ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಸಚಿವರಿಗೆ ಸಿಎಂ ಮಹತ್ವದ ಸೂಚನೆ

By Suvarna NewsFirst Published Feb 18, 2021, 8:01 PM IST
Highlights

ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪನವರ ನೇತೃತ್ವದ ನಡೆದ ಸಚಿವ ಸಂಪುಟ ಸಭೆಯಲ್ಲಿ ಮೀಸಲಾತಿ ಬಗ್ಗೆ ಮಹತ್ವ ಚರ್ಚೆಯಾಗಿದೆ.

ಬೆಂಗಳೂರು, (ಫೆ.18): ರಾಜ್ಯದಲ್ಲಿ ವಿವಿಧ ಸಮುದಾಯಗಳು ಮೀಸಲಾತಿಗಾಗಿ  ಹೋರಾಟಗಳನ್ನು ಮಾಡುತ್ತಿದ್ದು, ಇದು ಬಿಎಸ್‌ವೈ ಸರ್ಕಾರಕ್ಕೆ ದಿಕ್ಕುತೋಚದಂತಾಗಿದೆ.

 ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನೇತೃತ್ವದಲ್ಲಿ ಇಂದು (ಗುರುವಾರ) ಸಚಿವ ಸಂಪುಟ ಸಭೆ ನಡೆದಿದ್ದು, ಸಭೆಯಲ್ಲಿ ಮೀಸಲಾತಿ ವಿಚಾರದ ಕುರಿತಾಗಿ ಅನೌಪಚಾರಿಕವಾಗಿ ಚರ್ಚೆ ನಡೆದಿದೆ ಎಂದು ತಿಳಿದುಬಂದಿದೆ.

ಮೀಸಲಾತಿಗೆ ಮತ್ತೊಂದು ಸಮುದಾಯ ಹೋರಾಟಕ್ಕೆ ಸಿದ್ಧ: ಸಿಎಂಗೆ ಶುರುವಾಯ್ತು ಸಂಕಷ್ಟ

ಸಚಿವ ಸಂಪುಟ ಸಭೆಯ ಬಳಿಕ ಹಿರಿಯ ಅಧಿಕಾರಿಗಳು ತೆರಳಿದ ನಂತರ ಸಿಎಂ ಸಂಪುಟ ಸಹೋದ್ಯೋಗಿಗಳೊಂದಿಗೆ ಮೀಸಲಾತಿ ವಿಚಾರವಾಗಿ ಅನೌಪಚಾರಿಕವಾಗಿ ಚರ್ಚೆ ನಡೆಸಿದ್ದಾರೆ ಎಂದು ಹೇಳಲಾಗಿದೆ.

ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಪುಟ ಸಹೋದ್ಯೋಗಿಗಳಿಗೆ ಮೀಸಲಾತಿ ಕುರಿತು ಬಹಿರಂಗವಾಗಿ ಚರ್ಚಿಸದಂತೆ ಸೂಚನೆ ನೀಡಿದ್ದಾರೆ. ಯಾರು ಕೂಡ ಮೀಸಲಾತಿ ಬಗ್ಗೆ ಮಾತನಾಡಬಾರದು ಎಂದು ಕಿವಿ ಮಾತು ಹೇಳಿದ್ದಾರೆ.

 ಅಲ್ಲದೇ ಸಮುದಾಯದ ಸ್ವಾಮೀಜಿಗಳ ಮನವೊಲಿಸುವಂತೆ ಸಚಿವರಿಗೆ ಸಿಎಂ ತಿಳಿಸಿದ್ದು, ಈ ಕುರಿತಾಗಿ ವರಿಷ್ಠರೊಂದಿಗೆ ಚರ್ಚೆ ನಡೆಸಿ ಮುಂದಿನ ತೀರ್ಮಾನ ಕೈಗೊಳ್ಳೋಣ ಎಂದಿದ್ದಾರೆ ಎನ್ನಲಾಗಿದೆ.

click me!