ಮೆಷಿನ್ ದಕ್ಷಿಣ್ - ಬಿಜೆಪಿ ಗೆಲುವಿಗೆ ಮೋದಿ ಸೂಚನೆ ಏನು?

Published : Jul 04, 2022, 03:51 PM ISTUpdated : Jul 04, 2022, 04:01 PM IST
ಮೆಷಿನ್ ದಕ್ಷಿಣ್ - ಬಿಜೆಪಿ ಗೆಲುವಿಗೆ ಮೋದಿ ಸೂಚನೆ ಏನು?

ಸಾರಾಂಶ

 ಈಶಾನ್ಯ ರಾಜ್ಯವನ್ನು ಕಬ್ಜ ಮಾಡಿಕೊಂಡ ರೀತಿಯಲ್ಲೇ ದಕ್ಷಿಣದ ರಾಜ್ಯಗಳಲ್ಲಿ ತಮ್ಮ ಪ್ರಭಲ ಅಸ್ತಿತ್ವ ಸ್ಥಾಪಿಸಲು ಮೋದಿ ಅಮಿತ್ ಶಾ ಜೋಡಿ ಸಿದ್ಧವಾಗಿದ್ದಾರೆ.

ವರದಿ: ರವಿ ಶಿವರಾಮ್, ಏಷ್ಯಾನೆಟ್ ಸುವರ್ಣ ನ್ಯೂಸ್ 

ನವದೆಹಲಿ (ಜು.4): ನರೇಂದ್ರ ಮೋದಿ ಪ್ರಧಾನಿ ಆದಮೇಲೆ ರಾಜರುಗಳು ದಂಡಯಾತ್ರೆ ಕೈಗೊಳ್ಳುತ್ತಿದಂತೆ  ಒಂದಾದ ಮೇಲೆ ಒಂದು ರಾಜ್ಯಗಳನ್ನು ಗೆಲ್ಲುತ್ತಲೇ ಬರುತ್ತಿದ್ದಾರೆ. ಕೇವಲ ಉತ್ತರ ಭಾರತದಲ್ಲಿ ಮಾತ್ರ ಬಿಜೆಪಿಗೆ ನೆಲೆ ಈಶಾನ್ಯ ರಾಜ್ಯಗಳಲ್ಲಿ ಬಿಜೆಪಿ ಬೇರು ಊರೋದು ಕಷ್ಟ ಸಾಧ್ಯ ಎನ್ನುತ್ತಿದ್ದವರಿಗೆ ಮೋದಿ ಅಮಿತ್ ಶಾ ಜೋಡಿ ಉತ್ತರ ನೀಡಿದ್ದಾರೆ. ಮೊದಲಿಗೆ ಅರುಣಾಚಲ ಪ್ರದೇಶದಲ್ಲಿ ಬಿಜೆಪಿ ಜಂಡಾ ಹಾರಿಸುವ ಮೂಲಕ, ಮೇಘಾಲಯ, ಮಣಿಪುರ, ಅಸ್ಸಾಂ ಸೇರಿದಂತೆ ನಾಗಾಲ್ಯಾಂಡ್ ನಲ್ಲಿ ಬಿಜೆಪಿ ಮೈತ್ರಿ ಸರ್ಕಾರ, ಹೀಗೆ ಈಶಾನ್ಯ ರಾಜ್ಯಗಳನ್ನು ಗೆಲ್ಲುವು ಮೂಲಕ  ಅಸಾಧ್ಯವನ್ನು ಸಾಧ್ಯವಾಗಿಸಿದ ಕೀರ್ತಿ ಮೋದಿ - ಅಮಿತ್ ಶಾ ಜೋಡಿಗೆ ಸಲ್ಲುತ್ತದೆ.

