ರಾಜ್ಯದ ವಿಧಾನಸಭೆ ಅಧ್ಯಕ್ಷನಾದ ಮೇಲೆ ನನಗೆ ಬಹಳ ಜವಾಬ್ದಾರಿ ಬಂದಿದ್ದು, ಸಭಾಧ್ಯಾಕ್ಷ ಸ್ಥಾನದ ಘನತೆ ಉಳಿಸುವ ಕೆಲಸ ಮಾಡುವುದಾಗಿ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು.
ಹಾಸನ (ಸೆ.10): ರಾಜ್ಯದ ವಿಧಾನಸಭೆ ಅಧ್ಯಕ್ಷನಾದ ಮೇಲೆ ನನಗೆ ಬಹಳ ಜವಾಬ್ದಾರಿ ಬಂದಿದ್ದು, ಸಭಾಧ್ಯಾಕ್ಷ ಸ್ಥಾನದ ಘನತೆ ಉಳಿಸುವ ಕೆಲಸ ಮಾಡುವುದಾಗಿ ಸ್ಪೀಕರ್ ಯು.ಟಿ. ಖಾದರ್ ತಿಳಿಸಿದರು. ನಗರದ ಅರಳೇಪೇಟೆ ರಸ್ತೆ ಬಳಿ ಇರುವ ಎಂ.ಎಚ್. ಸಮುದಾಯ ಭವನದಲ್ಲಿ ಹಾಸನ ಜಿಲ್ಲಾ ಅಲ್ಪಸಂಖ್ಯಾತ ಹಾಗೂ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಮಧ್ಯಾಹ್ನ ಹಮ್ಮಿಕೊಳ್ಳಲಾಗಿದ್ದ ಕರ್ನಾಟಕ ರಾಜ್ಯ ವಿಧಾನಸಭೆ ಸ್ಪೀಕರ್ ರವರಿಗೆ ಸನ್ಮಾನ ಮತ್ತು ಅಭಿನಂದನೆ ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಸಭಾಧ್ಯಕ್ಷರು ವಿಧಾನಸಭೆಯಲ್ಲಿ ಪ್ರತಿಪಕ್ಷದ ಮಿತ್ರ ನಾನು. ವಿಧಾನಸಭೆಯಲ್ಲಿ ಪ್ರತಿಪಕ್ಷದವರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಿ, ರಾಜ್ಯದ ಸಮಸ್ಯೆ ಬಗೆಹರಿಸುವ ಕೆಲಸ ಮಾಡುತ್ತೆನೆ. ಆಡಳಿತ ವಿರೋಧ ಪಕ್ಷದವರು ವಾಗ್ವಾದ ನಡೆಸಿ ಕೊನೆಗೆ ಸ್ಪೀಕರೆ ಸರಿಯಲ್ಲ ಎಂದು ಕರೆಯುತ್ತಾರೆ ಎಂದು ಬೇಸರ ವ್ಯಕ್ತಪಡಿಸಿದರು. ಸಭಾಧ್ಯಕ್ಷರಿಗೆ ರಾಜಕೀಯ ಪಕ್ಷ ಧಾರ್ಮಿಕ ವಿಚಾರ ಇಲ್ಲ. ಸಂಸದೀಯ ವ್ಯವಸ್ಥೆ ಬಲಪಡಿಸಿದಾಗ ಪ್ರಜಾಪ್ರಭುತ್ವ ವ್ಯವಸ್ಥೆ ಬಲಪಡಿಸುತ್ತದೆ. ಭಾರತ ದೇಶದ ಸರ್ವಜನರೂ ಸಂತೋಷ ಸಮಾಧಾನದಿಂದ ಜೀವನ ನಡೆಸಲು ಸಂವಿಧಾನ ಕಾರಣ ಎಂದರು. ಭಾರತ ದೇಶದಲ್ಲಿ ಬಡವರು, ಶ್ರಮಿಕರು ಕೂಲಿ ಕಾರ್ಮಿಕರು ಯಾವುದೇ ಭಯವಿಲ್ಲದೆ ಓಡಾಡಲು ಮಂತ್ರಿ.
