ಜಾತಿಗಣತಿ ವರದಿಯಲ್ಲಿ ಏನಿದೆ ಯಾರಿಗೂ ಗೊತ್ತಿಲ್ಲ: ಇದಕ್ಕೆ ವಿರೋಧವೇಕೆ ಎಂದ ಸಿದ್ದರಾಮಯ್ಯ?

By Kannadaprabha NewsFirst Published Nov 23, 2023, 4:23 AM IST
Highlights

‘ಕಾಂತರಾಜ ಆಯೋಗ ರಚಿಸಿದ್ದೇ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಪಡೆಯಲು. ಹೀಗಾಗಿ ರಾಜ್ಯ ಸರ್ಕಾರ ಕಾಂತರಾಜು ಆಯೋಗದ ವರದಿಯನ್ನು ಪಡೆಯಲಿದೆ. ಒಕ್ಕಲಿಗರ ಸಂಘದವರು ವಿರೋಧ ವ್ಯಕ್ತಪಡಿಸಿದ್ದು, ವರದಿ ಕೊಡುವ ಮುನ್ನವೇ ಯಾಕೆ ವಿರೋಧಿಸುತ್ತಿದ್ದೀರಿ ಎಂದು ಹೇಳಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. 

ಬೆಂಗಳೂರು (ನ.23): ‘ಕಾಂತರಾಜ ಆಯೋಗ ರಚಿಸಿದ್ದೇ ಜಾತಿವಾರು ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷಾ ವರದಿ ಪಡೆಯಲು. ಹೀಗಾಗಿ ರಾಜ್ಯ ಸರ್ಕಾರ ಕಾಂತರಾಜು ಆಯೋಗದ ವರದಿಯನ್ನು ಪಡೆಯಲಿದೆ. ಒಕ್ಕಲಿಗರ ಸಂಘದವರು ವಿರೋಧ ವ್ಯಕ್ತಪಡಿಸಿದ್ದು, ವರದಿ ಕೊಡುವ ಮುನ್ನವೇ ಯಾಕೆ ವಿರೋಧಿಸುತ್ತಿದ್ದೀರಿ ಎಂದು ಹೇಳಿದ್ದೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಜಾತಿಗಣತಿ ವರದಿ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಾತಿ ಜನಗಣತಿ ಪಡೆಯದಿರುವಂತೆ ಒಕ್ಕಲಿಗರ ಸಂಘ ಮನವಿ ಸಲ್ಲಿಸಿದ್ದು ವರದಿ ಕೊಡುವ ಮುನ್ನವೇ ಏಕೆ ವಿರೋಧಿಸುತ್ತಿದ್ದೀರಿ ಎಂದು ಹೇಳಿದ್ದೇನೆ. ಜಾತಿ ಜನಗಣತಿ ವರದಿ ಇನ್ನೂ ನಮ್ಮ ಕೈ ಸೇರಿಲ್ಲ. ಕೊಟ್ಟ ಮೇಲೆ ಆಕ್ಷೇಪಗಳ ಬಗ್ಗೆ ತೀರ್ಮಾನ ಮಾಡಬಹುದು ಎಂದರು.

ಆಯೋಗ ಮಾಡಿರುವುದೇಕೆ?: ಹಾಗಾದರೆ ವರದಿ ಪಡೆಯಲು ಸರ್ಕಾರ ಸಿದ್ಧವೇ ಎಂಬ ಪ್ರಶ್ನೆಗೆ, ಆಯೋಗ ಮಾಡಿರುವುದು ಯಾಕೆ? ವರದಿಯನ್ನು ಪಡೆಯುತ್ತೇವೆ. ವರದಿಯನ್ನು ಯಾರೂ ನೋಡಿಲ್ಲ ನಾನೂ ಕೂಡ ನೋಡಿಲ್ಲ. ವರದಿ ಬಂದ ಮೇಲೆ ಇವರು ಸಂಶಯ ಪಡೆಯುತ್ತಿರುವುದು ಸತ್ಯವೋ? ಅಥವಾ ಸುಳ್ಳೋ ಎಂಬುದು ಗೊತ್ತಾಗಲಿದೆ ಎಂದು ಹೇಳಿದರು. ಮೂಲಪ್ರತಿ ಕಾಣೆಯಾಗಿದೆ ಎಂದು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿ, ‘ಈ ಬಗ್ಗೆ ನನಗೆ ತಿಳಿದಿಲ್ಲ. ನಾನು ಆಯೋಗದ ಅಧ್ಯಕ್ಷ ಅಲ್ಲ, ಕಾರ್ಯದರ್ಶಿಯೂ ಅಲ್ಲ. ಹಾಳಾಗಿದೆ ಎಂಬುದು ನಿಮಗೆ ಗೊತ್ತಾ?’ ಎಂದು ಸುದ್ದಿಗಾರರಿಗೆ ಮರು ಪ್ರಶ್ನೆ ಮಾಡಿದರು.

