ಕರ್ನಾಟಕದಲ್ಲಿ ಕೊರೋನಾ ವೈರಸ್ ಸೋಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಈ ಸಂರ್ಭದಲ್ಲಿ ರಾಜ್ಯಕೀಯ ಮಾಡದೇ ಸೋಂಕು ತಡೆಗಟ್ಟುವ ಕಾರ್ಯ ಮಾಡಬೇಕು. ಅದರಂತೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರ ಸಲಹೆ ನೀಡಿದ್ದಾರೆ. ಏನದು ಬನ್ನಿ ನೋಡೋಣ..
ಬೆಂಗಳೂರು, (ಮಾ.18): ಚುನಾವಣೆ ಸಂದರ್ಭದಲ್ಲಿ ರಾಜಕೀಯ ಮಾಡಬೇಕು. ಆದ್ರೆ, ಇಡೀ ರಾಜ್ಯ ಅಂತ ಬಂದಾಯ ಆಡಳಿತ ಮತ್ತು ವಿರೋಧ ಪಕ್ಷ ಸೇರಿಕೊಂಡ ಕಾರ್ಯನಿರ್ವಹಿಸುವುದು ಅತ್ಯಗತ್ಯ.
ಕರ್ನಾಟಕದಲ್ಲಿ 14ಕ್ಕೇರಿದ ಕೊರೋನಾ, ರಾಕುಲ್ ಪ್ರೀತ್‌ಗೆ ಹೀಗೆ ಮಾಡಿದ್ದು ಸರೀನಾ? ಮಾರ್ಚ್ 18ರ ಟಾಪ್ 10 ಸುದ್ದಿ
ಅದರಂತೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಬಿಎಸ್ ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರಕ್ಕೆ ಕೆಲವೊಂದಿಷ್ಟು ಸಲಹೆ-ಸೂಚನೆಗಳನ್ನು ಕೊಟ್ಟಿದ್ದಾರೆ. ಅದು ಈ ಕೆಳಗಿನಂತಿದೆ ನೋಡಿ.
ರಾಜ್ಯ ಸರ್ಕಾರಕ್ಕೆ ಸಿದ್ದು ಸಲಹೆ ಇಂತಿದೆ
* ರಾಜ್ಯದಲ್ಲಿ ಕೊರೋನಾ ರೋಗದಿಂದಾಗ ವ್ಯಾಪಾರ ವಹಿವಾಟು ಕುಸಿದಿದೆ. ಸಣ್ಣಪುಟ್ಟ ವ್ಯಾಪಾರಿಗಳು, ಗುಡಿ ಕೈಗಾರಿಕೆಗಾರರು, ಬೀದಿ ಬದಿ ವ್ಯಾಪಾರಿಗಳು ಬ್ಯಾಂಕುಗಳಿಂದ ಪಡೆದಿದ್ದ ಸಾಲದ ವಸೂಲಾತಿಯನ್ನು ಮುಂದೂಡಬೇಕು. ಕೈಸೋತು ಕುಳಿತವರ ಮೇಲೆ ಬರೆ ಹಾಕಬೇಡಿ.
* ಸರ್ಕಾರ ಕೊರೋನಾ ರೋಗ ನಿಯಂತ್ರಿಸಲು 200 ರೂ. ಕೋಟಿ ಮೀಸಲಿಟ್ಟಿದೆ ಎಂದು ಹೇಳಿದೆ. ಇದರಲ್ಲಿ ಪ್ರತಿ ಸರ್ಕಾರಿ ಆಸ್ಪತ್ರೆಗಳಲ್ಲಿ ವೆಂಟಿಲೇಟರ್ ಸೌಲಭ್ಯ ಹಾಗೂ ಎಲ್ಲಾ ಜಿಲ್ಲಾ ಕೇಂದ್ರದ ಮುಖ್ಯ ಆಸ್ಪತ್ರೆಗಳಲ್ಲಿ ಐಸೋಲೇಷನ್ ವಾರ್ಡ್ ಸೌಲಭ್ಯ ಈ ಕೂಡಲೇ ಕಲ್ಪಿಸಬೇಕು.
* ಕೊರೋನಾ ಸೋಂಕಿತರಿಗೆ ಚಿಕಿತ್ಸೆ ನಿರಾಕರಿಸುವ ಖಾಸಗಿ ಆಸ್ಪತ್ರೆಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು ಮತ್ತು ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುವ ಕೊರೋನಾ ಸೋಂಕಿತರ ಚಿಕಿತ್ಸಾ ವೆಚ್ಚವನ್ನು ಸರ್ಕಾರವೇ ಭರಿಸಬೇಕು.
ಬರ, ಪ್ರವಾಹ, ವ್ಯಾಪಾರ ವಹಿವಾಟು ಸ್ಥಗಿತದಿಂದ ಈಗಾಗಲೇ ಜನ ನೊಂದಿದ್ದಾರೆ, ಕೊರೋನಾ ಅವರ ಬದುಕು ಕಸಿಯದಿರಲಿ ಎಂದು ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಬರೆದುಕೊಂಡಿದ್ದಾರೆ.