ಬಿವೈವಿ ನನಗೆ ಫೋನ್‌ ಮಾಡ್ತಾರೆ ಅಂತ ಹೇಳಿದ್ದು ಯಾರು?: ಶಾಸಕ ಎಚ್.ಸಿ.ಬಾಲಕೃಷ್ಣ

Published : Sep 03, 2025, 04:32 AM IST
HC Balakrishna

ಸಾರಾಂಶ

ಸಮುದಾಯದ ಸಭೆಯಲ್ಲಿ ಕುಳಿತು ವಿಜಯೇಂದ್ರ ನನ್ನ ಜತೆ ಸಂಪರ್ಕದಲ್ಲಿದ್ದಾರೆ ಎಂದು ಯಾರು ಹೇಳಿದ್ದರು? ನಮಗೆ ವಿಜಯೇಂದ್ರ ಸೇರಿ ಯಾರೂ ಸಂಪರ್ಕ ಇಲ್ಲ. ಹೀಗಾಗಿ ಬ್ರೈನ್‌ ಮ್ಯಾಪಿಂಗ್‌ ಮಾಡಿಸಿದರೆ ಸತ್ಯಾಂಶ ಹೊರಗೆ ಬರುತ್ತದೆ ಎಂದರು.

ಬೆಂಗಳೂರು (ಸೆ.03): ‘ಬಿ.ವೈ. ವಿಜಯೇಂದ್ರ ನನ್ನ ಜತೆ ಸಂಪರ್ಕದಲ್ಲಿದ್ದಾರೆ, ನನಗೆ ಫೋನ್‌ ಮಾಡುತ್ತಿದ್ದಾರೆ ಎಂದು ಹೇಳಿರುವುದು ಯಾರು ಎಂದು ಹೇಳಲಿ. ಬ್ರೈನ್‌ಮ್ಯಾಪಿಂಗ್‌ಗೆ ನಾನು ಸಿದ್ಧನಿದ್ದೇನೆ. ಇಬ್ಬರಿಗೂ ಒಟ್ಟಿಗೇ ಬ್ರೈನ್‌ ಮ್ಯಾಪಿಂಗ್‌ ಮಾಡಿಸಲಿ. ಬಿಜೆಪಿಗೆ ಯಾರು ಹೋಗುತ್ತಾರೆ ಗೊತ್ತಾಗಲಿದೆ’ ಎಂದು ಮಾಗಡಿ ಶಾಸಕ ಎಚ್.ಸಿ. ಬಾಲಕೃಷ್ಣ ತಿರುಗೇಟು ನೀಡಿದ್ದಾರೆ.

ವಿಧಾನಪರಿಷತ್ ಸದಸ್ಯ ಆರ್‌. ರಾಜೇಂದ್ರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಅವರ ಸಮುದಾಯದ ಸಭೆಯಲ್ಲಿ ಕುಳಿತು ವಿಜಯೇಂದ್ರ ನನ್ನ ಜತೆ ಸಂಪರ್ಕದಲ್ಲಿದ್ದಾರೆ ಎಂದು ಯಾರು ಹೇಳಿದ್ದರು? ನಮಗೆ ವಿಜಯೇಂದ್ರ ಸೇರಿ ಯಾರೂ ಸಂಪರ್ಕ ಇಲ್ಲ. ಹೀಗಾಗಿ ಬ್ರೈನ್‌ ಮ್ಯಾಪಿಂಗ್‌ ಮಾಡಿಸಿದರೆ ಸತ್ಯಾಂಶ ಹೊರಗೆ ಬರುತ್ತದೆ ಎಂದರು.

ತೆವಲಿಗೆ ಮಾತನಾಡುವುದು ಬೇಡ ಎಂಬ ರಾಜೇಂದ್ರ ಹೇಳಿಕೆಗೆ, ‘ತೆವಲಿಗೆ ಮಾತಾಡಿ ಅಧಿಕಾರ ಕಳೆದುಕೊಂಡವರು ಯಾರು? ನಾನು ಕಳೆದುಕೊಂಡಿದ್ದೇನಾ? ಡಾ.ಜಿ. ಪರಮೇಶ್ವರ್‌ ಅವರು ಡಿಸಿಎಂ ಆಗಿದ್ದಾಗ ಝೀರೋ ಟ್ರಾಫಿಕ್‌ ಮಿನಿಸ್ಟರ್‌ ಎಂದು ನಾನು ಕರೆದಿದ್ದೆನಾ?’ ಎಂದು ತಿರುಗೇಟು ನೀಡಿದರು.

ಇನ್ನು ಸೆಪ್ಟೆಂಬರ್‌ ಕ್ರಾಂತಿ ವಿಚಾರವಾಗಿ ನಾನು ಮಾತನಾಡಿಲ್ಲ. ಅದನ್ನು ಮಾತನಾಡಿರುವುದು ರಾಜಣ್ಣ. ನಾನು ರಾಜಣ್ಣ ಬಿಜೆಪಿಗೆ ಹೋಗುತ್ತಾರೆ ಎಂದಿದ್ದೇನೆಯೇ ಹೊರತು ಕ್ರಾಂತಿ ಆಗುತ್ತದೆ ಎಂದಿಲ್ಲ. ಡಿ.ಕೆ. ಶಿವಕುಮಾರ್‌ ಅವರು ಆರ್‌ಎಸ್‌ಎಸ್‌ ಗೀತೆ ಹಾಡಿದ್ದಕ್ಕೆ ಕ್ಷಮೆ ಕೋರಿ ದೊಡ್ಡತನ ಮೆರೆದಿದ್ದಾಗಿದೆ. ನಿಮ್ಮ ರೀತಿಯಲ್ಲಿ ನಾವು ಯಾವ ಪಕ್ಷದ ಅಧೀನದಲ್ಲೂ ಇಲ್ಲ ಎಂದು ಶಿವಕುಮಾರ್‌ ಅವರು ಹೇಳಿಲ್ಲ ಎಂದು ಬಾಲಕೃಷ್ಣ ಸ್ಪಷ್ಟಪಡಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

17 ವರ್ಷಗಳ ಬಳಿಕ ತಾರಿಕ್ ರೆಹಮಾನ್ ಬಾಂಗ್ಲಾಕ್ಕೆ ಎಂಟ್ರಿ; ಭುಗಿಲೆದ್ದ ರಾಜಕೀಯ ಸಂಘರ್ಷ, ಯೂನಸ್ ಸರ್ಕಾರಕ್ಕೆ ಭಾರೀ ಹಿನ್ನಡೆ
ಅಧಿಕಾರ ಶಾಶ್ವತವಲ್ಲ: ಸಿಎಂ ಬದಲಾವಣೆ ಬಗ್ಗೆ ಮೌನ ಮುರಿದ ಯತೀಂದ್ರ ! ಡಿಕೆಶಿ ಹೇಳಿಕೆಗೆ ನೀಡಿದ ಉತ್ತರವೇನು?