ಸಿದ್ದರಾಮಯ್ಯನವರಿಗೆ ಸಲಹೆಗಾರರು ಬಹಳಷ್ಟು ಜನ ಇದ್ದಾರೆ. ಘಟಬಂಧನ್ ರಚನೆ ಮಾಡಿಕೊಂಡಿದ್ದಾರೆ. ಆ ಘಟಬಂಧನ್ ಸಿದ್ದರಾಮಯ್ಯನವರನ್ನು ಮುಗಿಸಲು ಹೊರಟಿದೆ: ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ ನಾರಾಯಣಸ್ವಾಮಿ
ಕೋಲಾರ(ಆ.21): ಸಿದ್ದರಾಮಯ್ಯನವರ ಕಾರಿನ ಮೇಲೆ ಮೊಟ್ಟೆಎಸೆಯಲಾಯಿತೇ, ಇಲ್ಲವೇ ಎಂಬುದು ಪ್ರಶ್ನಾರ್ಥಕ ಚಿಹ್ನೆಯಾಗಿದೆ. ಮೊಟ್ಟೆ ಎಸೆದಿದ್ದರೆ ತಪ್ಪು. ಆದರೆ ಯಾರು ಎಸೆದಿದ್ದಾರೆ ಎಂಬುವುದು ಬಹಳ ಮುಖ್ಯ, ಬಿಜೆಪಿಯವರು ಎಸೆದಿದ್ದಾರೆಯೋ ಅಥವಾ ಕಾಂಗ್ರೆಸ್ ನವರೇ ಎಸೆದಿದ್ದಾರೆಯೇ ಇಲ್ಲವೇ ಕಾಂಗ್ರೆಸ್‌ನಲ್ಲಿರುವ ಮತ್ತೊಂದು ಗುಂಪು ಎಸೆದಿದಿಯೋ. ಇದರ ಬಗ್ಗೆ ತನಿಖೆಯಾಗಬೇಕು ಎಂದು ವಿಧಾನ ಪರಿಷತ್ ಮುಖ್ಯ ಸಚೇತಕ ವೈ.ಎ ನಾರಾಯಣಸ್ವಾಮಿ ಆಗ್ರಹಿಸಿದರು.
ಶ್ರೀನಿವಾಸಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಘಟನೆ ಬಗ್ಗೆ ತನಿಖೆ ಮಾಡಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ತನಿಖೆಯಿಂದ ಸತ್ಯ ಹೊರ ಬರುತ್ತದೆ, ತನಿಖೆಯಲ್ಲಿ ಕಾಂಗ್ರೆಸ್ ನವರ ಅಥವಾ ಬಿಜೆಪಿಯವರು ಎಂಬುದು ಸತ್ಯಾಂಶ ಹೊರ ಬರಲಿದೆ ಎಂದರು.
ಕರಾವಳಿಯಲ್ಲಿನ ಸರಣಿ ಹತ್ಯೆಯಿಂದ ಬಿಜೆಪಿ ವರ್ಚಸ್ಸು ಕುಸಿದಿದೆಯೇ?
ಸಿದ್ದರಾಮಯ್ಯನವರ ಭಾಷೆ ಭಾರಿ ಕೆಟ್ಟದಾಗಿದೆ, ಸಿದ್ದರಾಮಯ್ಯನವರಿಗೆ ಭಾರತ ದೇಶದ ತಿರಂಗ ಧ್ವಜದಲ್ಲಿ ಯಾವ ಬಣ್ಣ ಇದೆ ಎಂದು ಗೊತ್ತಿಲ್ಲ, ಕೇಸರಿ ಬಣ್ಣವನ್ನು ಕೆಂಪು ಬಣ್ಣ ಎಂದು ಹೇಳುತ್ತಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರರಲ್ಲ ಎನ್ನುತ್ತಾರೆ. ಸಾವರ್ಕರ್ ಸ್ವಾತಂತ್ರ್ಯ ಹೋರಾಟಗಾರಲ್ಲದಿದ್ದರೆ ಅವರನ್ನು ಅಂಡಮಾನ್-ನಿಕೋಬಾರ್ ಜೈಲಿಗೆ ಯಾಕೆ ಹಾಕುತತ್ತಿದ್ದರು. ಇದಕ್ಕೆ ಸಿದ್ದರಾಮಯ್ಯನವರು ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಸಿದ್ದರಾಮಯ್ಯನವರಿಗೆ ಸಲಹೆಗಾರರು ಬಹಳಷ್ಟು ಜನ ಇದ್ದಾರೆ. ಘಟಬಂಧನ್ ರಚನೆ ಮಾಡಿಕೊಂಡಿದ್ದಾರೆ. ಆ ಘಟಬಂಧನ್ ಸಿದ್ದರಾಮಯ್ಯನವರನ್ನು ಮುಗಿಸಲು ಹೊರಟಿದೆ. ಅವರ ಸುತ್ತ ಇರುವವರೇ ಎಲ್ಲೋ ಒಂದು ಕಡೆ ಅವರಿಗೆ ಖೆಡ್ಡಾ ತೋಡುತ್ತಿದ್ದಾರೆ. ಆದ್ದರಿಂದ ಸಿದ್ದರಾಮಯ್ಯ ಎಚ್ಚರಿಕೆಯಿಂದ ಇರಬೇಕು ಎಂದರು.
ಸಿದ್ದರಾಮಯ್ಯ ರಂಭಾಪುರಿ ಸ್ವಾಮೀಜಿಗಳ ಬಳಿ ಹೋಗಿ ನಾನು ಧರ್ಮವನ್ನು ಒಡೆಯುವ ಕೆಲಸ ಮಾಡಿದ್ದು ತಪ್ಪು ಎಂದು ಒಪ್ಪಿಕೊಂಡಿದ್ದಾರೆ. ಎಂ.ಬಿ ಪಾಟೀಲ್ ಮಾತು ಕೇಳಿ ಲಿಂಗಾಯಿತ ಧರ್ಮ ಒಡೆಯುವ ಕೆಲಸ ಮಾಡಿದ್ದÜರು. ಈಗ ಇಬ್ಬರೂ ತಪ್ಪು ಎನ್ನುವ ದಾಟಿಯಲ್ಲಿ ಹೇಳಿರುವುದು ಎಲ್ಲಿ ಹೋದರೂ ಮುಖ ಸುಟ್ಟಿಕೊಳ್ಳುವ ಕೆಲಸ ಅವರ ಘಟ್ ಬಂಧನ್ ಮಾಡುತ್ತಿದೆ ಎಂದರು.