ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನ ಅಲ್ಲಾಡಿಸಲು ಸಾಧ್ಯವಿಲ್ಲ. ದೇವೇಗೌಡರನ್ನಾಗಲಿ, ಕುಮಾರಣ್ಣನನ್ನಾಗಲಿ ಜೆಡಿಎಸ್ ಪಕ್ಷವನ್ನಾಗಲಿ ಏನೂ ಮಾಡಲು ಆಗಲ್ಲ ಅಂತ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ.
ರಾಯಚೂರು (ಜ.5): ಯಾರೇ ಬಂದ್ರು ಹಳೆಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷವನ್ನ ಅಲ್ಲಾಡಿಸಲು ಸಾಧ್ಯವಿಲ್ಲ. ದೇವೇಗೌಡರನ್ನಾಗಲಿ, ಕುಮಾರಣ್ಣನನ್ನಾಗಲಿ ಜೆಡಿಎಸ್ ಪಕ್ಷವನ್ನಾಗಲಿ ಏನೂ ಮಾಡಲು ಆಗಲ್ಲ ಅಂತ ಜೆಡಿಎಸ್ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಹೇಳಿದ್ದಾರೆ. ರಾಯಚೂರಿನ ಸಿಂಧನೂರಿನಲ್ಲಿ ಶಾಸಕ ವೆಂಕಟರಾವ್ ನಾಡಗೌಡ ಹುಟ್ಟುಹಬ್ಬ ಸಮಾರಂಭ ಹಿನ್ನೆಲೆ ಸಿಂಧನೂರಿಗೆ ಆಗಮಿಸಿದ್ದ ನಿಖಿಲ್ ಕುಮಾರಸ್ವಾಮಿ ಮಂಡ್ಯಕ್ಕೆ ಅಮಿತ್ ಶಾ ಭೇಟಿ ನೀಡಿರುವ ಹಿನ್ನೆಲೆ ಪ್ರತಿಕ್ರಿಯಿಸಿ ಯಾರೇ ಬಂದ್ರೂ ಜೆಡಿಎಸ್ ಪಕ್ಷ ಅಲ್ಲಾಡಿಸಲು ಸಾಧ್ಯವಿಲ್ಲ ಎಂದರು.
ಇಂದಿನಿಂದ ಕುಮಾರಣ್ಣ ಬೀದರ್ ನಿಂದ ಯಾತ್ರೆ ಶುರು ಮಾಡಿದ್ದಾರೆ. ಎಲ್ಲೆಡೆಯೂ ಎರಡು ರಾಷ್ಟ್ರೀಯ ಪಕ್ಷಗಳಿಗೆ ಧಿಕ್ಕರಿಸಿ ಈ ಬಾರಿ ಕುಮಾರಣ್ಣ ನಾಯಕತ್ವಕ್ಕೆ ಬೆಂಬಲಿಸುವ ಮಾತುಗಳು ಕೇಳಿಬರುತ್ತಿದೆ ಎಂದರು.
ಎರಡು ಪಕ್ಷಗಳ ಬಗ್ಗೆ ನಾವು ಮಾತನಾಡಲು ಸಿದ್ಧರಿಲ್ಲ. ಜನಸಂಕಲ್ಪ ಯಾತ್ರೆಯೂ ನೀವೂ ನೋಡಿದ್ರಿ.ಭಾರತ್ ಜೋಡೋ ಯಾತ್ರೆಯೂ ನೋಡಿದ್ರಿ.ಬಿಜೆಪಿಯವರು ಯಾವ ಪುರುಷತ್ವಕ್ಕೆ ಜನ ಸಂಕಲ್ಪ ಯಾತ್ರೆ ಮಾಡುತ್ತಿದ್ದಿರಿ. ಶೇ. 40 ಪೆರ್ಸೆಂಟ್ ಲೂಟಿ ಹೊಡೆಯುತ್ತಿದ್ದಿರಿ. ರಾಜ್ಯದ ಜನರ ಬೊಕ್ಕಸ ಲೂಟಿ ಹೊಡೆಯಲು ಜನ ಸಂಕಲ್ಪ ಯಾತ್ರೆ ಮಾಡುತ್ತೀರಾ ಅಂತ ಪ್ರಶ್ನಿಸಿದರು. ಭಾರತ್ ಜೋಡೋ ಯಾತ್ರೆ ಕಾಂಗ್ರೆಸ್ ನಾಯಕರ ಜೋಡೋ ಯಾತ್ರೆ ಆಗಿದೆ ಎಂದರು.
ರಾಷ್ಟ್ರ ರಾಜಕಾರಣದಲ್ಲಿ ಬದಲಾವಣೆ ಸನ್ನಿಹಿತ: ಎಚ್.ಡಿ.ದೇವೆಗೌಡ
ಸ್ವಾತಂತ್ರ್ಯ ಬಂದು 75 ವರ್ಷವಾಗಿದೆ.ಎರಡು ರಾಷ್ಟ್ರೀಯ ಪಕ್ಷಗಳು ಹೆಚ್ಚಾಗಿ ಆಡಳಿತ ನಡೆಸಿವೆ. ಆದ್ರೆ ಕುಮಾರಣ್ಣ 34 ತಿಂಗಳಲ್ಲಿ ನೀಡಿದ ಕಾರ್ಯಕ್ರಮದ ಬಗ್ಗೆ ರಾಜ್ಯದ ಜನರು ಇವತ್ತು ಚರ್ಚೆ ಮಾಡುತ್ತಾರೆ. ಪಂಚರತ್ನ ಕಾರ್ಯಕ್ರಮ ಎಲ್ಲರಿಗೂ ಅನುಕೂಲವಾಗುವ ಕಾರ್ಯಕ್ರಮ ಅಂತ ನಿಖಿಲ್ ಕುಮಾರಸ್ವಾಮಿ ಹೇಳಿದರು.