ಕೆ.ಎನ್.ರಾಜಣ್ಣ, ಜೆಡಿಎಸ್ ಶಾಸಕ ಗೌರಿ ಶಂಕರ್‌ಗೆ ಓಪನ್ ಆಫರ್ ಕೊಟ್ಟ ಬಿಜೆಪಿ ನಾಯಕ

By Suvarna NewsFirst Published Aug 21, 2022, 12:17 PM IST
Highlights

ಮಾಧುಸ್ವಾಮಿ ಹಾಗೂ ಸುರೇಶ್ ಗೌಡ ಅವರು ಮುಂದಿನ ದಿನಗಳಲ್ಲಿ ಬಿಜೆಪಿಗೆ ಬರ್ತಾರೆ ಎನ್ನುವ ಕೆ.ಎನ್‌. ರಾಜಣ್ಣ ಹೇಳಿಕೆಗೆ ಸ್ವತಃ ಸುರೇಶ್ ಗೌಡ ಪ್ರತಿಕ್ರಿಯಿಸಿ ವ್ಯಂಗ್ಯವಾಡಿದ್ದಾರೆ.

 ತುಮಕೂರು, (ಆಗಸ್ಟ್.21): ಹಾಲಿ ಸಚಿವ ಮಾಧುಸ್ವಾಮಿ ಹಾಗೂ ತುಮಕೂರು ಗ್ರಾಮೀಣ ಮಾಜಿ ಶಾಸಕ ಸುರೇಶ್ ಗೌಡ ಅವರು ಬಿಜೆಪಿ ತೊರೆದು ಕಾಂಗ್ರೆಸ್‌ ಸೇರಲಿದ್ದಾರೆ ಎಂದು ಕೆ.ಎನ್ ರಾಜಣ್ಣ ಸ್ಫೋಟಕ ಹೇಳಿಕೆ ನೀಡಿದ್ದಾರೆ. ಆದ್ರೆ, ಇದನ್ನು ಸ್ವತಃ ಸುರೇಶ್ ಗೌಡ ಅಲ್ಲೆಗೆಳೆದಿದ್ದಾರೆ. ಅಲ್ಲದೇ ಅವರನ್ನೇ ಬಿಜೆಪಿ ಬರುವಂತೆ ಆಹ್ವಾನ ಕೊಟ್ಟಿದ್ದಾರೆ.

ತುಮಕೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸುರೇಶ್ ಕುಮಾರ್,  ಒಂದನೇ ಕ್ಲಾಸ್‌ನಿಂದ ಬಿಜೆಪಿ ಪಾಠ ಒದ್ಕೊಂದು ಬಂದಿದ್ದೇನೆ. ಈಗ ನಾನು ಪಕ್ಷದಲ್ಲಿ ಮಾಸ್ಟರ್ ಡಿಗ್ರಿ ಮಾಡಿದ್ದೇನೆ.ನಾನು ಯಾವುದೇ ಕಾರಣಕ್ಕೂ ಬಿಜೆಪಿ ಬಿಟ್ಟು ಹೊಗಲ್ಲ ಎಂದು ಸ್ಪಷ್ಟಪಡಿಸಿದರು.

ಬಿಜೆಪಿ ಸಚಿವ ಸೇರಿ ಇಬ್ಬರು ಕಾಂಗ್ರೆಸ್ ಸೇರಲು ಆಸಕ್ತಿ ಹೊಂದಿದ್ದಾರೆ: ಕೆ.ಎನ್.ರಾಜಣ್ಣ

ಇನ್ನು ಇದೇ ವೇಳೆ ಕಾಂಗ್ರೆಸ್‌ನ ಮಾಜಿ ಶಾಸಕ ಕೆ.ಎನ್ ರಾಜಣ್ಣ ಹಾಗೂ ಜೆಡಿಎಸ್ ಶಾಸಕ ಗೌರಿ ಶಂಕರ್ ಅವರನ್ನು ಬಿಜೆಪಿಗೆ ಬರುವಂತೆ ಆಹ್ವಾನಿಸಿದ್ದು, ಎ.ಎನ್.ರಾಜಣ್ಣರಿಗೆ ಮಧುಗಿರಿಯಿಂದ ಬಿಜೆಪಿ ಟಿಕೆಟ್ ಕೊಡ್ತಿವಿ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದು ಅವಕಾಶಸಿಕ್ಕರೆ ನಿಮ್ಮನ್ನೂ ಮಂತ್ರಿ ಮಾಡುತ್ತೇವೆ ಎಂದು   ಒಪನ್ ಆಫರ್ ಕೊಟ್ಟರು.

