ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಿ,ವಿಜಯನಗರ ಜಿಲ್ಲೆ ರಕ್ಷಕನಾಗಿ ಕೆಲಸ ಮಾಡುವೆ. ಅಭಿವೃದ್ಧಿಯಲ್ಲಿ ವಿಜಯನಗರ ಕ್ಷೇತ್ರದ ನಕಾಶೆ ಬದಲಿಸುವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಾರ್ಟಿಗಳು ಎಂದು ನೋಡಬೇಡಿ, ಮಾನವೀಯತೆ ಹಾಗೂ ಹೃದಯವಂತಿಕೆ ಇರುವವರನ್ನು ಗೆಲ್ಲಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಹೇಳಿದರು.
ಹೊಸಪೇಟೆ (ಫೆ.17): ವಿಧಾನಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಗೆಲ್ಲಿಸಿ,ವಿಜಯನಗರ ಜಿಲ್ಲೆ ರಕ್ಷಕನಾಗಿ ಕೆಲಸ ಮಾಡುವೆ. ಅಭಿವೃದ್ಧಿಯಲ್ಲಿ ವಿಜಯನಗರ ಕ್ಷೇತ್ರದ ನಕಾಶೆ ಬದಲಿಸುವೆ. ಕಾಂಗ್ರೆಸ್ ಹಾಗೂ ಬಿಜೆಪಿ ಪಾರ್ಟಿಗಳು ಎಂದು ನೋಡಬೇಡಿ, ಮಾನವೀಯತೆ ಹಾಗೂ ಹೃದಯವಂತಿಕೆ ಇರುವವರನ್ನು ಗೆಲ್ಲಿಸಬೇಕು ಎಂದು ಪ್ರವಾಸೋದ್ಯಮ ಸಚಿವ ಆನಂದ ಸಿಂಗ್ ಹೇಳಿದರು. ಹೊಸಪೇಟೆ ಕಸಾಬ್ ಸಂಘದ ವತಿಯಿಂದ ನಗರದಲ್ಲಿ ಹಮ್ಮಿಕೊಂಡಿದ್ದ ಕಸಾಬ್ ಜನಾಂಗದ ಜಿಲ್ಲಾ ಸಮಾವೇಶ ಹಾಗೂ 11ನೇ ವರ್ಷದ ವಾರ್ಷಿಕೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಹಿಂದೂಸ್ತಾನದಲ್ಲಿ ಬೇರೆ ಬೇರೆ ವಿಚಾರಗಳು ನಡೆಯುತ್ತಿವೆ.ಗಡಿಯಲ್ಲೂ ಬೇರೆ ವಿಷಯ ನಡೆಯುತ್ತಿದೆ.
ಆದರೆ, ವಿಜಯನಗರದಲ್ಲಿ ನಾವೆಲ್ಲರೂ ಒಂದೇ ಆಗಿದ್ದೇವೆ. ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಬೇಧಭಾವ ಇಲ್ಲವೇ ಇಲ್ಲ.ಎಲ್ಲರ ಮೈಯಲ್ಲಿ ಕೆಂಪು ರಕ್ತವೇ ಇರುತ್ತದೆ.ಚುನಾವಣೆ ಸಮಯದಲ್ಲಿ ಹಲವರು ಬರುತ್ತಾರೆ. ಹಾದಿ ತಪ್ಪಿಸುತ್ತಾರೆ. ಪಕ್ಷಗಳ ಸಿದ್ಧಾಂತಗಳು ಬೇರೆ ಇರುತ್ತವೆ. ಅದರ ಆಧಾರದ ಮೇಲೆ ವೋಟು ಕೇಳುತ್ತಾರೆ. ಆದರೆ, ನೀವು ಮಾತ್ರ ಬಿಜೆಪಿ, ಕಾಂಗ್ರೆಸ್ ಎನ್ನದೇ ಮಾನವೀಯತೆ ಹಾಗೂ ಹೃದಯವಂತಿಕೆ ಮೇಲೆ ಕೆಲಸ ಮಾಡುವ ಆನಂದ ಸಿಂಗ್‌ರನ್ನು ಮತ್ತೊಮ್ಮೆ ವಿಧಾನಸೌಧಕ್ಕೆ ಗೆಲ್ಲಿಸಿ ಕಳುಹಿಸಬೇಕು. ಈ ಮೂಲಕ ವಿಜಯನಗರ ಕ್ಷೇತ್ರ ಹಾಗೂ ಜಿಲ್ಲೆಯ ಸರ್ವಾಂಗೀಣ ಅಭಿವೃದ್ಧಿಗೆ ಸಾಥ್ ನೀಡಬೇಕು ಎಂದರು.
