ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಇಡೀ ದೇಶದ ಗಮನಸೆಳೆದಿದೆ. ಗಲಭೆ, ಹಿಂಸಾಚಾರ, ಶೂಟೌಟ್ ಸೇರಿದಂತೆ ಹಲವು ಘಟನೆಗಳು ನಡೆದಿದೆ. ಇದೀಗ ಪಂಚಾಯತ್ ಚುನಾವಣಾ ರ್ಯಾಲಿಯಲ್ಲಿ ಬಿಜೆಪಿ ಬಾವುಟದ ಮೇಲೆ ಕಾಂಡೋಮ್ ನೇತು ಹಾಕಿದ ಘಟನೆ ನಡೆದಿದೆ.
ಕೋಲ್ಕತಾ(ಜೂ. 30): ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆ ಬಡಿದಾಟ, ಹಿಂಸಾಚಾರ, ಪ್ರತಿಭಟನೆ ಸೇರಿದಂತೆ ಹಲವು ನಾಟಕೀಯ ಬೆಳವಣಿಗೆಗ ಕಾರಣವಾಗಿದೆ. ಇತ್ತ ಹೈಕೋರ್ಟ್ ಕೂಡ ಸಿಎಂ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಛೀಮಾರಿ ಹಾಕಿದೆ. ಪಂಚಾಯತ್ ಚುನಾವಣೆಯನ್ನೂ ಹಿಂಸಾಚಾರವಿಲ್ಲದೆ ನಡೆಸಲು ಸಾಧ್ಯವಿಲ್ಲವೇ ಎಂದು ಪ್ರಶ್ನಿಸಿದೆ. ಇದೀಗ ಮತ್ತೊಂದು ಸುತ್ತಿನ ಹೋರಾಟಕ್ಕೆ ವೇದಿಕೆ ಸಜ್ಜಾಗಿದೆ. ಜಲಪೈಗುರಿಯಲ್ಲಿ ಪಂಚಾಯತ್ ಚುನಾವಣೆಗಾಗಿ ಬಿಜೆಪಿ ಆಯೋಜಿಸಿದ ರ್ಯಾಲಿಯಲ್ಲಿ ಹಿಂಸಾಚಾರ ನಡೆದಿದೆ. ರ್ಯಾಲಿ ಹೋಗುವ ದಾರಿಗಳಲ್ಲಿ ಬಿಜೆಪಿ ಕಾರ್ಯಕರ್ತರು ಬಾವುಟ ಕಟ್ಟಿದ್ದರು. ಆದರೆ ಕಿಡಿಗೇಡಿಗಳು ಈ ಬಾವುಟಕ್ಕೆ ಕಾಂಡೋಮ್ ನೇತು ಹಾಕಿದ್ದಾರೆ. ಇದು ಟಿಎಂಸಿ ಗೂಂಡಾಗಳ ಕೃತ್ಯ ಎಂದು ಬಿಜೆಪಿ ಆರೋಪಿಸಿದೆ.
ಶಿಕಾಪುರ್ ಗ್ರಾಮದಲ್ಲಿ ಬಿಜೆಪಿ ಕಾರ್ಯಕರ್ತರು ರ್ಯಾಲಿ ಆಯೋಜಿಸಿದ್ದರು. ಪಂಚಾಯತ್ ಚುನಾವಣೆ ಹಿನ್ನಲೆಯಲ್ಲಿ ಈ ರ್ಯಾಲಿ ಆಯೋಜಿಸಲಾಗಿತ್ತು. ಶಿಕಾರ್‌ಪುರ್ ಗ್ರಾಮದ ರಸ್ತೆಗಳ ಬದಿ, ಮೈದಾನ ಸೇರಿದಂತೆ ಹಲೆವೆಡೆ ಬಿಜೆಪಿ ಕಾರ್ಯಕರ್ತರು ಬಾವುಟಗಳನ್ನು ಕಟ್ಟಿದ್ದರು. ಇಂದು ಬಿಜೆಪಿ ರ್ಯಾಲಿಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿತ್ತು. ಆದರೆ ರ್ಯಾಲಿ ವೇಳೆ ಬಿಜೆಪಿ ಬಾವುಟದ ಮೇಲೆ ಕಾಂಡೋಮ್ ನೇತು ಹಾಕಿರುವುದು ಗಮನಕ್ಕೆ ಬಂದಿದೆ.
ಮಮತಾ ಬ್ಯಾನರ್ಜಿ ಪ್ರಯಾಣಿಸುತ್ತಿದ್ದ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ, ಅಪಾಯದಿಂದ ಪಾರು!
