ನಾನೂ ನಾಲ್ಕು ಬಾರಿ ಸಿಎಂ ಆಗಿದ್ದೆ, ಗವರ್ನರ್‌ ನನಗೆ ಪೇಡಾ ತಿನ್ಸಿರ್ಲಿಲ್ಲ!

By Santosh NaikFirst Published Jul 4, 2022, 12:48 PM IST
Highlights

ಮಹಾರಾಷ್ಟ್ರದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಲ್ಲಿಯೇ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ರಾಜ್ಯಪಾಲ ಭಗತ್ ಸಿಂಗ್ ಕೋಶಿಯಾರಿ ವಿರುದ್ಧ ಕಿಡಿಕಾರಿದೆ.  ಮಹಾರಾಷ್ಟರದಲ್ಲಿ ಸರ್ಕಾರ ಬದಲಾಗಿದ್ದು ಯಾರಿಗೆ ಖುಷಿಯಾಗಿದೆಯೋ ಇಲ್ಲವೋ ಗೊತ್ತಿಲ್ಲ. ರಾಜ್ಯಪಾಲರಿಗೆ ಖುಷಿಯಾಗಿದ್ದು ಅವರ ಮುಖದಲ್ಲೇ ಕಾಣುತ್ತಿತ್ತು ಎಂದು ಬರೆದಿದೆ.
 

ಮುಂಬೈ (ಜುಲೈ 4): ಮಹಾರಾಷ್ಟ್ರದಲ್ಲಿ (maharashtra) ಏಕನಾಥ್‌ ಶಿಂಧೆ (eknath shinde) ನೇತೃತ್ವದಲ್ಲಿ ಹೊಸ ಸರ್ಕಾರ ಅಧಿಕಾರಕ್ಕೆ ಬಂದಿದೆ. ಅಂದಾಜು 15 ದಿನಗಳ ಕಾಲ ರಾಜಕೀಯ ಮೇಲಾಟದ ಬಳಿಕ, ಬಿಜೆಪಿ (BJP) ಬೆಂಬಲ ಹಾಗೂ ಬಮಡಾಯ ಶಿವಸೇನೆ (Shiv Sena) ಶಾಸಕರ ಬಲದೊಂದಿಗೆ ಏಕನಾಥ್‌ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ಸೋಮವಾರ ವಿಧಾನಸಭೆಯಲ್ಲಿ ವಿಶ್ವಾಸಮತವನ್ನೂ (Trust Vote) ಸಾಬೀತು ಮಾಡಿದ್ದಾರೆ. ಇದರ ನಡುವೆ ರಾಜ್ಯದ ರಾಜಕೀಯ ಬೆಳವಣಿಗೆಗಳ ಬಗ್ಗೆ ಶಿವಸೇನೆ ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದಿರುವ ಮಾತುಗಳು ವೈರಲ್ ಆಗಿದೆ.

ರಾಜ್ಯಪಾಲ ಭಗತ್‌ ಸಿಂಗ್ ಕೋಶಿಯಾರಿ (bhagat singh koshyari) ವಿರುದ್ಧ ಸಾಮ್ನಾದಲ್ಲಿ(saamana) ಬರೆದಿರುವ ಶಿವಸೇನೆ, 'ಬಹುಶಃ ಮಹಾರಾಷ್ಟ್ರ ರಾಜಕಾರಣದಲ್ಲಿ ಸರ್ಕಾರ ಬದಲಾಗಿರುವ ಬಗ್ಗೆ ಯಾರಿಗಾದರೂ ಸಂಭ್ರಮವಾಗಿದ್ದರೆ, ಅದು ರಾಜ್ಯಪಾಲರಿಗೆ ಮಾತ್ರ. ಅದು ಅವರ ಮುಖದಲ್ಲೇ ಕಾಣುತ್ತಿತ್ತು' ಎಂದು ಬರೆದುಕೊಂಡಿದ್ದಾರೆ.

