ಎಸ್ಸಿ, ಎಸ್‌ಟಿ ಹಿಂದುಳಿದವರ ಧ್ವನಿಯಾಗಿ ಕೆಲಸ: ಎಂಪಿ ರೇಣುಕಾಚಾರ್ಯ

By Kannadaprabha News  |  First Published Apr 18, 2023, 1:11 PM IST

ಹತ್ತಿದ ಏಣಿ ಒದೆಯುವ ಜಾಯಮಾನ ನನ್ನದಲ್ಲ, ಎಸ್ಸಿ, ಎಸ್‌ಟಿ, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ, ಈ ಹಿಂದೆ ಮೂರು ಬಾರಿ ಶಾಸಕನಾಗಿದ್ದು ತನಗೆ ಮತ ನೀಡಿದ ಜನರೊಂದಿಗೆ ಸದಾ ಇದ್ದು ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.


ಹೊನ್ನಾಳಿ (ಏ.17) : ಹತ್ತಿದ ಏಣಿ ಒದೆಯುವ ಜಾಯಮಾನ ನನ್ನದಲ್ಲ, ಎಸ್ಸಿ, ಎಸ್‌ಟಿ, ಹಿಂದುಳಿದವರ ಧ್ವನಿಯಾಗಿ ಕೆಲಸ ಮಾಡುತ್ತಿದ್ದೇನೆ, ಈ ಹಿಂದೆ ಮೂರು ಬಾರಿ ಶಾಸಕನಾಗಿದ್ದು ತನಗೆ ಮತ ನೀಡಿದ ಜನರೊಂದಿಗೆ ಸದಾ ಇದ್ದು ಸಂಕಷ್ಟಗಳಿಗೆ ಸ್ಪಂದಿಸಿದ್ದೇನೆ ಎಂದು ಶಾಸಕ, ಬಿಜೆಪಿ ಅಭ್ಯರ್ಥಿ ಎಂ.ಪಿ.ರೇಣುಕಾಚಾರ್ಯ ಹೇಳಿದರು.

ಪಟ್ಟಣದ ಖಾಸಗಿ ಮೋಹನ್‌ ಎನ್‌ಕ್ಲೈವ್‌ ಸಭಾಂಗಣದಲ್ಲಿ ಸೋಮವಾರ ಅವಳಿ ತಾಲೂಕಿನ ಭೋವಿ ಸಮಾಜದವರು ಆಯೋಜಿಸಿದ್ದ ಸಭೆಯಲ್ಲಿ ಮಾತನಾಡಿದರು. ಈ ಹಿಂದೆ ತಮ್ಮ ರಾಜಕೀಯ ವಿರೋಧಿಗಳು ಅಧಿಕಾರದಲ್ಲಿದ್ದಾಗ ಸಾಮಾನ್ಯ ಜನರ ಕೆಲಸಗಳು ಮಧ್ಯವರ್ತಿಗಳ ಮೂಲಕ ಆಗುವ ಪರಿಸ್ಥಿತಿ ಇತ್ತು, ಎಸ್‌ಸಿ, ಎಸ್ಟಿಹಿಂದುಳಿದ ವರ್ಗದ ಸಮುದಾಯದವರು ಅವರ ಮನೆ ಬಾಗಿನಲ್ಲೇ ಕಾಯುವ ಪರಿಸ್ಥಿತಿ ಇತ್ತು, ಆದರೆ ತಮ್ಮ ಅಧಿಕಾರಾವಧಿಯಲ್ಲಿ ಸರ್ವರನ್ನೂ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಕಾಣುವ ಜೊತೆಗೆ ಎಲ್ಲಾ ಜಾತಿ ಜನಾಂಗದವರಿಗೆ ಮುಕ್ತ ಅವಕಾಶ ಮಾಡಿಕೊಟ್ಟಿದ್ದೇನೆ ಎಂದು ಹೇಳಿದರು.

Tap to resize

Latest Videos

ಕೈ ತಪ್ಪಿದ ಬಿಜೆಪಿ ಚನ್ನಗಿರಿ ಟಿಕೆಟ್, ಪಕ್ಷೇತರವಾಗಿ ಸ್ಪರ್ಧಿಸುವ ಘೊಷಣೆ ಮಾಡಿದ ಮಾಡಾಳ್!

ಕೋವಿಡ್‌ ವೇಳೆ ಕಾಂಗ್ರೆಸ್‌ನವರು ಎಲ್ಲಿದ್ದರು?

