ವಿರಾಜಪೇಟೆ ಬಿಜೆಪಿ ಟಿಕೆಟ್‍ಗಾಗಿ ಗುರು-ಶಿಷ್ಯರ ದಾಳ, ಯಾರಿಗೆ ಒಲುವು ತೋರಿಸುತ್ತೆ ಹೈಕಮಾಂಡ್

By Gowthami KFirst Published Jan 5, 2023, 8:13 PM IST
Highlights

ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷದಿಂದ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಹೇಳಿದ್ದರೆ, ರವಿಕುಶಾಲಪ್ಪ ಅವರನ್ನು ಒಂದು ವರ್ಷದಿಂದಲೇ ವಿರಾಜಪೇಟೆ ಕ್ಷೇತ್ರದಲ್ಲಿ ಪರಿಚಯಿಸುವ ಮೂಲಕ ಗುರುಶಿಷ್ಯರು ಟಿಕೆಟ್‍ಗಾಗಿ ದಾಳ ಉರುಳಿಸುತ್ತಿದ್ದಾರೆ ಎನ್ನಲಾಗಿದೆ.

ವರದಿ :ರವಿ ಎಸ್ ಹಳ್ಳಿ ಏಷ್ಯಾನೆಟ್ ಸುವರ್ಣ ನ್ಯೂಸ್ 

ಕೊಡಗು(ಜ.5): ಚುನಾವಣೆ ಹತ್ತಿರವಾದಂತೆಲ್ಲಾ ಕೊಡಗಿನ ಬಿಜೆಪಿ ಪಕ್ಷದಲ್ಲಿ ಟಿಕೆಟ್ ಆಕಾಂಕ್ಷಿಗಳ ಪಟ್ಟಿ ಹೆಚ್ಚಾಗುತ್ತಿದೆ. ವಿರಾಜಪೇಟೆ ಕ್ಷೇತ್ರದಲ್ಲಿ ಪಕ್ಷದಿಂದ ನಾನೂ ಕೂಡ ಆಕಾಂಕ್ಷಿಯಾಗಿದ್ದೇನೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿ ಕುಶಾಲಪ್ಪ ಹೇಳಿದ್ದರೆ, ರವಿಕುಶಾಲಪ್ಪ ಅವರನ್ನು ಒಂದು ವರ್ಷದಿಂದಲೇ ವಿರಾಜಪೇಟೆ ಕ್ಷೇತ್ರದಲ್ಲಿ ಪರಿಚಯಿಸುವ ಮೂಲಕ ಗುರುಶಿಷ್ಯರು ಟಿಕೆಟ್‍ಗಾಗಿ ದಾಳ ಉರುಳಿಸುತ್ತಿದ್ದಾರೆ ಎನ್ನಲಾಗಿದೆ. ಎರಡುವರೆ ದಶಕಗಳಿಂದ ಕೊಡಗು ಜಿಲ್ಲೆಯನ್ನು ತನ್ನ ಭದ್ರಕೋಟೆ ಮಾಡಿಕೊಂಡಿರುವ ಬಿಜೆಪಿಯಿಂದ ಮಡಿಕೇರಿ ಕ್ಷೇತ್ರದಲ್ಲಿ ಅಪ್ಪಚ್ಚು ರಂಜನ್ ಐದು ಅವಧಿಯಿಂದ ಶಾಸಕರಾಗಿದ್ದರೆ, ಕೆ.ಜಿ ಬೋಪಯ್ಯ ಮಡಿಕೇರಿ ಕ್ಷೇತ್ರದಿಂದ ಒಮ್ಮೆ ಮತ್ತು ವಿರಾಜಪೇಟೆ ಕ್ಷೇತ್ರದಿಂದ 3 ಬಾರಿ ಶಾಸಕರಾಗಿ ಪಾರಮ್ಯ ಸಾಧಿಸಿದ್ದಾರೆ.

