
ಕೋಲ್ಕತ್ತಾ (ಜುಲೈ 29): ಪಶ್ಚಿಮ ಬಂಗಾಳದ ರಾಜಕೀಯದಲ್ಲಿ, ಪಾರ್ಥ ಚಟರ್ಜಿ ಮತ್ತು ಅವರಿಗೆ ಸಂಬಂಧಿಸಿದ ಶಿಕ್ಷಣ ಹಗರಣವು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯ ಚಿಂತೆಗೆ ಕಾರಣವಾಗಿದೆ. ಈ ಹಗರಣದ ಪರಿಣಾಮವಾಗಿ ಮಮತಾ ಬ್ಯಾನರ್ಜಿ ಪಾರ್ಥ್ ಚಟರ್ಜಿ ಅವರನ್ನು ಸಚಿವ ಸ್ಥಾನದಿಂದ ಕಿತ್ತೆಸೆದಿದ್ದಾರೆ. ಅರ್ಪಿತಾ ಹಾಗೂ ಅವರ ವಿಚಾರಗಳಿಂದಲೂ ಊರ ಉಳಿಯುವ ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ಸಾಮಾಜಿಕ ಜಾಲತಾಣಗಳಲ್ಲಿ ಮಮತಾ ಬ್ಯಾನರ್ಜಿ ಅವರು ಅರ್ಪಿತಾ ಮುಖರ್ಜಿ ಅವರನ್ನು ಹೊಗಳಿರುವ ಕೆಲವೊಂದು ವಿಡಿಯೋಗಳು ವೈರಲ್ ಆಗಿವೆ. ಇದರ ನಡುವೆ ಇಡಿ ಕ್ರಮವು ಇನ್ನಷ್ಟು ತೀವ್ರವಾಗಿದ್ದು, ಟಿಎಂಪಿ ಪಕ್ಷದ ಹಲವು ನಾಯಕರು ವಿಚಾರಣೆಗೆ ಒಳಗಾಗುವ ಸಾಧ್ಯತೆ ಇದೆ. ಇದರಿಂದಾಗಿ ಮಮತಾ ಬ್ಯಾನರ್ಜಿ ಅವರ ಮುಂದಿನ ಹೆಜ್ಜೆ ಏನು ಎನ್ನುವ ಕುತೂಹಲಗಳು ಆರಂಭವಾಗಿವೆ. ಕಾಮರಾಜ್ ಪ್ಲ್ಯಾನ್ ಅಳವಡಿಸಿ, ಮಮತಾ ಬ್ಯಾನರ್ಜಿ ಅವರು ತಮ್ಮ ಇಡೀ ಸಂಪುಟದ ರಾಜೀನಾಮೆಯನ್ನು ತೆಗೆದುಕೊಳ್ಳಬಹುದು ಎಂದು ರಾಜಕೀಯ ವಿಶ್ಲೇಷಕರು ಹೇಳುತ್ತಿದ್ದಾರೆ. ಆದರೆ, ಈ ಬಗ್ಗೆ ಯಾವುದೇ ಧೃಡವಾದ ಮಾಹಿತಿಯಿಲ್ಲ. ಟಿಎಂಸಿಯ ನಾಯಕರು ಈ ಬಗ್ಗೆ ಮಾತನಾಡಿಲ್ಲ. ಆದರೆ, ರಾಜಕೀಯ ಕಾರಿಡಾರ್‌ನಲ್ಲಿ ಈ ವಿಚಾರದ ಚರ್ಚೆ ವೇಗವಾಗಿದೆ. ಸಣ್ಣ-ಪುಟ್ಟ ಭ್ರಷ್ಟಾಚಾರದ ಆರೋಪಗಳ ಟಿಎಂಸಿಯ ಬಹುತೇಕ ಎಲ್ಲಾ ಸಚಿವರ ಮೇಲಿದೆ. ಹಾಗಾಗಿ ಶಿಕ್ಷೆ ನೀಡಬೇಕಾದಲ್ಲಿ ಎಲ್ಲರಿಗೂ ನೀಡಬೇಕು ಎನ್ನುವ ಯೋಜನೆಯನ್ನು ಮಮತಾ ಮಾಡಿದ್ದಾರೆ ಎನ್ನಾಗಿದೆ.
