ಮೇಕೆದಾಟು ಯೋಜನೆಯಲ್ಲಿ ಕಾಂಗ್ರೆಸ್‌ ನಿಲುವೇನು?: ಪ್ರಲ್ಹಾದ್‌ ಜೋಶಿ

By Kannadaprabha NewsFirst Published Mar 23, 2024, 1:28 PM IST
Highlights

ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಕಾಂಗ್ರೆಸ್‌ ನಿಲುವೇನು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು.

ಹುಬ್ಬಳ್ಳಿ (ಮಾ.23): ಮೇಕೆದಾಟು ಯೋಜನೆಯನ್ನು ವಿರೋಧಿಸುತ್ತಿರುವ ಡಿಎಂಕೆ ತನ್ನ ಚುನಾವಣಾ ಪ್ರಣಾಳಿಕೆಯಲ್ಲಿ ಆ ಯೋಜನೆಗೆ ಅವಕಾಶ ನೀಡುವುದಿಲ್ಲ ಎಂದು ಹೇಳಿದೆ. ಈ ಬಗ್ಗೆ ಕಾಂಗ್ರೆಸ್‌ ನಿಲುವೇನು ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದರು. ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೋವಿಡ್‌ ಸಂದರ್ಭದಲ್ಲಿ ಕಾಂಗ್ರೆಸ್‌ ನಮ್ಮ ನೀರು, ನಮ್ಮ ಹಕ್ಕು ಎಂದು ಪಾದಯಾತ್ರೆ ಮಾಡಿತಲ್ಲದೇ ದೆಹಲಿಯಲ್ಲೂ ಪ್ರತಿಭಟನೆ ನಡೆಸಿತು. ಈಗ ಅವರದೇ ಮೈತ್ರಿ ಪಕ್ಷ ಡಿಎಂಕೆ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ. ಅದಕ್ಕಾಗಿ ಕಾಂಗ್ರೆಸ್‌ ರಾಜ್ಯದ ಜನರಿಗೆ ತಮ್ಮ ನಿಲುವು ಏನು ಎಂಬುದನ್ನು ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು.

ನಾವು ಸೀಜ್‌ ಮಾಡಿಲ್ಲ: ಕಾಂಗ್ರೆಸ್‌ ಬ್ಯಾಂಕ್‌ ಖಾತೆಯನ್ನು ಕೇಂದ್ರ ಸರ್ಕಾರ ಸೀಜ್‌ ಮಾಡಿಲ್ಲ. ಅವರು ತೆರಿಗೆ ಪಾವತಿ ಮಾಡದೇ ಇರುವುದರಿಂದ ಅಕೌಂಟ್‌ ಸೀಜ್‌ ಆಗಿದೆ. ನಮ್ಮನ್ನು ವೀಕ್‌ ಮಾಡಲು ಬಿಜೆಪಿ ಮಾಡುತ್ತಿದೆ ಎಂಬ ಕಾಂಗ್ರೆಸ್‌ ಆರೋಪಕ್ಕೆ ನಾವೇಕೆ ಕಾಂಗ್ರೆಸ್‌ ವೀಕ್‌ ಮಾಡೋಣ? ಜನರೇ ಕಾಂಗ್ರೆಸ್‌ನ್ನು ವೀಕ್‌ ಮಾಡಿದ್ದಾರೆ ಎಂದು ಛೇಡಿಸಿದರು. ಇ.ಡಿ. ಇಲಾಖೆ ದೆಹಲಿ ಮುಖ್ಯಮಂತ್ರಿಗೆ ವಿಚಾರಣೆಗೆ ಹಾಜರಾಗುವಂತೆ 9 ಬಾರಿ ನೋಟಿಸ್‌ ನೀಡಿತ್ತು. ಅವರು ವಿಚಾರಣೆಗೆ ಹಾಜರಾಗದೇ ಅಸಹಕಾರ ಮಾಡಿದ್ದರಿಂದ ಇ.ಡಿ.ಯೇ ಅವರನ್ನು ಬಂಧಿಸಿದೆಯೇ ಹೊರತು ಇದರಲ್ಲಿ ಕೇಂದ್ರದ ಪಾತ್ರವೇನು ಇಲ್ಲ ಎಂದು ಸ್ಪಷ್ಟಪಡಿಸಿದರು.

