
ಪ್ರಧಾನಿಯಾಗಿದ್ದ ರಾಜೀವ್ ಗಾಂಧಿ ಅವರು ನಿಧನರಾಗಿ ಬರುವ ಮೇ 21ಕ್ಕೆ 35 ವರ್ಷಗಳಾಗುತ್ತವೆ. ಈ ಸಂದರ್ಭದಲ್ಲಿ ರಾಜೀವ್ ಗಾಂಧಿ ಮತ್ತು ಸೋನಿಯಾ ಅವರ ರೋಚಕ ಲವ್ ಸ್ಟೋರಿಯೊಂದು ಇದೀಗ ಬಹಿರಂಗಗೊಂಡಿದೆ. ಪತ್ನಿ ಸೋನಿಯಾ ಅವರನ್ನು ರಾಜೀವ್ಗಾಂಧಿ ಎಷ್ಟು ಪ್ರೀತಿಸುತ್ತಿದ್ದರು ಎಂದರೆ, ಇಡೀ ನೇಪಾಳವನ್ನೇ ಎದುರು ಹಾಕಿಕೊಂಡಿದ್ದರು. ಅದ್ಯಾವ ಪರಿಯಲ್ಲಿ ಎದುರು ಹಾಕಿಕೊಂಡಿದ್ದರು ಎಂದರೆ, ಇಂದಿಗೂ ನೇಪಾಳ ಮತ್ತು ಭಾರತದ ನಡುವಿನ ಬಾಂಧವ್ಯ ಮೊದಲಿನಂತೆ ಆಗಲೇ ಇಲ್ಲ!
ಈ ಸ್ಟೋರಿ ನಡೆದದ್ದು 1988ರಲ್ಲಿ. ಎಲ್ಲರಿಗೂ ತಿಳಿದಿರುವಂತೆ ಸೋನಿಯಾ ಗಾಂಧಿ ಅವರು ಕ್ರೈಸ್ತ ಸಮುದಾಯದವರು. ಮದುವೆಯಾದ ಬಳಿಕ ರಾಜೀವ್ ಗಾಂಧಿ ಅವರು, ಪತ್ನಿಯನ್ನು ಕರೆದುಕೊಂಡು ನೇಪಾಳದ ಪಶುಪತಿನಾಥ ದೇವಾಲಯಕ್ಕೆ ಹೋಗಿದ್ದರು. ಆದರೆ ಅಲ್ಲಿ ಸೋನಿಯಾ ಗಾಂಧಿಗೆ ಪ್ರವೇಶ ನಿರಾಕರಿಸಲಾಯಿತು. ರಾಜೀವ್ ಗಾಂಧಿ ಅವರು ಪರಿಪರಿಯಾಗಿ ಬೇಡಿಕೊಂಡರೂ ಅದಕ್ಕೆ ದೇವಾಲಯದವರು ಒಪ್ಪಿಕೊಳ್ಳಲೇ ಇಲ್ಲ. ಇದು ರಾಜೀವ್ ಗಾಂಧಿ ಅವರ ಕೋಪಕ್ಕೆ ಕಾರಣವಾಯಿತು. ಇದರಿಂದ ಅವರು ಭಾರತ ಮತ್ತು ನೇಪಾಳ ವ್ಯಾಪಾರಕ್ಕೇ ದಿಗ್ಬಂಧನ ಹೇರಿಬಿಟ್ಟರು. ರಾಜತಾಂತ್ರಿಕ ಬಿಕ್ಕಟ್ಟು ಉಂಟಾಯಿತು. ವ್ಯಾಪಾರ ಮತ್ತು ಸಾರಿಗೆ ಒಪ್ಪಂದಗಳ ಅವಧಿ ಮುಗಿದ ನಂತರ, ಭಾರತವು ಮಾರ್ಚ್ 1989 ರಲ್ಲಿ ಹೆಚ್ಚಿನ ಗಡಿ ದಾಟುವಿಕೆಗಳನ್ನು ಮುಚ್ಚಿತು, ಇದರಿಂದಾಗಿ ನೇಪಾಳದಲ್ಲಿ ಇಂಧನ, ಉಪ್ಪು ಮತ್ತು ಅಗತ್ಯ ವಸ್ತುಗಳ ತೀವ್ರ ಕೊರತೆ ಉಂಟಾಯಿತು.
ಇದರಿಂದ ನೇಪಾಳವು ಚೀನಾಕ್ಕೆ ಹತ್ತರವಾಯಿತು. ಚೀನಾದ ವಿಮಾನ ವಿರೋಧಿ ಬಂದೂಕುಗಳನ್ನು ಖರೀದಿಸುವುದರ ಜೊತೆಗೆ ಈ ಘಟನೆಯು ಭಾರತವು ಬೃಹತ್ ವ್ಯಾಪಾರ ನಿರ್ಬಂಧವನ್ನು ವಿಧಿಸಲು ಕಾರಣವಾಯಿತು. ನೇಪಾಳವು ಚೀನಾದಿಂದ ಶಸ್ತ್ರಾಸ್ತ್ರಗಳನ್ನು ಖರೀದಿಸುವುದರ ಕುರಿತಾದ ಭದ್ರತಾ ಕಾಳಜಿಗಳು ಮತ್ತು ಹೊಸ ಒಪ್ಪಂದಗಳನ್ನು ಮರು ಮಾತುಕತೆ ಮಾಡುವಲ್ಲಿ ವಿಫಲವಾದ ಕಾರಣ ದಿಗ್ಬಂಧನವು ಅಧಿಕೃತವಾಗಿ ನೇಪಾಳವನ್ನು ಚೀನಾಕ್ಕೆ ಹತ್ತಿರಕ್ಕೆ ತಳ್ಳಿತು.
1989 ರ ದಿಗ್ಬಂಧನವು ಅಂತಿಮವಾಗಿ ನೇಪಾಳದಲ್ಲಿ ರಾಜಕೀಯ ಅಸ್ಥಿರತೆಗೆ ಕಾರಣವಾಯಿತು ಮತ್ತು ಆ ಸಮಯದಲ್ಲಿ ಭಾರತ ವಿರೋಧಿ ಭಾವನೆಯನ್ನು ತೀವ್ರಗೊಳಿಸಿತು, ಇದು 1990 ರಲ್ಲಿ ಪಂಚಾಯತ್ ವ್ಯವಸ್ಥೆಯ ಕುಸಿತಕ್ಕೆ ಕಾರಣವಾಯಿತು. ಇದಾದ ಬಳಿಕ ಭಾರತ ಮತ್ತು ನೇಪಾಳದ ನಡುವೆ ದ್ವೇಷ ಹೆಚ್ಚುತ್ತಲೇ ಸಾಗಿತು. ಇದರ ಲಾಭ ಪಡೆದದ್ದು ಚೀನಾ. ಘಟನೆ ನಡೆದು ಇಷ್ಟು ವರ್ಷಗಳಾದರೂ ಭಾರತ ಮತ್ತು ನೇಪಾಳ ಆ ಮುಂಚಿನ ಮೈತ್ರಿಗೆ ಬರಲೇ ಇಲ್ಲ ಎನ್ನುತ್ತದೆ ರಾಜಕೀಯ ಮೂಲಗಳು. ಇದು ರಾಜೀವ್ ಗಾಂಧಿ ಅವರಿಗೆ ಪತ್ನಿಯ ಮೇಲಿದ್ದ ಪ್ರೀತಿಯನ್ನು ಸಾರುತ್ತದೆ ಎಂದು ಬಣ್ಣಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.