ಕೋವಿಡ್‌ ಸಂದರ್ಭದಲ್ಲಿ ತನ್ನ ಜೀವದ ಹಂಗು ತೊರೆದು ಕೋವಿಡ್‌ ಆರೈಕೆ ಕೇಂದ್ರದಲ್ಲಿದ್ದು ಸೋಂಕಿತರಲ್ಲಿ ಆತ್ಮವಿಶ್ವಾಸ ಮೂಡಿಸುವ ಕೆಲಸ ಮಾಡಿದೆ ಮೃತದೇಹಗಳ ವಾಹನಗಳ ಮೂಲಕ ಸಾಗಿಸಿ ಆಂತ್ಯಸಂಸ್ಕಾರ ಕೂಡ ಮಾಡಿದ್ದೇನೆ, ಆದರೆ ಈಗ ಚುನಾವಣೆ ಸಂದರ್ಭದಲ್ಲಿ ಮತಕೇಳಲು ನಿಮ್ಮ ಮುಂದೆ ಬಂದಿರುವ ಕಾಂಗ್ರೆಸ್‌ ನಾಯಕರು ಕೋವಿಡ್‌ ವೇಳೆ ಎಲ್ಲಿದ್ದರು, ಸತ್ತವರ ಫೋಟೋಗೆ ಹಾರ ಹಾಕುವ ನಾಟಕ ಮಾಡಿದರು ಎಂದು ದೂರಿದರು.

ಭೋವಿ ಅಭಿವೃದ್ಧಿ ನಿಗಮದ ನಿರ್ದೇಶಕ ಚೀಲೂರು ಅಜಯ್‌ ಮಾತನಾಡಿ ತಾಲೂಕಿನಲ್ಲಿ ಸುಮಾರು 10ರಿಂದ 12 ಸಾವಿರದಷ್ಟುಭೋವಿ ಜನಾಂಗವಿದ್ದು, ಈ ಸಮಾಜ ಶ್ರಮಿಕ ವರ್ಗಕ್ಕೆ ಸೇರಿದೆ ಬೆವರು ಸುರಿಸಿ ದುಡಿದು ಜೀವನ ಸಾಗಿಸುವ ಸಮಾಜವಾಗಿದ್ದು, ಸಮಾಜಕ್ಕೆ ಸೇರಿದ ತನ್ನನ್ನು ಭೋವಿ ನಿಗಮದ ನಿರ್ದೇಶಕನಾಗಿ ಮಾಡಿದ್ದಾರೆ ಇದೇ ರೀತಿ ಸಮಾಜದ ವ್ಯಕ್ತಿಯ ತಾಲೂಕು ಪಂಚಾಯಿತಿ ಅಧ್ಯಕ್ಷರಾಗಿ ಮಾಡಿದ್ದಾರೆ ಇದೇ ರೀತಿ ಸಮಾಜಕ್ಕೆ ಸಾಮಾಜಿಕ ನ್ಯಾಯ ದೊರಕಿಸುವ ಕೆಲಸ ಶಾಸಕ ರೇಣುಕಾಚಾರ್ಯ ಮಾಡಿದ್ದಾರೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಬಿಜೆಪಿ ಚುನಾವಣಾ ವೀಕ್ಷಕರಾದ ಭರತ್‌, ಬೋವಿ ಸಮಾಜದ ಯುವ ಮುಖಂಡ ಸವಳಂಗ ದಿನೇಶ್‌, ತಾಪಂ ಮಾಜಿ ಅಧ್ಯಕ್ಷ ತಿಪ್ಪೇಶಪ್ಪ, ಗ್ರಾಪಂ ಅಧ್ಯಕ್ಷರಾದ ರಮೇಶ್‌, ತಿಪ್ಪೇಶ್‌,ರುದ್ರೇಶ್‌, ಸಿದ್ದೇಶ್‌,ಮಂಜಪ್ಪ, ಚಂದ್ರಪ್ಪ, ಹನುಮಂತಪ್ಪ ನೇರಲಗುಂಡಿ ಇತರ ಮುಖಂಡರಿದ್ದರು.

ಪಕ್ಷದಲ್ಲಿ ಅಧಿಕಾರ ಅನುಭವಿಸಿ ಬೆನ್ನಿಗೆ ಚೂರಿ ಹಾಕಿದ ಸವದಿ ವಿಶ್ವಾಸಘಾತುಕ: ಎಂಪಿ ರೇಣುಕಾಚಾರ್ಯ

ದಮನಿತ ಸಮಾಜಗಳ ಮಧ್ಯ ಇರುವ ಬಾಂಧವ್ಯಗಳ ಕತ್ತರಿಯ ಕೆಲಸ ಮಾಡದೇ ಸೂಜಿದಾರದಂತೆ ಬೆಸೆಯುವ ಕೆಲಸ ಕ್ಷೇತ್ರದಲ್ಲಿ ಮಾಡುತ್ತ ಬಂದು ಎಲ್ಲ ಸಮುದಾಯದವರಿಗೆ ಸಾಮಾಜಿಕ ಸಿದ್ಧಾಂತದಡಿ ಕೆಲಸ ಮಾಡುತ್ತ ಬಂದಿದ್ದೇನೆ. ಆದರೆ ಮತಕ್ಕಾಗಿ ಜನರ ಮುಂದೆ ಬಂದಿರುವ ಕಾಂಗ್ರೆಸ್‌ ಎಂದೂ ಸಾಮಾಜಿಕ ನ್ಯಾಯ ಕೊಡುವ ಕೆಲಸ ಮಾಡಲಿಲ್ಲ.

ಎಂ.ಪಿ.ರೇಣುಕಾಚಾರ್ಯ, ಬಿಜೆಪಿ ಅಭ್ಯರ್ಥಿ

click me!