ಉಚಿತ ಗ್ಯಾರಂಟಿಗಳು ದೇಶಕ್ಕೆ ಉಪಯೋಗವೇ ಅಥವಾ ಮಾರಕವೇ ಎಂಬುವುದರ ಕುರಿತು ಚರ್ಚೆಯಾಗಬೇಕು. ಚುನಾವಣೆ ವೇಳೆ ಕಾಂಗ್ರೆಸ್ 5 ಗ್ಯಾರಂಟಿ ಘೋಷಿಸಿ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿದೆ: ಮಾಜಿ ಸಂಸದ ರಮೇಶ ಕತ್ತಿ
ಚಿಕ್ಕೋಡಿ(ನ.23): ಗ್ಯಾರಂಟಿ ಯೋಜನೆಗೆ ಹಣ ಹೊಂದಿಸಲು ಮದ್ಯದ ದರ ಹೆಚ್ಚಿಸಲಾಗಿದೆ. ಇದರಿಂದ ಜನರು ಮದ್ಯ ಸೇವನೆಗೆ ಮಹಾರಾಷ್ಟ್ರಕ್ಕೆ ಹೋಗುತ್ತಿದ್ದಾರೆ ಎಂದು ಮಾಜಿ ಸಂಸದ, ಬಿಡಿಸಿಸಿ ಬ್ಯಾಂಕಿನ ಅಧ್ಯಕ್ಷ ರಮೇಶ ಕತ್ತಿ ಲೇವಡಿ ಮಾಡಿದರು.
ತಾಲೂಕಿನ ಕುಂಗಟೋಳ್ಳಿ ಗ್ರಾಮದಲ್ಲಿ ಬುಧವಾರ ಆಯೋಜಿಸಿದ ಸಮಾರಂಭದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಉಚಿತ ಗ್ಯಾರಂಟಿಗಳು ದೇಶಕ್ಕೆ ಉಪಯೋಗವೇ ಅಥವಾ ಮಾರಕವೇ ಎಂಬುವುದರ ಕುರಿತು ಚರ್ಚೆಯಾಗಬೇಕು. ಚುನಾವಣೆ ವೇಳೆ ಕಾಂಗ್ರೆಸ್ 5 ಗ್ಯಾರಂಟಿ ಘೋಷಿಸಿ ಜನರನ್ನು ಮರಳು ಮಾಡಿ ಅಧಿಕಾರಕ್ಕೆ ಬಂದಿದೆ ಎಂದು ಆರೋಪಿಸಿದರು.
undefined
ಬಿಜೆಪಿ ವ್ಯಕ್ತಿ ಪೂಜೆಯ ಪಕ್ಷವಲ್ಲ; ದೇಶ ಪೂಜಿಸುವ ಪಕ್ಷ: ರಮೇಶ್ ಕತ್ತಿ
ಉಚಿತ ಗ್ಯಾರಂಟಿಗಳ ಮೂಲಕ ಸ್ವಾವಲಂಬಿ ಜನರನ್ನು ಪರಾವಲಂಬಿಯನ್ನಾಗಿ ಮಾಡುವ ಕಾರ್ಯ ವ್ಯವಸ್ಥಿತವಾಗಿ ನಡೆದಿದೆ. ಒಂದು ಕಡೆ ಉಚಿತ ಯೋಜನೆಗಳನ್ನು ನೀಡಿ ಮತ್ತೊಂದೆಡೆ ಸಮರ್ಪಕ ವಿದ್ಯುತ್ ನೀಡದೆ ರೈತರನ್ನು ಸಂಕಷ್ಟಕ್ಕೆ ದೂಡಿದೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.