ಲೈಂಗಿಕತೆಗೆ ಅನುಕೂಲಕರವಾಗಿವೆಯೇ ಎಂಬುದನ್ನು ತಿಳಿದುಕೊಳ್ಳಲು ಐದು ದಂಪತಿಗೆ ಭಾರೀ ಮೊತ್ತದ ಉದ್ಯೋಗ ನೀಡಲು ಮುಂದಾಗಿತ್ತು. ಇದಕ್ಕೆ ಬದಲಾಗಿ ದಂಪತಿ ಬೆಡ್‌ನಲ್ಲಿ ಕಳೆಯುವ ಖಾಸಗಿ ಕ್ಷಣಗಳ ಬಗ್ಗೆ ಪ್ರಾಮಾಣಿಕ ಮಾಹಿತಿಯನ್ನು ಕಂಪನಿಗೆ ನೀಡಬೇಕಿತ್ತು. ಹೇಗಿತ್ತು ಈ ಜಾಬ್ ಆಫರ್?


ಉದ್ಯೋಗಂ ಪುರುಷಂ ಲಕ್ಷಣಂ ಎಂಬ ಗಾದೆ ನಮ್ಮಲ್ಲಿ ಬಹಳ ಜನಪ್ರಿಯ. ಆದರೆ, ಪಾಶ್ಚಿಮಾತ್ಯ ಕಂಪನಿಯೊಂದು ಪುರುಷ ಮತ್ತು ಸ್ತ್ರೀಯರಿಬ್ಬರಿಗೂ ಒಂದೊಳ್ಳೆ ಜಾಬ್ ಆಫರ್ ನೀಡಿತ್ತು. ಅರ್ಥಾತ್ ಗಂಡ-ಹೆಂಡತಿಗೆ(ದಂಪತಿ) ಉದ್ಯೋಗ. 

ವಿಷಯ ಇಷ್ಟಕ್ಕೆ ಮುಗಿಯಲ್ಲ. ಉದ್ಯೋಗ ಏನೆಂದು ನೀವು ಓದಿ ತಿಳಿದುಕೊಳ್ಳಲೇಬೇಕು. 3000 ಡಾಲರ್ ಎಂದರೆ, ಭಾರತದ ರೂಪಾಯಿ ಲೆಕ್ಕದಲ್ಲಿ 2,22,000 ರೂಪಾಯಿ ಸ್ಯಾಲರಿ ನೀಡುವ ಕೆಲಸ ಏನೆಂದರೆ ಕಂಪನಿ ಒದಗಿಸುವ ಗಾದಿ(ಮ್ಯಾಟ್ರೆಸ್) ಮೇಲೆ ನೀವು ಖಾಸಗಿ ಕ್ಷಣಗಳನ್ನು ಕಳೆಯಬೇಕು ಮತ್ತು ಈ ಬೆಡ್ ಮೇಲೆ ಕಳೆದ ಖಾಸಗಿ ಕ್ಷಣಗಳಿಂದ ನಿಮಗಾದ ಅನುಭವವನ್ನು ಕಂಪನಿಗೆ ವಾಪಸ್ ತಿಳಿಸಬೇಕು!

Tap to resize

Latest Videos

undefined

ಬಿಸ್ಕೆಟ್ ತಿನ್ನೋರಿಗೆ 40 ಲಕ್ಷ ಸ್ಯಾಲರಿ ಕೊಡುತ್ತೆ ಈ ಕಂಪನಿ, ಜೊತೆಗೆ 35 ರಜೆ: ಹೀಗೆ ಅಪ್ಲೈ ಮಾಡಿ

ಸ್ಲೀಪ್ ಸ್ಟ್ಯಾಂಡರ್ಡ್(Sleep Standards), ಸೆಕ್ಸ್‌ಗೆ ಯಾವುದು ಅತ್ಯುತ್ತಮ ಬೆಡ್ ಎಂಬುದನ್ನು ಕಂಡುಕೊಳ್ಳಲು ಒಟ್ಟು ಐದು ದಂಪತಿಗೆ ಇಂಥ ಆಫರ್ ನೀಡಲು ಮುಂದಾಗಿತ್ತು. ಅದು ಪ್ರತಿ ವಾರ ನಿಮಗೆ ಹೊಸ ಹಾಸಿಗೆ ಕಳುಹಿಸುತ್ತದೆ ಮತ್ತು ನೀವು ಕಳೆಯಬೇಕಿರುವ ಖಾಸಗಿ ಕ್ಷಣಗಳಿಗೆ ಆ ಹಾಸಿಗೆ ಎಷ್ಟು ಒಳ್ಳೆಯದು ಎಂಬುದರ ಕುರಿತು ನಿಮ್ಮ ಪ್ರಾಮಾಣಿಕ ಅನಿಸಿಕೆಗಳನ್ನು ತಿಳಿಸಬೇಕು. ಇದನ್ನೇನು ಪುಕ್ಕಟೆ ಮಾಡಬೇಕಿಲ್ಲ. ಈಗಲೇ ಹೇಳಿರುವಂತೆ ದಂಪತಿಗೆ ಹಣವನ್ನು ಪಾವತಿಸುತ್ತದೆ.