ಕಾಂಗ್ರೆಸ್ ನಲ್ಲಿ ಯಾವುದೇ ಕಾರಣಕ್ಕೂ ನಿಮ್ಮನ್ನು ಮಂತ್ರಿ ಮಾಡೊಲ್ಲ.. ನೀವು ಸಿದ್ದರಾಮಯ್ಯ ಬೆಂಬಲಿಗರರಾಗಿರುವುದರಿಂದ ಡಿ.ಕೆ.ಶಿವಕುಮಾರ್ ಯಾವುದೇ ಕಾರಣಕ್ಕೂ ನಿಮ್ಮನ್ನ ಮಂತ್ರಿ ಮಾಡಲು ಬಿಡಲ್ಲ..ಬಿಜೆಪಿಗೆ ಬಂದ್ರೆ ನೀವು ಮಂತ್ರಿಯಾಗುವ ಎಲ್ಲಾ ಅವಕಾಶ ಇರುತ್ತೆ. ನೀವು ಎಲ್ಲಾ ಸಂದರ್ಭದಲ್ಲೂ ಸಹಾಯ ಮಾಡಿದ್ದಿರಾ. ಸಂಸತ್ ಚುನಾವಣೆಯಲ್ಲಿ ಮೋದಿ‌ ಪ್ರಧಾನ ಮಂತ್ರಿ ಆಗ್ಲಿ ಅಂತಾ ಯಾವುದೋ ಒಂದು ರೀತಿ ಸಹಾಯ ಮಾಡಿದ್ರಿ. ಕೊರಟಗೆರೆಯಲ್ಲೂ ಕೂಡ ಎಲ್ಲಾ ಸೇರಿ ಸಹಾಯ ಮಾಡಿದ್ರಿ ಎಂದು ಹೊಸ ಬಾಂಬ್ ಸಿಡಿಸಿದರು.

ನಿಮ್ಮಲ್ಲಿ ನಾಲ್ಕು ಬಣ ಇದೆ, ಡಿ.ಕೆಶಿ, ಸಿದ್ದರಾಮಯ್ಯ, ಪರಮೇಶ್ವರ್, ಎಂ. ಬಿ. ಪಾಟೀಲ್, ಖರ್ಗೆದೊಂದು ಗುಂಪು. ಈ ಗುಂಪಲ್ಲಿ ನೀವು ಕಣ್ಮರೆ ಆಗೊತ್ತಿರಾ. ಅದಕ್ಕೆ ನೀವು ಬಿಜೆಪಿಗೆ ಬನ್ನಿ. ನಾನು ಬೇಕಿದ್ರೆ ತ್ಯಾಗ ಮಾಡ್ತಿನಿ ಮಂತ್ರಿಗಿರಿ ಅವಕಾಶ ಇದ್ರೆ,  ನಿಮ್ಮನ್ನ ಮಂತ್ರಿ ಮಾಡಿಸುತ್ತೇನೆ ಬನ್ನಿ ಬಿಜೆಪಿಗೆ ಎಂದು ಹೇಳಿದರು.

ಈಗಾಗ್ಲೆ ತುಮಕೂರು ಜಿಲ್ಲೆಯ ಸಾಕಷ್ಟು ಆಪರೇಷನ್ ನಡೆದಿದೆ,ಗುಬ್ಬಿ ಶ್ರೀನಿವಾಸ್ ಅವರನ್ನು 10 ವರ್ಷದ ಹಿಂದೆ ಕರೆದ್ದಿದ್ವಿ. ದೇವೆಗೌಡ್ರು & ಕುಮಾರಸ್ವಾಮಿ ಅವರು ಅವರಿಗೆ ಜೆಡಿಎಸ್ ನಲ್ಲಿ ಅಸ್ತಿತ್ವ ಇಲ್ಲದಂಗೆ ಮಾಡಿದ್ದಾರೆ ಎಂದು ಸುರೇಶ್ ಗೌಡ ಅವರು ಗೌರಿ ಶಂಕರ್‌ಗೆ ಬಿಜೆಪಿಗೆ ಬರುವಂತೆ ಆಹ್ವಾನಿಸಿದರು. ಈಗಾಗ್ಲೆ ಗೌರಿಶಂಕರ್ ಬಿಜೆಪಿಗೆ ಬರಲು ಒಪ್ಪಿದ್ರು. 4 ವರ್ಷದ ಮುಂಚೆ ಬರ್ತಿವಿ ಅಂತಾ. ಯಡಿಯೂರಪ್ಪ ಸರ್ಕಾರ ‌ಮಾಡವ ಸಂದರ್ಭದಲ್ಲಿ ಹೇಳಿದ್ದರು. ಈಗ ಬಂದ್ರು ಗೌರಿಶಂಕರ್ ಅವರನ್ನು ಸ್ವಾಗತ ಮಾಡ್ತಿನಿ.ಬಿಜೆಪಿ ಪಕ್ಷಕ್ಕೆ ಬಂದ್ರೆ ಗೌರಿ ಶಂಕರ್ ಗೆ ದೊಡ್ಡಬಳ್ಳಾಪುರದಲ್ಲಿ ಅವಕಾಶ ಮಾಡಿಕೊಡುತ್ತೇವೆ ಎಂದು ತಿಳಿಸಿದರು.

click me!