ಟಿ. ನರಸೀಪುರ(ಡಿ.06): ಅಧಿಕಾರ ವಿಕೇಂದ್ರೀಕರಣದಡಿ ಅಸ್ತಿತ್ವಕ್ಕೆ ಬಂದ ಸ್ಥಳೀಯ ಸಂಸ್ಥೆಗಳಲ್ಲಿ ( Local Body election) ಸಣ್ಣ ಪುಟ್ಟ ಸಮುದಾಯಗಳಿಗೂ ಅಧಿಕಾರ ಸಿಗಬೇಕು ಎಂಬ ಉದ್ದೇಶದಿಂದ ಸಾಮಾಜಿಕ ನ್ಯಾಯದ ಪರಿಕಲ್ಪನೆಯಲ್ಲಿ ರಾಜ್ಯದಲ್ಲಿ ಮುಖ್ಯ ಮಂತ್ರಿಯಾಗಿದ್ದ, ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು (HD Devegowda) ಮೀಸಲಾತಿ ಕಲ್ಪಿಸಿದರು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ (HD kumaraswamy) ಹೇಳಿದರು. ಪಟ್ಟಣದ ಹಳೇ ತಿರುಮಕೂಡಲಿನಲ್ಲಿರುವ ಆದಿಚುಂಚನಗಿರಿ ರಜತೋತ್ಸವ ಭವನದಲ್ಲಿ ನಡೆದ ಮೈಸೂರು- ಚಾಮರಾಜನಗರ (Mysuru - Chamarajanagar) ಸ್ಥಳೀಯ ಸಂಸ್ಥೆಗಳ ವಿಪ ಚುನಾವಣೆಯ ಜೆಡಿಎಸ್ (JDS) ಅಭ್ಯರ್ಥಿ ಸಿ.ಎನ್. ಮಂಜೇಗೌಡ(Manjegowda) ಅವರ ಗೆಲುವಿಗೆ ವರುಣ ವಿಧಾನ ಸಭಾ ಕ್ಷೇತ್ರದ ಚುನಾಯಿತ ಜನಪ್ರತಿನಿಧಿಗಳ ಮತಯಾಚನೆ ಸಭೆ ಉದ್ಘಾಟಿಸಿ ಮಾತನಾಡಿದ ಅವರು, ಮೀಸಲಾತಿ ಕೊಟ್ಟದ್ದು ನಾವೇ ಅಂತ ಹಲವರು ಹೇಳಿಕೊಳ್ಳುತ್ತಿದ್ದಾರೆ. ಗ್ರಾಪಂಗಳು ಸೇರಿದಂತೆ ಎಲ್ಲಾ ಸ್ಥಳೀಯ ಸಂಸ್ಥೆಗಳಲ್ಲಿ ಮೀಸಲಾತಿ ನೀಡಿದ್ದು ದೇವೇಗೌಡರು (Devegowda). ಮಹಿಳೆಯರಿಗೆ ಶೇ. 50 ರಷ್ಟು ಮೀಸಲು ಕೊಟ್ಟದ್ದು ಜೆಡಿಎಸ್ (JDS) ಸರ್ಕಾರ ಎಂಬದನ್ನು ತಿಳಿಯಬೇಕು ಎಂದರು
