ಕೈ ತೊರೆದು ಜೆಡಿಎಸ್‌ನತ್ತ ಹೊರಟ ನಾಯಕ: ಮನವೊಲಿಕೆಗೆ ಉಸ್ತುವಾರಿ ಅಖಾಡಕ್ಕೆ

By Suvarna News  |  First Published Feb 18, 2021, 6:33 PM IST

ಕಾಂಗ್ರೆಸ್ ತೊರೆಯಲು ಮುಂದಾಗಿರುವ ಹಿರಿಯ ನಾಯಕನ ಮನವೊಲಿಕೆ ಸ್ವತಃ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅಖಾಡಕ್ಕಿಳಿದಿದ್ದಾರೆ. 


ಬೆಂಗಳೂರು, (ಫೆ.18):  ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಪುತ್ರಿ ಮದುವೆ ಅರಕ್ಷತೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿಗೆ ಆಗಮಿಸಿರುವ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಅವರು ಅಸಮಾಧಾನಗೊಂಡ ಪಕ್ಷದ ಹಿರಿಯ ನಾಯಕನ ಮನೆ ಭೇಟಿ ನೀಡಿದ್ದಾರೆ.

ಹೌದು..ಕಾಂಗ್ರೆಸ್​ ನಾಯಕ ಸಿ.ಎಂ. ಇಬ್ರಾಹಿಂ ನಿವಾಸಕ್ಕೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿದ್ದು, ಜೆಡಿಎಸ್​ ಸೇರ್ಪಡೆಯ ಸಿದ್ಧತೆಯಲ್ಲಿರುವ ಇಬ್ರಾಹಿಂ ಅವರ ಮನವೊಲಿಕೆಗೆ ಮುಂದಾಗಿದ್ದಾರೆ.

Tap to resize

Latest Videos

ಬೆಂಗಳೂರಿನ ಬೆನ್ಸನ್ ಟೌನ್​ನಲ್ಲಿರುವ ಸಿ.ಎಂ. ಇಬ್ರಾಹಿಂ ನಿವಾಸಕ್ಕೆ ರಣದೀಪ್ ಸಿಂಗ್ ಸುರ್ಜೇವಾಲಾ ಭೇಟಿ ನೀಡಿದ್ದು, ಈ ವೇಳೆ ಎಂಎಸ್​​ಸಿ ನಜೀರ್ ಅಹ್ಮದ್ ಸುರ್ಜೇವಾಲಾ ಅವರಿಗೆ ಸಾಥ್ ನೀಡಿದ್ದಾರೆ.

ಜೆಡಿಎಸ್‌ ಸೇರಲು ಕಾಂಗ್ರೆಸ್ ಹಿರಿಯ ನಾಯಕ ಉತ್ಸುಕ: ದೇವೇಗೌಡ್ರನ್ನ ಭೇಟಿಯಾಗಿ ಮಾತುಕತೆ

ಈಗಾಗಲೇ  ಇಬ್ರಾಹಿಂದ ಅವರು ಜೆಡಿಎಸ್ ಸೇರ್ಪಡೆಗೆ ಹಲವು ಬಾರಿ ಮಾಜಿ ಸಿಎಂ ಎಚ್​ಡಿ ಕುಮಾರಸ್ವಾಮಿ ಸೇರಿದಂತೆ ಜೆಡಿಎಸ್​ ವರಿಷ್ಠ ಎಚ್​ಡಿ ದೇವೇಗೌಡ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದ್ದರು. ಅಲ್ಲದೇ ಜೆಡಿಎಸ್ ಸೇರ್ಪಡೆ ಕುರಿತು ಕ್ಷೇತ್ರ ಪ್ರವಾಸ ಕೈಗೊಂಡು ತೀರ್ಮಾನ ಮಾಡುವುದಾಗಿ ಇಬ್ರಾಹಿಂ ಬಹಿರಂಗವಾಗಿ ಹೇಳಿಕೆ ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

 ಇದೀಗ ಸುರ್ಜೇವಾಲ ಮಾತಿಗೆ ಮಣಿದು ಇಬ್ರಾಹಿಂ ಕಾಂಗ್ರೆಸ್​ನಲ್ಲೇ ಉಳಿದುಕೊಳ್ಳುತ್ತಾರಾ ಎನ್ನುವುದನ್ನು  ಕಾದುನೋಡಬೇಕಿದೆ.

click me!