ಜಿಲ್ಲಾ, ತಾಲೂಕು, ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ ಅಧಿಕಾರಾವಧಿ ಇಳಿಕೆಗೆ ಮುಂದಾದ ರಾಜ್ಯ ಸರ್ಕಾರ..!

By Suvarna NewsFirst Published Mar 18, 2020, 9:00 PM IST
Highlights

ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ  ಅಧ್ಯಕ್ಷರು ಮತ್ತು ಉಪಾಧ್ಯಕ್ಷರಿಗೆ ಇದ್ದ 5ವರ್ಷ ಅಧಿಕಾರಾವಧಿಯನ್ನ ಇದೀಗ ಇಳಿಕೆ ಮಾಡಲು  ರಾಜ್ಯ ಸರ್ಕಾರ ಮುಂದಾಗಿದ್ದು, ಅದರ ಮಸೂದೆಯನ್ನ ಸಹ ವಿಧಾನಸಭೆಯಲ್ಲಿ ಮಂಡಿಸಲಾಗಿದೆ.

ಬೆಂಗಳೂರು, [ಮಾ.18]: ಜಿಲ್ಲಾ ಪಂಚಾಯಿತಿ, ತಾಲೂಕು ಮತ್ತು ಗ್ರಾಮ ಪಂಚಾಯಿತಿಗಳ  ಅಧ್ಯಕ್ಷರು ಮತ್ತು ಉಪಾಧ್ಯಕ್ಷರ ಅಧಿಕಾರ ಅವಧಿಯನ್ನು ಎರಡೂವರೆ ವರ್ಷಗಳಿಗೆ ಇಳಿಸುವ ಸಂಬಂಧ ‘ಕರ್ನಾಟಕ ಗ್ರಾಮ ಸ್ವರಾಜ್‌ ಮತ್ತು ಪಂಚಾಯತ್‌ ರಾಜ್‌  (ತಿದ್ದುಪಡಿ) ಮಸೂದೆ’ಯನ್ನು ಮಂಡಿಸಲಾಗಿದೆ.

ವಿಧಾನಸಭೆಯಲ್ಲಿ  ಬುಧವಾರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಕೆ.ಎಸ್‌.ಈಶ್ವರಪ್ಪ ಮಸೂದೆ ಮಂಡಿಸಿದ್ದು, ಮಸೂದೆಯಲ್ಲಿ ಒಟ್ಟು 36 ತಿದ್ದುಪಡಿಗಳನ್ನು ತರಲಾಗಿದೆ.

ಕರ್ನಾಟಕದಲ್ಲಿ 14ಕ್ಕೇರಿದ ಕೊರೋನಾ, ರಾಕುಲ್ ಪ್ರೀತ್‌ಗೆ ಹೀಗೆ ಮಾಡಿದ್ದು ಸರೀನಾ? ಮಾರ್ಚ್ 18ರ ಟಾಪ್ 10 ಸುದ್ದಿ

ಈ ಮಸೂದೆ ಪಂಚಾಯಿತಿಗಳ ಅಧ್ಯಕ್ಷ ಮತ್ತು ಉಪಾಧ್ಯಕ್ಷರ ಅಧಿಕಾರ  ಅವಧಿಯನ್ನು  ಐದು ವರ್ಷಗಳಿಂದ ಎರಡೂವರೆ ವರ್ಷಗಳಿಗೆ ಇಳಿಕೆ, ಅಧ್ಯಕ್ಷ ಮತ್ತು ಉಪಾಧ್ಯಕ್ಷರು ಅಧಿಕಾರ ಸ್ವೀಕರಿಸಿದ ದಿನದಿಂದ 15 ತಿಂಗಳವೇ ಬಳಿಕ  ಅವಿಶ್ವಾಸ ಮಂಡಿಸಲು ಅವಕಾಶ ಕಲ್ಪಿಸಲಾಗಿದೆ

ತಾಲ್ಲೂಕು  ಪಂಚಾಯಿತಿಯಲ್ಲಿ ಅವಿಶ್ವಾಸ ಮಂಡಿಸಿದಾಗ ಆ ಪ್ರಕ್ರಿಯೆ ಪೂರ್ಣಗೊಳಿಸಲು ಡೆಪ್ಯುಟಿ  ಕಮಿಷನರ್‌ ಮತ್ತು ಜಿಲ್ಲಾ ಪಂಚಾಯಿತಿಯಲ್ಲಿ ಹಂತದಲ್ಲಿ ಪ್ರಾದೇಶಿಕ ಆಯುಕ್ತರೇ ಅಧ್ಯಕ್ಷತೆ ವಹಿಸಬೇಕು ಎಂಬ ನಿಯಮ ಜಾರಿಗೊಳಿಸಲಾಗಿದೆ.

click me!