ಬೇರೆಯವರಿಗೆ ಇಲ್ಲದ ನೈತಿಕತೆ ಸಿದ್ದರಾಮಯ್ಯಗೆ ಯಾಕೆ? ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಿಲ್ಲ. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದು ಸಚಿವ ಎಂಬಿ ಪಾಟೀಲ್ ಹೇಳಿದ್ದಾರೆ.
ಬೆಂಗಳೂರು (ಸೆ.24): ಮೈಸೂರು ಮುಡಾ ಹಗರಣ ವಿರುದ್ಧ ತನಿಖೆಗೆ ರಾಜ್ಯಪಾಲರು ನೀಡಿದ್ದ ಪ್ರಾಸಿಕ್ಯೂಷನ್ ಅರ್ಜಿ ವಜಾ ಮಾಡುವಂತೆ ಸಿಎಂ ಸಿದ್ದರಾಮಯ್ಯ ಸಲ್ಲಿಕೆ ಮಾಡಿದ್ದ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ. ರಾಜ್ಯಪಾಲರ ಆದೇಶವನ್ನು ಹೈಕೋರ್ಟ್ ಎತ್ತಿಹಿಡಿಯುತ್ತಿದ್ದಂತೆ ರಾಜ್ಯ ಬಿಜೆಪಿ ಸಿದ್ದರಾಮಯ್ಯರ ವಿರುದ್ಧ ಮುಗಿಬಿದ್ದಿದೆ. ಪ್ರತಿಭಟನೆ ನಡೆಸಿ ಕೂಡಲೇ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುವಂತೆ ಎನ್‌ಡಿಎ ನಾಯಕರು ಆಗ್ರಹಿಸಿದ್ದಾರೆ. ಆದರೆ ಸಿಎಂ ಸಿದ್ದರಾಮಯ್ಯ ರಾಜೀನಾಮೆ ನೀಡುವ ಪ್ರಶ್ನೆಯೇ ಇಲ್ಲ ಎಂದು ಕಾಂಗ್ರೆಸ್ ನಾಯಕರು ಸಿದ್ದರಾಮಯ್ಯರ ಬೆಂಬಲಕ್ಕೆ ನಿಂತಿದ್ದಾರೆ.
ಈ ವಿಚಾರವಾಗಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವ ಎಂಬಿ ಪಾಟೀಲ್ ಬೇರೆಯವರಿಗೆ ಇಲ್ಲದ ನೈತಿಕತೆ ಸಿದ್ದರಾಮಯ್ಯಗೆ ಯಾಕೆ? ಸಿದ್ದರಾಮಯ್ಯ ಅವರು ರಾಜೀನಾಮೆ ನೀಡಬೇಕಿಲ್ಲ. ನಾವು ಕಾನೂನು ಹೋರಾಟ ಮುಂದುವರಿಸುತ್ತೇವೆ ಎಂದಿದ್ದಾರೆ.
undefined
ಸಿದ್ದರಾಮಯ್ಯರೇ ತಕ್ಷಣ ಸಿಎಂ ಸ್ಥಾನಕ್ಕೆ ರಾಜೀನಾಮೆ ಕೊಡಿ, ಕೇಜ್ರಿವಾಲ್ ಸ್ಥಿತಿ ಬರೋದು ಬೇಡ: ಪ್ರತಾಪ್ ಸಿಂಹ
ನೈತಿಕವಾಗಿ ರಾಜೀನಾಮೆ ನೀಡಲಿ ಎಂದು ಒತ್ತಾಯಿಸುತ್ತಿರುವ ಬಿಜೆಪಿ-ಜೆಡಿಎಸ್‌ನವರು ಅದರ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ? ಕುಮಾರಸ್ವಾಮಿಗೆ ನೈತಿಕತೆ ಇದೆಯಾ? ಇವತ್ತಿನ ಹೈಕೋರ್ಟ್ ಜಡ್ಜ್‌ಮೆಂಟ್ ಕೇವಲ 17ಎಗೆ ಮಾತ್ರ ಸೀಮಿತವಾಗಿದೆ. BNS 218 ಅನ್ನು ಇಂದಿನ ಆದೇಶದಲ್ಲಿ ತಿರಸ್ಕಾರ ಮಾಡಲಾಗಿದೆ. ಇದು ಕೇವಲ ಪ್ರಾಥಮಿಕ ತನಿಖೆಗೆ ಮಾತ್ರ ಸೀಮಿತ, ಪ್ರಾಸಿಕ್ಯೂಷನ್‌ಗೆ ಅನುಮತಿ ಅಲ್ಲ. ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ್ದನ್ನು ಜಡ್ಜ್ ತಿರಸ್ಕಾರ ಮಾಡಿದ್ದಾರೆ. BNS 218 ಅಡಿಯಲ್ಲಿ ಹೈಕೋರ್ಟ್ ಆದೇಶ ನೀಡಿಲ್ಲ. ಹೀಗಾಗಿ ಇದು ಸಿದ್ದರಾಮಯ್ಯನವರಿಗೆ ಹಿನ್ನೆಡೆ ಆಗಿಲ್ಲ . ಸಿದ್ದರಾಮಯ್ಯ ಹಿಂದೆಯೂ ಸಿಎಂ ಆಗಿದ್ರು ಈಗಲೂ ಇದ್ದಾರೆ. ಮುಂದೆಯೂ ಸಿಎಂ ಆಗಿರ್ತಾರೆ.