ರಾಹುಲ್ ಗಾಂಧಿ, ಸೋನಿಯಾ ವಿರುದ್ಧ ಬಿಜೆಪಿ ಸಂಸದೆ ವಾಗ್ದಾಳಿ| ವಿದೇಶೀ ಮಹಿಳೆ ಹೊಟ್ಟೆಯಲ್ಲಿ ಹುಟ್ಟಿದ ಮಗ ದೇಶಭಕ್ತನಾಗಲು ಸಾಧ್ಯವಿಲ್ಲ| ಮತ್ತೆ ವಿವಾದಾತ್ಮಕ ಹೇಳಿಕೆ ಕೊಟ್ಟ ಸಂಸದೆ ಪ್ರಜ್ಞಾ ಠಾಕೂರ್
ಭೋಪಾಲ್(ಜೂ.29): ಬಿಜೆಪಿ ಸಂಸದೆ ಪ್ರಜ್ಞಾ ಠಾಕೂರ್ ಹೇಳಿಕೆಯೊಂದು ಹೊಸ ವಿವಾದ ಹುಟ್ಟು ಹಾಕಿದೆ. ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಿರುದ್ಧ ಪರೋಕ್ಷವಾಗಿ ಕಿಡಿ ಕಾರಿರುವ ಪ್ರಜ್ಞಾ ಠಾಕೂರ್ ವಿದೇಶಿ ಮಹಿಳೆ ಹೊಟ್ಟೆಯಿಂದ ಜನಿಸಿದಾತ ದೇಶ ಭಕ್ತನಾಗಲು ಸಾಧ್ಯವಿಲ್ಲ ಎಂದಿದ್ದಾರೆ.
ಬಿಜೆಪಿ ಕಚೇರಿಯಲ್ಲಿ ಅಚಾನಕ್ಕಾಗಿ ತಲೆ ತಿರುಗಿ ಬಿದ್ದ ಸಂಸದೆ ಪ್ರಜ್ಞಾ ಠಾಕೂರ್!
ಭಾನುವಾರ ಭೋಪಾಲ್‌ನಲಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಪ್ರಜ್ಞಾ ಠಾಕೂರ್ ರಾಹುಲ್ ಹಾಗೂ ಸೋನಿಯಾ ಗಾಂಧಿಗಿರುವ ದೇಶಭಕ್ತಿ ಕುರಿತು ಈ ಮಾತುಗಳನ್ನಾಡಿದ್ದಾರೆ. ಚಾಣಕ್ಯನ ಮಾತುಗಳನ್ನು ಉಲ್ಲೇಖಿಸುತ್ತಾ ಅದೇ ದೇಶದಲ್ಲಿ ಮಣ್ಣಲ್ಲಿ ಹುಟ್ಟಿದ ವ್ಯಕ್ತಿ ತನ್ನ ದೇಶವನ್ನು ರಕ್ಷಿಸುತ್ತಾನೆ. ಎರಡು ದೇಶದ ನಾಗರಿಕತೆ ಇಟ್ಟುಕೊಂಡಿರುವವರು ಯಾವುದಾದರೂ ಒಂದೇ ದೇಶದ ಕುರಿತು ಪ್ರೀತಿ ಇಟ್ಟುಕೊಳ್ಳಲು ಸಾಧ್ಯ ಎಂದಿದ್ದಾರೆ.
ಕಾಂಗ್ರೆಸ್ ಕಿರುಕುಳದಿಂದ ನನಗೆ ಈಗ ಕಣ್ಣುಗಳೇ ಕಾಣ್ತಿಲ್ಲ: ಸಾಧ್ವಿ ಪ್ರಜ್ಞಾ
ಇಷ್ಟೇ ಅಲ್ಲದೇ ಕಾಂಗ್ರೆಸ್ ಪಕ್ಷ ನೈತಿಕತೆ ಹಾಗೂ ದೇಶಭಕ್ತಿಯಂತಹ ಮೌಲ್ಯಗಳಿಂದ ದೂರವಿದೆ ಎಂದೂ ದೂರಿದ್ದಾರೆ. ಚೀನಾ ಸಂಘರ್ಷ ಸಂಬಂಧ ಕಾಂಗ್ರೆಸ್ ಪಕ್ಷವನ್ನು ಟೀಕಿಸಿರುವ ಪ್ರಜ್ಞಾ ಠಾಕೂರ್ ಕಾಂಗ್ರೆಸ್ ತನ್ನನ್ನೊಮ್ಮೆ ಅವಲೋಕಿಸಿಕೊಳ್ಳಬೇಕು. ಸಂಕಷ್ಟದ ವೇಳೆ ಯಾವ ರೀತಿ ಮಾತನಾಡಬೇಕೆಂದು ಅವರಿಗೆ ತಿಳಿದಿಲ್ಲ. ಇದರಿಂದಲೇ ಅವರಿಗೆ ದೇಶಭಕ್ತಿ ಹಾಗೂ ನೈತಿಕತೆ ಇಲ್ಲ ಎಂಬುವುದು ಸ್ಪಷ್ಟವಾಗುತ್ತದೆ ಎಂದಿದ್ದಾರೆ.