‘ಉಮಾಶ್ರೀ ಅವರನ್ನು ನೋಡಿದಾಗಲೆಲ್ಲ ಮಾಲಾಶ್ರೀ ಎಂದೇ ಕರೆಯುತ್ತೇನೆ, ಉಮಾಶ್ರೀ ಎಂಬ ಹೆಸರೇ ನೆನಪಿಗೆ ಬರುವುದಿಲ್ಲ. ವಕೀಲಿಕಿ ಮಾಡುವಾಗ ನಾನು ಮಾಲಾಶ್ರೀ ಫ್ಯಾನ್ ಆಗಿದ್ದೆ..!’
ವಿಧಾನ ಪರಿಷತ್ (ಡಿ.16): ‘ಉಮಾಶ್ರೀ ಅವರನ್ನು ನೋಡಿದಾಗಲೆಲ್ಲ ಮಾಲಾಶ್ರೀ ಎಂದೇ ಕರೆಯುತ್ತೇನೆ, ಉಮಾಶ್ರೀ ಎಂಬ ಹೆಸರೇ ನೆನಪಿಗೆ ಬರುವುದಿಲ್ಲ. ವಕೀಲಿಕಿ ಮಾಡುವಾಗ ನಾನು ಮಾಲಾಶ್ರೀ ಫ್ಯಾನ್ ಆಗಿದ್ದೆ..!’ ಪರಿಷತ್ತಿನ ಹಿರಿಯ ಸದಸ್ಯ ಎಚ್.ವಿಶ್ವನಾಥ್ ಅವರು ವಿಧೇಯಕವೊಂದರ ಮೇಲೆ ನಡೆದ ಚರ್ಚೆಯ ವೇಳೆ ಹೀಗೆ ಹೇಳಿದ್ದು ಕೆಲಕಾಲ ಸ್ವಾರಸ್ಯಕರ ಚರ್ಚೆಗೆ ಕಾರಣವಾಯಿತು.
ಹಿಂದುಳಿದ ವರ್ಗಗಳಿಗೆ ಸರ್ಕಾರಿ ಕಾಮಗಾರಿಗಳಗುತ್ತಿಗೆಯಲ್ಲಿ ಮೀಸಲಾತಿ ಕಲ್ಪಿಸುವ ತಿದ್ದುಪಡಿ ವಿಧೇಯಕ ಕುರಿತು ಮಾತನಾಡುತ್ತಿದ್ದ ವಿಶ್ವನಾಥ್ ಅವರು, ಮಾಲಾಶ್ರೀ ಅವರು ಉತ್ತಮವಾಗಿ ಮಾತನಾಡಿದರು ಎಂದು ಹೇಳಿದರು. ಕೂಡಲೇ ಬಿಜೆಪಿಯತೇಜಸ್ವಿನಿಗೌಡ ಅವರು, ಹಿಂದೆ ಹಿಂದಿ ಚಿತ್ರರಂಗದಲ್ಲಿ ಕನಸಿನ ಕನ್ಯೆ ಎಂದು ಹೇಮಾಮಾಲಿನಿಗೆ ಹೇಳುತ್ತಿದ್ದರು. ಅದೇ ರೀತಿ ಮಾಲಾಶ್ರೀ ಅವರು ಸಹ ಒಂದು ಕಾಲದಲ್ಲಿ ಅನೇಕರ ಕನಸಿನ ಕನ್ಯೆಯಾಗಿದ್ದರು ಎಂದರು.
ಇದಕ್ಕೆ ಸಭಾಪತಿ ಹೊರಟ್ಟಿ ಅವರು ಈ ವಯಸ್ಸಿಗೆ ವಿಶ್ವನಾಥ ಅವರ ಕನಸಿನಲ್ಲಿ ಯಾಕೆ ಬರಬೇಕು ಎಂದು ನಗುತ್ತಾ ಪ್ರತಿಕ್ರಿಯಿಸಿದರು.ಅದಕ್ಕೆ ವಿಶ್ವನಾಥ್ ಅವರು ಕಲಾಭಿರುಚಿ ಎಂದರೆ ಒಂದು ರೀತಿಯ ಹುಣಸೆ ಮರ ಇದ್ದಂತೆ. ನಾನು ವಕೀಲಿಕೆ ಮಾಡುವಾಗ ಮಾಲಾಶ್ರೀ ಫ್ಯಾನ್ ಆಗಿದ್ದೆ. ಅದ್ಯಾಕೋ ಗೊತ್ತಿಲ್ಲ ಉಮಾಶ್ರೀ ಅವರನ್ನು ನೋಡಿದಾಗಲೆಲ್ಲ ಮಾಲಾಶ್ರೀ ಎಂದೇ ಕರೆಯುತ್ತೇನೆ ಎಂದರು.
ಸಂಸದ ಪ್ರತಾಪ್ ಸಿಂಹ ಅಪ್ಪಟ ಹಿಂದುತ್ವವಾದಿ: ಕೆ.ಎಸ್.ಈಶ್ವರಪ್ಪ
ಈ ನಡುವೆ ತೇಜಸ್ವಿನಿಗೌಡ ಅವರು ಉಮಾಶ್ರೀ ಅವರಿಗೆ ನಾಯಕಿಯಾಗುವ ಎಲ್ಲ ಅರ್ಹತೆ ಇದ್ದರೂ ನಾಯಕಿ ಪಾತ್ರ ಸಿಗಲಿಲ್ಲ ಎಂದರು. ಅದಕ್ಕೆ ಉಮಾಶ್ರೀ ಅವರು ರಂಗಭೂಮಿಯಲ್ಲಿ ಪಾತ್ರಗಳ ನಡುವೆ ಭೇದ-ಭಾವ ಇರುವುದಿಲ್ಲ. ಆದರೆ ಚಿತ್ರರಂಗದಲ್ಲಿ ನಾಯಕಿ, ಪೋಷಕ ಪಾತ್ರ ಎಂದೆಲ್ಲ ಭೇದವಿರುತ್ತದೆ. ನಾಯಕಿ ಪಾತ್ರ ಸಿಗಲಿಲ್ಲ ಎಂಬ ಕೊರಗು ಇತ್ತು.ಆದರೆ ‘ಗುಲಾಬಿ ಟಾಕೀಸ್’ನಲ್ಲಿ ನಾಯಕಿ ಪಾತ್ರಕ್ಕೆ ರಾಷ್ಟ್ರ, ಅಂತಾರಾಷ್ಟ್ರೀಯ ಪ್ರಶಸ್ತಿ ದೊರೆತಿದ್ದು ಸಾರ್ಥಕವಾಯಿತು ಎಂದು ಹೇಳಿದರು.