ಮುಂದಿನ ಜನವರಿಯಲ್ಲಿ ಅಧಿಕೃತ ಅಭ್ಯರ್ಥಿ: ವರುಣ ವಿಧಾನ ಸಭಾ (Varuna assembly ) ಕ್ಷೇತ್ರದಲ್ಲಿ ಕಾಣದಂತಿರುವ ಪಕ್ಷದ ಅನೇಕ ಚೇತನಗಳನ್ನು ಶಕ್ತಿಯಾಗಿ ರೂಪಿಸಲು ನೂತನ ಅಧ್ಯಕ್ಷ ಎಂ. ಬಾಲಕೃಷ್ಣ ಕಾರ್ಯ ಪ್ರವೃತ್ತರಾಗಬೇಕು. ಮುಂದಿನ ಜನವರಿಯಲ್ಲಿ ಅಧಿಕೃತ ಅಭ್ಯರ್ಥಿಯನ್ನು ಸೂಚಿಸುತ್ತೇವೆ. ಪಕ್ಷದ ಸಂಘಟನೆಯ ಕೆಲಸವನ್ನು ಈಗಿನಿಂದಲೇ ಆರಂಭಿಸಿ. ವಿಧಾನ ಪರಿಷತ್ತಿಗೆ ಗ್ರಾಪಂ ಸದಸ್ಯರ ಧ್ವನಿಯಾಗುವ ಅಭ್ಯರ್ಥಿಯನ್ನು ಆಯ್ಕೆ ಮಾಡಬೇಕು. ಯೋಧರಾಗಿ, ಪಂಚಾಯಿತಿ ಹಾಗೂ ರೈತರ (Farmer) ಸಂಸ್ಥೆಯಲ್ಲೂ ಸೇವೆ ಸಲ್ಲಿಸಿರುವ ಪಕ್ಷದ ಅಭ್ಯರ್ಥಿ ಮಂಜೇಗೌಡರನ್ನು (Manjegowda) ಜನಪ್ರತಿನಿಧಿಗಳು ಬೆಂಬಲಿಸಬೇಕು. 25 ಕ್ಷೇತ್ರಗಳಿಗೆ ನಡೆಯುತ್ತಿರುವ ವಿಧಾನ ಪರಿಷತ್ ಚುನಾವಣೆಯಲ್ಲಿ (Election) ಕೇವಲ 6 ಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಪಕ್ಷದ ಅಭ್ಯರ್ಥಿಗಳನ್ನು ಬೆಂಬಲಿಸಿ ಆಯ್ಕೆ ಮಾಡುವ ಮೂಲಕ ಜೆಡಿಎಸ್‌ಗೆ (JDS) ಶಕ್ತಿ ತುಂಬುವ ಕೆಲಸ ಮಾಡಬೇಕು ಎಂದು ಎಚ್.ಡಿ. ಕುಮಾರಸ್ವಾಮಿ (HD kumaraswamy) ಮನವಿ ಮಾಡಿದರು.
ಜನಪರ ಯೋಜನೆ ನನೆಗುದಿಗೆ: ಸ್ಪಷ್ಟ ಬಹುಮತ ಸಿಗದಿದ್ದರೂ ರಾಜ್ಯದ ಜನರ ಆಶೀರ್ವಾದದಿಂದ ಎರಡು ಬಾರಿ ಮುಖ್ಯಮಂತ್ರಿ ಆಗುವ ಅವಕಾಶ ದೊರಕಿತ್ತು. ಕ್ಷೇತ್ರಗಳ ಅಭಿವೃದ್ಧಿಗೆ ನಾನು ಕೊಟ್ಟಅನುದಾನವನ್ನು ನೆರೆ ನೆಪದಲ್ಲಿ ಬಿಜೆಪಿ(BJP) ಸರ್ಕಾರ ಹಿಂದಕ್ಕೆ ಪಡೆದುಕೊಂಡಿದೆ. ಬೇಡವೆಂದರೂ ದೆಹಲಿಯಿಂದ ಒತ್ತಡ ಹಾಕಿ ಕಾಂಗ್ರೆಸ್‌ನವರು ಮುಖ್ಯಮಂತ್ರಿ ಮಾಡಿ ಕಿರುಕುಳ ನೀಡಿದರು. ನಾನೂ ರೂಪಿಸಿದ ಅನೇಕ ಜನಪರ ಯೋಜನೆಯನ್ನು ನಂತರದ ಸರ್ಕಾರಗಳು ಮುಂದುವರೆಸದೆ ನೆನಗುದಿಗೆ ಬಿಳುವಂತೆ ಮಾಡಿವೆ ಎಂದು ಅವರು ಆರೋಪಿಸಿದರು.
