* ಅಭ್ಯರ್ಥಿ ಸುನೀಲಗೌಡ ಪಾಟೀಲ ಪರ ಮತಯಾಚಿಸಿದ ಎಂ.ಬಿ. ಪಾಟೀಲ
* ಗ್ರಾಮಗಳ ಅಭಿವೃದ್ಧಿಯಾದರೆ ದೇಶದ ಅಭಿವೃದ್ಧಿ
* ಬಿಜೆಪಿ ಸರ್ಕಾರಕ್ಕೆ ಬೇಸತ್ತ ದೇಶದ ಜನತೆ
ಜಮಖಂಡಿ(ಡಿ.06): ವಿಧಾನ ಪರಿಷತ್ ಚುನಾವಣೆಯಲ್ಲಿ ಸುನೀಲಗೌಡರು ಅವಳಿ ಜಿಲ್ಲೆಯಲ್ಲಿ ಅಭಿವೃದ್ಧಿ ಕೆಲಸಗಳನ್ನು ಮಾಡಲು ಆರಿಸಿ ತರಬೇಕಾಗಿದೆ. ಬಿಜೆಪಿ ಸರ್ಕಾರದಲ್ಲಿ(BJP Government) ಡೀಸೆಲ್, ಪೆಟ್ರೋಲ್, ಸಿಮೆಂಟ್, ಸ್ಟೀಲ್, ತರಕಾರಿ, ದಿನಸಿ ಸಾಮಗ್ರಿಗಳು ಮತ್ತು ಖಾನಾವಳಿ, ಚಹಾದಂಗಡಿಯಲ್ಲಿನ ದರಗಳು ದಿನದಿಂದ ದಿನಕ್ಕೆ ಏರುತ್ತಿದೆ. ಈಗಾದರೇ ಎಲ್ಲಿದೆ ಅಚ್ಛೇದಿನ್ ಎಂದು ಶಾಸಕ ಎಂ.ಬಿ. ಪಾಟೀಲ(MB Patil) ಪ್ರಶ್ನಿಸಿದ್ದಾರೆ.
ವಿಧಾನ ಪರಿಷತ್ ಚುನಾವಣೆಯ(Vidhan Parishat Election) ಪ್ರಯುಕ್ತ ಇಲ್ಲಿನ ಬಸವಭವನದಲ್ಲಿ ನಡೆದ ಗ್ರಾಮ ಪಂಚಾಯಿತಿ ಅಧ್ಯಕ್ಷ, ಉಪಾಧ್ಯಕ್ಷ, ಸದಸ್ಯರು ಹಾಗೂ ನಗರಸಭೆ ಅಧ್ಯಕ್ಷ, ಸದಸ್ಯರು ಚುನಾವಣಾ ಪ್ರಚಾರದ ಸಮಾವೇಶದಲ್ಲಿ ಕಾಂಗ್ರೆಸ್(Congress) ಪಕ್ಷದ ಅಭ್ಯರ್ಥಿ ಸುನೀಲಗೌಡ ಪಾಟೀಲ(Sunilgouda Patil) ಅವರ ಪರ ಮತಯಾಚಿಸಿ ಮಾತನಾಡಿದರು.
undefined
MLC Election: ಸುಳ್ಳು ಹೇಳುವ ಬಿಜೆಪಿ ಸರ್ಕಾರದಿಂದ ಜನ ಬೇಸತ್ತಿದ್ದಾರೆ: ಸಲೀಂ ಅಹ್ಮದ್
ಗ್ರಾಮಗಳು ಅಭಿವೃದ್ಧಿಯಾದರೆ ದೇಶವು ಅಭಿವೃದ್ಧಿಯಾಗುತ್ತವೆ ಎಂದು ಮಹಾತ್ಮ ಗಾಂಧಿ(Mahatma Gandhi) ಕನಸು ಕಂಡಿದ್ದರು. ಆದರೆ ಅವರ ಕನಸು ನನಸಾಗದೆ ಉಳಿದಿದೆ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ನಾಯಕರಾದ ದಿ. ರಾಜೀವ ಗಾಂಧಿ, ಡಾ. ಮನಮೋಹನಸಿಂಗ್ ಅವರು ಪಂಚಾಯತ್ ರಾಜ್‌ಗಳ ಅಭಿವೃದ್ಧಿ ಮಾಡಲು ಸಾಕಷ್ಟು ಅನುದಾನ ಜಾರಿಗೆ ತಂದಿದ್ದರು. ಹಿಂದಿನ ಕಾಂಗ್ರೆಸ್ ಸರ್ಕಾರದಲ್ಲಿ 6 ಸಾವಿರ ಕೆರೆಗಳನ್ನು ಅಭಿವೃದ್ಧಿಯನ್ನು ಮಾಡಿ ತುಂಬಲಾಗಿದೆ. ಮನೆಗಳ ನಿರ್ಮಿಸಲು 50 ಸಾವಿರ ಕೋಟಿ ಅನುದಾನದಲ್ಲಿ 15 ಲಕ್ಷ ಮನೆಗಳನ್ನು ಕಟ್ಟಿಸಲಾಗಿದೆ. ಇಂದಿನ ದಿನಮಾನದಲ್ಲಿ ಗ್ರಾಪಂಗಳಿಗೆ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಿಲ್ಲ. ಯಾವ ಗ್ರಾಮಗಳಲ್ಲಿ ಯಾವುದೇ ಒಂದು ಹೊಸ ಮನೆಗಳು ಕಟ್ಟಿಲ್ಲ. ಬಿದ್ದಿರುವ ಮನೆಗಳ ಸುಧಾರಣೆಗೆ ಅನುದಾನ ಬಿಡುಗಡೆಯಾಗಿಲ್ಲ ಎಂದು ಆರೋಪಿಸದರು.
