ರಾಜ್ಯದಲ್ಲಿ ಟಿಪ್ಪು ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಓಟ್ ಕೊಡ್ತೀರಾ ಅಥವಾ ರಾಣಿ ಅಬ್ಬಕ್ಕ ಹೆಸರಿನಲ್ಲಿ ಬಿಜೆಪಿಗೆ ಓಟ್ ಕೊಡ್ತೀರಾ..? ನೀವು ಬಿಜೆಪಿಗೆ ಮತವನ್ನು ಹಾಕಿದರೆ ದೇಶ ಮತ್ತು ಕರ್ನಾಟಕದ ಅಭಿವೃದ್ಧಿಗೆ ಓಟ್ ಹಾಕಿದಂತೆ.
ದಕ್ಷಿಣ ಕನ್ನಡ (ಫೆ.11): ರಾಜ್ಯದಲ್ಲಿ ಟಿಪ್ಪು ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಓಟ್ ಕೊಡ್ತೀರಾ ಅಥವಾ ರಾಣಿ ಅಬ್ಬಕ್ಕ ಹೆಸರಿನಲ್ಲಿ ಬಿಜೆಪಿಗೆ ಓಟ್ ಕೊಡ್ತೀರಾ..? ನೀವು ಬಿಜೆಪಿಗೆ ಮತವನ್ನು ಹಾಕಿದರೆ ದೇಶ ಮತ್ತು ಕರ್ನಾಟಕದ ಅಭಿವೃದ್ಧಿಗೆ ಓಟ್ ಹಾಕಿದಂತೆ ಎಂದು ಕೇಂದ್ರ ಗೃಹ ಮತ್ತು ಸಹಕಾರ ಸಚಿವ ಅಮಿತ್ ಶಾ ಹೇಳಿದ್ದಾರೆ.
ಪುತ್ತೂರು ನಗರದಲ್ಲಿ ಅಯೋಜನೆ ಮಾಡಿದ್ದ ಕ್ಯಾಂಪ್ಕೋ ಲಿ. ಸುವರ್ಣ ಮೋಹತ್ಸವ ಕಾರ್ಯಕ್ರಮ ಉದ್ಘಾಟನೆ ಹಾಗೂ ಆಗ್ರೋ ಮಾಲ್ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಮಂಗಳೂರಿನ ಪುಣ್ಯಭೂಮಿಗೆ ಪ್ರಣಾಮ್. ರಾಣಿ ಅಬ್ಬಕ್ಕ ದೇವಿ ಪ್ರಸ್ತಾಪಿಸಿದ ಅಮಿತ್ ಷಾ ಅವರು ಈ ಕ್ಷೇತ್ರದ ಜನರ ಬೆವರಿನ ಕಾರಣಕ್ಕೆ ತೆಂಗು, ಅಡಿಕೆ, ಭತ್ತ ಬೆಳೆದು ಪ್ರಸಿದ್ದಿಯಾಗಿದೆ. ಸಹಕಾರ ರಂಗ ಬಲಪಡಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಬಡವರ ಕಲ್ಯಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ತಿಳಿಸಿದರು.
ದಕ್ಷಿಣ ಕನ್ನಡ ಹಾಗೂ ಕರಾವಳಿ ಜನತೆಯ ದೈವದ ಕುರಿತಾಗಿ ಪ್ರದರ್ಶನಗೊಂಡ ಕಾಂತಾರಾ ಸಿನಿಮಾದ ಬಗ್ಗೆ ಪ್ರಸ್ತಾಪಿಸಿದರ. ನಂತರ, ಕ್ಯಾಂಪ್ಕೋ ಸಾಧನೆಗೆ ಮೆಚ್ಚುಗೆ ವ್ಯಕ್ತಪಡಿಸಿದ ಅಮಿತ್ ಷಾ ಸುಬ್ರಾಯ ಭಟ್ ಅವರ ದೂರದೃಷ್ಟಿಯ ಪರಿಣಾಮದಿಂದ ಕ್ಯಾಂಪ್ಕೋ ರಚನೆ ಆಗಿದೆ. ಕೇವಲ 3 ಸಾವಿರ ಸದಸ್ಯರಿಂದ 1 ಲಕ್ಷಕ್ಕೂ ಹೆಚ್ಚು ಸದಸ್ಯರು ಈಗ ಇದ್ದಾರೆ. ಇದು ದೊಡ್ಡ ಸಾಧನೆಯಾಗಿದೆ. ಪ್ರತಿ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಪ್ರಾಥಮಿಕ ಸಹಕಾರ ಸಂಘ ಸ್ಥಾಪನೆ ಉದ್ದೇಶ ಇದೆ. ಹೀಗಾಗಿ, ಟಿಪ್ಪು ಹೆಸರಿನಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಗೆ ಓಟ್ ಕೊಡ್ತೀರಾ ಅಥವಾ ರಾಣಿ ಅಬ್ಬಕ್ಕ ಹೆಸರಿನಲ್ಲಿ ಬಿಜೆಪಿ ಗೆ ಓಟ್ ಕೊಡ್ತೀರಾ..? ಜೆಡಿಎಸ್ ಮತ ನೀಡಿದರೆ ಕಾಂಗ್ರೆಸ್ ಗೆ ಓಟ್ ಹಾಕಿದಂತೆ. ಬಿಜೆಪಿ ಗೆ ಓಟ್ ಹಾಕಿದರೆ ದೇಶ ಮತ್ತು ಕರ್ನಾಟಕದ ಅಭಿವೃದ್ಧಿಗೆ ಓಟ್ ಹಾಕಿದಂತೆ ಎಂದು ಹೇಳಿದರು.