ಹೊಸ ಸರ್ಕಾರದಲ್ಲಿ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ್ದರೆ, ದೇವೇಂದ್ರ ಫಡ್ನವಿಸ್‌ ಉಪಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ್ದರು. ಸಾಮ್ನಾ ಪತ್ರಿಕೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಶರದ್‌ ಪವಾರ್‌ ಹೇಳಿರುವ ಮಾತುಗಳನ್ನು ಬರೆದಿದ್ದು, 'ನಾನೂ ಕೂಡ ನಾಲ್ಕು ಬಾರಿ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದೆ, ಆದರೆ, ಎಂದಿಗೂ ರಾಜ್ಯಪಾಲರು ನನಗೆ ಪೇಡಾ ತಿನ್ನಿಸಿರಲಿಲ್ಲ' ಎಂದು ಹೇಳಿದ್ದನ್ನು ಪ್ರಕಟಿಸಿದೆ.

ಬಹುಶಃ ಉದ್ದವ್‌ ಮುಖ್ಯಮಂತ್ರಿ ಆದಾಗ ಮಹಾರಾಷ್ಟ್ರದಲ್ಲಿ ಪೇಡಾ ಅಂಗಡಿಗಳು ಇದ್ದಿರಲಿಲ್ಲ: ಬ್ರಿಟಿಷ್‌ ಕಾಲದಲ್ಲಿ ಭಗತ್‌ ಸಿಂಗ್‌ರನ್ನು ಗಲ್ಲಿಗೇರಿಸಿದಾಗ ಅವರು ಖುಷಿ ಪಟ್ಟಿದ್ದರು. ಅದರಂತೆ, ನಮ್ಮ ಸರ್ಕಾರ ಉರುಳಿದಾಗ ಭಗತ್‌ ಸಿಂಗ್ ಕೋಶಿಯಾರಿ ಕೂಡ ಖುಷಿ ಪಟ್ಟಿದ್ದಾರೆ. ಬಹುಶಃ ಅವರಿಗಿಂತ ಖುಷಿಯಾದವರೂ ಯಾರೀ ಇರಲಿಕ್ಕಿಲ್ಲ. ಉದ್ಧವ್‌ ಠಾಕ್ರೆ ಮುಖ್ಯಮಂತ್ರಿಯಾಗಿ ಆಯ್ಕೆಯಾದಾಗ ಗವರ್ನರ್‌ ಖುಷಿಯಾಗಿರಲಿಲ್ಲ ಅಥವಾ ರಾಜಭವನದ ಸಮೀಪವಿರುವ ಎಲ್ಲಾ ಪೇಡಾ ಅಂಗಡಿಗಳು ಅಂದು ಬಂದ್ ಮಾಡಿದ್ದಿರಬೇಕು ಎಂದು ವ್ಯಂಗ್ಯವಾಡಿದೆ.

ವಿಶೇಷವೆಂದರೆ, ರಾಜಕೀಯ ಬ್ರಹನ್ನಾಟಕದ ಮಧ್ಯೆ, ಬಂಡಾಯ ಶಾಸಕ ಏಕನಾಥ್ ಶಿಂಧೆ ಮತ್ತು ಬಿಜೆಪಿ ನಾಯಕ ದೇವೇಂದ್ರ ಫಡ್ನವಿಸ್ ಇತ್ತೀಚೆಗೆ ರಾಜ್ಯಪಾಲರನ್ನು ಭೇಟಿ ಮಾಡಿದ್ದರು, ಈ ವೇಳೆ ಇಬ್ಬರೂ ಸರ್ಕಾರ ರಚನೆಯ ಹಕ್ಕೊತ್ತಾಯ ಮಂಡಿಸಿದಾಗ ರಾಜ್ಯಪಾಲರು ಉಭಯ ನಾಯಕರಿಗೆ ಸಿಹಿ ತಿನ್ನಿಸಿದರು. ಈ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಶರದ್ ಪವಾರ್ ಹೇಳಿಕೆ ಹೊರಬಿದ್ದಿದ್ದು, ನಾನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿದ್ದರೂ ರಾಜ್ಯಪಾಲರು ಒಂದು ಬಾರಿಯೂ ಪೇಡಾ ತಿನ್ನಿಸಿರಲಿಲ್ಲ ಎಂದಿದ್ದಾರೆ.