ಬಿಜೆಪಿ ಸರ್ಕಾರಕ್ಕೆ(BJP Government) ಜನ ಬೇಸತ್ತಿದ್ದು, ಹಿಂದೂ(Hidnu), ಮುಸ್ಲಿಂ(Muslim) ಎಂದು ಭೇದ, ಭಾವ ಮೂಡಿಸಿದೆ. ಬರುವ ದಿನಗಳಲ್ಲಿ ಬಿಜೆಪಿಗೆ ಜನರು ತಕ್ಕ ಪಾಠ ಕಲಿಸಲಿದ್ದಾರೆ. ಮತ್ತೇ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲಿದೆ. ತಾಲೂಕಿನ ಹುನ್ನೂರ, ಕಲ್ಲೊಳ್ಳಿ ಏತ ನೀರಾವರಿ ಕಾಮಗಾರಿ ಕಾರ್ಯ ಪ್ರಾರಂಭಗೊಂಡಿದ್ದು, ತುಬಚಿ, ಬಬಲೇಶ್ವರ ಏತ ನೀರಾವರಿ ಯೋಜನೆ ಪೂರ್ಣಗೊಂಡಿದೆ. ಈ ಭಾಗದಲ್ಲಿ ಸಾಕಷ್ಟುನೀರಾವರಿ ಯೋಜನೆಯನ್ನು ಕಾಂಗ್ರೆಸ್ ಸರ್ಕಾರ ಮಾಡಿದೆ. ಬರುವ ದಿನಗಳಲ್ಲಿ ಸಣ್ಣ ನೀರಾವರಿ ಯೋಜನೆಯನ್ನು ಮಾಡಲಾಗುತ್ತದೆ. ಈ ಚುನಾವಣೆಯಲ್ಲಿ ಸಹೋದರನನ್ನು ಹೆಚ್ಚಿನ ಮತಗಳಿಂದ ಗೆಲ್ಲಿಸಲು ಮತದಾರರಲ್ಲಿ ಮನವಿ ಮಾಡಿದರು.
Karnataka Politics : ಚುನಾವಣೆ ನಂತರ ರಾಜಕೀಯ ಅಲ್ಲೋಲ ಕಲ್ಲೋಲ-ಈಶ್ವರಪ್ಪ
ಜಮಖಂಡಿ ಶಾಸಕ ಆನಂದ ನ್ಯಾಮಗೌಡ(Anand Nyamagouda) ಮಾತನಾಡಿ, ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಅವರಿಗೆ ಈ ಭಾಗದಲ್ಲಿ ಅಧಿಕ ಮತಗಳು ಲಭಿಸಲಿವೆ. ಅವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಹೆಚ್ಚಿನ ಪ್ರಾಶಸ್ತ್ಯ ಮತ ಪಡೆದು ಗೆಲವು ಸಾಧಿಸಲಿದ್ದಾರೆ. ಜಮಖಂಡಿ(Jamakhandi) ತಾಲೂಕಿನಲ್ಲಿ ಕಾಂಗ್ರೆಸ್ ಭದ್ರಕೋಟೆಯಾಗಿದೆ. ಸುನೀಲಗೌಡ ಪಾಟೀಲರ ಗೆಲವು ಖಚಿತ ಎಂದರು. ಕಾಂಗ್ರೆಸ್ ಅಭ್ಯರ್ಥಿ ಸುನೀಲಗೌಡ ಪಾಟೀಲ ಮಾತನಾಡಿ, ಅವಳಿ ಜಿಲ್ಲೆಯಲ್ಲಿ ನೇರ ಸ್ಪರ್ಧೆ ಇದ್ದು, ತಮಗೆ ಮತ ನೀಡಬೇಕೆಂದು ಮನವಿ ಮಾಡಿದರು.
ಜಿಲ್ಲಾಧ್ಯಕ್ಷ ಎಸ್.ಜಿ. ನಂಜಯ್ಯನಮಠ, ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ, ವಕೀಲ ಎನ್.ಎಸ್.ದೇವರವರ ಮಾತನಾಡಿದರು. ಶ್ರೀಶೈಲ ದಳವಾಯಿ, ಅರ್ಜುನ ದಳವಾಯಿ, ನಗರಸಭೆ ಅಧ್ಯಕ್ಷ ಸಿದ್ದು ಮೀಶಿ, ಅಭಯಕುಮಾರ ನಾಂದ್ರೇಕರ, ನಜೀರ ಕಂಗನ್ನೋಳಿ, ಅರುಣಕುಮಾರ ಶಹಾ, ಮಹೇಶ ಕೋಳಿ, ಮುತ್ತಣ್ಣ ಹಿಪ್ಪರಗಿ, ಶ್ಯಾಮರಾವ ಘಾಟಗೆ, ಶ್ರೀಮಂತ ಚೌರಿ, ಸುಭಾಸ ಪಾಟೋಳಿ, ಕೀರ್ತಿ ಉತ್ಲಾಸ್ಕರ, ಸುಮಿತ್ರ ಗುಳಬಾಳ, ಸುರೇಖಾ ನಾಡಗೇರ, ಫಕೀರಸಾಬ ಬಾಗವಾನ, ಈಶ್ವರ ವಾಳೇನ್ನವರ ಅನೇಕರು ಇದ್ದರು.