ಕಲಬುರಗಿ: ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ

Published : Mar 02, 2023, 02:44 PM IST
ಕಲಬುರಗಿ: ಬಿಜೆಪಿ, ಜೆಡಿಎಸ್‌ ತೊರೆದು ಕಾಂಗ್ರೆಸ್‌ ಸೇರ್ಪಡೆ

ಸಾರಾಂಶ

ಜೇವರ್ಗಿ ಪಟ್ಟಣದ ಝೋಪಡ ಪಟ್ಟಿ ಬಡಾವಣೆಯಲ್ಲಿ ಏರ್ಪಡಿಸಲಾದ ಪ್ರಭಾವಿ ಯುವ ಮುಖಂಡರುಗಳಾದ ದಾವುದ್‌ ಡಿಕೆ, ನಝೀರ್‌ ಪಟೇಲ್‌ ಸಿರಸಗಿ, ಸುನಿಲ ರಾಜಾಹುಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಹಾಗೂ ಜಾತ್ಯತೀತ ನಾಯಕತ್ವವನ್ನು ಮೆಚ್ಚಿ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಕಲಬುರಗಿ/ಜೇವರ್ಗಿ(ಮಾ.02):  ಜೇವರ್ಗಿ ಮತಕ್ಷೇತ್ರದಲ್ಲಿ ಶಾಸಕ ಡಾ. ಅಜಯ್‌ ಸಿಂಗ್‌ ಅವರ ನಿರಂತರವಾಗಿರುವಂತಹ ಅಭಿವೃದ್ಧಿ ಪರ ಚಿಂತನೆ, ಹೊಸತನದೊಂದಿಗ ತಾಲೂಕಿನ ಸರ್ವಾಂಗೀಣ ಪ್ರಗತಿಯತ್ತ ಕೊಂಡೊಯ್ಯುವಂತಹ ಧೋರಣೆಗಳನ್ನು ಮೆಚ್ಚಿ ಕ್ಷೇತ್ರಾದ್ಯಂತ ವಿವಿಧ ಪಕ್ಷಗಳಿಂದ ಯುವಕರು, ಹಿರಿಯರು ಅನೇಕರು ಕಾಂಗ್ರೆಸ್‌ ಪಕ್ಷ ಸೇರುವ ಮೂಲಕ ಡಾ. ಅಜಯ್‌ ಸಿಂಗ್‌ ಅವರನ್ನು ಬೆಂಬಲಿಸುತ್ತಿದ್ದಾರೆ.

ಕ್ಷೇತ್ರದಲ್ಲಿ ನಡೆದ ಸಮಾರಂಭ ಒಂದರಲ್ಲಿ ಸೇರಿದ್ದ ನೂರಾರು ಯವಕರು ಹಾಗೂ ಹಿರಿಯರು ಡಾ. ಅಜಯ್‌ ಸಿಂಗ್‌ ಸಮ್ಮುಖದಲ್ಲಿ ಕಾಂಗ್ರೆಸ್‌ ಪಕ್ಷ ಸೇರಿದರಲ್ಲದೆ ಡಾ. ಅಜಯ್‌ ಅವರ ಮೇಲೆ ಹೂವಿನ ಸುರಿಮಳೆ ಮಾಡಿ ಶುಭ ಕೋರಿದರು. ತಮ್ಮ ಸಂಪೂರ್ಣ ಬೆಂಬಲ ಬರುವ ಚುನಾವಣೆಯಲ್ಲಿರಲಿದೆ ಎಂದು ಸಂಕಲ್ಪ ಮಾಡಿದರು.

MGNREGA: ಕೇಂದ್ರ ಸರ್ಕಾರ ಕಾರ್ಮಿಕರಿಗೆ ಕೆಲಸ ನೀಡದೆ ಕತ್ತು ಹಿಚುಕುವ ಕೆಲಸ ಮಾಡ್ತಿದೆ: ಕೆ.ನೀಲಾ

