ಶಾಮನೂರು ಶಿವಶಂಕರಪ್ಪ ಏನು ಹೇಳಿದರು ನನಗೆ ಆಶೀರ್ವಾದವೇ - ಸಂಸದ ಜಿ ಎ‌ಂ ಸಿದ್ದೇಶ್ವರ್ 

By Ravi Janekal  |  First Published Jun 17, 2023, 2:13 PM IST

ಹಿರಿಯರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಏನು ಹೇಳಿದರು ನನಗೆ ಆಶೀರ್ವಾದವೇ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಅವರು ಹಣ ನೀಡಿದರೆ ಖಂಡಿತಾಗಿ ಪಡೆದುಕೊಳ್ಳುವೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದ್ದಾರೆ.


ವರದಿ: ವರದರಾಜ್

ದಾವಣಗೆರೆ.(ಜೂ17) : ಹಿರಿಯರು ಹಾಗೂ ಶಾಸಕರಾದ ಶಾಮನೂರು ಶಿವಶಂಕರಪ್ಪ ಏನು ಹೇಳಿದರು ನನಗೆ ಆಶೀರ್ವಾದವೇ ಲೋಕಸಭಾ ಚುನಾವಣೆಗೆ ಸ್ಪರ್ಧೆ ಮಾಡಲು ಅವರು ಹಣ ನೀಡಿದರೆ ಖಂಡಿತಾಗಿ ಪಡೆದುಕೊಳ್ಳುವೆ ಎಂದು ಸಂಸದ ಜಿ.ಎಂ ಸಿದ್ದೇಶ್ವರ್ ಹೇಳಿದ್ದಾರೆ.

Tap to resize

Latest Videos

ನಗರದ ಜಿಎಂಐಟಿ ಕಾಲೇಜಿನ ಅತಿಥಿಗೃಹದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಶಾಮನೂರು ಶಿವಶಂಕರಪ್ಪನವರು
ನನ್ನ ಸೋಲು ನೋಡಬೇಕು ಎಂದು ಹೇಳಿರುವುದೇ ನನಗೆ ಆಶೀರ್ವಾದ. 2019 ರವರೆಗೂ ಆಶೀರ್ವಾದ ಮಾಡಿದ್ದಾರೆ ಮುಂದೆಯೂ ಅವರ ಆಶೀರ್ವಾದ ನನ್ನ ಮೇಲಿದೆ ಎಂದರು. ನಾನು ಸೋಲುವುದನ್ನು ನೋಡಬೇಕು ಅದಕ್ಕಾಗಿ ಫಂಡ್ ನೀಡುತ್ತೇನೆ ಎಂದಿದ್ದಾರೆ ಎನ್ನುವ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಶಾಮನೂರು ಶಿವಶಂಕರಪ್ಪ ಅವರುಹಿರಿಯರು ಅವರ ಬಗ್ಗೆ ಬಹಳ ಗೌರವವಿದೆ 2004 ರಿಂದ ನಾವು ಸೋಲುವುದು ನೋಡಿಕೊಂಡು ಬರುತ್ತಿದ್ದಾರೆ ಮುಂದೆಯೂ ಸೋಲುವುದು ನೋಡುತ್ತಾರೆ ಎಂದರು.

ಸಿದ್ದೇಶ್ವರ್‌ಗೆ ಟಿಕೆಟ್ ಸಿಕ್ಕರೆ ತಂದು ಎಂಪಿ ಚುನಾವಣೆಗೆ ನಿಲ್ಲಲಿ, ನಾನೇ ಫಂಡ್ ಮಾಡುತ್ತೇನೆ: ಶಾಮನೂರು ಶಿವಶಂಕರಪ್ಪ

ಈ ಬಾರಿ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಸೋಲಿಗೆ ಕಾರಣ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್  ಹಾಗೂ ಪಕ್ಷದಿಂದ ಟಿಕೇಟ್ ಬೇಗ ಹಂಚಿದ್ದರೆ ನಾವು ಕೂಡ ಗೆಲ್ಲುತ್ತಿದ್ದೆವು ಇದರಿಂದ ನಮಗೆ ಹಿನ್ನೆಡೆಯಾಗಿದೆ. ನಾವೆಲ್ಲಾ ಒಮ್ಮತದಿಂದ ಕೆಲಸ ಮಾಡಿದ್ದೇವೆ.ಪ್ರಚಾರಕ್ಕೆ ಎಲ್ಲಾ ಕಡೆ ತೆರಳಿದ್ದೇನೆ.ಮೊದಲಿಗಿಂತ ಹೆಚ್ಚು ಕೆಲಸ ಮಾಡಿದ್ದೇನೆ ಎಂದರು.

