MLC Election: ರಾಜ್ಯ ಕಾಂಗ್ರೆಸ್‌ ಒಂದಿಬ್ಬರಿಂದ ಉಸಿರಾಡುತ್ತಿದೆ: ಬಿಎಸ್‌ವೈ

By Kannadaprabha NewsFirst Published Dec 6, 2021, 8:45 AM IST
Highlights

*   ಇಡೀ ದೇಶದಲ್ಲಿ ಬಿಜೆಪಿ ಅಲೆ ಇದೆ, ಕಾಂಗ್ರೆಸ್‌ ದಿನೇ ದಿನೇ ಕಣ್ಮರೆಯಾಗುತ್ತಿದೆ
*   ರಾಜ್ಯದಲ್ಲೂ ‘ಕೈ’ ಉಸಿರಾಟ ನಿಲ್ಲಬೇಕಿದ್ದರೆ ಬಿಜೆಪಿ ಗೆಲ್ಲಿಸಿ
*   ಸೆಲ್ಫೀ, ರಾಜಾಹುಲಿ ಜೈಕಾರ
 

ಮಂಡ್ಯ/ಮೈಸೂರು/ಚಾ.ನಗರ(ಡಿ.06):  ದೇಶದಲ್ಲಿ ಕಾಂಗ್ರೆಸ್‌(Congress) ದಿನೇ ದಿನೆ ಕಣ್ಮರೆಯಾಗುತ್ತಿದೆ, ಆದರೆ ಕರ್ನಾಟಕದಲ್ಲಿ ಮಾತ್ರ ಒಂದಿಬ್ಬರಿಂದಾಗಿ ಉಸಿರಾಡುತ್ತಿದೆ. ರಾಜ್ಯದಲ್ಲಿ ಕಾಂಗ್ರೆಸ್‌ ಉಸಿರಾಟ ನಿಲ್ಲಿಸಬೇಕಿದ್ದರೆ ಮತದಾರರು ಬಿಜೆಪಿಯನ್ನು ಗೆಲ್ಲಿಸಬೇಕು ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ(BS Yediyurappa) ಹೇಳಿದರು. ವಿಧಾನ ಪರಿಷತ್‌ ಚುನಾವಣೆ(Vidhan Parishat Election) ಹಿನ್ನೆಲೆಯಲ್ಲಿ ಮಂಡ್ಯ, ಚಾಮರಾಜನಗರ ಹಾಗೂ ಮೈಸೂರಿನಲ್ಲಿ ಬಿಜೆಪಿ(BJP) ಅಭ್ಯರ್ಥಿಗಳ ಪರ ಭಾನುವಾರ ಬಿರುಸಿನ ಪ್ರಚಾರ ನಡೆಸಿದ ಅವರು ಕಾಂಗ್ರೆಸ್‌ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

ಕರ್ನಾಟಕದಲ್ಲಷ್ಟೇ(Karnataka) ಕಾಂಗ್ರೆಸ್‌ ಅಲ್ಪಸ್ವಲ್ಪ ಉಸಿರಾಡುತ್ತಿದೆ. ಉಳಿದಂತೆ ದೇಶದೆಲ್ಲೆಡೆ ಬಿಜೆಪಿ ಪರ ಅಲೆ ಇದೆ. 26 ರಾಜ್ಯಗಳಲ್ಲಿ ಬಿಜೆಪಿ ಆಡಳಿತದಲ್ಲಿದೆ. ಒಂದು ಕಾಲದಲ್ಲಿ 400 ಲೋಕಸಭೆ ಕ್ಷೇತ್ರಗಳಲ್ಲಿ ಗೆಲ್ಲುತ್ತಿದ್ದ ಕಾಂಗ್ರೆಸ್‌ನ ಬಲ 44ಕ್ಕೆ ಇಳಿದಿದೆ. ಕಾಂಗ್ರೆಸ್ಸಿಗರು ಈಗ ಎಲ್ಲೆಡೆ ಗೌರವ ಕಳೆದುಕೊಂಡಿದ್ದಾರೆ. ಲೋಕಸಭೆಯಲ್ಲಿ(Lok Sabha) ಇನ್ನೂ 25 ವರ್ಷ ಆ ಪಕ್ಷ ಪ್ರತಿಪಕ್ಷ ಸ್ಥಾನದಲ್ಲೇ ಕೂರಲಿದೆ ಎಂದರು.

