ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಬಿಎಸ್‌ವೈ ಬಿಜೆಪಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೇಳಿದರು.
ಗದಗ (ಜ.1) : ಯಾವುದೇ ಗೊಂದಲಕ್ಕೆ ಅವಕಾಶವಿಲ್ಲ. ಬಿಎಸ್‌ವೈ ಬಿಜೆಪಿ ಪಕ್ಷ ಸಂಘಟನೆಯಲ್ಲಿ ನಿರತರಾಗಿದ್ದಾರೆ. ಬಿಜೆಪಿ ಪಕ್ಷವನ್ನು ಮತ್ತೊಮ್ಮೆ ಅಧಿಕಾರಕ್ಕೆ ತರುವ ನಿಟ್ಟಿನಲ್ಲಿ ಎಂದು ಯಡಿಯೂರಪ್ಪ ಪುತ್ರ ವಿಜಯೇಂದ್ರ ಹೇಳಿದರು. ಗದಗ(Gadag)ನಲ್ಲಿ ಮಾಧ್ಯಮ(Media)ದವರ ಜೊತೆ ಮಾತನಾಡಿದ, ಬಿಜೆಪಿ ಉಪಾಧ್ಯಕ್ಷ(BJP Vice President) ಬಿವೈ ವಿಜಯೇಂದ್ರ(BY Vijayendra), ಬಿಎಸ್‌ವೈ(BS Yadiyurappa) ಮುನಿಸಿಕೊಂಡಿದ್ದಾರೆ ಎಂಬುದು ವಿರೋಧ ಪಕ್ಷದವರು ಹರಡಿಸಿರುವ ಸುಳ್ಳು ಎಂದರು.
ಯಡಿಯೂರಪ್ಪ ಅವರ ಬಗ್ಗೆ ಒಳ್ಳೆಯ ಮಾತಾಡಿದ್ದಾರೆ. ಅದೇ ರೀತಿ ಜನಾರ್ದನ ರೆಡ್ಡಿ(janardanareddy) ಅವರೂ ಒಳ್ಳೆಯ ಮಾತನಾಡಿದ್ದಾರೆ. ಇದರ ಅರ್ಥ ರೆಡ್ಡಿ ಪಕ್ಷಕ್ಕೆ ಯಡಿಯೂರಪ್ಪ ಅವರ ಬೆಂಬಲ ಇದೆ ಅಂತಲ್ಲ, ಯಡಿಯೂರಪ್ಪ ಅವರು ಹಿಂದೆ ನಿಂತು ರಾಜಕೀಯ ಮಾಡಿದವರಲ್ಲ. ನೇರವಾಗಿ ರಾಜಕಾರಣ ಮಾಡುವ ಎದೆಗಾರಿಗೆ ಯಡಿಯೂರಪ್ಪ ಅವರಿಗೆ ಇದೆ ಎಂದರು.
undefined
ಅಮಿತ್ ಶಾ ಆಗಮನದಿಂದ ವಿಪಕ್ಷಗಳಲ್ಲಿ ನಡುಕ: ಬಿ.ವೈ.ವಿಜಯೇಂದ್ರ
ಅಮಿತ್ ಶಾ(Amit shah) ಕಾರ್ಯಕ್ರಮಕ್ಕೆ ಯಡಿಯೂರಪ್ಪ ಗೈರು, ಮಂಡ್ಯ ಸಭೆಗೆ ವಿಜಯೇಂದ್ರ ಗೈರು ವಿಷಯವಾಗಿ ಪ್ರತಿಕ್ರಿಯೆ ನೀಡಿ, ಪಕ್ಷ ಕರೆದ ಸಭೆಗೆ ಹಾಜರಾಗ್ಬೇಕಾಗಿದ್ದು ನನ್ನ ಕರ್ತವ್ಯ. ಕಾರಣಾಂತರಗಳಿಂದ ಸರಿಯಾದ ಸಮಯಕ್ಕೆ ತಲುಪಲಾಗಲಿಲ್ಲ ಅಂತಾ ಸ್ಪಷ್ಟನೆ ನೀಡಿದ್ರು..
