Assembly election; ಅಧಿಕಾರದಲ್ಲಿದ್ದಾಗ ಕಾಂಗ್ರೆಸ್ ಯಾಕೆ ಯಾವ ಯಾತ್ರೆ ಮಾಡಲಿಲ್ಲ? ಸಂಸದ ಪ್ರಜ್ವಲ್ ರೇವಣ್ಣ

By Ravi JanekalFirst Published Jan 24, 2023, 7:46 PM IST
Highlights

ಅಧಿಕಾರದಲ್ಲಿದ್ದಾಗ ಯಾಕೆ ಕಾಂಗ್ರೆಸ್ ಯಾವ ಯಾತ್ರೆ ಮಾಡಲಿಲ್ಲ? ಕಾಂಗ್ರೆಸ್ ಗೆ ಪ್ರಶ್ನಿಸಿದ ಸಂಸದ ಪ್ರಜ್ವಲ್ ರೇವಣ್ಣ. ಈಗ ಪಂಚರತ್ನ ಯಾತ್ರೆ(Pancharatna yatre) ಮಾಡುತ್ತಿರುವ ಕುಮಾರಸ್ವಾಮಿ(HD Kumaraswamy) ಅವರು ಸರ್ಕಾರ ಇದ್ದಾಗ ಯಾಕೆ ಯಾವುದೇ ಯಾತ್ರೆ ಮಾಡಲಿಲ್ಲ' ಎಂಬ ಸಿದ್ದರಾಮಯ್ಯ(Siddaramaiah)ರ ಹೇಳಿಕೆ ತಿರುಗೇಟು ನೀಡಿದರು.

ವರದಿ: ರವಿ.ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು (ಜ.24) : ಅಧಿಕಾರದಲ್ಲಿದ್ದಾಗ ಯಾಕೆ ಕಾಂಗ್ರೆಸ್ ಯಾವ ಯಾತ್ರೆ ಮಾಡಲಿಲ್ಲ? ಕಾಂಗ್ರೆಸ್ ಗೆ ಪ್ರಶ್ನಿಸಿದ ಸಂಸದ ಪ್ರಜ್ವಲ್ ರೇವಣ್ಣ. ಈಗ ಪಂಚರತ್ನ ಯಾತ್ರೆ(Pancharatna yatre) ಮಾಡುತ್ತಿರುವ ಕುಮಾರಸ್ವಾಮಿ(HD Kumaraswamy) ಅವರು ಸರ್ಕಾರ ಇದ್ದಾಗ ಯಾಕೆ ಯಾವುದೇ ಯಾತ್ರೆ ಮಾಡಲಿಲ್ಲ' ಎಂಬ ಸಿದ್ದರಾಮಯ್ಯ(Siddaramaiah)ರ ಹೇಳಿಕೆ ತಿರುಗೇಟು ನೀಡಿದರು.

ಕೊಡಗು(Kodagu) ಜಿಲ್ಲೆಯ ಸೋಮವಾರಪೇಟೆಯಲ್ಲಿ ಮಂಗಳವಾರ ನಡೆದ ಜೆಡಿಎಸ್ ಕಾರ್ಯಕರ್ತರ ಸಭೆಯಲ್ಲಿ ಭಾಗವಹಿಸಲು ಆಗಮಿಸಿದ್ದ ವೇಳೆ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು. 