ಈಗ ದಕ್ಷಿಣ ಭಾರತದ ಮೇಲೆ ಮೋದಿ ಕಣ್ಣು
ಈಶಾನ್ಯ ರಾಜ್ಯಗಳಿಗೆ ಹೋಲಿಕೆ ಮಾಡಿದ್ರೆ ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಸಂಘಟನೆ ಇದೆ.‌ ಮಹಾರಾಷ್ಟ್ರ, ಕರ್ನಾಟಕ, ಪುದುಚೇರಿ ಹೀಗೆ ಈ ಮೂರು ಕಡೆಗಳಲ್ಲಿ ಬಿಜೆಪಿ ಈಗಾಗಲೇ ಅಧಿಕಾರ ಹಿಡಿದಿದೆ.‌ ಆದರೆ ಕೇರಳ, ತೆಲಂಗಾಣ, ಹೈದ್ರಾಬಾದ್, ತಮಿಳುನಾಡು ಈ ರಾಜ್ಯಗಳಲ್ಲಿ ಬಿಜೆಪಿಗೆ ನೆಲೆ ಇಲ್ಲ. ಹೀಗಾಗಿ ಉತ್ತರದಲ್ಲಿ ಗೆದ್ದು , ಈಶಾನ್ಯದಲ್ಲಿ ಅಧಿಕಾರ ಸ್ಥಾಪಿಸಿ, ದಕ್ಷಿಣದಲ್ಲಿ ಕೂರಲು ಜಾಗ ಹುಡುಕುತ್ತಿರುವ ಬಿಜೆಪಿ ರಣತಂತ್ರ ಹೆಣೆಯುತ್ತಿದೆ. ಹೀಗಾಗಿ ಆ ತಂತ್ರಕ್ಕೆ ಸಂಘಟನೆಗೆ ಮಿಷನ್ ದಕ್ಷಿಣ್ ಎಂದು ನಾಮಕರಣ ಮಾಡಿದ್ದಾರೆ. 

ನಾನೂ ನಾಲ್ಕು ಬಾರಿ ಸಿಎಂ ಆಗಿದ್ದೆ, ಗವರ್ನರ್‌ ನನಗೆ ಪೇಡಾ ತಿನ್ಸಿರ್ಲಿಲ್ಲ!

ದಕ್ಷಿಣಕ್ಕೆ ಮೋದಿ ಸಂದೇಶ ಏನು?
ಈಶಾನ್ಯ ರಾಜ್ಯಗಳಲ್ಲಿ ಮೊದಲು ಸ್ಥಳಿಯ ಪಕ್ಷಗಳ ಜೊತೆ ಹೊಂದಾಣಿಕೆ ಮಾಡಿಕೊಂಡು ನಿಧಾನಕ್ಕೆ ತನ್ನ ವಿಧಾನದ ಮೂಲಕ ಇಡಿ ಈಶಾನ್ಯ ರಾಜ್ಯವನ್ನು ಕಬ್ಜ ಮಾಡಿಕೊಂಡ ರೀತಿಯಲ್ಲೇ ದಕ್ಷಿಣದ ರಾಜ್ಯಗಳಲ್ಲಿ ತಮ್ಮ ಪ್ರಭಲ ಅಸ್ತಿತ್ವ ಸ್ಥಾಪಿಸಲು ಮೋದಿ ಅಮಿತ್ ಶಾ ಜೋಡಿ ಸಿದ್ಧವಾಗಿದ್ದು ದಕ್ಷಿಣ ರಾಜ್ಯದ ಪ್ರಮುಖ ಲೀಡರ್ಸ್ ಗೆ ಅನೇಕ ಸೂಚನೆ ನೀಡಿದ್ದಾರೆ. ಮೊನ್ನೆ ಹೈದ್ರಾಬಾದ್ ನಲ್ಲಿ ನಡೆದ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ಮೋದಿ ದಕ್ಷಿಣದ ನಾಯಕರಿಗೆ ಟಾಸ್ಕ್ ನೀಡಿದ್ದಾರೆ. ‌

