ತಾಕತ್ತಿದ್ರೆ ಕಳೆದ ಸಲದಷ್ಟು ಗೆಲ್ಲಿ: ಕಾಂಗ್ರೆಸ್‌ಗೆ ಯಡಿಯೂರಪ್ಪ ಸವಾಲು

Published : Apr 21, 2024, 11:18 AM IST
ತಾಕತ್ತಿದ್ರೆ ಕಳೆದ ಸಲದಷ್ಟು ಗೆಲ್ಲಿ: ಕಾಂಗ್ರೆಸ್‌ಗೆ ಯಡಿಯೂರಪ್ಪ ಸವಾಲು

ಸಾರಾಂಶ

ಇಡೀ ವಿಶ್ವವೇ ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಪಡೆಯಲು ಎದುರು ನೋಡುತ್ತಿದೆ. ಇಡೀ ಜಗತ್ತೇ ಮೆಚ್ಚಿರುವ ನರೇಂದ್ರ ಮೋದಿ ಅವರಿಗೆ ಭರವಸೆ ನೀಡುತ್ತೇನೆ. ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆದ್ದು ಸಂಸದರನ್ನು ನಿಮ್ಮ ಜತೆಗೆ ಕಳುಹಿಸಿ ಕೊಡುತ್ತೇನೆ: ಯಡಿಯೂರಪ್ಪ   

ಬೆಂಗಳೂರು(ಏ.21):  ಕಾಂಗ್ರೆಸ್ ಮುಖಂಡರು ಹಣ ಬಲ, ಹೆಂಡ, ತೋಳ್ಳಲದಿಂದ ಜಾತಿ ವಿಷಬೀಜ ಬಿತ್ತಿ ಅಧಿ ಕಾರಕ್ಕೆ ಬರುವ ಭ್ರಮೆಯಲ್ಲಿದ್ದಾರೆ. ನಿಮಗೆ ತಾಕತ್ ಇದ್ದರೆ ಕಳೆದ ಬಾರಿ ಗೆದ್ದಷ್ಟು ಸ್ಥಾನ ಗಳನ್ನು ಈ ಬಾರಿ ಗೆದ್ದು ತೋರಿಸಿ ಎಂದು ಮಾಜಿ ಮುಖ್ಯಮಂತ್ರಿ 2.2. ಯಡಿಯೂರಪ್ಪ ಸವಾಲು ಹಾಕಿದ್ದಾರೆ.

ಅರಮನೆ ಮೈದಾನದಲ್ಲಿ ಶನಿವಾರ ನಡೆದ ಬಿಜೆಪಿಯ ವಿಜಯ ಸಂಕಲ್ಪ ಸಮಾವೇಶದಲ್ಲಿ ಮಾತನಾಡಿದ ಅವರು, ಇಡೀ ವಿಶ್ವವೇ ಸಮಸ್ಯೆಗಳಿಗೆ ಪರಿಹಾರಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರ ಸಲಹೆ ಪಡೆಯಲು ಎದುರು ನೋಡುತ್ತಿದೆ. ಇಡೀ ಜಗತ್ತೇ ಮೆಚ್ಚಿರುವ ನರೇಂದ್ರ ಮೋದಿ ಅವರಿಗೆ ಭರವಸೆ ನೀಡುತ್ತೇನೆ. ರಾಜ್ಯದ 28 ಲೋಕಸಭಾ ಸ್ಥಾನಗಳನ್ನು ಗೆದ್ದು ಸಂಸದರನ್ನು ನಿಮ್ಮ ಜತೆಗೆ ಕಳುಹಿಸಿ ಕೊಡುತ್ತೇನೆ ಎಂದರು.

ಕರ್ನಾಟಕಕ್ಕೆ 3 ಲಕ್ಷ ಕೋಟಿ ರು. ಕೊಟ್ಟಿದ್ದೇವೆ: ಏಷ್ಯಾನೆಟ್ ಸಂದರ್ಶನದಲ್ಲಿ ಅಂಕಿ ಅಂಶ ತೆರೆದಿಟ್ಟ ಮೋದಿ!

ಇಡೀ ರಾಜ್ಯದಲ್ಲಿ ನಮಗೆ ಅನುಕೂಲಕರ ವಾತಾವರಣವಿದೆ. ಬಿಜೆಪಿ-ಜೆಡಿಎಸ್ ಹೊಂದಾಣಿಕೆಯಿಂದ ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ 28 ಸ್ಥಾನಗಳನ್ನೂ ಗೆಲ್ಲುವುವು ನಿಶ್ಚಿತ. ರಾಜ್ಯದ ನಮ್ಮ ಕಾಂಗ್ರೆಸ್ ಸ್ನೇಹಿತರು ಅಧಿಕಾರದ ಮದದಿಂದ ಜನಹಿತ ಮರೆತು ತೊಘಲಕ್ ದರ್ಬಾರ್ ನಡೆಸುತ್ತಿ ದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ದೇಶದದಲ್ಲಿ ಕಾಂಗ್ರೆಸ್ 52 ಸ್ಥಾನ ಗೆದ್ದಿತ್ತು. ನಾನು ಕೇಳುತ್ತೇನೆ. ನೀವು ಕಳೆದ ಬಾರಿ ಗೆದ್ದಿರುವ 52 ಸ್ಥಾನಗಳನ್ನು ಈ ಬಾರಿಯೂ ಗೆದ್ದು ತೋರಿಸಿ ಎಂದು ಸವಾಲು ಹಾಕಿದರು. 

28 ಸ್ಥಾನಗಳಲ್ಲಿ ಗೆಲ್ಲಲು ಕೆಲಸ: 

ಮೊದಲ ಹಂತದ ಚುನಾವಣೆಗೆ ಐದಾರು ದಿನ ಸಮಯ ವಿದೆ. ಈ ಬಾರಿ 28 ಸ್ಥಾನಗಳನ್ನು ನಾವು ಗೆಲ್ಲಬೇಕು. ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕು. ಇದಕ್ಕಾಗಿ ಮನೆ, ಮನೆಗೆ ತೆರಳಿ ಪ್ರಚಾರ ನಡೆಸಿ ಎಂದು ಕಾರ್ಯಕರ್ತರಿಗೆ ಯಡಿಯೂರಪ್ಪ ಕರೆ ನೀಡಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ವಿದೇಶದಲ್ಲಿ ಇರುವವರಿಗೂ ಗ್ಯಾರಂಟಿ ಲಾಭ ಬಗ್ಗೆ ಸಿಎಲ್ಪೀಲಿ ಪ್ರಸ್ತಾಪ: ಸಚಿವ ಮಧು ಬಂಗಾರಪ್ಪ
ಸಾರಿಗೆ ಇಲಾಖೆಗೆ ನಕಲಿ ವ್ಯಾಸಂಗ ಪತ್ರ ದಾಖಲೆ ನೀಡಿದರೆ ತನಿಖೆ: ಸಚಿವ ರಾಮಲಿಂಗಾರೆಡ್ಡಿ