ಕೋಲಾರದಲ್ಲಿ ಸಿದ್ದು ಸೋಲಿಸಲು ದಳಪತಿ ತಂತ್ರ: ಒಕ್ಕಲಿಗ, ಮುಸ್ಲಿಂ ಮತ ಸೆಳೆಯುವ ಜೆಡಿಎಸ್ ಪ್ಲಾನ್

ಸ್ತ್ರೀಶಕ್ತಿ ಸಂಘಗಳ ಸಾಲ ಮನ್ನಾ ಮಾಡುತ್ತೇವೆ ಎನ್ನುತ್ತಿದ್ದಂತೆ ಕಾಂಗ್ರೆಸ್ ಕೂಡ ಪ್ರತೀ ಮಹಿಳೆಯರಿಗೆ ಮಾಸಿಕ ಎರಡು ಸಾವಿರ ಕೊಡುತ್ತೇವೆ ಎಂದಿದ್ದಾರೆ. ಈಗ ಕಾಂಗ್ರೆಸಿನವರಿಗೆ ಮಹಿಳೆಯರು ನೆನಪಾಗುತ್ತಿದ್ದಾರಾ ಎಂದು ಪ್ರಶ್ನಿಸಿದರು. ಮಹಿಳೆಯರಿಗೆ ಪ್ರತೀ ತಿಂಗಳು ಎರಡು ಸಾವಿರ ಕೊಡುತ್ತೇವೆ ಎನ್ನುವ ಕಾಂಗ್ರೆಸ್ ನವರು ಆ ಹಣವನ್ನು ಯಾವ ಮೂಲದಿಂದ ಸಂಗ್ರಹ ಮಾಡುತ್ತಾರೆ ಎನ್ನುವುದನ್ನು ಹೇಳಿದ್ದಾರಾ? ಅಥವಾ ಬಜೆಟ್‌ನಲ್ಲಿ ಏನಾದರೂ ಘೋಷಿಸುತ್ತಾರಾ? ಈ ಬಗ್ಗೆ ಕಾಂಗ್ರೆಸ್ ನ ಯಾವ ನಾಯಕರೂ. ಉತ್ತರಿಸುತ್ತಿಲ್ಲ. 

ನಾಳೆ ನಾನೂ 5 ಕೋಟಿ ಜನಕ್ಕೆ ಮನೆ ಕಟ್ಟಿ ಕೊಡ್ತೇನೆ ಅಂತ ಹೇಳಬಹುದು. ಆದರೆ ಎಲ್ಲಿಂದ ಹಣ ಸಂಗ್ರಹ ಮಾಡ್ತೇನೆ ಅಂತ ಹೇಳಬೇಕು ಅಲ್ವಾ.? ಅದುಬಿಟ್ಟು ಸುಳ್ಳು ಭರವಸೆಗಳನ್ನು ಕೊಡಬಾರದು. ಕಾಂಗ್ರೆಸ್ ಅದೇ ಸುಳ್ಳುಗಳನ್ನು ಹೇಳುತ್ತಿದೆ ಎಂದು ಕಾಂಗ್ರೆಸ್ ನ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ಅವರು ವಿರುದ್ಧ ಸಂಸದ ಪ್ರಜ್ವಲ್ ರೇವಣ್ಣ ತಿರುಗೇಟು ನೀಡಿದರು. 

ಎಲ್ಲೆಡೆ ಕಾಂಗ್ರೆಸ್ ಅಲೆ ಇದೆ, ನಾವು ಅಧಿಕಾರಕ್ಕೆ ಬಂದು ಬಿಡುತ್ತೇವೆ ಎಂಬ ಭ್ರಮೆಯಲ್ಲಿ ಕಾಂಗ್ರೆಸ್ ಇದೆ. ಆದರೆ ಸಿದ್ದರಾಮಯ್ಯ, ಡಿಕೆಶಿ ಸೇರಿದಂತೆ ರಾಜ್ಯದ ಎಲ್ಲಾ ನಾಯಕರು ಹಾಸನಕ್ಕೆ ಬಂದಿದ್ದರು. ಅವರಿಗೆ 5 ಸಾವಿರ ಜನರನ್ನು ಸೇರಿಸುವುದಕ್ಕೆ ಆಗಲಿಲ್ಲ ಎಂದು ವ್ಯಂಗ್ಯವಾಡಿದರು. ನಾನು ಇಲ್ಲಿಗೆ ಬಂದಿರುವುದಕ್ಕೆ ಸಾವಿರಾರು ಕಾರ್ಯಕರ್ತರು ಸೇರುತ್ತಿದ್ದಾರೆ. ಇನ್ನು ದೊಡ್ಡವರು ಅಥವಾ ಕುಮಾರಣ್ಣ ಅವರು ಬಂದರೆ ಕನಿಷ್ಠ 25 ಸಾವಿರ ಜನರು ಸೇರಬಹುದೇನೋ ಎಂದರು. 

