ಕರ್ನಾಟಕ ಬಿಜೆಪಿ ಸಂಸದರ ಪುತ್ರರೊಬ್ಬರು ಕಾಂಗ್ರೆಸ್‌ನತ್ತ ಮುಖಮಾಡಿದ್ದಾರೆ. ಇದಕ್ಕೆ ಪರೋಕ್ಷವಾಗಿ ತಂದೆಯೂ ಸಹಮತ ವ್ಯಕ್ತಪಡಿಸಿದ್ದಾರೆ.
ಚಿಕ್ಕಬಳ್ಳಾಪುರ, (ಫೆ.18): ಹೊಸಕೋಟೆ ಶಾಸಕರ ಶರತ್ ಬಚ್ಚೇಗೌಡ ಅವರು ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದು, ನಾಲ್ಕೈದು ದಿನಗಳಲ್ಲೇ ಕಾಂಗ್ರೆಸ್ ಸದಸ್ಯತ್ವ ಸ್ವೀಕರಿಸಲಿದ್ದಾರೆ.
ಬಳಿಕ ಶರತ್ ಬಚ್ಚೇಗೌಡ ಅವರು ಮಾರ್ಚ್‌ನಲ್ಲಿ ಹೊಸಕೋಟೆಯಲ್ಲಿ ಬೃಹತ್ ಸಮಾವೇಶದ ಮೂಲಕ ಅಧಿಕೃತವಾಗಿ ಕಾಂಗ್ರೆಸ್ ಸೇರುವ ಪ್ಲಾನ್ ಮಾಡಿದ್ದಾರೆ.
ಇನ್ನು ಪುತ್ರ ಶರತ್ ಬಚ್ಚೇಗೌಡ ಕಾಂಗ್ರೆಸ್ ಪಕ್ಷ ಸೇರ್ಪಡೆಗೆ ಪ್ರತಿಕ್ರಿಯಿಸಿದ ಸಂಸದ ಬಿ.ಎನ್.ಬಚ್ಚೇಗೌಡ, ಬಿಜೆಪಿ ಬಾಗಿಲು ಬಂದ್ ಆಗಿರುವುದರಿಂದ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ ಎಂದು ಹೇಳುವ ಮೂಲಕ ಪರೋಕ್ಷವಾಗಿ ಪುತ್ರನಿಗೆ ಬೆಂಬಲ ನೀಡಿದ್ದಾರೆ.
ಮಧುಬಂಗಾರಪ್ಪ ಬೆನ್ನಲ್ಲೇ ಮತ್ತೋರ್ವ ಶಾಸಕ ಕಾಂಗ್ರೆಸ್ ಸೇರ್ಪಡೆಗೆ ಮುಹೂರ್ತ ಫಿಕ್ಸ್
ಅಭಿಮಾನಿಯಾಗೇ ಇರೋದಕ್ಕಾಗಲ್ಲ. ಬಿಜೆಪಿ ಬಾಗಿಲು ಬಂದ್ ಆಗಿರೋದರಿಂದ ಕಾಂಗ್ರೆಸ್ ಪಕ್ಷ ಅನಿವಾರ್ಯವಾಗಿದೆ. ಎಂಟಿಬಿ ನಾಗರಾಜ್ ಬಿಜೆಪಿ ಸೇರ್ಪಡೆಯಾಗಿ ಸಚಿವರೂ ಆದ ಮೇಲೆ ಶರತ್ ಬಚ್ಚೇಗೌಡರ ಭವಿಷ್ಯಕ್ಕಾಗಿ ರಾಷ್ಟ್ರೀಯ ಪಕ್ಷದ ನೆರವು ಬೇಕಾಗಿದೆ ಎಂದರು.
ಇದೇ ವೇಳೆ ಈ ತೀರ್ಮಾನ ಶರತ್ ವೈಯಕ್ತಿಕವಾಗಿದ್ದು, ಮುಂದಿನ ಚುನಾವಣೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳಬೇಕು ಎಂಬುದು ಸಮಯ ಬಂದಾಗ ನಿರ್ಧಾರ ಮಾಡುತ್ತೇನೆ. ಶಾಸಕ ಶರತ್ ನಾನು ಒಂದೇ ಪಕ್ಷದಲ್ಲಿ ಇರೋದರ ಬಗ್ಗೆ ಸಮಯ ಬಂದಾಗ ನಿರ್ಧಾರವಾಗುತ್ತದೆ. ಶಾಸಕ ಶರತ್ ಬಚ್ಚೇಗೌಡರ ನಡೆಯಿಂದ ನಾನು ಬಿಜೆಪಿ ನಾಯಕರ ನಿರ್ಲಕ್ಷ್ಯಕ್ಕೊಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು.
ಬಿ.ಎನ್ ಬಚ್ಚೇಗೌಡ ಅವರು ಉಪಚುನಾವಣೆಯಲ್ಲಿ ಪಕ್ಷದ ಅಭ್ಯರ್ಥಿಯಾಗಿದ್ದ ಎಂಟಿಬಿ ನಾಗರಾಜ್ ಅವರ ಪರವಾಗಿ ಪ್ರಚಾರ ಮಾಡಿರಲಿಲ್ಲ. ಬದಲಾಗಿ ಪರೋಕ್ಷವಾಗಿ ಪುತ್ರ ಶರತ್ ಬಚ್ಚೇಗೌಡಗೆ ಬೆಂಬಲಿಸಿದ್ದರು.