ಮೋದಿ ಟಾಸ್ಕ್ ನಲ್ಲಿ ಏನೇನಿದೆ?: ಕರ್ನಾಟಕ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಸೇರಿದಂತೆ ,ಗೋವಾ ಸಿಎಂ‌ ಒಳಗೊಂಡು ಬಿಜೆಪಿ ಸಿಎಂ ಇರುವ ಎಲ್ಲಾ ಮುಖ್ಯಮಂತ್ರಿಗಳು, ಡಿಸಿಎಂಗಳು, ಮಾಜಿ ಡಿಸಿಎಂಗಳು ಸಭೆಯಲ್ಲಿ ಭಾಗಿ ಆಗಿದ್ರು.‌ ಈ ವೇಳೆ ಮೋದಿ ಇವರನ್ನೆಲ್ಲಾ ಉದ್ದೇಶಿಸಿ, ದಕ್ಷಿಣದ ರಾಜ್ಯಗಳಲ್ಲಿ ಹೆಚ್ಚು ಮೀನುಗಾರಿಕೆ ಕುಟುಂಬ ಇದೆ. ಅಂತಹ ಕುಟುಂಬದ ಸದಸ್ಯರ‌ ಒಳಗೊಂಡು ಸ್ವಸಹಾಯ ಸಂಘ ಮಾಡಿ.‌ಅವರಿಗೆ ಬೇಕಾದ ಅನುಕೂಲ ಮಾಡಿಕೊಡಿ.‌ ಕೇಂದ್ರ ಸರ್ಕಾರ‌ ಕೂಡ ರಾಜ್ಯ ಸರ್ಕಾರದ ಜೊತೆ ಕೈಜೋಡಿಸಲಿದೆ ಎಂದಿರುವ ಮೋದಿ ಅಭಿವೃದ್ಧಿ ಮೂಲಕ ಸಣ್ಣ ಸಣ್ಣ ಸಮುದಾಯದವನ್ನು ತಲುಪಲು ಸೂಚನೆ ನೀಡಿದ್ದಾರೆ.

ಇನ್ನಾರು ತಿಂಗಳಲ್ಲಿ ಶಿಂಧೆ ಸರ್ಕಾರ ಪತನ, ಚುನಾವಣೆಗೆ ಸಿದ್ಧರಾಗಿ: ಪವಾರ್‌!

ಅದೇ ರೀತಿ ಶಿಕ್ಷಕರ ದಿನಾಚರಣೆ ದಿನ ಶಿಕ್ಷಕರಿಗೆ ಸನ್ಮಾನ ಮಾಡಿ. ಆ ಮೂಲಕ ಪರೋಕ್ಷವಾಗಿ ಸುಶಿಕ್ಷಿತ ವರ್ಗವನ್ನು ರೀಚ್ ಮಾಡಲು ಪ್ಲಾನ್ ನೀಡಿದ್ದಾರೆ. ಸೈನಿಕ ಕುಟುಂಬಕ್ಕೆ , ಸೈನಿಕರಿಗೆ ಸನ್ಮಾನ‌ಮಾಡುವ ಮೂಲಕ ಸತ್ಕರಿಸಲು ಸೂಚನೆ ನೀಡಿದ್ದಾರೆ ಎಂದು ಬಿಜೆಪಿ ಮೂಲಗಳು ಹೇಳಿವೆ. ಸಾಮಾನ್ಯವಾಗಿ ಅಲ್ಪಸಂಖ್ಯಾತ ಸಮುದಾಯದ ಬಿಜೆಪಿಯಿಂದ ದೂರ ಇದ್ದಾರೆ ಎಂಬ ಭಾವನೆ ಇದೆ.‌ಅದು ವಾಸ್ತವ ಕೂಡ ಆಗಿದೆ.‌ ಆದ್ರೆ ಅಲ್ಪಸಂಖ್ಯಾತ ಸಮುದಾಯದಲ್ಲೂ ಅತ್ಯಂತ ಕಷ್ಟದಲ್ಲಿ ಇರುವ ಜನರು ಇದ್ದಾರೆ. ಅವರಲ್ಲೂ ತುಳಿತಕ್ಕೆ ಒಳಗಾದವರು ಅನೇಕರಿದ್ದಾರೆ. ಅಂತವರನ್ನು ಗುರುತಿಸಿ ಅವರಿಗೆ ನೆರವಾಗಲು ಸೂಚನೆ ನೀಡಿದ್ದಾರಂತೆ.‌ ಆ ಮೂಲಕ ತುಳಿತಕ್ಕೆ ಒಳಗಾದ ಸಮುದಾಯ, ಸಣ್ಣ ಸಣ್ಣ ಸಮುದಾಯ ಸೇರಿದಂತೆ ಸುಶಿಕ್ಷಿತ ವರ್ಗದವರನ್ನು ರೀಚ್ ಆಗಿ ದಕ್ಷಿಣದಲ್ಲಿ ಪಾರ್ಟಿ ಕಟ್ಟಲು ಮೋದಿ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ..