ಯಡಿಯೂರಪ್ಪ ಅವರು ಅಮಿತ್ ಶಾ ಕಾರ್ಯಕ್ರಮದಿಂದ ದೂರ ಉಳಿದ ವಿಷಯಕ್ಕೆ ಉತ್ತರಿ, ಯಡಿಯೂರಪ್ಪ ಅವರ ವಿದೇಶ ಪ್ರವಾಸ(Foreign trip) ಪೂರ್ವ ನಿಯೋಜಿತ. ಎರಡು ತಿಂಗಳ ಹಿಂದೆಯೇ ಹೋಗ್ಬೇಕು ಅಂತಾ ಫಿಕ್ಸ್ ಮಾಡಲಾಗಿತ್ತು.. ಅಮಿತ್ ಶಾ ಅವರ ಕಾರ್ಯಕ್ರಮ ವಾರದ ಹಿಂದೆ ತೀರ್ಮಾನ ಆಗಿದ್ದು. ಯಡಿಯೂರಪ್ಪ ಅಮಿತ್ ಶಾ ಮಧ್ಯೆ ಮುನಿಸು ಅನ್ನೋದು ಸತ್ಯಕ್ಕೆ ದೂರವಾದ ಮಾತು. ಯಡಿಯೂರಪ್ಪ ಅವರು ಅಮಿಶಾ ಜೊತೆ ದೂರವಾಣಿಯಲ್ಲಿ ಮಾತನಾಡಿದ್ದಾರೆ.
ಇನ್ನು ಯಡಿಯೂರಪ್ಪ ಸಿಎಂ ಸ್ಥಾನದಿಂದ ಇಳಿದಾಗಿನಿಂದ ಬಿಜೆಪಿ(BJP)ಯಲ್ಲಿ ವಿಜಯೇಂದ್ರ ಕಡೆಗಣನೆ ವಿಷಯವಾಗಿ ಮಾತನಾಡಿ, ಪಕ್ಷ ನನಗೆ ಉಪಾಧ್ಯಕ್ಷ ಸ್ಥಾನ ಕೊಟ್ಟಿದೆ.. ಜವಾಬ್ದಾರಿ ಕೊಟ್ಟಿದೆ.. ಯಡಿಯೂರಪ್ಪ ಅವರ ಮಗ ಅನ್ನೋ ಬಗ್ಗೆ ಹೆಮ್ಮೆಯಿದೆ. ಯಡಿಯೂರಪ್ಪ ಅವರ ಮಗ ಅನ್ನೋ ಕಾರಣಕ್ಕೆ ಕಾರ್ಯಕರ್ತರು ಪ್ರೀತಿಯಿಂದ ಕಾಣ್ತಾರೆ. ನಾನೂ ಪಕ್ಷ ಕೊಟ್ಟ ಜವಾಬ್ದಾರಿಯನ್ನ ನಿರ್ವಹಿಸ್ತಿದ್ದೇನೆ.. ಯಡಿಯೂರಪ್ಪ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಟ್ಟಮೇಲೆ ವಿಜಯೇಂದ್ರ ಹಿನ್ನೆಡೆ ಅಗಿದೆ ಅನ್ನೋದು ಸತ್ಯಕ್ಕೆ ದೂರ. ಅಧ್ಯಕ್ಷ ನಳಿನ್ ಕುಮಾರ್ ಕಟೀಲು(nalin kumar kateel) ಅವರ ನೇತೃತ್ವದಲ್ಲಿ ಸಂಘಟನೆ ನಡೀತಿದೆ..
Karnataka Politics: 'ವರುಣದಲ್ಲಿ ವಿಜಯೇಂದ್ರ ಗೆದ್ದರೆ ರಾಜಕೀಯ ನಿವೃತ್ತಿ'
ಮಹದಾಯಿ ವಿಷಯಕ್ಕೆ ಕಾಂಗ್ರೆಸ್ ಪಾದಯಾತ್ರೆ ವಿಷಯ:
ರಾಜ್ಯ, ದೇಶದಲ್ಲಿ ಇಷ್ಟು ವರ್ಷ ಯಾರು ಅಧಿಕಾರದಲ್ಲಿದ್ದರು ಅನ್ನೋದು ಜನರಿಗೆ ಗೊತ್ತಿದೆ.. ರಾಜ್ಯದ ಜ್ವಲಂತ ಸಮಸ್ಯೆಗೆ ಇತಿಶ್ರೀ ಹಾಡ್ಬೇಕು ಅಂತಾ ಪಕ್ಷ ಶ್ರಮಿಸಿದೆ. ಮಹದಾಯಿ(Mahadayi) ವಿಷಯದಲ್ಲಿ ಕೇಂದ್ರಕ್ಕೆ ಮನವರಿಕೆ ಮಾಡಲು ರಾಜ್ಯ ನಾಯಕರು ಯಶಸ್ವಿಯಾಗಿದ್ದಾರೆ.. ಮುಂದಿನ ದಿನಗಳಲ್ಲಿ ಮಹದಾಯಿ ಕಾಮಗಾರಿ ಆರಂಭವಾಗಲಿದೆ.. ಮಹದಾಯಿ ವಿಚಾರದಲ್ಲಿ ರಾಜಕೀಯ ಮಾಡುವ ಪ್ರಶ್ನೆ ಇಲ್ಲ ಅಂತಾ ಹೇಳಿದ್ರು..