ದೇವೇಗೌಡರು ಜಾತಿ ಕಡೆ ವಾಲಲ್ಲ ಎಂದುಕೊಂಡಿದ್ದೆ: ಶಾಸಕ ಶಿವಲಿಂಗೇಗೌಡ ಬೇಸರ
ಮುಖ್ಯಮಂತ್ರಿ ಮತ್ತು ಸ್ಪೀಕರ್ ಕಾರಣ ಅಲ್ಲ ಭಾರತ ದೇಶದ ಸಂವಿಧಾನ ಕಾರಣ. ಸಂವಿಧಾನದವನ್ನು ಬಲಿಷ್ಠಗೊಳಿಸಲು ನಾವೆಲ್ಲರೂ ಸಹಕಾರ ಕೊಡಬೇಕು. ಸಮಾಜ ಭೂಮಿ ನಮಗೆ ಮಾತ್ರ ಸಿಮಿತ ಅಲ್ಲ. ನಾವು ಹೋಗಬಹುದು ಮುಂದೆ ಹುಟ್ಟಿ ಬರುವ ಮಕ್ಕಳಿಗೆ ಸುಂದರವಾದ ಸಮಾಜ ನಿರ್ಮಾಣ ನಿರ್ಮಾಣ ಮಾಡಬೇಕು ಎಂದು ಕಿವಿಮಾತು ಹೇಳಿದರು. ಜಾತಿ ಧರ್ಮದ ಮಧ್ಯ ಸಮಸ್ಯೆ ಉಂಟಾಗಬಾರದು. ನಾನು ಹಟ್ಟುವಾಗ 9 ತಿಂಗಳು ಹತ್ತು ದಿವಸದಲ್ಲಿ ನನ್ನ ತಾಯಿ ಹೊಟ್ಟೆಯಲ್ಲಿ ಹುಟ್ಟಿದ್ದೆವೆ ಬೆರೆ ಧರ್ಮದವರು 9 ತಿಂಗಳಿಗೆ ಜನ್ಮ ತಾಳುತ್ತಾರೆ.ನಾವೆಲ್ಲರೂ ಬೆರೆ ಬೆರೆ ಆಗಿದ್ದರೆ 6 ತಿಂಗಳೂ ಮೂರು ತಿಂಗಳಿಗೂ ಹುಟ್ಟಬಹುದಿತ್ತು. ಆದರಿಂದ ಎಲ್ಲಾ ಧರ್ಮ ಸಮಾನ ಎಂದು ಹೇಳಿದರು.
ದೇವರು ಎಲ್ಲಾ ಜಾತಿ ಧರ್ಮದವರಿಗೂ ಎರಡು ಕಣ್ಣು ಕಿವಿ ಕೈ ನಾಲಿಗೆ ನೀಡಿದ್ದಾರೆ. ಯುವಕರು ಸಕಾರಾತ್ಮಕ ಆಲೋಚನೆ ಚಿಂತನೆ ರೂಪಿಸಿಕೊಳ್ಳಬೇಕು. ನಾನು ಹುಟ್ಟುವಾಗ ಹೆಸರು ಇರುವುದಿಲ್ಲ. ಉಸಿರು ಮಾತ್ರ ಇರುತ್ತದೆ. ಆದರೆ ಭೂಮಿ ಬಿಟ್ಟು ಹೋಗುವಾಗ ಹೆಸರು ಇರಬೇಕು ಎಂದರು. ದುಶ್ಚಟ ಹಾಗೂ ದ್ವೇಷಮುಕ್ತ ಸಮಾಜ ನಿರ್ಮಾಣ ಮಾಡಬಹುದು. ಸರ್ಕಾರದಿಂದ ಯಾವುದೇ ಕೆಲಸವಾದರೆ ಸಮಾಜದ ಹಿತದೃಷ್ಟಿಯಿಂದ ಮಾಡಲಾಗುವುದು. ಜನಸಾಮಾನ್ಯರ ಬಡವರ ಕೆಲಸ ಮಾಡಿದ್ದರೆ ಅಧಿಕಾರ ಕಾಲ ಬುಡಕ್ಕೆ ಬರುತ್ತದೆ. ನನ್ನ ತಂದೆ ಶಾಸಕರಾದರು ನಾನು ರಾಜಕೀಯಕ್ಕೆ ಬರುವುದು ಇಷ್ಟವಿರಲಿಲ್ಲ.