ಜೇವರ್ಗಿ ಪಟ್ಟಣದ ಝೋಪಡ ಪಟ್ಟಿ ಬಡಾವಣೆಯಲ್ಲಿ ಏರ್ಪಡಿಸಲಾದ ಪ್ರಭಾವಿ ಯುವ ಮುಖಂಡರುಗಳಾದ ದಾವುದ್‌ ಡಿಕೆ, ನಝೀರ್‌ ಪಟೇಲ್‌ ಸಿರಸಗಿ, ಸುನಿಲ ರಾಜಾಹುಲಿ ತಮ್ಮ ಅಪಾರ ಬೆಂಬಲಿಗರೊಂದಿಗೆ ಕಾಂಗ್ರೆಸ್‌ ಪಕ್ಷದ ತತ್ವ ಸಿದ್ಧಾಂತಗಳನ್ನು ನಂಬಿ ಹಾಗೂ ಜಾತ್ಯತೀತ ನಾಯಕತ್ವವನ್ನು ಮೆಚ್ಚಿ ಅಪಾರ ಬೆಂಬಲಿಗರೊಂದಿಗೆ ಜೆಡಿಎಸ್‌ ಹಾಗೂ ಬಿಜೆಪಿ ಪಕ್ಷವನ್ನು ತೊರೆದು ಕಾಂಗ್ರೆಸ್‌ ಸೇರ್ಪಡೆಯಾದರು.

ಬೆಂಬಲಿಗರಾದ ಜಗ್ಗಪ್ಪ ಸರಡಗಿ, ಭೀರಲಿಂಗ, ಸಿದ್ದು ಯಕ್ಕಂಚಿ, ಮುದಕಪ್ಪ ಹಿರಿಪೂಜಾರಿ, ಶರಣು, ಮಾಂತು ಮಡಿವಾಳ್‌, ಶಿವು ಇಟಗಿ, ಧನರಾಜ್‌ ಸರಗಡಗಿ, ವಿಶ್ವರಾಧ್ಯ, ನಿಂಗು, ಮಲ್ಲು, ಭೀಮಾ ಶಂಕರ, ರೇವು, ಪ್ರಜ್ವಲ್‌, ಶಾಂತಪ್ಪ, ಶಿವರಾಜ, ಭಾಗೇಶ, ಮಾನಪ್ಪ, ಶೇಖರ, ಅಂಬರೀಶ, ಶರಣಪ್ಪ, ವಿನೋದ, ಮಹೇಶ, ಪರಶುರಾಮ, ಮೌನೇಶ ಸೇರಿದಂತೆ ಅನೇಕ ಯುವಕರು ಕಾಂಗ್ರೆಸ್‌ ಸೇರ್ಪಡೆಯಾದರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಸಿದ್ದಲಿಂಗ ರೆಡ್ಡಿ ಇಟಗಾ, ರುಕ್ಕುಂ ಪಟೇಲ್‌ ಇಜೇರಿ, ರಾಜಶೇಖರ್‌ ಸಿರಿ, ಚಂದ್ರಶೇಖರ್‌ ಹರನಾಳ, ಮೆಹಬೂಬ ಶಾನಬವಾಲೆ, ಅಮೀರ್‌ ಜಮಾದಾರ, ಮಾಜಿದ್‌ ಶೆಚ್‌, ರೆಹಮಾನ ಪಟೇಲ್‌, ರವಿ ಕೋಳಕೂರ, ಸುಭಾಶ ಚನ್ನೂರ, ಶಿವು ಕಲ್ಲಾ, ಯೂನಸ್‌ ಹಾಡ್ವೇರ , ಮೆಮೂದ್‌ ಪಟೇಲ್‌ ,ಮೆಹಮೂದ ಶಫಿಕ್‌ ಖಾಜಿ, ಬಸೀರ್‌ ಇನಾಮದಾರ , ಅಬ್ಬಾಸ ಅಲಿ ಮಾವನೂರ, ಪ್ರಭು ಪಾಟೀಲ ಗುಲ್ಯಾಳ, ಶರಣಗೌಡ ಸರಡಗಿ, ಮಾಳಪ್ಪ ಪೂಜಾರಿ, ಜಕೀರ್‌ ಹುಸೇನ, ಶಾರುಖ ಗಿರಣಿ, ರಾಜಶೇಖರ್‌ ಮೂತಕೋಡ, ಮಲ್ಲಿಕಾರ್ಜುನ ದಿನ್ನಿ, ಮರೆಪ್ಪ ಸರಡಗಿ, ಇಮರಾನ ಕಾಸರಬೋಸಗಾ, ರಫಿಕ್‌ ಜಮಾದಾರ ಇದ್ದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಿದ್ದು ಸೇನೆಯಲ್ಲಿ ಬಿರುಕು: ಅಹಿಂದ ಅರಸೊತ್ತಿಗೆ, ಸಾಹುಕಾರ್​ಗೆ ಸಿಗುತ್ತಾ ಪ್ರಚಂಡ ಪವರ್?
ಹಿಂದೂಗಳು ಒಂದಾಗದಿದ್ರೆ ದೇಶ, ಸಂವಿಧಾನ ಉಳಿಯಲ್ಲ: ಶಾಸಕ ಬಸನಗೌಡ ಪಾಟೀಲ ಯತ್ನಾಳ