ಈಶಾನ್ಯ ಗೆಲ್ಲಿಸಿದವರು ದಕ್ಷಿಣಕ್ಕೆ: ಹೌದು, ಈಶಾನ್ಯ ರಾಜ್ಯದಲ್ಲಿ ಗೆಲ್ಲುವುದು ಕಷ್ಟ ಎನ್ನುವಂತಿದ್ದ ಸಮಯದಲ್ಲಿ ಪಕ್ಷ ನೀಡಿದ ಸೂಚನೆಯನ್ನು ಜವಬ್ದಾರಿಯಿಂದ ಮಾಡಿ ಕೇಸರಿ ಬಾವುಟ ಹಾರಿಸಲು‌ ಕಾರಣವಾದ ಸ್ಟಾಟರ್ಜಿಸ್ಟ್ ಗಳನ್ನು ದಕ್ಷಿಣ ರಾಜ್ಯಕ್ಕೆ ಹೋಗಿ ಕೆಲಸ ಮಾಡಲು ಮೋದಿ ಅಮಿತ್ ಸೂಚನೆ ನೀಡಿದ್ದಾರಂತೆ. ಆ ಮೂಲಕ ದಕ್ಷಿಣದಲ್ಲಿ ಪಕ್ಷ ಸಂಘಟಿಸಲು ಹೈಕಮಾಂಡ್ ಗಟ್ಟಿ ನಿಲುವು ತಾಳಿದ್ದು ಈಶಾನ್ಯ ರಾಜ್ಯದಲ್ಲಿ ಕೆಲಸ‌ ಮಾಡಿರುವ ಟೀಮ್ ದಕ್ಷಿಣದ ರಾಜ್ಯಗಳಿಗೂ ಬಂದು ಬಿಡಾರ ಹೂಡಲಿದೆ.

ದಕ್ಷಿಣದ ರಾಜ್ಯಗಳಲ್ಲಿ ಬಿಜೆಪಿ ಗೆಲ್ಲಲು ತಂತ್ರ - ಸಿಟಿ ರವಿ 
ಇಂದು ಮಾಧ್ಯಮ ಉದ್ದೇಶಿಸಿ ಮಾತನಾಡಿದ ಬಿಜೆಪಿ‌ ರಾಷ್ಟ್ರೀಯ ಸಂಘಟನೆ ಪ್ರಧಾನಕಾರ್ಯದರ್ಶಿ ಸಿಟಿ ರವಿ ಹೈದ್ರಾಬಾದ್ ನಲ್ಲಿ ನಡೆದ ಪಕ್ಷದ ರಾಷ್ಟ್ರೀಯ ಕಾರ್ಯಕಾರಿಣಿಯ ಮಾಹಿತಿ ನೀಡಿದ್ರು. ಇಪ್ಪತ್ತು ವರ್ಷಗಳ ಬಳಿಕ ಭಾಗ್ಯ ನಗರ ( ಹೈದ್ರಾಬಾದ್) ಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದಿದೆ. ವಿವಿಧ ವಿಚಾರಗಳ ಚರ್ಚೆಯ ಜೊತೆ, ವಿಶೇಷವಾಗಿ ದಕ್ಷಿಣದ ರಾಜ್ಯದಲ್ಲಿ ಬಿಜೆಪಿ ಬೆಳವಣಿಗೆ ಬಗ್ಗೆ ಚರ್ಚೆ ಮಾಲಲಡಲಾಗಿದೆ ಎಂದು ಅವರು ತಿಳಿಸಿದ್ರು. ಕರ್ನಾಟಕದ ನಂತರ ತೆಲಂಗಾಣದಲ್ಲಿ ಬಿಜೆಪಿ ಅಧಿಕಾರಕ್ಕೆ ಬರೋದು ನಿಶ್ಚಿತ. ಇತ್ತಿಚಿನ ಉಪಚುನಾವಣೆ ಅದಕ್ಕೆ ಸಾಕ್ಷಿ ಎಂದ ಸಿಟಿ ರವಿ. ತಮಿಳುನಾಡಿನಲ್ಲಿ ಕೂಡ ಅಣ್ಣಾಮಲೈ ನೇತೃತ್ವದಲ್ಲಿ ಬಿಜೆಪಿ ಬಲಿಷ್ಠ ಆಗ್ತಿದೆ. ಕೇರಳದಲ್ಲಿ ಇನ್ನೂ ಹೆಚ್ಚು ಪರಿಶ್ರಮ ಪಡೆಬೇಕಾದ ಅಗತ್ಯ ಇದೆ ಎಂದರು .‌ಅದಕ್ಕಾಗಿ ಮಿಷನ್ ದಕ್ಷಿಣ್ ಯೋಜನೆ ಅಡಿ ಪಕ್ಷ ಸಂಘಟನೆ ಮಾಡಲಾಗುವುದು ಎಂದ ಅವರು, ಜಾತಿ ಸಮುದಾಯದ ತಾರತಮ್ಯ ಇಲ್ಲದೇ ಜನರನ್ನು ತಲುಪುತ್ತೇವೆ ಎಂದರು.‌ ದಕ್ಷಿಣದಲ್ಲಿ ಕೇಂದ್ರದ ಯೋಜನೆ ತಲುಪಿಸುವ ಕೆಲಸ ಆಗಬೇಕು. ಆಗ ಬಿಜೆಪಿ ಪ್ರಭಲ ಆಗೋದು ನಿಶ್ಚಿತ .ಈ ಕಲ್ಪನೆ ಅಡಿ ಮಿಷನ್ ದಕ್ಷಿಣ್ ಮೂಲಕ ಸಂಘಟನೆ ಮಾಡೋದಾಗಿ ಸಿಟಿ ರವಿ ಹೇಳಿಕೆ ನೀಡಿದ್ದಾರೆ.‌