undefined
ರಾಜ್ಯದಲ್ಲಿರುವುದು 40 ಪರ್ಸೆಂಟ್ ಭ್ರಷ್ಟ ಸರ್ಕಾರ: ರಣದೀಪ್ ಸಿಂಗ್ ಸುರ್ಜೇವಾಲ
ದುರ್ಬಳಕೆ ಮಾಡಿಕೊಂಡಿಲ್ಲ: ವಿಜಯನಗರ ಕ್ಷೇತ್ರದಲ್ಲಿ ನಾಲ್ಕು ಬಾರಿ ಶಾಸಕರಾಗಿ ಆಯ್ಕೆ ಮಾಡಿದ್ದೀರಾ, ಎರಡು ಬಾರಿ ಮಂತ್ರಿಯಾಗಿರುವೆ. ದೇವರು ನನಗೆ ಎಲ್ಲವೂ ಕೊಟ್ಟಿದ್ದಾರೆ. ನೀವು ಕೊಟ್ಟಅಧಿಕಾರ ಎಂದಿಗೂ ದುರ್ಬಳಕೆ ಮಾಡಿಕೊಂಡಿಲ್ಲ. ಮಾಡಿಕೊಳ್ಳುವುದಿಲ್ಲ. ನೀವು ಆಯ್ಕೆ ಮಾಡಿರುವ ಜನಪ್ರತಿನಿಧಿ ಹೇಗಿರಬೇಕು. ಬಾದಶಾನಂತೆ, ರಾಜನಂತೇ ಅಧಿಕಾರ ಚಲಾಯಿಸುವವರಾಗಿರಬೇಕು ಎಂದರು. ವಿಜಯನಗರ ಕ್ಷೇತ್ರಕ್ಕೆ ಸಾವಿರಾರು ಕೋಟಿ ಅನುದಾನ ತಂದಿರುವೆ.ವಿಜಯನಗರ ಕ್ಷೇತ್ರದಲ್ಲಿ ಆಮೂಲಾಗ್ರ ಬದಲಾವಣೆ ಆಗಿದೆ. ಅಭಿವೃದ್ಧಿಯೂ ಆಗಿದೆ. ಇದನ್ನು ಗಮನಿಸಿ,ನಾನು ಕೆಲಸ ಮಾಡಿಲ್ಲ ಎಂದರೆ, ನನ್ನನ್ನು ದ್ವೇಷ ಮಾಡಿ. ವಿಚಾರ ಮಾಡಿ, ಯೋಚನೆ ಮಾಡಿ, ಯಾವ ಅಭ್ಯರ್ಥಿ ಸೂಕ್ತ ಎಂದು ಪರಿಗಣಿಸಿ ವೋಟು ಮಾಡಿ ಎಂದರು.
ರಾಜಧರ್ಮ ಪಾಲಿಸಿರುವೆ: ವಿಜಯನಗರ ಕ್ಷೇತ್ರದಲ್ಲಿ ನಾನು ರಾಜಧರ್ಮ ಪಾಲನೆ ಮಾಡಿರುವೆ.ಯಾವತ್ತೂ ನ್ಯಾಯದ ಪರ, ಬಡವರ ನಿಂತಿರುವೆ. ಎಂದಿಗೂ ಉಳ್ಳವರ ಪರ ನಿಂತಿಲ್ಲ.ನನಗೆ ಅಲ್ಪಸಂಖ್ಯಾತ ಯುವಕರು ಗೋ ಬ್ಯಾಕ್ ಎಂದು ಘೋಷಣೆ ಕೂಗಿದ್ದಾರೆ. ಆದರೆ, ಎಂದಿಗೂ ಯಾರಿಗೂ ತಾರತಮ್ಯ ಮಾಡಿಲ್ಲ. ನಿಮ್ಮ ರಕ್ಷಕನಾಗಿ ಕೆಲಸ ಮಾಡಿರುವೆ. ನಾನು ರಾಜಧರ್ಮ ಪಾಲನೆಯೊಂದಿಗೆ ಕೆಲಸ ಮಾಡಿರುವೆ. ಇದನ್ನು ಅರಿತುಕೊಳ್ಳಬೇಕು ಎಂದರು.