ಪ್ರಧಾನಿ ಮೋದಿ ಸರ್ವಾಧಿಕಾರಿ ಆಡಳಿತ ಕೊನೆಗಾಣಿಸಿ: ಕಿಮ್ಮನೆ ರತ್ನಾಕರ್ ವಾಗ್ದಾಳಿ

ಕೇಜ್ರಿವಾಲ್‌ ಬಹಳ ದುರಹಂಕಾರಿ, ತನಿಖೆಗೆ ಸಹಕಾರ ನೀಡದೆ ಮೊಂಡುತನ ಪ್ರದರ್ಶನ ಮಾಡಿದ್ದಾರೆ. ಅಲ್ಲದೇ ಅಣ್ಣಾ ಹಜಾರೆ ಅವರ ಭ್ರಷ್ಟಾಚಾರದ ವಿರುದ್ಧ ಹೋರಾಟದ ಮೂಲಕ ಅಧಿಕಾರಕ್ಕೆ ಬಂದ ಆಪ್‌, ಇದೀಗ ಆ ಪಕ್ಷವೇ ಭ್ರಷ್ಟಾಚಾರದಲ್ಲಿ ಸಿಲುಕಿದೆ ಎಂದು ಹೇಳಿದರು. ಧಾರವಾಡ ಲೋಕಸಭೆಗೆ ಶಿರಹಟ್ಟಿ ಫಕ್ಕೀರೇಶ್ವರ ಸಂಸ್ಥಾನಮಠದ ಶ್ರೀ ದಿಂಗಾಲೇಶ್ವರ ಸ್ವಾಮೀಜಿ ಸ್ಪರ್ಧೆ ಮಾಡುತ್ತಾರೆ ಎನ್ನುವ ವಿಚಾರದ ಬಗ್ಗೆ ನನಗೆ ಯಾವುದೇ ಮಾಹಿತಿ ಇಲ್ಲ. ಹೀಗಾಗಿ ಈ ಬಗ್ಗೆ ಮಾತನಾಡುವುದು ಸರಿಯಲ್ಲ. ಅವರು ಸ್ಪರ್ಧೆಗೆ ಬಂದ ಮೇಲೆ ನೋಡೋಣ ಎಂದು ಹೇಳಿದರು.

ಬಿಜೆಪಿ ಟಿಕೆಟ್‌ ಶೆಟ್ಟರ್‌ ಸಿಗುವ ಸಾಧ್ಯತೆ: ಬೆಳಗಾವಿ ಲೋಕಸಭಾ ಚುನಾವಣೆಗೆ ಬಹುತೇಕ ಜಗದೀಶ ಶೆಟ್ಟರ್‌ ಅಭ್ಯರ್ಥಿ ಆಗುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದರು. ಸಿಲಿಂಡರ್‌ ಸ್ಫೋಟದಿಂದ ಗಾಯಗೊಂಡಿದ್ದ ಕಲ್ಲೆ ಗ್ರಾಮದ ಗಾಯಾಳುಗಳಿಗೆ ಸ್ವಾಂತ್ವನ ಹೇಳಿದ ಅವರು, ಬೆಳಗಾವಿ ಟಿಕೆಟ್‌ ಶೆಟ್ಟರ್‌ಗೆ ಸಿಗುವ ಸಾಧ್ಯತೆ ಹೆಚ್ಚಿದೆ ಎಂದರು. ಇನ್ನು, ಕರಡಿ ಸಂಗಣ್ಣ ಜತೆ ನಾನು ಮಾತಾಡಿದ್ದೇನೆ. ನಾನು ಪಕ್ಷ ಬಿಡುವುದಿಲ್ಲ ಎಂದು ಹೇಳಿದ್ದಾರೆ. ಅವರು ರೆಬೆಲ್ ಆಗಿ ಕಣಕ್ಕೆ ಇಳಿಯುವ ಪ್ರಶ್ನೆಯೇ ಇಲ್ಲ. 

Lok Sabha Election 2024: ರಾಜಕೀಯ ವಿರೋಧಿಗಳ ಬೇಟೆಯಾಡಲು ಡಿಕೆಶಿ ರಣತಂತ್ರ

ಕೇವಲ ಬೆಂಬಲಿಗರ ಸಭೆ ಮಾಡುವುದಾಗಿ ಅವರು ಹೇಳಿದ್ದಾರೆ ಎಂದರು. ಇನ್ನು ಮಾಧುಸ್ವಾಮಿ ಜತೆ ಬಿ.ಎಸ್‌. ಯಡಿಯೂರಪ್ಪ ಮಾತನಾಡುತ್ತಾರೆ. ಉಳಿದ ಆಕಾಂಕ್ಷಿಗಳೊಂದಿಗೆ ಪಕ್ಷದ ಮುಖಂಡರು ಮಾತನಾಡಿ ಅಸಮಾಧಾನ ಶಮನ ಮಾಡುತ್ತಾರೆ ಎಂದು ಜೋಶಿ ಹೇಳಿದರು. ಇದಕ್ಕೂ ಮುಂಚೆ ಸಿಲಿಂಡರ್‌ ಪ್ರಕರಣದಲ್ಲಿ ಗಾಯಾಳುಗಳಿಗೆ ಸಾಂತ್ವನ ಹೇಳಿದ ಅವರು, ಸಂಬಂಧಪಟ್ಟವರಿಗೆ ಸೂಕ್ತ ಪರಿಹಾರ ನೀಡಲು ಹೇಳಿದ್ದೇನೆ. ಸುಮಾರು ₹ 6 ಲಕ್ಷ ಪರಿಹಾರ ಸಿಗಬಹುದು ಎಂದರು.

click me!