ಇಡೀ ಸಚಿವ ಸಂಪುಟ ರಾಜೀನಾಮೆ ನೀಡಲಿದೆಯೇ?: ಇಡೀ ಸಚಿವ ಸಂಪುಟವೇ ತಾನಾಗಿಯೇ ರಾಜೀನಾಮೆ ನೀಡಿ ನಂತರ ಮಮತಾ ಬ್ಯಾನರ್ಜಿ ಅವರ ಬಳಿಕ ಎಲ್ಲಾ ಅಧಿಕಾರ ಬರುವ ಸಾಧ್ಯತೆಯೂ ಇದೆ. ಆ ಸಂದರ್ಭದಲ್ಲಿ, ಮಮತಾ ಹೊಸ ಸಚಿವ ಸಂಪುಟವನ್ನು ರಚಿಸಬಹುದು. ಗಂಭೀರ ಆರೋಪಗಳನ್ನು ಎದುರಿಸುತ್ತಿರುವ ಅಥವಾ ತನಿಖಾ ಸಂಸ್ಥೆಗಳ ರಾಡಾರ್‌ನಲ್ಲಿರುವ ಎಲ್ಲಾ ನಾಯಕರನ್ನು ಬದಿಗಿಡಬಹುದು ಎಂದು ಹೇಳಲಾಗಿದೆ.
ಅಧಿಕಾರಶಾಹಿಯಲ್ಲೂ ಬದಲಾವಣೆ ಆಗುತ್ತಾ?: ಈ ಬಾರಿ ಮಮತಾ ಬ್ಯಾನರ್ಜಿ ಅವರು ರಾಜ್ಯಸಭೆ ಮತ್ತು ಲೋಕಸಭೆ ಸದಸ್ಯರನ್ನು ತಮ್ಮ ಸಂಪುಟಕ್ಕೆ ಸೇರಿಸಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ. ಹೊಸ ಮುಖಗಳಿಗೆ ಅವಕಾಶ ನೀಡಬಹುದು. ಉಪಚುನಾವಣೆಯಲ್ಲಿ ಸ್ಪರ್ಧಿಸಲು ಅವರಿಗೆ ಹೊಸ ಜವಾಬ್ದಾರಿಗಳನ್ನು ನೀಡಬಹುದು. ಇದೆಲ್ಲದರ ಹೊರತಾಗಿ ಅಧಿಕಾರಶಾಹಿಯಲ್ಲೂ ದೊಡ್ಡ ಬದಲಾವಣೆಗಳನ್ನು ಕಾಣಬಹುದು ಎನ್ನಲಾಗಿದೆ. ಈ ಬಾರಿ ಶಿಕ್ಷಣ ಇಲಾಖೆ ಕಾರ್ಯದರ್ಶಿಯನ್ನು ಸಿಎಂ ಬದಲಾವಣೆ ಮಾಡಬೇಕು ಎಂದು ವರದಿಯಾಗಿದೆ. ಮತ್ತೊಬ್ಬ ಪ್ರಾಮಾಣಿಕ ಅಧಿಕಾರಿಗೆ ಈ ಇಲಾಖೆಯ ಜವಾಬ್ದಾರಿ ನೀಡುವ ವಿಷಯ ಮುನ್ನೆಲೆಗೆ ಬರುತ್ತಿದೆ. ಅದೇ ರೀತಿ ಪಕ್ಷದಲ್ಲಿಯೂ ಕೆಲವು ದೊಡ್ಡ ಬದಲಾವಣೆಗಳಾಗುವ ಸಾಧ್ಯತೆ ಇದೆ. ಈ ಪಟ್ಟಿಯಲ್ಲಿ ಜಿಲ್ಲಾಧ್ಯಕ್ಷರನ್ನು ಬದಲಾಯಿಸಬಹುದು, ಯುವಕರಿಗೆ ಪಕ್ಷದಲ್ಲಿ ಹೆಚ್ಚಿನ ಆದ್ಯತೆ ನೀಡಬಹುದು. ಆದರೆ ಇದೀಗ ಇದು ಕೇವಲ ಊಹಾಪೋಹಗಳಾಗಿದ್ದು, ಅಭಿಷೇಕ್ ಬ್ಯಾನರ್ಜಿ ಮತ್ತು ಮಮತಾ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಿದ್ದಾರೆ.
ನಟಿ ಮನೆಯಲ್ಲಿತ್ತು 50 ಕೋಟಿ ರೂ, ಬಂಗಾಳ ಸಚಿವನ ಮಾಯಾಂಗನೆಯ ಬಂಗಾರದ ಕೋಟೆ ರಹಸ್ಯ!
