
ಪಟನಾ: ಬಿಹಾರ ನೂತನ ಸರ್ಕಾರ ನ.19 ಅಥವಾ 20ರಂದು ರಚನೆ ಆಗುವ ಸಾಧ್ಯತೆ ಇದ್ದು, ಯಾವ ಪಕ್ಷಕ್ಕೆ ಎಷ್ಟು ಸಚಿವ ಹುದ್ದೆ ಎಂಬ ಕಸರತ್ತು ಆರಂಭವಾಗಿದೆ. ಜೆಡಿಯು ನಾಯಕ ಹಾಗೂ ಹಾಲಿ ಸಿಎಂ ನಿತೀಶ್ ಕುಮಾರ್ ಅವರೇ ಪುನಃ ಮುಖ್ಯಮಂತ್ರಿ ಆಗುವ ಸಾಧ್ಯತೆ ಇದೆ. ಆದರೆ ಅವರ ಪಕ್ಷಕ್ಕೆ ಸಂಪುಟದಲ್ಲಿ ಬಿಜೆಪಿಗಿಂತ ಕಡಿಮೆ ಪ್ರಾತಿನಿಧ್ಯ ದೊರಕುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.
ಬಿಜೆಪಿ ನಾಯಕ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ ಶನಿವಾರ ಎನ್‌ಡಿಎ ಸಭೆ ನಡೆಯಿತು. ಅದರಲ್ಲಿ ಸರ್ಕಾರ ರಚನೆ ಸೂತ್ರ ಸಿದ್ಧವಾಗಿದೆ. ಬಿಜೆಪಿಯಿಂದ ಸುಮಾರು 15 ರಿಂದ 16 ಜನ ಸಚಿವರಾಗಲಿದ್ದಾರೆ. ಜೆಡಿಯುನಿಂದ 14 ಸಚಿವರನ್ನು ಆಯ್ಕೆ ಮಾಡುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.
19 ಸ್ಥಾನಗಳನ್ನು ಪಡೆದ ಎನ್‌ಡಿಎಯ ಒಂದು ಘಟಕವಾದ ಲೋಕ ಜನಶಕ್ತಿ (ರಾಮ್ ವಿಲಾಸ್) 3, ಐದು ಸ್ಥಾನಗಳನ್ನು ಗೆದ್ದ ಜೀತನ್ ರಾಂ ಮಾಂಝಿ ಅವರ ‘ಹಮ್’ ಪಕ್ಷ ಮತ್ತು 4 ಸ್ಥಾನಗಳನ್ನು ಗೆದ್ದ ಉಪೇಂದ್ರ ಕುಶ್ವಾಹ ಅವರ ರಾಷ್ಟ್ರೀಯ ಲೋಕ ಮೋರ್ಚಾ ತಲಾ 1 ಸಚಿವ ಸ್ಥಾನ ಪಡೆಯುವ ನಿರೀಕ್ಷೆಯಿದೆ. 6 ಶಾಸಕರಿಗೆ 1 ಸಚಿವ ಸ್ಥಾನ ಎಂಬ ಸೂತ್ರ ಸಿದ್ಧಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಚುನಾವಣೆಯಲ್ಲಿ ಬಿಜೆಪಿ 89 ಸ್ಥಾನಗಳನ್ನು ಮತ್ತು ಜೆಡಿಯು 85 ಸ್ಥಾನಗಳನ್ನು ಗೆದ್ದಿತ್ತು.
ಸೋಮವಾರ ನಿತೀಶ್ ಸಂಪುಟ ಸಭೆ ನಡೆಸಲಿದ್ದು, ವಿಧಾನಸಭೆ ವಿಸಜೇನೆಗೆ ಶಿಫಾರಸು ಮಾಡುವ ಸಾಧ್ಯತೆ ಇದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.