Karnataka Politics : ರಮೇಶ್‌ಕುಮಾರ್‌ ವಲಸೆ ಹೋಗ್ತಿರುತ್ತಾರೆ: ಒಂದು ಕಡೆ ನಿಲ್ಲಲ್ಲ

ಕಾಂಗ್ರೆಸ್ಸಿಗರು ಹಣ, ಹೆಂಡ, ತೋಳ್ಬಲ, ಅಧಿಕಾರ, ಜಾತಿ ಬಲದಿಂದ ಚುನಾವಣೆಯಲ್ಲಿ(Election) ಗೆಲ್ಲಬಹುದೆಂಬ ಭ್ರಮೆಯಲ್ಲಿದ್ದಾರೆ. ಆ ಕಾಲ ಹೊರಟುಹೋಗಿದೆ. 2023ರ ಚುನಾವಣೆಯಲ್ಲಿ 140ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರಬೇಕಿದೆ. ಮಂಡ್ಯದಲ್ಲೂ 3ರಿಂದ 4 ಸ್ಥಾನಗಳಲ್ಲಿ ಗೆಲ್ಲಬೇಕಿದೆ. ಅದಕ್ಕಾಗಿ ರಾಜ್ಯಾದ್ಯಂತ ಪ್ರವಾಸ ಮಾಡಿ ಮತ್ತೆ ಬಿಜೆಪಿ ಸರ್ಕಾರವನ್ನು ಅಧಿಕಾರಕ್ಕೆ ತರಲು ಶ್ರಮಿಸುತ್ತೇನೆ ಎಂದು ಹೇಳಿದರು.

ಯಡಿಯೂರಪ್ಪ ರಾಜೀನಾಮೆ ನೀಡಿ ಮನೆಗೆ ಹೋಗ್ತಾರೆ ಎಂದು ಕಾಂಗ್ರೆಸ್ಸಿಗರು ಭಾವಿಸಿದ್ದರು. ಆದರೆ, ನಾನು ಮನೆಯಲ್ಲಿ ಕೂರುವ ವ್ಯಕ್ತಿಯಲ್ಲ. ಮೇಲ್ಮನೆ ಚುನಾವಣೆಯಲ್ಲಿ 15-16ಸ್ಥಾನ ಗೆಲ್ಲಿಸುತ್ತೇನೆ. ಬಿಜೆಪಿ ವಿರುದ್ಧ ಸತತ ಟೀಕೆ ಮಾಡುತ್ತಿರುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ(Siddaramaiah), ಕೆಪಿಸಿಸಿ ಕಾರ್ಯಾಧ್ಯಕ್ಷ ಡಿ.ಕೆ.ಶಿವಕುಮಾರ್‌(DK Shivakumar) ಅವರಿಗೆ ಬೆಳಗಾವಿ ಅಧಿವೇಶನದಲ್ಲಿ(Belagavi Session) ಉತ್ತರ ಕೊಡುತ್ತೇನೆ ಎಂದು ಇದೇ ವೇಳೆ ತಿಳಿಸಿದರು.

ಮಂಡ್ಯದಲ್ಲಿ ಮೈತ್ರಿ ಇಲ್ಲ: ಬಿಎಸ್‌ವೈ

ಮಂಡ್ಯ(Mandya): ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಡೆಯಲಿರುವ ಚುನಾವಣೆಯಲ್ಲಿ ಮಂಡ್ಯದಲ್ಲಿ ಜೆಡಿಎಸ್‌ ಜೊತೆ ಯಾವುದೇ ಹೊಂದಾಣಿಕೆ ಮಾಡಿಕೊಂಡಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದರು.