ಇನ್ನು ಜೆಡಿಎಸ್ ಪ್ರಬಲವಾಗಿರುವ ಕ್ಷೇತ್ರ, ಜಿಲ್ಲೆಗಳಲ್ಲಿ ಪ್ರಧಾನಿ ಮೋದಿ(PM Narendra Modi)ಯವರು ಪದೇ ಪದೇ ಪ್ರಚಾರ ನಡೆಸುತ್ತಿದ್ದಾರೆ ಎನ್ನುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ(Prajwal revanna) ಅವರು, ಇಲ್ಲೇ ಗೊತ್ತಾಗುತ್ತದೆ ಅಲ್ವಾ ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ಮುಖದ ಎರಡು ನಾಣ್ಯಗಳಾಗಿದ್ದು, ಕಾಂಗ್ರೆಸ್ ಬಿಜೆಪಿಯ ಬಿ ಟೀಂ ಎನ್ನುವುದು ಖಚಿತ ಆಯಿತಲ್ವಾ ಎಂದರು. 

Assembly election 2023: ಕಾಂಗ್ರೆಸ್‌ ಗೆದ್ದರೆ ಶೇ.33 ಮಹಿಳಾ ಮೀಸಲಿಗೆ ಒತ್ತಾಯ: ಸಿದ್ದರಾಮಯ್ಯ

ಇನ್ನು ದೇವೇಗೌಡರ ಕುಟುಂಬದಲ್ಲಿ ಅಪ್ಪ, ಮಕ್ಕಳು, ಮೊಮ್ಮಕ್ಕಳು ಮತ್ತು ಅವರ ಹೆಂಡತಿಯರೆಲ್ಲಾ ಹಣ ಮಾಡುವುದಕ್ಕೆ ಇಳಿದಿದ್ದಾರೆ ಎಂದು ಸಚಿವ ಮಾಧುಸ್ವಾಮಿ ಅವರ ಹೇಳಿರುವುದಕ್ಕೆ ಪ್ರತಿಕ್ರಿಯಿಸಿದ ಸಂಸದ ಪ್ರಜ್ವಲ್ ರೇವಣ್ಣ, ಅದು ಮಾಧುಸ್ವಾಮಿ  ಅವರು ಬಾಯಿತಪ್ಪಿನಿಂದ ಹಾಗೆ ಹೇಳಿರಬಹುದು. ಬಾಯಿತಪ್ಪಿನಿಂದ ದೇವೇಗೌಡರ ಕುಟುಂಬ ಎಂದಿರಬಹುದು. ಆದರೆ ಅದು ಯಡಿಯೂರಪ್ಪನವರ ಕುಟುಂಬ ಎನ್ನಲು ಹೋಗಿ ಮಿಸ್ ಆಗಿರಬಹುದು. ಏನು ಮಾಡುವುದು ತಪ್ಪು ತಿಳಿಯಬೇಡಿ, ಸಚಿವ ಮಾಧುಸ್ವಾಮಿ ಅವರಿಗೂ ವಯಸ್ಸಾಯಿತಲ್ವಾ. ಆದ್ದರಿಂದ ಹಾಗೆ ಹೇಳಿರಬಹುದು ಎಂದು ಸಂಸದ ಪ್ರಜ್ವಲ್ ರೇವಣ್ಣ ಸಚಿವ ಮಾಧುಸ್ವಾಮಿ ಅವರನ್ನು ಲೇವಡಿ ಮಾಡಿದರು.

click me!