ಆರ್‌ಎಸ್‌ಎಸ್‌ನ ಎಲ್ಲ ವ್ಯವಹಾರ ಪರಿಶೀಲನೆ ಆಗ್ಬೇಕಿದೆ: ಪ್ರಿಯಾಂಕ್ ಹೇಳಿಕೆ ಸಮರ್ಥಿಸಿದ ಯತೀಂದ್ರ

Kannadaprabha News   | Kannada Prabha
Published : Jun 17, 2026, 06:55 AM IST
yathindra siddaramaiah on Rss

ಸಾರಾಂಶ

ಆರ್‌ಎಸ್‌ಎಸ್‌ ನೋಂದಣಿಗೆ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರ ಒತ್ತಾಯವನ್ನು ಸಚಿವ ಯತೀಂದ್ರ ಸಿದ್ದರಾಮಯ್ಯ ಸಮರ್ಥಿಸಿಕೊಂಡಿದ್ದಾರೆ. ಆರ್‌ಎಸ್‌ಎಸ್‌ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದ್ದು, ಅದರ ವ್ಯವಹಾರಗಳ ಪರಿಶೀಲನೆಗೆ ನೋಂದಣಿ ಅಗತ್ಯ ಎಂದಿದ್ದಾರೆ. ಇದಕ್ಕೆ ಬಿಜೆಪಿ ನಾಯಕರಾದ ಏನು ಹೇಳಿದ್ರು?

ಮೈಸೂರು (ಜೂ.17): ಆರ್‌ಎಸ್‌ಎಸ್‌(RSS)ನ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ(Registration) ಆಗಬೇಕು. ಗೃಹ ಸಚಿವ, ಪ್ರಿಯಾಂಕ್‌ ಖರ್ಗೆ(Priyank kharge)ಯವರು ಆರ್‌ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ನಗರಾಭಿವೃದ್ಧಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಪ್ರತಿಪಾದಿಸಿದರು.

ನಗರದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಅವರು ಮಾತನಾಡಿದರು. ಆರ್ ಎಸ್ಎಸ್ ನೋಂದಣಿಯಾಗದ ವಿಚಾರ ಕುರಿತು ಪ್ರತಿಕ್ರಿಯಿಸಿ, ದೇಶದ ಎಲ್ಲಾ ಕಡೆ ಆರ್ ಎಸ್ಎಸ್ ಗೆ ಕೋಟ್ಯಂತರ ಮೌಲ್ಯದ ಆಸ್ತಿ ಇದೆ. ಅವರಿಗೆ ಕೋಟ್ಯಂತರ ರೂಪಾಯಿ ಹಣವೂ ಬರುತ್ತಿದೆ. ಇದರ ಲೆಕ್ಕವನ್ನು ಅವರು ಕೊಡಬೇಕು ತಾನೆ?. ಅವರ ಎಲ್ಲಾ ವ್ಯವಹಾರಗಳ ಬಗ್ಗೆ ಪರಿಶೀಲನೆ ಮಾಡಬೇಕಿದೆ. ಹೀಗಾಗಿ, ಅದು ನೋಂದಣಿ ಆಗಬೇಕು. ಗೃಹ ಸಚಿವರು, ಆರ್ ಎಸ್ಎಸ್ ನೋಂದಣಿಗೆ ಒತ್ತಾಯ ಮಾಡ್ತಾ ಇರೋದು ಸರಿ ಇದೆ ಎಂದು ಅವರು ಸಮರ್ಥಿಸಿಕೊಂಡರು.

ಧರ್ಮದ ಹೆಸರಿನಲ್ಲಿ ಏನೂ ಬೇಕಾದರೂ ಮಾಡುತ್ತೇವೆ ಎಂಬುದು ನಡೆಯೋದಿಲ್ಲ. ದೇಶದ ಕಾನೂನಿಗಿಂತ ಯಾವ ಸಂಘಟನೆಯೂ ದೊಡ್ಡದಲ್ಲ. ಆರ್ ಎಸ್ಎಸ್ ಕೇವಲ ಸಾಂಸ್ಕೃತಿಕ ಸಂಘಟನೆ ಅಲ್ಲ, ಅದು ಬಿಜೆಪಿ ಪರವಾಗಿ ಕೆಲಸ ಮಾಡುತ್ತಿರುವ ಸಂಸ್ಥೆ. ಆರ್ ಎಸ್ಎಸ್ ನವರು ಹಿಂದುಗಳೇ ಅಲ್ಲ. ಅವರು ಕೇವಲ ಹಿಂದುತ್ವವಾದಿಗಳು ಅಷ್ಟೇ ಎಂದರು