Latest Videos

ಕೇಂದ್ರ ಸರ್ಕಾರದ ಕಡೆ ಬೊಟ್ಟು ಮಾಡಿ ತೋರಿಸೋದಲ್ಲ: ಸಂಸದೆ ಸುಮಲತಾ ಅಂಬರೀಶ್

ನಮಗೆ ಗೊತ್ತಿಲ್ಲ ಜಯಪ್ರಕಾಶ್ ಹೆಗ್ಡೆ ಅವರು ಹೇಳಿದ್ದಾರೆ ಎಂದಿದ್ದಕ್ಕೆ, ‘ಅವರು ಹೇಳಿದ್ರಾ? ಹಾಗಾದರೆ ನನಗೆ ಗೊತ್ತಿಲ್ಲ. ಅವರನ್ನೇ ಕೇಳಿ. ಯಾರು ಅದಕ್ಕೆ ಕಾರಣ? ಯಾಕೆ ಹಾಗೆ ಆಯಿತು ಎಂಬುದನ್ನೂ ಹೇಳಬಹುದು. ಅವರು ನನ್ನ ಭೇಟಿಯಾಗಿ ಅವಧಿ ವಿಸ್ತರಣೆ ಮಾಡುವಂತೆ ಕೋರಿದ್ದರು. ನಾನು ಅವಧಿ ವಿಸ್ತರಿಸಿದ್ದೇನೆ ಬಹುತೇಕ ಡಿಸೆಂಬರ್‌ನಲ್ಲಿ ವರದಿ ಸಲ್ಲಿಸುವ ನಿರೀಕ್ಷೆಯಿದೆ’ ಎಂದು ಹೇಳಿದರು. ವರದಿ ಯಾವಾಗ ಕೊಡುತ್ತಾರೋ ಅಲ್ಲಿಯವರೆಗೆ ಅವಧಿ ವಿಸ್ತರಣೆಯಾಗುತ್ತದೆ. 162 ಕೋಟಿ ಖರ್ಚು ಮಾಡಿ ವರದಿ ತಯಾರಿಸಲಾಗಿದೆ. ಹೀಗಾಗಿ ವರದಿ ಪಡೆಯುತ್ತೇವೆ ಎಂದರು.

ವಿಜಯೇಂದ್ರ ಇನ್ನು ಮಗು, ರಾಜ್ಯದಲ್ಲಿ ಸಿಎಂ ಸ್ಥಾನ ಖಾಲಿ ಇಲ್ಲ: ಸಚಿವ ಚಲುವರಾಯಸ್ವಾಮಿ

ಡಿಸಿಎಂ ನನ್ನ ಜತೆ ಚರ್ಚಿಸಿಲ್ಲ: ಜಾತಿಗಣತಿ ವರದಿ ವಿರೋಧಿಸಿರುವ ಒಕ್ಕಲಿಗರ ಸಂಘದ ಪತ್ರಕ್ಕೆ ಡಿ.ಕೆ. ಶಿವಕುಮಾರ್‌ ಸಹಿ ಹಾಕಿರುವ ಬಗ್ಗೆ ಪ್ರತಿಕ್ರಿಯಿಸಿ, ಉಪಮುಖ್ಯಮಂತ್ರಿಗಳಿಗೆ ಆಕ್ಷೇಪವಿರುವ ಬಗ್ಗೆ ನನ್ನೊಂದಿಗೆ ಅವರು ಏನೂ ಚರ್ಚಿಸಿಲ್ಲ. ಒಕ್ಕಲಿಗರ ಸಂಘದವರು ಮಾತ್ರ ಭೇಟಿ ಮಾಡಿದ್ದಾರೆ. ಮಂಗಳವಾರ ಭೇಟಿ ಮಾಡಿ ಮನವಿ ಕೊಟ್ಟಿದ್ದಾರೆ ಅಷ್ಟೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

click me!