ನನ್ನನ್ನು ದೇವರು ಕಳುಹಿಸಿದ್ದಾನೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಕುರಿತು ವ್ಯಂಗ್ಯವಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಿಮಗೆ ದೇವಾಲಯ ನಿರ್ಮಿಸುತ್ತೇವೆ ಎಂದಿದ್ದಾರೆ.
ಬರಾಸತ್: ನನ್ನನ್ನು ದೇವರು ಕಳುಹಿಸಿದ್ದಾನೆ ಎಂಬ ಪ್ರಧಾನಿ ನರೇಂದ್ರ ಮೋದಿ ಹೇಳಿಕೆ ಕುರಿತು ವ್ಯಂಗ್ಯವಾಡಿರುವ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ‘ನಿಮಗೆ ದೇವಾಲಯ ನಿರ್ಮಿಸುತ್ತೇವೆ.
ಸಾಂಪ್ರದಾಯಿಕ ವಸ್ತುಗಳನ್ನು ಕೊಡುಗೆಯಾಗಿ ನೀಡುತ್ತೇವೆ ಎಂದು ವ್ಯಂಗ್ಯವಾಡಿದ್ದಾರೆ. ಬರಾಸತ್ ಚುನಾವಣಾ ಪ್ರಚಾರದ ವೇಳೆ ಮಾತನಾಡಿದ ಮಮತಾ, ‘ದೇವರು ರಾಜಕೀಯದಲ್ಲಿ ಇರಬಾರದು. ಗಲಭೆಗಳಿಗೆ ಪ್ರಚೋದನೆಯನ್ನು ನೀಡಬಾರದು. ‘ಅವರು(ಮೋದಿ) ದೇವರುಗಳ ದೇವರೆಂದು ಒಬ್ಬರು ಹೇಳುತ್ತಾರ
ಮತ್ತೊಬ್ಬ ನಾಯಕ (ಸಂಬಿತ್ ಪಾತ್ರಾ) ಜಗನ್ನಾಥ ದೇವರೇ ಅವರ ಭಕ್ತರು ಎಂದು. ದೇವರಾಗಿರುವ ವ್ಯಕ್ತಿ ರಾಜಕೀಯದಲ್ಲಿರಬಾರದು. ಅವರಿಗೆ ನಾವು ದೇವಸ್ಥಾನ ಕಟ್ಟುತ್ತೇವೆ. ದೇವಾಲಯ ನಿರ್ಮಿಸಿ ಪ್ರಸಾದ, ಹೂವು, ಸಿಹಿಯನ್ನು ನೀಡುತ್ತೇವೆ. ಅವರು. ಅಲ್ಲದೇ ಅವರು ಬಯಸಿದ್ದಲ್ಲಿ ಡೋಕ್ಲಾ ಕೂಡ ನೀಡುತ್ತೇವೆ’ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಪಶ್ಚಿಮ ಬಂಗಾಳ ಒಬಿಸಿ ಮೀಸಲು ರದ್ದು! ಹೈಕೋರ್ಟ್ ತೀರ್ಪು ಒಪ್ಪಲ್ಲ..ಇದು ಬಿಜೆಪಿ ಪಿತೂರಿ ಎಂದ ದೀದಿ