ದೇಶದ್ರೋಹಿಗಳ ರಕ್ಷಕರಿಗೆ, ದೇಶ ವಿಭಜಕರ ಮಿತ್ರರಿಗೆ ಆರ್‌ಎಸ್‌ಎಸ್ ಅನ್ನು ಪ್ರಶ್ನಿಸುವ ಯೋಗ್ಯತೆಯಿದೆಯೇ? ದೆಹಲಿ ನಕಲಿ ಗಾಂಧಿ ಹೈಕಮಾಂಡ್‌ನ ಓಲೈಸಿ ತಾನೇ ಮುಂದಿನ ಮುಖ್ಯಮಂತ್ರಿ ಆಗಬೇಕು ಎಂಬ ದುರಾಸೆಯಿಂದ ಪ್ರಿಯಾಂಕ್ ಖರ್ಗೆ ಅವರು ಆರ್‌ಎಸ್‌ಎಸ್‌ ಅನ್ನು ಬೆದರುಬೊಂಬೆ ಮಾಡಿಕೊಳ್ಳಲು ಹೊರಟಿದ್ದಾರೆ. ಸಮಾಜದಲ್ಲಿ ಸೈದ್ಧಾಂತಿಕ ವಿವಾದ ಸೃಷ್ಟಿಸಿ ತನ್ನ ರಾಜಕೀಯ ಬೇಳೆ ಬೇಯಿಸಿಕೊಳ್ಳಲು ಪ್ರಿಯಾಂಕ್ ನಡೆಸುತ್ತಿರುವ ಕುತಂತ್ರ ಕನ್ನಡಿಗರಿಗೆ ಅರ್ಥವಾಗುವಷ್ಟು ರಹಸ್ಯವಾಗಿ ಉಳಿದಿಲ್ಲ.

-ಆರ್.ಅಶೋಕ್‌, ಪ್ರತಿಪಕ್ಷದ ನಾಯಕ 

ರಾಷ್ಟ್ರದ್ರೋಹಿ ಸಂಸ್ಥೆ ಕುರಿತು ಪ್ರಶ್ನೆ ಏಕಿಲ್ಲ

ಆರ್‌ಎಸ್‌ಎಸ್ ಮದರಸಾ ರೀತಿ ಗುಪ್ತವಾಗಿ ಕಾರ್ಯ ನಿರ್ವಹಿಸಲ್ಲ. ಅಕ್ರಮ ವಿದೇಶಿ ದೇಣಿಗೆ ಪಡೆದು ರಾಷ್ಟ್ರದ್ರೋಹಿ ಚಟುವಟಿಕೆಗಳಲ್ಲಿ ತೊಡಗಿಸುತ್ತಿರುವ ಮಾಹಿತಿ ನಿಮ್ಮ ಗೃಹ ಇಲಾಖೆ ಬಳಿಯೇ ಇದೆ. ಈ ಬಗ್ಗೆ ಪತ್ರ ಬರೆದು ಆ ಸಂಸ್ಥೆಗಳಿಂದ ಯಾಕೆ ವಿವರ ಕೇಳುವುದಿಲ್ಲ?

-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

RSS ಗೆ ಪ್ರಶ್ನೆ ಕೇಳಿದ್ದು ನಾನಲ್ಲ, ಸರ್ಕಾರ, ನನ್ನ ಪ್ರಶ್ನೆಗೆ ಉತ್ತರ ಕೊಡೋದಾದ್ರೆ ನಾನು ಆರೆಸ್ಸೆಸ್ ಕಚೇರಿಗೆ ಹೋಗಲು ಸಿದ್ಧ: ಪ್ರಿಯಾಂಕ್ ಖರ್ಗೆ
CM ಡಿಕೆಶಿ ಸರ್ಕಾರದ ಮೊದಲ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಸಲು ಸಿದ್ಧತೆ? ರಾಜಧಾನಿಯಾಚೆ ಆಡಳಿತ