ಪ್ರತಿ ವಾರ ಆಯ್ಕೆ ಮಾಡಲಾದ ಐದು ದಂಪತಿಗೆ ಬೇರೆ ಬೇರೆ ರೀತಿಯ ಹಾಸಿಗೆಗಳನ್ನು ಕೊಡಲಾಗುತ್ತದೆ. ಈ ಹಾಸಿಗೆಗಳನ್ನು ಅವರು ತಮ್ಮ ಖಾಸಗಿ ಕ್ಷಣಗಳನ್ನು ಕಳೆಯಲು ಬಳಸಿಕೊಳ್ಳಬೇಕು. ನಿಮ್ಮ ತೀರಾ ಖಾಸಗಿ ಕ್ಷಣದ ಆನಂದಗಳನ್ನು ಕಳೆಯಲು ಈ ಹಾಸಿಗೆ ಹೇಗೆ ನೆರವು ನೀಡುತ್ತದೆ ಎಂಬುದನ್ನು ತಿಳಿದುಕೊಳ್ಳುವುದೇ ದಂಪತಿ ಚಾಲೆಂಜ್‌ನ ಒಟ್ಟಾರೆ ತಿರುಳು. ಒಟ್ಟು ಎಂಟು ವಾರಗಳಿಗೆ ಎಂಟು ಬೇರೆ ಬೇರೆ ಮಾದರಿಯ ಹಾಸಿಗೆಗಳನ್ನು ಕೊಡಲಾಗುತ್ತದೆ.

ನಿದ್ರಿಸುವವರಿಗಾಗಿ ಹುಡುಕುತ್ತಿದೆ ಬೆಂಗಳೂರಿನ ಕಂಪನಿ, 1 ಲಕ್ಷ ಗಳಿಸುವ ಸುವರ್ಣಾವಕಾಶ!

ನ್ಯಾಷನಲ್ ಕಪಲ್ಸ್ ಡೇ ಸ್ಲೀಪ್ ಸ್ಟ್ಯಾಂಡರ್ಡ್ ಇಂಥದೊಂದು ಜಾಬ್ ನೀಡಿತ್ತು. ನ್ಯಾಷನಲ್ ಕಪಲ್ಸ್ ದಿನವನ್ನು ಆಗಸ್ಟ್ 18ರಂದು ಆಚರಿಸಲಾಗುತ್ತದೆ. ಸ್ಲೀಪ್ ಸ್ಟ್ಯಾಂಡರ್ಡ್‌ನ ಈ ಜಾಬ್ ಆಫರ್ ಉದ್ದೇಶವಿಷ್ಟೇ; ಹಾಸಿಗೆಗಳು ಹೇಗೆ ದಂಪತಿ ಲೈಂಗಿಕ ಜೀವನದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತೆದೆ ಎಂಬುದನ್ನು ಕಂಡುಕೊಳ್ಳುವುದು. ತಾನು ನೀಡುವ ಬೇರೆ ಬೇರೆ ಮಾದರಿಯ ಬೆಡ್‌ಗಳ ಮೇಲೆ ದಂಪತಿಯ ಸೆಕ್ಸ್ ನಡೆಸಿದಾಗ ಆಗುವ ಅನುಭವವನ್ನು ಪರಿಗಣನೆಗೆ ತೆಗೆದುಕೊಂಡು ಹಾಸಿಗೆಗಳನ್ನು ಮತ್ತಷ್ಟು ಕಂಫರ್ಟಬಲ್ ಮಾಡುವುದು. 

ಅಂದ ಹಾಗೆ, ಉದ್ಯೋಗಕ್ಕೆ ಎಷ್ಟು ಮಂದಿ ಅರ್ಜಿ ಹಾಕಿದ್ದರು ಮತ್ತು ಆ ಆಯ್ಕೆಯಾದ ಐದು ದಂಪತಿಗಳ ಯಾರು, ಅವರು ನೀಡಿದ ಅನುಭವ ಹೇಗಿತ್ತು ಎಂಬ ಮಾಹಿತಿ ಮಾತ್ರ ಗೊತ್ತಾಗಿಲ್ಲ!

ಟ್ರಕ್‌ನಲ್ಲಿ ಊರೆಲ್ಲಾ ಸುತ್ತಿದ ನಿರುದ್ಯೋಗಿ: ಟಾಪ್ ಕಂಪನಿಯಿಂದ ಸಿಕ್ತು ಬಂಪರ್ ಜಾಬ್ ಆಫರ್

ಹಿಂದೊಮ್ಮೆ ಬೆಂಗಳೂರು ಮೂಲದ ಕಂಪನಿ ನಿದ್ರೆ ಮಾಡುವ ಕೆಲಸದ ಆಫರ್ ನೀಡಿತ್ತು. ಆಫೀಸಿಗೆ ಹೋಗಿ ನಿದ್ರೆ ಮಾಡಬೇಕಿತ್ತು. ಅದಕ್ಕೆ ಕೈ ತುಂಬಾ ಸಂಬಳವನ್ನೂ ಆಫರ್ ಮಾಡಿತ್ತು. ಆದರೆ, ಒಂದೆರಡು ದಿನ ನಿದ್ರೆ ಬರಹುದು, ಆದರೆ, ಆಮೇಲೆ ಏನು ಮಾಡಬೇಕೋ ಮಾತ್ರ ಗೊತ್ತಿಲ್ಲ. 

ಒಟ್ಟಿನಲ್ಲಿ ಪ್ರಪಂಚದಲ್ಲಿ ಚಿತ್ರಿ ವಿಚಿತ್ರ ಜಾಬ್‌ ಆಫರ್ಸ್ ಇರುತ್ತವೆ. ಗಮನಿಸಿ, ಸಾಧ್ಯವಾದರೆ ಅಪ್ಲೈ ಮಾಡಬೇಕು.ಕೈ ತುಂಬಾ ಸಂಬಳವೂ ಸಿಗುತ್ತೆ. ಸ್ಟ್ರಿಸ್ ಫ್ರಿಯಾಗಿಯೂ ಇರುತ್ತೆ. ಏನಂತೀರಿ? 

click me!