 ಆದರೆ ಈ ಬಾರಿ ಇಬ್ಬರು ಶಾಸಕರಿಗೆ ಟಿಕೆಟ್ ಕೊಡದೆ ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿರುವ ಕಾರ್ಯಕರ್ತರಿಗೆ ಟಿಕೆಟ್ ಕೊಡಬೇಕು ಎಂದು ಪಕ್ಷದ ಕಾರ್ಯಕರ್ತರು ಮುಖಂಡರು ಹೊತ್ತಾಯ ಮಾಡುತ್ತಿದ್ದಾರೆ. ಹಿರಿಯರಿಗೆ ಪಕ್ಷದ ಜಬಾಬ್ದಾರಿ ನೀಡಿ, ಹೊಸಬರಿಗೆ ಟಿಕೆಟ್ ಕೊಡುವುದಾದರೆ ನಾನು ದೊಡ್ಡ ಆಕಾಂಕ್ಷಿ. ಮಡಿಕೇರಿ ಕ್ಷೇತ್ರವಾದರೂ ಸರಿ, ವಿರಾಜಪೇಟೆ ಕ್ಷೇತ್ರವಾದರೂ ಸರಿ. ಎಲ್ಲಾದರೂ ನನಗೆ ಟಿಕೆಟ್ ನೀಡಲಿ. ಜಿಲ್ಲೆಯಲ್ಲಿ ರವಿಕುಶಾಲಪ್ಪನನ್ನು ಜನರಿಗೆ ಪರಿಚಯ ಮಾಡಿಕೊಡಬೇಕಾದ ಅಗತ್ಯವಿಲ್ಲ. ಮಂಡಲ ಪಂಚಾಯಿತಿಯಿಂದ ಹಿಡಿದು, ಜಿಲ್ಲಾ ಪಂಚಾಯಿತಿವರೆಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸಿದ್ದೇನೆ ಎಂದು ಕೊಡಗು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ರವಿಕುಶಾಲಪ್ಪ ಪಟ್ಟು ಹಿಡಿದಿದ್ದಾರೆ. 

ಹಲವು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ನಾನು ಟಿಕೆಟ್ ಕೇಳುವುದರಲ್ಲಿ ತಪ್ಪೇನಿದೆ ಎಂದು ರವಿಕುಶಾಲಪ್ಪ ಹೇಳಿದ್ದಾರೆ. ಆದರೆ ಇದುವರೆಗೆ ನಾನು ಆಕಾಂಕ್ಷಿ ಎನ್ನುವುದನ್ನೂ ಹೇಳದ ಶಾಸಕ ಕೆ.ಜಿ.ಬೋಪಯ್ಯ ಅವರು, ಪಕ್ಷ ಹೇಳಿದ್ದರಿಂದ ಚುನಾವಣೆಗೆ ಸ್ಪರ್ಧಿಸಿದ್ದೆ ಎನ್ನುತ್ತಿದ್ದರು. ಈಗ ವರಸೆ ಬದಲಾಯಿಸಿ ಬಿಜೆಪಿಯಲ್ಲಿ ಆಕಾಂಕ್ಷಿಗಳಿರುವುದು ಸಹಜ ಎನ್ನುತ್ತಿದ್ದಾರೆ. ಟಿಕೆಟ್ ನೀಡಿದರೂ ಸರಿ, ನೀಡದಿದ್ದರೂ ಸರಿ. ಪಕ್ಷ ಹೇಳಿದಂತೆ ನಡೆದುಕೊಳ್ಳುವೆ ಎಂದಿದ್ದಾರೆ.

