ದೇವೇಗೌಡ ಕುಟುಂಬದಿಂದ ವಾಮಾಚಾರ ನಡೆತಿದ್ಯಾ? ತಮಗಾದ ಅನುಭವದ ಸತ್ಯ ಬಿಚ್ಚಿಟ್ಟ ಸಚಿವ ಕೆಎನ್ ರಾಜಣ್ಣ!

By Kannadaprabha News  |  First Published Feb 26, 2024, 6:28 AM IST

ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ವಾಮಾಚಾರ ನಡೆದಿತ್ತಾ? ಇಂತಹದ್ದೊಂದು ಸಂದೇಹವನ್ನು ಸ್ವತಃ ಕೆ.ಎನ್. ರಾಜಣ್ಣ ಹುಟ್ಟು ಹಾಕಿದ್ದಾರೆ. 


ತುಮಕೂರು (ಫೆ.26): ಸಹಕಾರ ಸಚಿವ ಕೆ.ಎನ್. ರಾಜಣ್ಣ ಅವರ ಮೇಲೆ ಮಾಜಿ ಪ್ರಧಾನಿ ದೇವೇಗೌಡರ ಕುಟುಂಬದಿಂದ ವಾಮಾಚಾರ ನಡೆದಿತ್ತಾ? ಇಂತಹದ್ದೊಂದು ಸಂದೇಹವನ್ನು ಸ್ವತಃ ಕೆ.ಎನ್. ರಾಜಣ್ಣ ಹುಟ್ಟು ಹಾಕಿದ್ದಾರೆ. 

ನನಗೂ, ಹಾಸನಕ್ಕೂ ಏನ್ ಸಂಬಂಧ ಗೊತ್ತಿಲ್ಲ. ನನಗೆ ಹಾಸನದ ಉಸ್ತುವಾರಿ ಕೊಟ್ಟಿದ್ದಾರೆ. ಕೆಲವರು ನನ್ನ ಅಭಿಮಾನಿಗಳು ಹೆದರಿಕೊಂಡು ನೀವು ಹಾಸನಕ್ಕೆ ಹೋಗುವುದು ಬೇಡ, ಅಲ್ಲಿ ವಾಮಾಚಾರ ಮಾಡುತ್ತಾರೆ. ಹೋಗಬೇಡಿ ಅಂದರು. ನಾವು ಉಗ್ರ ನರಸಿಂಹ ಸ್ವಾಮಿ ಭಕ್ತರು. ಹಾಗಾಗಿ, ನಮಗೆ ಯಾವ ವಾಮಾಚಾರನೂ ತಾಗುವುದಿಲ್ಲ. ಹಾಗಂತ ವಾಮಾಚಾರ ತಾಗುವುದಿಲ್ಲ ಅಂದುಕೊಳ್ಳಬೇಡಿ ಎಂದು ಅಡ್ಡಗೋಡೆ ಮೇಲೆ ದೀಪ ಇಟ್ಟಂತೆ ಮಾತನಾಡಿದರು. 

Tap to resize

Latest Videos

‘ನಾನು ಹಾಸನಕ್ಕೆ ಮೊದಲ ದಿನ ಹೋಗುತ್ತಿದ್ದಾಗ ಕುಣಿಗಲ್‌ನಲ್ಲಿ ಪಟಾಕಿ ಸಿಡಿದು, ಕಣ್ಣಿಗೆ ಏಟಾಗಿತ್ತು. ಡಾಕ್ಟರ್ ಕಣ್ಣು ಕ್ಲೀನ್ ಮಾಡಿ ಹಾಸನಕ್ಕೆ ಹೋಗುವುದು ಬೇಡ ಎಂದಿದ್ದರು. ಎರಡೂ ಕಣ್ಣು ಹೋದರೂ ಪರವಾಗಿಲ್ಲ ಎಂದು ಧೈರ್ಯದಿಂದ ಹೋದೆ’ ಎಂದರು.

ಆಗ ನಾನು, ಯಾರಾದರೂ ವಾಮಾಚಾರ ಮಾಡುವವರು ಇದ್ದರೆ ಸ್ವತಃ ನಾನೇ ಕೂತುಕೊಳ್ಳುತ್ತೇನೆ. ನನ್ನ ಮೇಲೆ ವಾಮಾಚಾರ ಮಾಡಿ ಅಂದೆ. ಹೆದರಿ ಹಾಸನಕ್ಕೆ ಬಂದಿಲ್ಲ ಎಂಬ ಸಂದೇಶ ಹೋಗುತ್ತದೆ ಅಂತ ಹೇಳಿ ಹಠದಿಂದ ಹೋದೆ’ ಎಂದರು

click me!