ಈ ಚುನಾವಣೆಯಲ್ಲಿ ಗೆದ್ದು, ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುವೆ: ಕೆ.ಎಸ್‌.ಈಶ್ವರಪ್ಪ

By Govindaraj S  |  First Published Apr 21, 2024, 11:45 AM IST

ಈ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ನಿಮ್ಮೆಲರ ಪರವಾಗಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. 


ತೀರ್ಥಹಳ್ಳಿ (ಏ.21): ಈ ಚುನಾವಣೆಯಲ್ಲಿ ನಾನು ಗೆದ್ದೇ ಗೆಲ್ಲುತ್ತೇನೆ. ನಿಮ್ಮೆಲರ ಪರವಾಗಿ ನರೇಂದ್ರ ಮೋದಿ ಪ್ರಧಾನಿಯಾಗುವುದಕ್ಕೆ ಕೈ ಎತ್ತುತ್ತೇನೆ ಎಂದು ಸ್ವತಂತ್ರ ಅಭ್ಯರ್ಥಿ, ಮಾಜಿ ಸಚಿವ ಕೆ.ಎಸ್‌.ಈಶ್ವರಪ್ಪ ಹೇಳಿದರು. ಪಟ್ಟಣದ ಲಯನ್ಸ್ ಭವನದಲ್ಲಿ ನಡೆದ ರಾಷ್ಟ್ರಭಕ್ತ ಸಂಘಟನೆಯ ಕಾರ್ಯಕರ್ತರ ಸಭೆಯನ್ನು ಉಧ್ಘಾಟಿಸಿ ಮಾತನಾಡಿದ ಅವರು, ನಾನು ಚುನಾವಣೆಯಲ್ಲಿ ನಿಲ್ಲುವುದು ನಿಶ್ಚಯ, ಗೆಲ್ಲುವುದು ನಿಶ್ಚಯ. ಮೋದಿ ಪ್ರಧಾನಿಮಂತ್ರಿ ಆಗುವುದು ನಿಶ್ಚಯ. ನರೇಂದ್ರ ಮೋದಿ ಅವರು ಪ್ರಧಾನ ಮಂತ್ರಿಯಾಗುವ ಸಂದರ್ಭದಲ್ಲಿ ನಿಮ್ಮೆಲ್ಲರ ಪರವಾಗಿ ನಾನು ಕೈ ಎತ್ತಿಯೇ ಪ್ರಧಾನಿ ಮಂತ್ರಿಯನ್ನಾಗಿ ಮಾಡುತ್ತೇವೆ ಎಂದರು.

ಎಲ್ಲ ಚುನಾವಣೆಯಂತೆ ಈ ಚುನಾವಣೆ ಎಂದು ಕೊಳ್ಳಬೇಡಿ. ದೇಶದಲ್ಲಿ ಯಾವುದೇ ಶಕ್ತಿ ಅಡ್ಡ ಬಂದರೂ ಕೂಡ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿ ಯಾಗುತ್ತಾರೆ. ಇದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ರಾಜ್ಯದಲ್ಲಿ ಚುನಾವಣೆ ನಡೆಯುತ್ತಿರುವ 28 ಕ್ಷೇತ್ರಗಳಲ್ಲಿ 27 ಬಿಜೆಪಿ ಅಭ್ಯರ್ಥಿಗಳು ಗೆಲ್ಲಬೇಕು. ಶಿವಮೊಗ್ಗದಲ್ಲಿ ಮಾತ್ರ ಪಕ್ಷೇತರ ಅಭ್ಯರ್ಥಿ ನಾನು ಗೆಲ್ಲಬೇಕು ಎಂಬ ಆಸೆ ಇದೆ. ನಾನು ನಾಮಪತ್ರ ಸಲ್ಲಿಸುವ ದಿನ ಐದು, 10 ಸಾವಿರ ಜನ ಸೇರಬಹುದು ಎಂದು ವಿರೋಧಿಗಳು ಭಾವಿಸಿದ್ದರು.