'ನಾಯಿಮರಿ' ಹೇಳಿಕೆಗೆ ಸಿದ್ದರಾಮಯ್ಯ ಸಾಫ್ಟ್‌ ಟಚ್: ಸಿಎಂಗೆ ಧೈರ್ಯ ತುಂಬಲು ಪದ ಬಳಕೆ

ಆದರೆ ಇಬ್ಬರು ಶಾಸಕರಿಗೆ ಟಿಕೆಟ್ ಕೈತಪ್ಪುವ ಸಾಧ್ಯತೆ ಇದೆ ಎಂದೇ ತನ್ನ ಶಿಕ್ಷ್ಯನಂತಿರುವ ರವಿಕುಶಾಲಪ್ಪ ಅವರನ್ನು ಶಾಸಕ ಕೆ.ಜಿ. ಬೋಪಯ್ಯ ಅವರು ಕಳೆದ ಒಂದು ವರ್ಷದಿಂದಲೇ ತಮ್ಮ ಕ್ಷೇತ್ರದ ಕಾರ್ಯಕ್ರಮಗಳಲ್ಲಿ ಜೊತೆಗೆ ಕರೆದುಕೊಂಡು ಓಡಾಡುತ್ತಾ, ಕ್ಷೇತ್ರದ ಜನತೆಗೆ ಪರಿಚಯಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಪ್ರತಿಕ್ರಿಯಿಸಿರುವ ಕೆ.ಜಿ. ಬೋಪಯ್ಯ ಅವರು, ಅದೆಲ್ಲಾ ಚುನಾವಣೆ ಸಂದರ್ಭ ಬರುವ ಆರೋಪಗಳು ಅಷ್ಟೇ. ಬಿಜೆಪಿ ಏನು ನನ್ನ ಮನೆ ಅಥವಾ ನನ್ನಪ್ಪನ ಸ್ವತ್ತಲ್ಲ ಎಂದು ಹೇಳಿದ್ದಾರೆ. ಹಿರಿಯರಾದ ಕೆ.ಜಿ. ಬೋಪಯ್ಯ ಅವರಿಗೆ ಟಿಕೆಟ್ ಕೈತಪ್ಪಿದ್ದರೆ ನನಗೆ ಟಿಕೆಟ್ ಕೊಡಬೇಕು ಎಂದು ರವಿ.ಕುಶಾಲಪ್ಪ ಅವರು ಹೇಳಿರುವುದರ ಹಿಂದೆ ಕೆ.ಜಿ.ಬೋಪಯ್ಯ ಅವರಿಗೆ ಟಿಕೆಟ್ ಮುಂದುರಿಸಬೇಕು ಎನ್ನುವ ಉದ್ದೇಶವೂ ಇದ್ದಂತೆ ಇದೆ.

ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್ ಅಲ್ಲಾಡಿಸಲು ಆಗಲ್ಲ: ನಿಖಿಲ್ ಕುಮಾರಸ್ವಾಮಿ

ಒಂದು ವೇಳೆ ಅವರಿಗೆ ಟಿಕೆಟ್ ಕೊಡದಿದ್ದರೆ ನನಗೆ ಟಿಕೆಟ್ ಕೊಟ್ಟರೂ ಅದು ಬೋಪಯ್ಯ ಅವರಿಗೆ ಅನುಕೂಲವಾಗಲಿದೆ ಎನ್ನುವ ಉದ್ದೇಶವೂ ಇರಬಹುದು. ಒಟ್ಟಿನಲ್ಲಿ ಬಿಜೆಪಿಯಲ್ಲಿ ಈ ಬಾರಿ ಟಿಕೆಟಿಗಾಗಿ ಹಲವು ಆಕಾಂಕ್ಷಿಗಳ ನಡುವೆ ಒಳಗೊಳಗೆ ಲಾಭಿ ನಡೆಯುತ್ತಿದ್ದರೆ, ವಿರಾಜಪೇಟೆ ಕ್ಷೇತ್ರದ ಟಿಕೆಟಿಗೆ ಗುರು ಶಿಷ್ಯರು ದಾಳ ಉರುಳಿಸುತ್ತಿದ್ದಾರೆ ಎನ್ನಲಾಗಿದೆ. ಏನೇ ಆಗಲಿ ಈ ಬಾರಿ ಬಿಜೆಪಿಯಿಂದ ವಿರಾಜಪೇಟೆ ಟಿಕೆಟ್ ಯಾರಿಗೆ ದೊರೆಯುತ್ತೆ ಎನ್ನುವುದು ಕುತುಹೂಲವಾಗಿಯೇ ಉಳಿದಿದೆ.

click me!