ಕ್ಯಾಂಪ್ಕೋ ಸುವರ್ಣ ಸಂಭ್ರಮದಲ್ಲಿ ಅಮಿತ್ ಶಾ ಬೂಸ್ಟರ್: ಕ್ಯಾಂಪ್ಕೋ ಬಗ್ಗೆ ನಿಮಗೆಷ್ಟು ಗೊತ್ತು.?
ಗಾಂಧಿ ಕುಟುಂಬದ ಎಟಿಎಂ ರಾಜ್ಯ ಕಾಂಗ್ರೆಸ್: ಇನ್ನು ಕರ್ನಾಟಕ ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಗಾಂಧಿ ಕುಟುಂಬದ ಎಟಿಎಂ ಆಗಲಿದೆ. ಈ ಹಿಂದೆಯೂ ರಾಜ್ಯ ಕಾಂಗ್ರೆಸ್ ದೆಹಲಿಯ ಗಾಂಧಿ ಕುಟುಂಬದ ಎಟಿಎಂ ಆಗಿದೆ. ಈಗಾಗಲೇ ಪಿಎಫ್ ಐ ಬ್ಯಾನ್ ಮಾಡಿ ನರೇಂದ್ರ ಮೋದಿ ಸರ್ಕಾರ ಮಾಡಿದೆ. ದೇಶದಲ್ಲಿ ನಕ್ಸಲ್ ವಾದ ಮತ್ತು ಭಯೋತ್ಪಾದನಾ ಚಟುವಟಿಕೆ ನಿಲ್ಲಿಸಿದ್ದೇವೆ. ಕಾಶ್ಮೀರ ದಲ್ಲಿ ರಕ್ತದ ನದಿ ಹರಿಯುತ್ತಿತ್ತು. ಮೋದಿ ಸರ್ಕಾರದ ಅದನ್ನು ನಿಲ್ಲಿಸಿದೆ. ಇನ್ನು ಮುಖ್ಯವಾಗಿ ಪ್ರಾದೇಶಿಕ ಜನರಿಗೆ ಅನುಕೂಲ ಆಗುವಂತೆ ಪಡಿತರ ವಿತರಣೆಯಲ್ಲಿ ಕುಚಲಕ್ಕಿ ವಿತರಣೆ ಮಾಡ್ತಿರುವ ರಾಜ್ಯ ಸರ್ಕಾರದ ನಡೆ ಅನುಕರಣನೀಯವಾಗಿದೆ. ಇದಕ್ಕೆ ಸಿಎಂ ಬಸವರಾಜ್ ಬೊಮ್ಮಾಯಿಗೆ ಧನ್ಯವಾದಗಳನ್ನು ಸಲ್ಲಿಸುತ್ತೇನೆ. ಎಂದು ಹೇಳಿದರು.