ಭಾನುವಾರ ನಗರದ ಶ್ರೀ ಕಾಳಿಕಾಂಬ ಕಲ್ಯಾಣಮಂಟಪದಲ್ಲಿ ನಡೆದ ಪರಿಷತ್‌ನ ಬಿಜೆಪಿ ಅಭ್ಯರ್ಥಿ ಬೂಕಹಳ್ಳಿ ಮಂಜು ಪರ ಚುನಾವಣಾ ಪ್ರಚಾರ(Campaign) ಸಭೆಯಲ್ಲಿ ಮಾತನಾಡಿ, ಜೆಡಿಎಸ್‌ ಸ್ಪರ್ಧಿಸದ ಕ್ಷೇತ್ರಗಳಲ್ಲಿ ಬಿಜೆಪಿ ಬೆಂಬಲಿಸುವಂತೆ ಕೇಳಿಕೊಂಡಿದ್ದೇವೆ. ಮಂಡ್ಯದಲ್ಲಿ ನಾವು ಜೆಡಿಎಸ್‌ ಬೆಂಬಲ ಕೇಳಿಲ್ಲ. ಇಲ್ಲಿ ನಾವು ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

Vidhan Parishat Election: ಯುವಕರಲ್ಲಿ ವಿಷ ಬೀಜ ಬಿತ್ತುತ್ತಿರುವ ಪ್ರಧಾನಿ ಮೋದಿ: ರಾಮಲಿಂಗಾರೆಡ್ಡಿ

ಬಿಎಸ್‌ವೈಗೆ ಅದ್ಧೂರಿ ಸ್ವಾಗತ

ಮಂಡ್ಯ/ಮೈಸೂರು: ವಿಧಾನ ಪರಿಷತ್‌ ಚುನಾವಣಾ ಪ್ರಚಾರಕ್ಕಾಗಿ ಆಗಮಿಸಿದ್ದ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರಿಗೆ ಮಂಡ್ಯ ಮತು ಚಾಮರಾಜನಗರದಲ್ಲಿ ಭಾನುವಾರ ಅದ್ಧೂರಿ ಸ್ವಾಗತ ಸಿಕ್ಕಿತು. ಮಂಡ್ಯದಲ್ಲಿ ನಗರದ ಕಾಳಿಕಾಂಬ ಸಮುದಾಯ ಭವನದ ಪ್ರವೇಶದ್ವಾರದಲ್ಲಿ ಭಾರೀ ಗಾತ್ರದ ಹೂವಿನ ಹಾರವನ್ನು ಕ್ರೇನ್‌ ಮೂಲಕ ಹಾಕಿ ಸ್ವಾಗತ ಕೋರಲಾಯಿತು. ಜಾನಪದ ಕಲಾತಂಡಗಳ ಮೆರವಣಿಗೆಯೊಂದಿಗೆ ವೇದಿಕೆಗೆ ಕರೆತಂದು, ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸಲಾಯಿತು.

ಸೆಲ್ಫೀ, ರಾಜಾಹುಲಿ ಜೈಕಾರ: 

ಚಾಮರಾಜನಗರದಲ್ಲೂ ಬಿಎಸ್‌ವೈ ಅವರಿಗೆ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರಿಂದ ಅದ್ಧೂರಿ ಸ್ವಾಗತವೇ ಸಿಕ್ಕಿತು. ಯಡಿಯೂರಪ್ಪ ಕಾರ್ಯಕ್ರಮಕ್ಕೆ ಕಿಕ್ಕಿರಿದು ಸೇರಿದ್ದ ಅಭಿಮಾನಿಗಳು ರಾಜಾಹುಲಿ, ಕರ್ನಾಟಕದ ಹುಲಿ ಎಂದು ಘೋಷಣೆ ಕೂಗಿದರು. ಬಿಎಸ್‌ವೈ ಜತೆಗೆ ಸೆಲ್ಫೀಗಾಗಿ ಮುಗಿಬಿದ್ದರು.
 

click me!