ಮಹಾರಾಷ್ಟ್ರ ವಿಶ್ವಾಸಮತ ಯಾಚನೆ, ಏಕನಾಥ್‌ ಶಿಂಧೆ ಸರ್ಕಾರ ಪಾಸ್!

ಕೇಸರಿ ತೊಟ್ಟಿರಬಹುದು ಆದರೆ ಇವರೆಲ್ಲ ಹುಳುಗಳು:
ಶಿವಸೇನೆಯು ಸಾಮ್ನಾದಲ್ಲಿ ತನ್ನದೇ ಬಂಡಾಯ ಶಾಸಕರ ಬಗ್ಗೆ ಬರೆದಿದ್ದು,  ಶಿವಸೇನಾ ಮುಖ್ಯಸ್ಥರ ಸ್ಮಾರಕವು ಪ್ರಜ್ಞೆ ಮತ್ತು ಶಕ್ತಿಯ ಸೂರ್ಯವಾಗಿದೆ. ಈ ಕೇಸರಿ ತೊಟ್ಟ ಶಾಸಕರು ಅವರ ಮುಂದೆ ಹುಳುಗಳು ಅಷ್ಟೇ. ಅವರು ಶಿವಸೇನೆಯಲ್ಲಿದ್ದಾಗ ತೀಕ್ಷ್ಣತೆ, ಹೆಮ್ಮೆ, ಧೈರ್ಯ, ಗೌರವ ಮತ್ತು ಸ್ವಾಭಿಮಾನವಿತ್ತು. 'ಕೌನ್ ಆಯಾ, ರೇ ಕೌನ್ ಆಯಾ, ಶಿವಸೇನಾ ಕಾ ಟೈಗರ್ ಆಯಾ' ಎಂದು ಗರ್ಜಿಸುತ್ತಿದ್ದರೂ ಈಗ ಅಂತಹ ದೃಶ್ಯ ಕಾಣಲಿಲ್ಲ. ಎಂಎಲ್ಎಗಳ ಮುಖಗಳು ಅಪಮಾನದಿಂದ ತಗ್ಗಿವೆ. ಅವರ ಪಾಪವು ಅವರ ಮನಸ್ಸನ್ನು ಕಾಡುತ್ತದೆ. ಅದು ಅವರ ಮುಖದಿಂದ ಸ್ಪಷ್ಟವಾಗಿ ಗೋಚರಿಸುತ್ತದೆ ಎಂದು ಬರೆದುಕೊಂಡಿದೆ.

ಇನ್ನಾರು ತಿಂಗಳಲ್ಲಿ ಶಿಂಧೆ ಸರ್ಕಾರ ಪತನ, ಚುನಾವಣೆಗೆ ಸಿದ್ಧರಾಗಿ: ಪವಾರ್‌!

ಇವೆಲ್ಲದರ ನಡುವೆ ಸೋಮವಾರ ಮಹಾರಾಷ್ಟರ ವಿಧಾನಸಭೆಯಲ್ಲಿ ನಡೆದ ವಿಶ್ವಾಸಮತ ಯಾಚನೆಯಲ್ಲಿ ಏಕನಾಥ್‌ ಶಿಂಧೆ ಸರ್ಕಾರ ಬಹುಮತ ಸಾಬೀತು ಮಾಡುವಲ್ಲಿ ಯಶಸ್ವಿಯಾಗಿದೆ. ಸರ್ಕಾರದ ಪರವಾಗಿ 164 ಹಾಗೂ ಮಹಾ ವಿಕಾಸ್‌ ಅಘಾಡಿ ಪರವಾಗಿ 99 ಮತಗಳು ಬಿದ್ದಿವೆ,

click me!