ಕಾರ್ಯಕರ್ತರು ಕಟ್ಟಿದ ಬಿಜೆಪಿ ಬಾವುಟದ ಮೇಲೆ ಕಾಂಡೋಮ್ ಹಾಕಲಾಗಿದೆ. ಇದು ಬಿಜೆಪಿ ಕಾರ್ಯಕರ್ತರನ್ನು ರೊಚ್ಚಿಗೆಬ್ಬಿಸಿದೆ. ಬಿಜೆಪಿ ಕಿಸಾನ್ ಮೋರ್ಚಾ ಜಿಲ್ಲಾಧ್ಯಕ್ಷ ನಕುಲ್ ದಾಸ್ ದೂರು ದಾಖಲಿಸಿದ್ದಾರೆ. ಇದು ಟಿಎಂಸಿ ಗೂಂಡಾಗಳ ಕೃತ್ಯ ಎಂದು ಗಂಭೀರ ಆರೋಪ ಮಾಡಿದೆ. ಜಲಪೈಗುರಿಯಲ್ಲಿ ಬಿಜೆಪಿ ಅಧಿಪತ್ಯ ಸಾಧಿಸುತ್ತಿದೆ. ಇದನ್ನು ಟಿಎಂಸಿ ಸಹಿಸುತ್ತಿಲ್ಲ. ಪಶ್ಚಿಮ ಬಂಗಾಳದ ಪಂಚಾಯತ್ ಚುನಾವಣೆಗೆ ಟಿಎಂಸಿ ನಡೆಸುತ್ತಿರುವ ಗೂಂಡಾ ವರ್ತನೆ ಈಗಾಗಲೇ ದೇಶದ ಗಮನಸೆಳೆದಿದೆ. ಹೈಕೋರ್ಟ್ ಕೂಡ ಸರ್ಕಾರವನ್ನು ಪ್ರಶ್ನಿಸಿದೆ. ಇದೀಗ ಟಿಎಂಸಿ ಗೂಂಡಾಗಳು ಬಾವುಟದ ಮೇಲೆ ಕಾಂಡೋಮ್ ಹಾಕಿ ವಿಕೃತ ಆನಂದ ಪಡುತ್ತಿದ್ದಾರೆ ಎಂದು ನಕುಲ್ ದಾಸ್ ಆರೋಪಿಸಿದ್ದಾರೆ.
ಮಮತಾ ಬ್ಯಾನರ್ಜಿ ಮುಸ್ಲಿಂ ಓಲೈಕೆ ಬಹಿರಂಗಪಡಿಸಿದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗ!
ಇತ್ತೀಚೆಗೆ ಪಶ್ಚಿಮ ಬಂಗಾಳದ ನಡೆಯುತ್ತಿರುವ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ವೇಳೆ ನಡೆದ 2 ಪ್ರತ್ಯೇಕ ಶೂಟೌಟ್‌ನಲ್ಲಿ 3 ಮಂದಿ ಸಾವನ್ನಪ್ಪಿದ್ದರು. 24 ಪರಗಣ ಜಿಲ್ಲೆಯಲ್ಲಿ ಇಬ್ಬರು ಗುಂಡೇಟಿಗೆ ಬಲಿಯಾಗಿದ್ದರೆ, ಸಿಲಿಗುರಿಯಲ್ಲಿ ದುಷ್ಕರ್ಮಿಗಳ ಕೃತ್ಯಕ್ಕೆ ಓರ್ವ ವ್ಯಕ್ತಿ ಬಲಿಯಾಗಿದ್ದಾನೆ. ಚುನಾವಣೆ ಘೋಷಣೆಯಾದಾಗಿನಿಂದಲೂ ರಾಜ್ಯದಲ್ಲಿ ಹಲವು ಘರ್ಷಣೆಗಳು ವರದಿಯಾಗಿವೆ. ಈ ಘಟನೆಗಳು ರಾಜಕೀಯ ಕೆಸರೆರೆಚಾಟಕ್ಕೆ ಕಾರಣವಾಗಿದ್ದು, ಆಡಳಿತ ಮತ್ತು ವಿಪಕ್ಷಗಳು ಪರಸ್ಪರ ಆರೋಪಗಳನ್ನು ಮಾಡಿವೆ. 2003ರಲ್ಲಿ ನಡೆದ ಪಂಚಾಯತ್ ಚುನಾವಣೆ ಸಮಯದಲ್ಲಿ ರಾಜ್ಯದಲ್ಲಿ 36 ಮಂದಿ ಸಾವಿಗೀಡಾಗಿದ್ದರು.