ಸ್ನೇಹ ಯಾತ್ರೆ ಕಲ್ಪನೆ ನೀಡಿದ್ದಾರೆ ಮೋದಿ.
ಸ್ನೇಹ ಯಾತ್ರೆ ಕಲ್ಪನೆ‌ ಅಡಿ, ಬಿಜೆಪಿ ಯೋಚನೆ ಯೋಜನೆ ಜನರಿಗೆ ಮುಟ್ಟಿಸುವ ಸಂಕಲ್ಪ ನೆನ್ನೆ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ತಿಳಿಸಿದರು. ಪ್ರಧಾನಿ ಸ್ನೇಹ ಯಾತ್ರೆ ಕಲ್ಪನೆ ನೀಡಿದ್ದಾರೆ ಆಮೂಲಕ ಸಂಘಟನೆ ಬಲ ಪಡಿಸೋದಾಗಿ ಸಿಟಿ ರವಿ ತಿಳಿಸಿದ್ದಾರೆ.‌ಈಶಾನ್ಯದಲ್ಲಿ 90-95% ಅಲ್ಪಸಂಖ್ಯಾತ ಇರುವ ಕಡೆ ಬಿಜೆಪಿ ಅಧಿಕಾರ ಹಿಡಿದಿದೆ. ಅವರನ್ನು ನಾವು ರಾಯಭಾರಿ ಆಗಿ ಬಳಸಿಕೊಂಡು ನಮ್ಮಿಂದ ದೂರ ಇರುವ ವರ್ಗವನ್ನು ತಲುಪಬೇಕು ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತವಾಗಿದೆ ಎಂದು ಮಾಹಿತಿ ನೀಡಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸಂಸದ ಭೀಮ್ ಆರ್ಮಿ ಸಹ ಸಂಸ್ಥಾಪಕ ಚಂದ್ರಶೇಖರ್ ಅಜಾದ್ ವಿರುದ್ಧ ಮಾಜಿ ಗರ್ಲ್‌ಫ್ರೆಂಡ್ ಬಾಂಬ್
ಜನರೊಂದಿಗೆ ಸಂಪರ್ಕ ಸಾಧಿಸಿ, ಸೋಶಿಯಲ್ ಮೀಡಿಯಾ ಬಳಸಿ: ಸಂಸದರಿಗೆ ಮೋದಿ ಕರೆ