ಮೊನ್ನೇ ಅಷ್ಟೇ ಪರಿಷತ್‌ಗೆ ಆಯ್ಕೆಯಾಗಿದ ಬಾಬುರಾವ್ ಚಿಂಚನಸೂರ್ ರಾಜೀನಾಮೆ ಮಾತು

By Suvarna News  |  First Published Aug 12, 2022, 7:40 PM IST

ಮೊನ್ನೇ ಅಷ್ಟೇ ವಿಧಾನಪರಿಷತ್‌ ಅವಿರೋಧವಾಗಿ ಆಯ್ಕೆಯಾಗಿದ್ದ ಬಿಜೆಪಿಯ ಬಾಬುರಾವ್ ಚಿಂಚನಸೂರ್ ಇದೀಗ ರಾಜೀನಾಮೆ ಮಾತುಗಳನ್ನಾಡಿದ್ದು,ಅಚ್ಚರಿ ಮೂಡಿಸಿದೆ. 


ಯಾದಗಿರಿ, (ಆಗಸ್ಟ್.12):  ಸಿ.ಎಂ. ಇಬ್ರಾಹಿಂ ರಾಜೀನಾಮೆಯಿಂದ ತೆರವಾದ ವಿಧಾನಪರಿಷತ್‌ಗೆ ಬಿಜೆಪಿಯ ಬಾಬುರಾವ್ ಚಿಂಚನಸೂರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಮೊನ್ನೇ ಅಷ್ಟೇ ವಿಧಾನಪರಿಷತ್ ಸದಸ್ಯರಾಗಿ ಚಿಂಚನಸೂರು ಪ್ರಮಾಣವಚನ ಸ್ವೀಕರಿಸಿದ್ದಾರೆ. ಆದ್ರೆ, ಇದೀಗ ದಿಢೀರ್ ಅಂತ ರಾಜೀನಾಮೆ ಮಾತುಳನ್ನಾಡಿದ್ದು, ಬಿಜೆಪಿಯಲ್ಲಿ ಸಂಚಲನ ಮೂಡಿಸಿದೆ.

ಹೌದು....ಗುರಮಿಠಕಲ್ ಕ್ಷೇತ್ರದ ಬಿಜೆಪಿ ಟಿಕೆಟ್ ಆಕಾಂಕ್ಷಿಯಾಗಿರುವ ಬಾಬುರಾವ್ ಚಿಂಚನಸೂರು, ಮುಂಬರುವ ವಿಧಾನಸಭೆ ಚುನಾವಣೆಗೆ ಸ್ಪರ್ಧೆ ಮಾಡಲು ಸಿದ್ಧರಾಗಿದ್ದಾರೆ. ಈಗಿರುವ ವಿಧಾನಪರಿಷತ್ ಸ್ಥಾನಕ್ಕೆ ರಾಜೀನಾಮೆ ನೀಡಿ ಗುರಮಿಠಕಲ್ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುವ ಕಸರತ್ತು ನಡೆಸಿದ್ದಾರೆ.

Tap to resize

Latest Videos

undefined

ಭಗವಂತನ ಹೆಸರಲ್ಲಿ ಮೇಲ್ಮನೆ ಸದಸ್ಯ ಚಿಂಚನಸೂರು ಶಪಥ

ಈ ಬಗ್ಗೆ ಸ್ವತಃ ಚಿಂಚನಸೂರು ಯಾದಗಿರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ್ದು. ನಾನೇ ಗುರಮಿಠಕಲ್ ಕ್ಷೇತ್ರದ ಬಿಜೆಪಿ ಕ್ಯಾಂಡಿಡೇಟ್ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.  ವಿಧಾನಪರಿಷತ್‌ಗೆ ರಾಜೀನಾಮೆ ಕೊಟ್ಟು ವಿಧಾನಸಭೆಗೆ ಸ್ಪರ್ಧೆ ಮಾಡುತ್ತೇನೆ ಎಂದು ಸ್ಪಷ್ಟಪಡಿಸಿದರು.

ಗುರಮಿಠಕಲ್ ಮತಕ್ಷೇತ್ರದಿಂದ ನಾನೇ ಸ್ಪರ್ಧೆ ಮಾಡುತ್ತೇನೆ. ಪಟ್ಟಭದ್ರ ಹಿತಾಸಕ್ತಿಗಳು ಬಾಬುರಾವ್ ಚುನಾವಣೆ ನಿಲ್ಲುವುದಿಲ್ಲ ಎಂದು ಸುಳ್ಳು ಅಪಪ್ರಚಾರ ಮಾಡುತ್ತಿದ್ದಾರೆ. ಕಲ್ಯಾಣ ಕರ್ನಾಟಕದ ಭಾಗದಲ್ಲಿ ಕೊಲಿ ಸಮಾಜಕ್ಕೆ ಸ್ಥಾನ ಮಾನ ಬಿಜೆಪಿ ನೀಡಿದೆ.ಕಲ್ಯಾಣ ಕರ್ನಾಟಕ 46 % ಕೊಲಿ ಸಮಾಜವಿದೆ ಅದು ನನ್ನ ಜೊತೆಗಿದೆ. 2023ರ ಚುನಾವಣೆಯಲ್ಲಿ 25 ಸೀಟುಗಳನ್ನು ಬಿಜೆಪಿಗೆ ತಂದು ಕೊಡುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಸಿ.ಎಂ. ಇಬ್ರಾಹಿಂ ಅವರ ರಾಜೀನಾಮೆಯಿಂದ ವಿಧಾನಪರಿಷತ್ ನ ಒಂದು ಸ್ಥಾನಕ್ಕೆ ಉಪ ಚುನಾವಣೆ ಘೋಷಣೆ ಮಾಡಲಾಗಿತ್ತು. ಈ ಒಂದು ಸ್ಥಾನಕ್ಕೆ ಬಿಜೆಪಿ ಕೋಲಿ ಸಮುದಾಯದ  ಬಾಬುರಾವ್ ಚಿಂಚನಸೂರ್ ಅವರನ್ನ ಕಣಕ್ಕಿಳಿಸಿತ್ತು. ಆದ್ರೆ, ಕಣದಲ್ಲಿ ಪ್ರತಿಸ್ಪರ್ಧೆ ಯಾರು ,ಇರಲಿಲ್ಲ. ಇದರಿಂದ ಬಾಬೂರಾವ್ ಚಿಂಚನಸೂರ್ ಅವರ ಗೆಲುವನ್ನು ಘೋಷಣೆ ಮಾಡಲಾಗಿತ್ತು. ಚಿಂಚನಸೂರು ಅವರ ಅಧಿಕಾರವಧಿ 2024 ರ ಜೂನ್ ತಿಂಗಳವರೆಗೆ ಇರಲಿದೆ. 

click me!