ನನ್ನನ್ನು ಅಂದಿನ ಕಾಲದ ಅರಣ್ಯ ಸಚಿವರಾದ ರಂಗನಾಥ ಬಳಿ ಕರೆದುಕೊಂಡು ಹೋಗಿ ನನ್ನ ರಾಜಕೀಯ ಹುಚ್ಚಿನ ಬಗ್ಗೆ ತಿಳಿಸಿ ಅವರಿಂದ ಒಳ್ಳೆಯ ವಿಧ್ಯಾಭ್ಯಾಸ ಮಾಡಿಸಲು ಸಲಹೆ ಕೊಡಿಸಿದ್ದರು. ಭಾರತ ದೇಶದಂತಹ ದೇಶ ವಿಶ್ವದ ಯಾವುದೇ ದೇಶಕೊದರು ಸಿಗಲು ಸಾಧ್ಯವಿಲ್ಲ. ನಾವು ಎಲ್ಲರ ಜೊತೆ ಚೆನ್ನಾಗಿ ಎಲ್ಲಾರ ಧರ್ಮಕ್ಕೆ ಗೌರವ ಕೊಡಬೇಕು ನಾನೆ ಅದಕ್ಕೆ ಸಾಕ್ಷಿ. ಕೆಲವರು ಸಂವಿಧಾನದ ಬಗ್ಗೆ ಕೆಲವರು ಬಾಯಿಗೆ ಬಂದ ಹಾಗೆ ಮಾತನಾಡುತ್ತಾರೆ. ಟೀಕೆ ಟಿಪ್ಪಣಿಗಳು ಸ್ವಾಭಾವಿಕ. ಇದೊಂದು ಪ್ರಜಾಪ್ರಭುತ್ವದ ಸೌಂದರ್ಯ. ಇದನ್ನು ಸಕಾರಾತ್ಮಕವಾಗಿ ಸ್ವೀಕರಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಹಾಸನ ಜಿಲ್ಲೆ ಎಂದರೆ ರೈತರಿಗೆ ಹೈನುಗಾರಿಕೆಗೆ ಒಳ್ಳೆಯ ಹೆಸರು ಪಡೆದ ಜಿಲ್ಲೆ. ಈ ಜಿಲ್ಲೆಯಿಂದ ಕರ್ನಾಟಕದ ಏಕೈಕ ವ್ಯಕ್ತಿ ಪ್ರಧಾನ ಮಂತ್ರಿಯಾಗಿದ್ದಾರೆ ಎಂದು ಶ್ಲಾಘಿಸಿದರು. ವಿಧಾನಸಭೆಯಲ್ಲಿ ಶಿವಲಿಂಗೇಗೌಡರಿಗೆ ಹೆಚ್ಚು ಮಾತನಾಡಲು ಅವಕಾಶ ನೀಡಿದ್ದೇನೆ. ವಿಧಾನಸಭೆ ಒಳಗೆ ಆಡಳಿತ, ಪ್ರತಿ ಪಕ್ಷದ ಗಲಾಟೆ ಹತ್ತು ನಿಮಿಷ ಮಾತ್ರ. ನೀವು ಅದನ್ನು ನೋಡಿ ಜಗಳ ಮಾಡಿಕೊಳ್ಳಲು ಹೊಗಬೇಡಿ ಎಂದು ಕುಟುಕಿದರು. ಇನ್ನು ವಿಧಾನಸಭೆ ಜಗಳ ಪ್ರಜಾಪ್ರಭುತ್ವದ ಸೌಂದರ್ಯ ಎಂದು ಮಾತನಾಡಿ, ರಾಜಕಾರಣಿಗಳಿಗಾಗಿ ತಳಮಟ್ಟದ ಕಾರ್ಯಕರ್ತರು ಜಗಳ ಮಾಡಿಕೊಳ್ಳಲು ಹೋಗುವುದು ಬೇಡ ಎಂದು ಸಲಹೆ ನೀಡಿದರು. ಅರಸೀಕೆರೆ ಕ್ಷೇತ್ರದ ಕೆ.ಎಂ. ಶಾಸಕ ಶಿವಲಿಂಗೇಗೌಡ ಮಾತನಾಡಿ, ಸ್ವತಂತ್ರ ಭಾರತದ ಇತಿಹಾಸದಲ್ಲಿ 75 ವರ್ಷಗಳ ಕಾಲ ಮಾಡದ ಕೆಲಸವನ್ನು ಕಾಂಗ್ರೆಸ್ ಪಕ್ಷ ಅಲ್ಪಸಂಖ್ಯಾತ ವ್ಯಕ್ತಿಯನ್ನು ಸ್ಪೀಕರನ್ನಾಗಿ ಆಯ್ಕೆ ಮಾಡಿದೆ.
