ಸಂಪುಟ ಪುನಾರಚನೆ ಸಾಧ್ಯತೆ: ಅಮಿತ್‌ ಶಾ ರಕ್ಷಣಾ ಸಚಿವ ಆಗ್ತಾರಾ?

Published : Jun 30, 2020, 07:51 AM ISTUpdated : Jun 30, 2020, 08:50 AM IST
ಸಂಪುಟ ಪುನಾರಚನೆ ಸಾಧ್ಯತೆ: ಅಮಿತ್‌ ಶಾ ರಕ್ಷಣಾ ಸಚಿವ ಆಗ್ತಾರಾ?

ಸಾರಾಂಶ

ಅಮಿತ್‌ ಶಾ ರಕ್ಷಣಾ ಸಚಿವ ಆಗ್ತಾರಾ?| ಚೀನಾ ಸಂಘರ್ಷ: ರಾಜನಾಥ್‌ ಬದಲಿಸುವ ಸಂಭವ| ಜುಲೈ ಆರಂಭದಲ್ಲಿ ಸಂಪುಟ ಪುನಾರಚನೆ ಸಾಧ್ಯತೆ

ನವದೆಹಲಿ(ಜೂ.30): ಗಡಿಯಲ್ಲಿ ಪದೇ ಪದೇ ಕ್ಯಾತೆ ತೆಗೆಯುತ್ತಿರುವ ಚೀನಾಕ್ಕೆ ತಕ್ಕ ಪಾಠ ಕಲಿಸಲು ರಕ್ಷಣಾ ಸಚಿವರನ್ನು ಬದಲಿಸಲಾಗುತ್ತದೆ, ರಾಜನಾಥ ಸಿಂಗ್‌ ಬದಲಿಗೆ ಹಾಲಿ ಗೃಹಮಂತ್ರಿ ಅಮಿತ್‌ ಶಾ ಅವರನ್ನು ರಕ್ಷಣಾ ಸಚಿವರನ್ನಾಗಿ ಮಾಡಲಾಗುತ್ತದೆ ಎಂಬ ಮಾತುಗಳು ದೆಹಲಿ ರಾಜಕೀಯ ವಲಯದಲ್ಲಿ ಕೇಳಿಬರುತ್ತಿವೆ.

4 ರಾಷ್ಟ್ರಗಳಿಂದ ಭಾರತಕ್ಕೆ ಶಸ್ತ್ರಾಸ್ತ್ರ: ಚೀನಾಕ್ಕೀಗ ನಡುಕ!

ಜುಲೈನಿಂದ ಸಂಸತ್ತಿನ ಮುಂಗಾರು ಅಧಿವೇಶನ ಆರಂಭವಾಗಬೇಕಾಗಿದೆ. ಕೊರೋನಾ ಸಂಬಂಧ ಹೇರಲಾಗಿದ್ದ ಲಾಕ್‌ಡೌನ್‌ ಬಹುತೇಕ ತೆರವಾಗಿರುವುದರಿಂದ ಅಧಿವೇಶನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಅವರು ಸಂಪುಟ ಪುನಾರಚನೆ ಕೈಗೆತ್ತಿಕೊಳ್ಳುವ ಸಂಭವವಿದೆ. ಆ ವೇಳೆ ಹಲವು ಬದಲಾವಣೆಗಳು ಆಗಲಿದ್ದು, ಚೀನಾ ಸಂಘರ್ಷದ ಹಿನ್ನೆಲೆಯಲ್ಲಿ ಅಮಿತ್‌ ಶಾ ಅವರನ್ನು ರಕ್ಷಣಾ ಮಂತ್ರಿ ಸ್ಥಾನಕ್ಕೆ ನಿಯೋಜಿಸುವ ಸಾಧ್ಯತೆ ಇದೆ ಎಂದು ಆಂಗ್ಲ ವಾಣಿಜ್ಯ ದೈನಿಕವೊಂದು ವರದಿ ಮಾಡಿದೆ.

ಚೀನಾಗೆ ಭಾರೀ ಮುಖಭಂಗ, ಭಾರತಕ್ಕೆ ರಷ್ಯಾದ S-400!

ಇದೇ ವೇಳೆ ಬಿಜೆಪಿಯಲ್ಲೂ ಹಲವು ಬದಲಾವಣೆಗಳು ಆಗುವ ನಿರೀಕ್ಷೆ ಇದೆ. ಮಹಾರಾಷ್ಟ್ರದಲ್ಲಿ ಆಡಳಿತಾರೂಢ ಶಿವಸೇನೆ- ಕಾಂಗ್ರೆಸ್‌ ನಡುವೆ ತಿಕ್ಕಾಟ ನಡೆಯುತ್ತಿದೆ. ಅಲ್ಲಿ ಸರ್ಕಾರವನ್ನು ಬದಲಿಸುವ ಚಿಂತನೆ ಬಿಜೆಪಿಗೆ ಇದೆ. ಆದರೆ ಯಾರನ್ನು ಮುಖ್ಯಮಂತ್ರಿ ಮಾಡಬೇಕು ಎಂಬ ಗೊಂದಲವಿದೆ. ಮಾಜಿ ಸಿಎಂ ದೇವೇಂದ್ರ ಫಡ್ನವೀಸ್‌ ಅವರನ್ನು ಮಾಡಲು ಹೈಕಮಾಂಡ್‌ಗೆ ಒಲವಿಲ್ಲ. ಹೀಗಾಗಿ ಫಡ್ನವೀಸ್‌ ಅವರಿಗೆ ಕೇಂದ್ರ ಬಿಜೆಪಿಯಲ್ಲಿ ಹುದ್ದೆ ನೀಡಲಾಗುತ್ತದೆ ಎಂದು ಹೇಳಲಾಗಿದೆ. ಇದಲ್ಲದೆ ವಿವಿಧ ರಾಜ್ಯಗಳಲ್ಲಿ ಕೂಡಾ ಸಂಘಟನಾತ್ಮಕ ಬದಲಾವಣೆ ಸಾಧ್ಯತೆ ಇದೆ ಎನ್ನಲಾಗಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಪುಟಿನ್‌ಗೆ ಇಲ್ಲೇ ಎಲೆಕ್ಷನ್‌ ನಿಲ್ಲೋಕೆ ಟಿಕೆಟ್‌ ಕೊಡ್ತಾರೆ ಅಂದ್ಕೊಂಡಿದ್ದೆ.. ಸಂತೋಷ್‌ ಲಾಡ್‌ ಲೇವಡಿ
ನಾನು ಲಂಚ ಪಡೆದಿದ್ದು ಸಾಬೀತಾದರೆ ರಾಜೀನಾಮೆ: ಗೃಹ ಸಚಿವ ಪರಮೇಶ್ವರ್‌