
ಚಿತ್ರದುರ್ಗ(ಮಾ.02): ವಿಧಾನಸಭೆ ಚುನಾವಣೆಗಳು ಸಮೀಪಿಸುತ್ತಿರುವ ಈ ವೇಳೆ ಆಕಾಂಕ್ಷಿಗಳಲ್ಲಿ ಚಡಪಡಿಕೆ ಶುರವಾಗಿದ್ದರೆ, ಇತ್ತ ವಿಧಾನಪರಿಷತ್ ಮಾಜಿ ಸದಸ್ಯ ಹಾಗೂ ಚಿತ್ರದುರ್ಗ ವಿಧಾನಸಭೆ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿ ರಘು ಆಚಾರ್ ಸ್ಥಿತ ಪ್ರಜ್ಞರಾಗಿ ಕ್ಷೇತ್ರದ ಜನರ ಒಡನಾಟಗಳನ್ನು ತೀವ್ರಗೊಳಿಸುತ್ತಾ ಸಾಗಿದ್ದಾರೆ.
ಚಿತ್ರದುರ್ಗ ಹೊರವಲಯ ಕ್ಯಾದಿಗೆರೆ ಗ್ರಾಮದ ಬಳಿ ಹೊಸ ಮನೆಯೊಂದನ್ನು ಕಟ್ಟಿರುವ ರಘು ಆಚಾರ್, ಮಾ.10 ರಂದು ಗೃಹಪ್ರವೇಶ ಕಾರ್ಯಕ್ರಮ ಆಯೋಜಿಸಿದ್ದಾರೆ. ಪರಂಪರಾಗತವಾಗಿ ಬಂದಿರುವ, ಶುಭ ಕಾರ್ಯಗಳಿಗೆ ಜನರನ್ನು ಆಹ್ವಾನಿಸುವ ಕೈಂಕರ್ಯವ ಚಿತ್ರದುರ್ಗದಲ್ಲಿಯೂ ಮುಂದುವರಿಸಿರುವ ರಘು ಆಚಾರ್ ಸರ್ವ ಸಮುದಾಯ, ಸರ್ವ ಧರ್ಮಗಳನ್ನು ಎಡತಾಕುತ್ತಿದ್ದಾರೆ. ಹಾಗಾಗಿ ಬುಧವಾರವಿಡೀ ಕೋಟೆ ನಾಡು ಚಿತ್ರದುರ್ಗದಲ್ಲಿ ರಘು ಆಚಾರ್ ದಂಪತಿ ಮಂದಿರ ಮಸೀದಿ, ದರ್ಗಾಗಳ ಭೇಟಿಯಲ್ಲಿ ಬ್ಯುಸಿಯಾಗಿದ್ದರು.
ಚಿತ್ರದುರ್ಗದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣ: ರಘು ಆಚಾರ್
ರಘು ಆಚಾರ್, ದರ್ಗಾ ಮಸೀದಿಗಳು ಸೇರಿದಂತೆ ಮುಸ್ಲಿಂ ಮುಖಂಡರನ್ನು ಭೇಟಿಯಾಗಿ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ನೀಡಿದರೆ, ಮತ್ತೊಂದೆಡೆ ಪತಿಗೆ ಬೆನ್ನೆಲುಬಾಗಿ ನಿಂತಿರುವ ಅವರ ಪತ್ನಿ ಆಶಾ ರಘು ಆಚಾರ್ ಹಿಂದು ದೇವಾಲಯಗಳಿಗೆ ಭೇಟಿ ನೀಡುವ ಜೊತೆಗೆ ಗ್ರಾಮಗಳಲ್ಲಿ ನಡೆಯುವ ಜಾತ್ರೆಗಳಲ್ಲೂ ಭಾಗವಹಿಸಿ ಗಮನ ಸೆಳೆಯುತ್ತಿದ್ದಾರೆ.
ಚಿತ್ರದುರ್ಗ ತಾಲೂಕಿನ ಸಿಂಗಾಪುರ ಗ್ರಾಮದಲ್ಲಿ ಬುಧವಾರ ನಡೆದ ಶ್ರೀ ವೀರಭದ್ರೇಶ್ವರ ಸ್ವಾಮಿ ರಥೋತ್ಸವದಲ್ಲಿ ಭಾಗವಹಿಸಿ ಭಕ್ತಾದಿಗಳ ಜೊತೆಗೂಡಿ ರಥ ಎಳೆಯುವ ಮೂಲಕ ಅವರು ಭಕ್ತಿ ಸಮರ್ಪಿಸಿದರು. ನಂತರ ಗ್ರಾಮದ ಮುಖಂಡರ ಮನೆ ಮನೆಗೆ ತೆರಳಿ ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ನೀಡಿ ಕುಟುಂಬ ಸಮೇತರಾಗಿ ಬಂದು ಹಾರೈಸುವಂತೆ ಮನವಿ ಮಾಡಿದರು.
ಈ ವೇಳೆ ಮುಖಾಮುಖಿಯಾದ ಬಿಜೆಪಿ ಟಿಕೆಚ್ ಆಕಾಂಕ್ಷಿ ಅನಿತ್‌ಕುಮಾರ್, ಅಮ… ಆದ್ಮಿ ಪಕ್ಷದ ಅಭ್ಯರ್ಥಿ ಜಗದೀಶ್ ಅವರನ್ನು ಆತ್ಮೀಯವಾಗಿ ಮಾತನಾಡಿಸಿದರು. ಗೃಹ ಪ್ರವೇಶದ ಆಮಂತ್ರಣ ಪತ್ರಿಕೆ ನೀಡಿ ಕುಟುಂಬ ಸಮೇತರಾಗಿ ಬನ್ನಿ, ಹರಸಿ, ಹಾರೈಸಿ ಎಂದು ಭಿನ್ನವಿಸುವ ಪರಿ ಜನರ ನಡುವಿನ ಬಾಂಧವ್ಯವನ್ನು ಇಮ್ಮಡಿಗೊಳಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.