ಇದರ ನಡುವೆ, ಮುಂದಿನ ತಿಂಗಳು ಆಗಸ್ಟ್ 5 ಮತ್ತು 6 ರಂದು ಮಮತಾ ಬ್ಯಾನರ್ಜಿ ಅವರು ಪ್ರಧಾನಿ ಮೋದಿಯನ್ನು ಭೇಟಿ ಮಾಡಬಹುದು ಎಂದು ಹೇಳಲಾಗಿದೆ. ಇದರ ನಂತರ, ಆಗಸ್ಟ್ 7 ರಂದು, ಮುಖ್ಯಮಂತ್ರಿಗಳೊಂದಿಗೆ ನೀತಿ ಆಯೋಗದ ಸಭೆಯೂ ನಡೆಯಲಿದ್ದು, ಅದರಲ್ಲಿ ಪ್ರಧಾನಿ ಕೂಡ ಭಾಗಿಯಾಗಲಿದ್ದಾರೆ. ಈ ಬಾರಿ ಮಮತಾ ಕೂಡ ಆ ಸಭೆಯಲ್ಲಿ ತಮ್ಮ ಉಪಸ್ಥಿತಿಯನ್ನು ದಾಖಲಿಸಲಿದ್ದಾರೆ. ಕಳೆದ ವರ್ಷ ಈ ಸಭೆಗೆ ಮಮತಾ ಬ್ಯಾನರ್ಜಿ ಹಾಜರಾಗಿರಲಿಲ್ಲ.
ದೀದಿ ವಿರುದ್ಧ ಬಿಜೆಪಿ ವಾಗ್ದಾಳಿ: ಇಷ್ಟು ಹಣ ಎಲ್ಲಿಂದ ಬಂತು ಎಂದು ಟಿಎಂಸಿ ಹೇಳಲಿ
ಏನಿದು ಕಾಮರಾಜ್ ಪ್ಲ್ಯಾನ್: ಮಮತಾ ಯೋಚಿಸುತ್ತಿರುವ ಕಾಮರಾಜ್ ಪ್ಲ್ಯಾನ್, ಒಂದು ಕಾಲದಲ್ಲಿ ಈ ತಂತ್ರದ ಸಹಾಯದಿಂದ ಕಾಂಗ್ರೆಸ್ ತನ್ನ ಸಂಘಟನೆಯನ್ನು ಬಲಪಡಿಸಿತು. 1962 ರ ಚೀನಾ ಯುದ್ಧದಲ್ಲಿ ಸೋತ ನಂತರ, ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ವಿದೇಶಾಂಗ ನೀತಿಯ ಮೇಲೆ ಅನೇಕ ಪ್ರಶ್ನೆಗಳನ್ನು ಎತ್ತಲಾಗಿತ್ತು. ಹಣಕಾಸು ಸಚಿವ ಮೊರಾರ್ಜಿ ದೇಸಾಯಿ ಅವರು ದೇಶದ ಜನರ ಮೇಲೆ ಭಾರಿ ತೆರಿಗೆ ಹೊರೆ ಹಾಕಿದ್ದ ಸಮಯವದು. ಇದರಿಂದ ಜನರಲ್ಲಿ ಕಾಂಗ್ರೆಸ್ ಜನಪ್ರಿಯತೆ ಕಡಿಮೆಯಾಗತೊಡಗಿತು. ಕಾಂಗ್ರೆಸ್ ಸತತ ಮೂರು ಲೋಕಸಭಾ ಉಪಚುನಾವಣೆಗಳಲ್ಲಿ ಸೋತಾಗ ಪಕ್ಷದ ಜನಪ್ರಿಯತೆ ಕುಸಿಯುತ್ತಿರುವುದು ಖಚಿತವಾಗಿತ್ತು. ಇಂಥ ಸಮಯದಲ್ಲಿ ತಮಿಳುನಾಡು ಸಿಎಂ ಆಗಿದ್ದ ಕುಮಾರಸ್ವಾಮಿ ಕಾಮರಾಜ್ ಯೋಜನೆಯೊಂದನ್ನು ಸೂಚಿಸಿದ್ದರು. ಪಕ್ಷದ ದೊಡ್ಡ ಮಂತ್ರಿಗಳು ಅಥವಾ ಮುಖ್ಯಮಂತ್ರಿಗಳು ಸರ್ಕಾರದಲ್ಲಿ ಕೆಲಸ ಮಾಡುವ ಬದಲು ಸಂಘಟನೆಯನ್ನು ಬಲಪಡಿಸುವ ಕೆಲಸ ಮಾಡಬೇಕು ಎಂದು ನೆಹರೂಗೆ ಸೂಚಿಸಿದರು. ಈ ಯೋಜನೆಯು ಎಷ್ಟು ಅದ್ಭುತವಾಗಿತ್ತು ಎಂದರೆ ಕಾಂಗ್ರೆಸ್ ಸಮಿತಿಯು ತಕ್ಷಣವೇ ಅದನ್ನು ಅಂಗೀಕರಿಸಿತು ಮತ್ತು ಎರಡು ತಿಂಗಳೊಳಗೆ ರಾಜೀನಾಮೆಗಳ ಭರಾಟೆ ನಡೆಯಿತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.