ಅಡಿಕೆ ಸಂಶೋಧನೆಗೆ ಬಜೆಟ್‌ನಲ್ಲಿ ಅನುದಾನ: ಸಿಎಂ ಬೊಮ್ಮಾಯಿ ಮಾತನಾಡಿ, ಕ್ಯಾಂಪ್ಕೊ ಸಂಸ್ಥೆ ಜನರಿಂದ ಜನರಿಗಾಗಿ ಸಂಸ್ಥೆ ಹುಟ್ಟಿದೆ. ಆರ್ಥಿಕ ವ್ಯವಹಾರದಲ್ಲಿ ಪ್ರಗತಿ ಸಾದಿಸಿದೆ,ಎಲ್ಲರಿಗೂ ಅಭಿನಂದನೆಗಳು. ಕ್ಯಾಪ್ಟಲಿಸಂ ಕಮ್ಯುನಿಸಮ್ ಎರಡಕ್ಕೂ ಉತ್ತರ ಕೊಡಬೇಕಾದ್ರೆ ಕೋ ಅಪರ್ಟಿಸಮ್ ಬರಬೆಕು. ಇದು ಎರಡಕ್ಕೂ ಕ್ಯಾಂಪ್ಕೊ ಉತ್ತರ ಕೊಟ್ಟಿದೆ. ಅಡಿಕೆ ಬೆಳೆಗಾರರಿಗೆ ರಕ್ಷಣೆ ಕೊಡಲಾಗಿದೆ. ಅಡಿಕೆ ಬೆಲೆ ಕುಸಿದಾಗ ಕ್ಯಾಂಪ್ಕೊ ಚಾಕಲೇಟ್ ಕಂಪನಿ ಸ್ಥಾಪನೆ ಮಾಡಿ ರಕ್ಷಣೆ ಮಾಡಲಾಗಿದೆ. ಇಲ್ಲಿನ ಸ್ಥಳೀಯರನ್ನ ತಾಯಿಯಾಗಿ ರಕ್ಣಣೆ ಮಾಡ್ತಿದೆ ಕ್ಯಾಂಪ್ಕೊ. 6,011 ಎಕರೆ ಪ್ರದೇಶದಲ್ಲಿ ಅಡಿಕೆ ಬೆಳೆಯಲಾಗುತ್ತಿದೆ. ಅಡಿಕೆ ಬೆಳೆಯಲ್ಲಿ ಸಾಕಷ್ಟು ಸವಾಲುಗಳಿವೆ. ಅಡಿಕೆ ಸಂಶೋಧನಕ್ಕೆ ಪರಿಣತರನ್ನ ಇಟ್ಟುಕೊಳ್ಳೊದಕ್ಕೆ ಬಜೆಟ್ ನಲ್ಲಿ ವಿಶೇಷ ಅನುದಾನ ನೀಡಲಾಗುತ್ತದೆ ಎಂದು ಭರವಸೆ ನೀಡಿದರು.
'ಅಡಕೆ ಔಷಧೀಯ ವಸ್ತು : ಅಡಕೆ ಬಗ್ಗೆ ತಪ್ಪು ಮಾಹಿತಿ ನೀಡಬೇಡಿ'
ಡೀಮ್ಡ್ ಫಾರೆಸ್ಟ್‌ಗೆ ಪರಿಹಾರ ಕೊಟ್ಟಿದ್ದೇವೆ: ರಾಜ್ಯದಲ್ಲಿ ಅಡಿಕೆ ಬೆಳೆಯುತ್ತಿರುವ ಕೆಲವರಿಗೆ ಜಮೀನು ಇನ್ನೂ ತಮ್ಮ ಹೆಸರಿಗೆ ದಾಖಲೆಯಾಗಿಲ್ಲ. ಈಗಾಗಲೇ ಡೀಮ್ ಫಾರೆಸ್ಟ್ ಗೆ ಪರಿಹಾರ ಕೊಟ್ಟಿದ್ದೇವೆ. ಅದೇ ರೀತಿ ಪರಿಹಾರ ನೀಡಲಾಗುತ್ತದೆ. ಅದನ್ನ ನಾವೇ ಕೊಡುತ್ತೇವೆ. ದೇಶದ ಮೊದಲನೇ ಸಹಕಾರಿ ಸಚಿವರು ಅಮಿತ್ ಶಾ ಅವರಾಗಿದ್ದಾರೆ. ಅವರ ಊರಿನ ಗ್ರಾಮದ ಸೊಸೈಟಿಯನ್ನ ಇಂದು ಸಹ ಪ್ರತಿನಿಧಿಸುತ್ತಿದ್ದಾರೆ. ಆರ್ಥಿಕತೆಯಲ್ಲಿ ಸಹಕಾರಿ ಕ್ಷೇತ್ರ ಪ್ರಮುಖ ಪಾತ್ರ ವಹಿಸುತ್ತದೆ. ರೈಲ್ವೆಗೆ 7,500 ಕೊಟಿ ಅನುದಾನ ಕೇಂದ್ರ ಬಜೆಟ್ ನೀಡಿದೆ. ಇದೇ ರೀತಿ ಕೇಂದ್ರ ಸರ್ಕಾರದ ಸಹಕಾರ ಸಹಕಾರ ಕ್ಷೇತ್ರದ ಮೇಲೂ ಇರಲಿ ಎಂದು ಮನವಿ ಮಾಡಿದರು.