Latest Videos

undefined

 35 ಸಾವಿರ ಜನ ಸೇರಿದ್ದು ನೋಡಿ ಅವರಿಗೆ ಭಯವಾಗಿದೆ ಎಂದು ಹೇಳಿದರು.ಮೇಲಿನಕೊಪ್ಪ ಮಹೇಶ್ ಮಾತನಾಡಿ, ಬಿಜೆಪಿ ಪಕ್ಷಕ್ಕೆ ಶನಿಕಾಟ ಹಿಡಿದಿದ್ದು ಈಶ್ವರಪ್ಪನವರನ್ನು ಗೆಲ್ಲಿಸುವ ಮೂಲಕ ಸರಿಪಡಿಸಬೇಕಿದೆ. ಹಿಂದೂ ಹೋರಾಟಗಾರ ರಾದ ನಾವುಗಳು ಸೇರಿ ಒಂದು ಕುಟುಂಬದ ಕಪಿಮುಷ್ಟಿಯಿಂದ ಬಿಜೆಪಿ ಪಕ್ಷವನ್ನು ಬಿಡಿಸುವ ಕೆಲಸವೂ ಆಗಬೇಕಿದೆ ಎಂದರು. ವೇದಿಕೆಯಲ್ಲಿ ಮದನ್, ಗಣೇಶ್ ದೇವಾಡಿಗ, ಸುವರ್ಣ ಶಂಕರ್, ಕಲ್ಪನಾ ಹಾಗೂ ಆರತಿ ಇದ್ದರು. 

ಎಚ್.ಡಿ.ಕುಮಾರಸ್ವಾಮಿ ಪರ ಪ್ರಚಾರಕ್ಕೆ ಬಿಜೆಪಿ ನನ್ನ ಕರೆದಿಲ್ಲ: ಸುಮಲತಾ ಅಂಬರೀಶ್

ನಾಮಪತ್ರ ಹಿಂಪಡೆಯೋಲ್ಲ: ಈ ಬಾರಿ ನನ್ನದು ಕಮಲ ಚಿಹ್ನೆ ಅಲ್ಲ. ಏ.22ಕ್ಕೆ ಚಿಹ್ನೆ ಯಾವುದೆಂದು ತಿಳಿಯುತ್ತದೆ. ನಂತರ ಮತದಾರರಿಗೆ ತಿಳಿಸುವ ಕೆಲಸ ಕಾರ್ಯಕರ್ತರಿಂದ ಆಗಬೇಕಿದೆ.  ನನಗೆ ಹೆಚ್ಚು ಮತಗಳು ಬರುವುದನ್ನು ತಡೆಯಲು ನನ್ನ ಹೆಸರಿನ ವ್ಯಕ್ತಿಯಿಂದ ನಾಮಪತ್ರ ಸಲ್ಲಿಸುವ ಕುತಂತ್ರ ನಡೆದಿದೆ. ಈ ಬಗ್ಗೆ ಕಾರ್ಯಕರ್ತರು ಎಚ್ಚರ ವಹಿಸಬೇಕಿದೆ ಎಂದರಲ್ಲದೆ, ಮೊದಲು ಈಶ್ವರಪ್ಪ ಚುನಾವಣೆ ನಿಲ್ಲಲ್ಲ ಎಂದು ಅಪಪ್ರಚಾರ ಮಾಡಿದರು. ನಾಮಪತ್ರ ಸಲ್ಲಿಕೆ ಮಾಡಲ್ಲ ಎಂದರು ಅದೂ ಆಯ್ತು, ಈಗ ನಾಮಪತ್ರ ವಾಪಸ್‌ ಪಡೆಯುತ್ತೇನೆ ಎಂದು ಸುಳ್ಳು ಹಬ್ಬಿಸುತ್ತಿದ್ದಾರೆ. ಕಾರ್ಯಕರ್ತರು ಎಂದರೆ ನನಗೆ ದೇವರ ಸಮಾನ. ಯಾವುದೇ ಕಾರಣಕ್ಕೂ ನಾಮಪತ್ರ ವಾಪಸ್‌ ಪಡೆಯುವುದಿಲ್ಲ ಚುನಾವಣೆಯಲ್ಲಿ ಸ್ಪರ್ಧೆ ಮಾಡೇ ಮಾಡುತ್ತೇನೆ ಎಂದರು.

click me!