ವಿಜಯನಗರ ಜಿಲ್ಲೆ ಮಾಡಿಸಿರುವೆ: ಬಳ್ಳಾರಿ ಜಿಲ್ಲೆಯಿಂದ ಪ್ರತ್ಯೇಕ ವಿಜಯನಗರ ಜಿಲ್ಲೆ ಮಾಡಿಸಿರುವೆ. ಈ ನೆಲ, ಪ್ರಕೃತಿ ಯಾವತ್ತೂ ಶಾಶ್ವತವಾಗಿರುತ್ತದೆ. ಈ ಜಿಲ್ಲೆ ಯಾರು ಮಾಡಿಸಿದರೂ ಎಂದರೇ ಆನಂದ ಸಿಂಗ್ ಮಾಡಿಸಿದರು ಎಂಬ ಹೆಸರು ಶಾಶ್ವತವಾಗಿ ಉಳಿಯುತ್ತದೆ. ನಾನು ಯಾವತ್ತೂ ಆಗಲಾರದೇ ಇರುವ ಕೆಲಸಗಳನ್ನು ಮಾಡಿಸಿರುವೆ.ಯಾವತ್ತೂ ಜನಪ್ರತಿನಿಧಿ ಸಾಧಕರ ಪಟ್ಟಿಯಲ್ಲಿರಬೇಕು.ನೀವು ಕೊಟ್ಟಅಧಿಕಾರ ಯಾವತ್ತೂ ಸಾಧನೆ ಹಾದಿಯಲ್ಲೇ ಇರಬೇಕು. ಯಾರೋ ಹುಬ್ಬಳ್ಳಿ ಭಾಗದ ಕಡೆಯಿಂದ ಬರುತ್ತಾರಂತೇ, ಇನ್ನೊಬ್ಬರು ಇಲ್ಲಿಯವರೇ ಕಣಕ್ಕೆ ಇಳಿಯುತ್ತಾರಂತೇ ಆದರೆ, ನೀವು ಮಾತ್ರ ಈ ಆನಂದ ಸಿಂಗ್‌ನನ್ನು ಕೈಬಿಡದೇ ಮತ್ತೊಮ್ಮೆ ಗೆಲ್ಲಿಸಬೇಕು. ಈ ಮೂಲಕ ವಿಜಯನಗರ ಕ್ಷೇತ್ರ ಮಾತಿಗೆ ಮರಳಾಗುವ ಕ್ಷೇತ್ರವಲ್ಲ. ಪವರ್‌ಫುಲ್ ಕ್ಷೇತ್ರ ಎಂಬುದನ್ನು ಮನದಟ್ಟು ಮಾಡಿಕೊಡಬೇಕು ಎಂದರು.