undefined
ಶಾಸಕ ಎಂ. ಅಶ್ವಿನ ಕುಮಾರ್ ಮಾತನಾಡಿ, ವಿಧಾನ ಪರಿಷತ್ ಚುನಾವಣೆಯಲ್ಲಿ (MLC Election) ಮಾಜಿ ಸೈನಿಕ ಮಂಜೇಗೌಡ ಅವರಿಗೆ ಟಿಕೆಟ್ ನೀಡಿರುವ ಹೆಮ್ಮೆ ಇದೆ. ಸಾಮಾನ್ಯ ಕುಟುಂಬದ ವ್ಯಕ್ತಿಯಾಗಿದ್ದು, ಜನಪ್ರತಿನಿಧಿಗಳು ಜವಾಬ್ದಾರಿ ಹಾಗೂ ಕರ್ತವ್ಯಗಳ ಅರಿವಿದೆ. ಸ್ಥಳೀಯ ಜನಪ್ರತಿನಿಧಿಗಳು ಜೆಡಿಎಸ್ ಬೆಂಬಲಿಸಿ ಮಂಜೇಗೌಡರಿಗೆ ಮೊದಲ ಪ್ರಾಶಸ್ತ್ಯದ ಮತವನ್ನು ಕೊಟ್ಟು ಆಯ್ಕೆ ಮಾಡಿ ಕಳುಹಿಸಿದರೆ ನಿಮ್ಮೆಲ್ಲರ ಹಕ್ಕುಗಳ ರಕ್ಷಣೆಗೆ ಬದ್ಧತೆಯಿಂದ ಕೆಲಸ ಮಾಡಲಿದ್ದಾರೆ ಎಂದು ಮನವಿ ಮಾಡಿದರು.
ಸಭೆಯಲ್ಲಿ ಮೈಮುಲ್ ನಿರ್ದೇಶಕ ಕೆ. ಉಮಾಶಂಕರ್, ವರುಣ ವಿಧಾನಸಭಾ ಕ್ಷೇತ್ರಾಧ್ಯಕ್ಷ ಎಂ. ಬಾಲಕೃಷ್ಣ, ವೀಕ್ಷಕ ಎಂ.ಟಿ. ಕುಮಾರ್, ನರಸೀಪುರ ಕ್ಷೇತ್ರಾಧ್ಯಕ್ಷ ಸಿ.ಬಿ. ಹುಂಡಿ ಚಿನ್ನಸ್ವಾಮಿ, ಎಸ್ಸಿ,ಎಸ್ಟಿರಾಜ್ಯ ಉಪಾಧ್ಯಕ್ಷ ತಳವಾರ್, ಮಾಜಿ ಮೇಯರ್ ಎಂ.ಜೆ. ರವಿಕುಮಾರ್, ಮಾಜಿ ಕ್ಷೇತ್ರಾಧ್ಯಕ್ಷ ತಾಯೂರು ಪ್ರಕಾಶ್, ಕಾರ್ಯಾಧ್ಯಕ್ಷ ಸತೀಶ್‌ಕುಮಾರ್, ಮಹಿಳಾ ಜಿಲ್ಲಾಧ್ಯಕ್ಷ ಬೃಂದಾ ಕೃಷ್ಣೇಗೌಡ, ಮುಖಂಡರಾದ ಚನ್ನೇಗೌಡ, ಕೆ.ವಿ. ಮಲ್ಲೇಶ್, ಆರ್. ಬಸವರಾಜು, ಎಂ. ಶಿವಪ್ರಸಾದ್, ಎಂ. ರಾಜು, ಕಾಮಹಳ್ಳಿ ಸುರೇಶ್, ಭೈರಾಪುರ ರಮೇಶ್, ಹಬೀದ್ ಹುಸೇನ್ ಸೇರಿದಂತೆ ವಿವಿಧ ಗ್ರಾಪಂ ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಇದ್ದರು.