ಕಾರ್ಯಕರ್ತರೇ ಬಿಜೆಪಿ ಪಕ್ಷದ ನಿಜವಾದ ಆಸ್ತಿ: ಬಿ.ವೈ.ವಿಜಯೇಂದ್ರ

By Kannadaprabha News  |  First Published Sep 19, 2024, 5:58 PM IST

ಬೂತ್ ಮಟ್ಟದಿಂದ ಮೇಲ್‌ ಸ್ತರದವರೆಗೂ ಪಕ್ಷದ ಸಂಘಟನೆಯನ್ನು ಬಲಪಡಿಸಲು ಪಕ್ಷದ ಮುಖಂಡರು ತಮ್ಮ ತಮ್ಮಲಿನ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು. 
 


ಕಲಬುರಗಿ (ಸೆ.19): ಬೂತ್ ಮಟ್ಟದಿಂದ ಮೇಲ್‌ ಸ್ತರದವರೆಗೂ ಪಕ್ಷದ ಸಂಘಟನೆಯನ್ನು ಬಲಪಡಿಸಲು ಪಕ್ಷದ ಮುಖಂಡರು ತಮ್ಮ ತಮ್ಮಲಿನ ಭಿನ್ನಾಭಿಪ್ರಾಯಗಳನ್ನು ದೂರವಿಟ್ಟು ಪಕ್ಷವನ್ನು ಸಂಘಟಿಸುವ ಕೆಲಸಕ್ಕೆ ಮುಂದಾಗಬೇಕು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ನೀಡಿದರು. ನಗರದಲ್ಲಿ ಸದಸ್ಯತ್ವ ಅಭಿಯಾನದ ಅಂಗವಾಗಿ ಕರಬುರಗಿ ನಗರ ಹಾಗೂ ಗ್ರಾಮಾಂತರ ಜಿಲ್ಲೆಗಳ ಮುಖಂಡರ ಮಹತ್ವದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸಂಪೂರ್ಣ ಪಕ್ಷದ ಸಂಘಟನೆ ಕ್ಷಿಣಿಸಿದೆ. ಪಕ್ಷದ ಸಂಘಟನೆ ಚುರುಕಾಗಬೇಕಾಗಿದ್ದು, ಎಲ್ಲರೂ ಒಂದಾಗಿ ಸಶಕ್ತ ರಾಷ್ಟ್ರ ನಿರ್ಮಾಣಕ್ಕಾಗಿ ಬಿಜೆಪಿ ಸದಸ್ಯತ್ವ ಅಭಿಯಾನ ಮಾಡಬೇಕೆಂದರು.

ಕಾರ್ಯಕರ್ತರೇ ಬಿಜೆಪಿ ಜೀವಾಳವಾಗಿದ್ದಾರೆ. ಕಲಬುರಗಿ ಮಹಾನಗರ ಹಾಗೂ ಕಲಬುರಗಿ ಗ್ರಾಮಾಂತರ ಜಿಲ್ಲೆಯ ಭೂತ ಮಟ್ಟದ ಎಲ್ಲಾ ಕಾರ್ಯಕರ್ತರು ತಮ್ಮ ವ್ಯಾಪ್ತಿಯಲ್ಲಿ ಹೆಚ್ಚಿನ ಸದಸ್ಯರನ್ನು ಭಾರತೀಯ ಜನತಾ ಪಕ್ಷಕ್ಕೆ ಸೇರಿಸುವ ನಿಟ್ಟಿನಲ್ಲಿ ಹಗಲು ರಾತ್ರಿಯನ್ನದೆ ಶ್ರಮಿಸಿ, ನಿಮ್ಮೊಂದಿಗೆ ಸದಾ ಬಿಜೆಪಿ ಇರಲಿದೆ ಎಂದು ಭರವಸೆ ನೀಡಿದರು.

Latest Videos

undefined

ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದಲ್ಲಿ ಮುಳುಗಿದೆ: ಛಲವಾದಿ ನಾರಾಯಣಸ್ವಾಮಿ

ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ರಾಜುಗೌಡ, ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ.ರಾಜೀವ್, ಜಿಲ್ಲಾಧ್ಯಕ್ಷರಾದ ಶಿವರಾಜ್ ಪಾಟೀಲ್ ರದ್ದೇವಾಡಿ, ಚಂದು ಪಾಟೀಲ್, ಮಾಜಿ ಸಚಿವ ಬಾಬುರಾವ್ ಚೌಹಾಣ್, ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ್ ಜಾಧವ್, ವಿಧಾನ ಪರಿಷತ್ ಸದಸ್ಯ ಡಾ.ಬಿ.ಜಿ ಪಾಟೀಲ್, ಮಾಜಿ ಶಾಸಕ ರಾಜ್ಕುಮಾರ್ ಪಾಟೀಲ್ ತೆಲ್ಕೂರ್, ಸುಭಾಷ್ ಗುತ್ತೇದಾರ್, ದತ್ತಾತ್ರೇಯ ಪಾಟೀಲ್ ರೇವೂರ್, ಅಮರನಾಥ್ ಪಾಟೀಲ್, ನಿತೀನ್ ಗುತ್ತೇದಾರ್ ಸೇರಿ ಪಕ್ಷದ ಪದಾಧಿಕಾರಿಗಳು, ಮುಖಂಡರು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಬಿಜೆಪಿ ಪಕ್ಷ ಯಾವತ್ತೂ ಕಾರ್ಯಕರ್ತರಿಗೆ ಮಹತ್ವ ನೀಡುತ್ತದೆ.ಬರೀ ವೇದಿಕೆ ಮೇಲಿರುವ ನಾಯಕರಿಗಲ್ಲ. ಕಾರ್ಯಕರ್ತರೇ ಪಕ್ಷದ ನಿಜವಾದ ಆಸ್ತಿಯಾಗಿದ್ದು, ಕಾರ್ಯಕರ್ತನಾಗಿಯೇ ಇಂದು ರಾಜ್ಯಾಧ್ಯಕ್ಷನಾಗಿದ್ದೇನೆ.
-ಬಿ.ವೈ.ವಿಜಯೇಂದ್ರ, ಬಿಜೆಪಿ ರಾಜ್ಯಾಧ್ಯಕ್ಷ

ಜೆಡಿಎಸ್‌ ಸಕಲೇಶಪುರ ಕ್ಷೇತ್ರ ಕಳೆದುಕೊಳ್ಳಲು ನಾನೇ ಕಾರಣ: ಶಾಸಕ ಎಚ್.ಡಿ.ರೇವಣ್ಣ

ಕಲಬುರಗಿ ಜಿಲ್ಲೆಯಲ್ಲಿ ಅತಿಹೆಚ್ಚು ಸದಸ್ಯರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಮೂಲಕ ನಾವೆಲ್ಲರೂ ಒಗ್ಗಟಿನಿಂದ ಕಾರ್ಯನಿರ್ವಹಿಸುತ್ತೇವೆ. ವಿಶ್ವದಲ್ಲಿಯೇ ಅತಿ ಹೆಚ್ಚು ಸದಸ್ಯರನ್ನು ಹೊಂದಿರುವ ಬಹುದೊಡ್ಡ ಪಕ್ಷ ಬಿಜೆಪಿ ಎನ್ನುವ ಹಾಗೇ ನಾವೆಲ್ಲರೂ ಮಾಡುತ್ತೇವೆ.
-ಚಂದು ಪಾಟೀಲ್, ಅಧ್ಯಕ್ಷ, ಬಿಜೆಪಿ ಮಹಾನಗರ

click me!