ಜಿಲ್ಲೆಯಲ್ಲಿ ಕಾಂಗ್ರೆಸ್ ನ ಆರು ಶಾಸಕರಿದ್ದಾರೆ 2013 ರಲ್ಲಿ ಬಿಜೆಪಿ ಸರ್ಕಾರ ಇರಲಿಲ್ಲ ತಾ.ಪಂ ಜಿ.ಪಂ ಹಾಗೂ ಪಾಲಿಕೆ ಸದಸ್ಯರು ಇರಲಿಲ್ಲ ಅಂತಹ ವೇಳೆ 13 ಸಾವಿರ ಮತದ ಅಂತರದಿಂದ ಗೆದ್ದಿದ್ದೇನೆ. ಮೋದಿ ಹವಾದಿಂದ ಗೆದ್ದಿದ್ದೇನೆ ಎನ್ನುತ್ತಾರೆ. ನಮ್ಮ ತಂದೆಯವರಿದ್ದಾಗ ಯಾವ ಹವಾ ಇತ್ತು ಎಸ್ ಎಸ್ ಅವರನ್ನೇ ಕೇಳಿ ಎಂದ ಅವರು ಈ ಚುನಾವಣೆಯಲ್ಲಿ‌ ಅವರು ಯಾವ ಹವಾದಿಂದ ಗೆದ್ದಿದ್ದಾರೆ ಎಂದು ಪ್ರಶ್ನಿಸಿದರು.ಸೋತಾಗಾ ಎಲ್ಲರೂ ಕಲ್ಲು ಹೊಡೆಯುವುದು ಸಹಜ.ಸೋಲು ಗೆಲುವು ಸಹಜ ಮುಂದೆ ಮತ್ತೆ ಗೆಲುವು ಸಾಧಿಸಲಿದ್ದೇವೆ. ವಿದ್ಯುತ್ ಹೊರೆ ಜನತೆಯ ಮೇಲೆ ಆಗುತ್ತಿದೆ.ಗ್ಯಾರಂಟಿ ವಿಚಾರದಲ್ಲಿ ಕಾಂಗ್ರೆಸ್ ನವರು ಡಬಲ್ ಗೇಮ್ ಮಾಡುತ್ತಿದ್ದಾರೆ. ಐದು ಗ್ಯಾರಂಟಿ ಪೂರೈಕೆ ಮಾಡಲು ಸಾಧ್ಯವಿಲ್ಲ.

ಬೊಮ್ಮಾಯಿ ಹೇಗೆ ಅಳಿಯನೋ ಸಿದ್ದೇಶ್ವರ ಸಹ ನನಗೆ ಅಳಿಯ, ಸಂಬಂಧಿ: ಶಾಮನೂರು ಶಿವಶಂಕರಪ್ಪ

ಯಡಿಯೂರಪ್ಪ ಅವರನ್ನು ಸೈಡ್ ಲೈನ್ ಮಾಡಿಲ್ಲ. ಅವರು ರಾಜ್ಯದಲ್ಲಿ ಮತ್ತೆ ಪ್ರಚಾರ ಆರಂಭಿಸಲಿದ್ದಾರೆ.ಅವರು ಹಿರಿಯರು ಬಿಜೆಪಿಯಲ್ಲಿ ಅವರಿಗೆ ಗೌರವವಿದೆ ಎಂದರು.

ಸ್ಮಾರ್ಟ್ ಸಿಟಿ ಯೋಜನೆಯಡಿ ನಡೆದಿರುವ ಕಾಮಗಾರಿಗಳು ಸಾಕಷ್ಟು
ಕಳಪೆಯಾಗಿವೆ ಎಂಬ ದೂರು ಬಂದಿದೆ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಅವರು ಕಳಪೆ ಕಾಮಗಾರಿಯಾಗಿದ್ದರೆ ತನಿಖೆ ಮಾಡಿಸಲಿ ಎಂದರು.

click me!