ವಿಧಾನಸಭಾಧ್ಯಕ್ಷ ಸ್ಥಾನ ಅಲ್ಪಸಂಖ್ಯಾತ ಸಮುದಾಯಕ್ಕೆ ಕೊಟ್ಟ ಕಿರ್ತಿ ಕಾಂಗ್ರೆಸ್ ಪಕ್ಷಕ್ಕೆ ಸೇರುತ್ತದೆ. ಮಹತ್ಮಾ ಗಾಂಧಿ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಒಂದೆ ಎಂದು ಸಂದೇಶ ಕೊಟ್ಟರು. ಎಲ್ಲೊ ಕೆಲವರು ಕುಳಿತು ಕೆಟ್ಟ ಅಭಿಪ್ರಾಯ ಮೂಡಿಸಿ ಜಾತಿ ಜಾತಿಗಳ ನಡುವೆ ಗಲಾಟೆ ನಡೆಸುತ್ತಿದ್ದಾರೆ. ನನಗೂ ಖಾದರ್‌ಗೂ ಅಧ್ಯಕ್ಷರಾದ ನಂತರ ಮಾತನಾಡಲು ಅವಕಾಶ ಕೊಡುತ್ತಿಲ್ಲ. ಕಾರಣ ಅಧಿವೇಶನದಲ್ಲಿ ಸ್ವಲ್ಪ ಜಗಳ ನಡೆಯುತ್ತದೆ. ನನಗೆ ಅಧಿವೇಶನದಲ್ಲಿ ಮಾತನಾಡಲು ಅವಕಾಶ ಮಾಡಿಕೊಡಲಿ. ರಾಜಕಾರಣಿಗಳಿಗೆ ಇಂತಹ ಕಾರ್ಯಕ್ರಮ ಒಳ್ಳೆಯ ಸಂದೇಶ ನೀಡಿದೆ ಎಂದು ಮಾತನಾಡಿದರು. ಅಭಿನಂದನಾ ಸಮಾರಂಭದಲ್ಲಿ ಶ್ರೀ ವೇನಹಳ್ಳಿ ಮಠದ ಸ್ವಾಮಿಜಿ ಸಂಗಮೇಶ ಸ್ವಾಮೀಜಿ ಅವರು ದಿವ್ಯಸಾನಿಧ್ಯವಹಿಸಿ ಆಶೀರ್ವಚನ ನುಡಿದರು. ಇದಾದ ಮೇಲೆ ಕೊನೆಯಲ್ಲಿ ನೂತನ ಸ್ಪೀಕರ್ ಯು.ಟಿ. ಖಾದರ್ ಅವರಿಗೆ ವಿವಿಧ ಸಂಘ ಸಂಸ್ಥೆ ಪಕ್ಷದಿಂದ ಅಭಿನಂದನೆಯ ಮಹಾಪೂರ ಹರಿದುಬಂದಿತು.
ಪಂಚೆಯೊಳಗೆ ಖಾಕಿ ಚಡ್ಡಿ ಹಾಕಿ ಸಮಾಜವಾದಿ ಅಂದ್ರೆ ಆಗೋದಿಲ್ಲ: ಸಿಎಂ ವಿರುದ್ಧ ಹರಿಪ್ರಸಾದ್ ವಾಗ್ದಾಳಿ
ಇದೆ ವೇಳೆ ಕೆಪಿಸಿಸಿ ಸದಸ್ಯರಾದ ಮಹಮ್ಮದ್ ಆರೀಪ್, ಕಾಂಗ್ರೆಸ್ ಮುಖಂಡರಾದ ಹೆಚ್.ಕೆ. ಜವರೇಗೌಡ, ಹೆಚ್.ಕೆ. ಮಹೇಶ್, ಹಾಸನ ವಿಧಾನ ಸಭಾ ಪರಾಜಿತ ಅಭ್ಯರ್ಥಿ ಬನವಾಸೆ ರಂಗಸ್ವಾಮಿ, ಅಬ್ದೂಲ್ ಕಹಿಂ, ಅಶ್ರು ಆಸೀಪ್, ಶ್ರೇಯಾಸ್ ಪಟೇಲ್, ಮುರುಳಿ ಮೋಹನ್, ಡಾ. ಅಬ್ದೂಲ್ ಬಶೀರ್, ರಾಜಶೇಖರ್, ಅಮ್ಜಾದ್ ಖಾನ್, ದಿಲಿಪ್, ದೀಪಕ್, ಸಲೀಂ ಕೊಲ್ಲಹಳ್ಳಿ, ಜುಬೇರ್ ಅಹಮದ್, ಅಬ್ದೂಲ್ ರಶೀದ್, ನಾಸಿರ್ ಹಜರತ್, ಹೆಚ್.ಕೆ. ಸಂದೇಶ್, ರೊನಾಲ್ಡ್ ಕಾರಡೋಜಾ, ಜುಬೇರ್ ಸಹಮದ್, ನಾಸೀರ್ ಹಜರತ್, ಜಿ.ಓ. ಮಹಾಂತಪ್ಪ ಇತರರು ಉಪಸ್ಥಿತರಿದ್ದರು.