2024ರ ಚುನಾವಣೆಗೆ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿ ಸೂಚಿಸಿದ ಅಖಿಲೇಶ್, ರಾಹುಲ್‌ಗಿಲ್ಲ ಸ್ಥಾನ!

By Suvarna News  |  First Published Aug 20, 2022, 8:25 PM IST

2024ರ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ವಿರುದ್ದ ಸ್ಪರ್ಧಿಸುವ, ಪ್ರತಿಪಕ್ಷಗಳ ಅಭ್ಯರ್ಥಿಗಳ ಹೆಸರನ್ನು ಸಮಾಜವಾದಿ ಪಾರ್ಟಿ ಮುಖಂಡ ಅಖೀಲೇಶ್ ಯಾದವ್ ಸೂಚಿಸಿದ್ದಾರೆ. ಮೂವರು ಅಭ್ಯರ್ಥಿಗಳು ಪ್ರಧಾನಿ ಅಭ್ಯರ್ಥಿಗೆ ಸೂಚಿಸಿದ್ದಾರೆ. ಆದರೆ ಕಾಂಗ್ರೆಸ್ ನಾಯಕರಿಗೆ ಅವಕಾಶ ನೀಡಿಲ್ಲ.
 


ನವದೆಹಲಿ(ಆ.20): ಮುಂಬರುವ ಲೋಕಸಭಾ ಚುನಾವಣೆ ಪ್ರಧಾನಿ ಮೋದಿ ವರ್ಸಸ್ ಅರವಿಂದ್ ಕೇಜ್ರಿವಾಲ್ ಎಂದು ಆಮ್ ಆದ್ಮಿ ಪಾರ್ಟಿ ಸತತವಾಗಿ ಹೇಳುತ್ತಿದೆ. ಸಿಬಿಐ ದಾಳಿ ಬಳಿಕ ಈ ಹೇಳಿಕೆ ತೀವ್ರಗೊಂಡಿದೆ. ಇದು ಪ್ರತಿಪಪಕ್ಷಗಳನ್ನು ಕೆರಳಿಸಿದೆ. ಇದರ ಬೆನ್ನಲ್ಲೇ 2024ರ ಲೋಕಸಭಾ ಚುನಾವಣೆಗೆ ಸಮಾಜವಾದಿ ಪಾರ್ಟಿ ನಾಯಕ ಅಖಿಲೇಶ್ ಯಾದವ್ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಯನ್ನು ಸೂಚಿಸಿದ್ದಾರೆ. ಅಖಿಲೇಶ್ ಯಾದವ್ ಮೂವರು ಪ್ರಧಾನಿ ಅಭ್ಯರ್ಥಿಗಳ ಹೆಸರು ಹೇಳಿದ್ದಾರೆ. ಆದರೆ ಕಾಂಗ್ರೆಸ್‌ನ ಬಿಂಬಿತ ಪ್ರಧಾನಿ ಅಭ್ಯರ್ಥಿ ರಾಹುಲ್ ಗಾಂಧಿಯಾಗಲಿ, ಅಥವಾ ಕಾಂಗ್ರೆಸ್‌ನ ಯಾವುದೇ ನಾಯಕರನ್ನು ಸೂಚಿಸಿಲ್ಲ. ಅಖಿಲೇಶ್ ಯಾದವ್ ಪ್ರಕಾರ, 2024ರ ಲೋಕಸಭಾ ಚುನಾವಣೆಗೆ ಎನ್‌ಸಿಪಿ ನಾಯಕ ಶರದ್ ಪವಾರ್, ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹಾಗೂ ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ್ ರಾವ್ ಸೂಕ್ತ ಎಂದಿದ್ದಾರೆ. ಈ ಮೂವರು ಅಭ್ಯರ್ಥಿಗಳು ಪ್ರಧಾನಿಯಾಗಲು ಸೂಕ್ತ ಎಂದಿದ್ದಾರೆ. ಆದರೆ ರಾಹುಲ್ ಗಾಂಧಿ ಅಥವಾ ಕಾಂಗ್ರೆಸ್‌ನ ಯಾವುದೇ ನಾಯಕರ ಹೆಸರನ್ನು ಸೂಚಿಸಿಲ್ಲ. ಈ ಮೂಲಕ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರತಿಪಕ್ಷಗಳು ಕಾಂಗ್ರೆಸ್ ಹೊರಗಿಟ್ಟು ಹೋರಾಟ ನಡೆಸುವ ಸೂಚನೆಯನ್ನು ನೀಡಿದೆ.