ಎಂಟು ಸಾವಿರ ಕೋಟಿ ತಂದಿರುವೆ: ವಿಜಯನಗರ ಕ್ಷೇತ್ರದ ಸರ್ವಾಂಗೀಣ ಅಭಿವೃದ್ಧಿಗೆ ಕಟ್ಟಿಬದ್ಧನಾಗಿರುವೆ. ಜಿಲ್ಲೆ ಇಬ್ಭಾಗದ ಸಂದರ್ಭದಲ್ಲಿ ಡಿಎಂಎಫ್ ಹಾಗೂ ಕೆಎಂಇಆರ್‌ಸಿ ನಿಧಿಯಡಿ ಜಿಲ್ಲೆಗೆ ಶೇ.40ರಷ್ಟುಪಾಲು ಪಡೆದಿರುವೆ. ಇದು ಎಂಟು ಸಾವಿರ ಕೋಟಿ ಆಗಲಿದೆ. ದೇಶದ ಉಳಿದ ಕಡೆ ಆಗಲಾರದಷ್ಟುಅಭಿವೃದ್ಧಿ ಜಿಲ್ಲೆಯಲ್ಲಿ ಆಗುತ್ತಿದೆ. 128 ಕೋಟಿ ವೆಚ್ಚದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣವಾಗುತ್ತಿದೆ. .250 ಕೋಟಿ ವೆಚ್ಚದಲ್ಲಿ ಪಾಪಿನಾಯಕನಹಳ್ಳಿಯಲ್ಲಿ ಏತ ನೀರಾವರಿ ಆಗುತ್ತಿದೆ. 21 ಕೆರೆಗಳನ್ನು ತುಂಬಿಸುವ ಯೋಜನೆ ರೂಪಿಸಲಾಗಿದೆ. .12 ಕೋಟಿ ವೆಚ್ಚದಲ್ಲಿ ಹೈಟೆಕ್ ತರಕಾರಿ ಮಾರ್ಕೆಟ್ ನಿರ್ಮಿಸಲಾಗುತ್ತಿದೆ.
ಪ್ರತಿಭಟನೆ ಮಾಡಲು ಶಾಸಕರಿಗೆ ಯಾವುದೇ ನೈತಿಕತೆ ಇಲ್ಲ: ಸಚಿವ ಎಂಟಿಬಿ ನಾಗರಾಜ್ ಆಕ್ರೋಶ
ಈ ಜಾಗದಲ್ಲೇ ಸುಸಜ್ಜಿತ ಮೀನು ಹಾಗೂ ಮಟನ್ ಮತ್ತು ಚಿಕನ್ ಮಾರ್ಕೆಟ್ ನಿರ್ಮಿಸಿ ಕೊಡುವೆ. ಸಿಎ ಲ್ಯಾಂಡ್‌ಗೆ ತಾವು ಮನವಿ ಮಾಡಿಕೊಂಡಿದ್ದೀರಿ, ಈ ಬಗ್ಗೆ ಪರಿಶೀಲಿಸಿ ಅಂತಿಮ ನಿರ್ಧಾರ ಕೈಗೊಳ್ಳುವೆ. ತಾವು ಮಾತ್ರ ಚುನಾವಣೆಯಲ್ಲಿ ನನ್ನ ಕೈಬಿಡಬೇಡಿ, ಮತ್ತೊಮ್ಮೆ ಗೆಲ್ಲಿಸಬೇಕು ಎಂದರು. ನಗರಸಭೆ ಅಧ್ಯಕ್ಷೆ ಸುಂಕಮ್ಮ, ಸ್ಥಾಯಿ ಸಮಿತಿ ಅಧ್ಯಕ್ಷ ತಾರಿಹಳ್ಳಿ ಜಂಬುನಾಥ, ಉಪಾಧ್ಯಕ್ಷ ಎಲ್.ಎಸ್. ಆನಂದ, ಸದಸ್ಯ ಸಂತೋಷಕುಮಾರ, ಸಂಘದ ಜಿಲ್ಲಾಧ್ಯಕ್ಷ ಬಾಷಾ, ಮುಖಂಡರಾದ ದಾದಾ ಖಲಂದರ್, ಧರ್ಮೇಂದ್ರ ಸಿಂಗ್, ಕೆಜಿ ಇಸ್ಮಾಯಿಲ್ ಸಾಬ್, ಸಮದ್, ಖಾಜಿ, ಇಮಾಮ್ ಸಾಬ್, ಹೊನ್ನೂರಸಾಬ್, ಫಾರೂಕ್ ಸಾಬ್, ಯೂನಿಸ್ ಸಾಬ್, ಮಾಬಾಷಾ, ಸೌಕತ್ ಸಾಬ್,ಲತೀಫ್ ಸಾಬ್, ಕಾಸಿಂಸಾಬ್, ಕಲಾಲ್ ಗೋಪಾಲ,ಅಕ್ಬರ್ ಸಾಬ್ ಮೆಹಬೂಬ್ ಪೀರಾ, ಶೇಖ್ ಮಹಮ್ಮದ್ ಮತ್ತಿತರರಿದ್ದರು.