ಅಖಿಲೇಶ್ ಯಾದವ್ ಸೂಚಿಸಿದ ಪ್ರತಿಪಕ್ಷಗಳ ಪ್ರಧಾನಿ ಅಭ್ಯರ್ಥಿಲ್ಲಿ ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್‌ಗೂ ಸ್ಥಾನ ನೀಡಿಲ್ಲ. ಇತ್ತೀಚೆಗೆ ನಿತೀಶ್ ಕುಮಾರ್ ಬಿಜೆಪಿ ಮೈತ್ರಿ ತೊರೆದು ಆರ್‌ಜೆಡಿ ಜೊತೆ ಸರ್ಕಾರ ರಚಿಸಿದ್ದರು. ಈ ವೇಳೆ ನಿತೀಶ್ ಪ್ರಧಾನಿ ಅಭ್ಯರ್ಥಿ ಅನ್ನೋ ಮಾತುಗಳು ಬಲವಾಗಿ ಕೇಳಿಬಂದಿತ್ತು. ಆದರೆ ನಿತೀಶ್ ಕುಮಾರ್ ಹೆಸರನ್ನೂ ಸೂಚಿಸಿಲ್ಲ.

Tap to resize

Latest Videos

ಧರ್ಮ ರಾಜಕಾರಣ, ಸಿದ್ದರಾಮಯ್ಯ ಪ್ರಾಯಶ್ಚಿತ ಮಾಡಿಕೊಳ್ಳಲಿ: ಪ್ರಹ್ಲಾದ್‌ ಜೋಶಿ

ರಾಷ್ಟ್ರಪತಿ ಹಾಗೂ ಉಪರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಪಕ್ಷಗಳ ಒಡಕು ಹೆಚ್ಚಾಗಿದೆ. ಪ್ರಮುಖವಾಗಿ ಮಮತಾ ಬ್ಯಾನರ್ಜಿ ನೇತೃತ್ವದ ಟಿಎಂಸಿ ಹಾಗೂ ಕಾಂಗ್ರೆಸ್ ನಡುವೆ ಬಹಿರಂಗವಾಗಿ ವಾಕ್ಸಮರ ನಡೆದಿತ್ತು. ಇಷ್ಟೇ ಅಲ್ಲ ಕಾಂಗ್ರೆಸ್‌ನಿಂದ ಟಿಎಂಸಿ ದೂರ ಉಳಿದುಕೊಂಡಿದೆ. ಉಪರಾಷ್ಟ್ರಪತಿ ಚುನಾವಣೆಯಲ್ಲಿ ಟಿಎಂಸಿ ಸಂಪರ್ಕಿಸದೆ ಪ್ರತಿಪಕ್ಷಗಳು ಮಾರ್ಗರೆಟ್ ಆಳ್ವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿತ್ತು. ಇದು ಮಮತಾ ಬ್ಯಾನರ್ಜಿಯನ್ನು ಕೆರಳಿಸಿತ್ತು. ಹೀಗಾಗಿ ಕಾಂಗ್ರೆಸ್ ನಾಯಕಿ ಮಾರ್ಗರೇಟ್ ಆಳ್ವರ ಪರ ಮತ ಚಲಾಯಿಸುವುದಿಲ್ಲ. ಮತದಾನದಿಂದ ದೂರ ಉಳಿಯುವ ಹೇಳಿಕೆ ಭಾರಿ ಕೋಲಾಹಲ ಸೃಷ್ಟಿಸಿತ್ತು. ಇಷ್ಟೇ ಅಲ್ಲ ಟಿಎಂಸಿ ಮತದಾನದಿಂದ ದೂರ ಉಳಿದಿತ್ತು. ಈ ಮೂಲಕ ಪ್ರತಿಪಕ್ಷಗಳ ಒಕ್ಕೂಟದಲ್ಲಿನ ಬಿರುಕು ಸ್ಪಷ್ಟವಾಗಿತ್ತು. ಇದೀಗ ಅಖಿಲೇಶ್ ಯಾದವ್ ಕೂಡ ಕಾಂಗ್ರೆಸ್ ಹೊರಗಿಟ್ಟಿದ್ದಾರೆಯ

ಇತ್ತೀಚಗೆ ಎನ್‌ಸಿಪಿ ನಾಯಕ ಶರದ್ ಪವಾರ್ ಪ್ರತಿಪಕ್ಷಗಳ ಒಕ್ಕೂಟ ಮತ್ತಷ್ಟು ಬಲಪಡಿಸುವ ಮಾತನಾಡಿದ್ದರು. ಈ ವೇಳೆ ಕಾಂಗ್ರೆಸ್ ಹೊರಗಿಟ್ಟು 2024ರ ಚುನಾವಣೆ ಎದುರಿಸುವುದು ಕಷ್ಟ. ಜೊತೆಯಾಗಿ ಮುನ್ನಡೆದರೆ ಮಾತ್ರ ಗೆಲುವು ಸಾಧ್ಯ ಎಂಬ ಕಿವಿಮಾತು ಹೇಳಿದ್ದಾರೆ.

ಸಾವರ್ಕರ್ ಪೋಟೊ ಸುಟ್ಟು ಮೊಟ್ಟೆ ಹೊಡೆದ ಪ್ರಕರಣ; 12 ಜನ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್‌ಐಆರ್‌ 
 

click me!