ನಿಮ್ಮ ತೆವಲು ತೀರಿಸಿಕೊಳ್ಳಲು ಅಮಾಯಕರನ್ನ ಬಲಿ ಕೊಡಬೇಡಿ, ಎಚ್‌ಡಿಕೆ

By Suvarna News  |  First Published Jul 29, 2022, 7:46 PM IST

ಗಡಿ ಜಿಲ್ಲೆ ಬೀದರ್‌ ಪ್ರವಾಸದಲ್ಲಿರುವ ಮಾಜಿ ಸಿಎಂ ಕುಮಾರಸ್ವಾಮಿ ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.


ವರದಿ- ಲಿಂಗೇಶ್ ಮರಕಲೆ ಏಷ್ಯಾನೆಟ್ ಸುವರ್ಣ ನ್ಯೂಸ್ ಬೀದರ್.

ಬೀದರ್, (ಜುಲೈ. 29)
: ರಾಜ್ಯದಲ್ಲಿ ಪೊಲೀಸ್ ಇಲಾಖೆಯಲ್ಲಿ ಯಾವುದೇ ರೀತಿ ಕಂಟ್ರೋಲ್ ಇಲ್ಲ. ಗೃಹ ಸಚಿವರು ಪೊಲೀಸರಿಗೆ ನಾಯಿಗಳು ಎಂದಿದ್ದರು, ಇವರು ಯಾವ ರೀತಿ ಸರ್ಕಾರ ನಡೆಸುತ್ತಾರೆ. ನಮಗೆ ಬೇಕಾಗಿರೋದು ಶಾಂತಿ, ಸರ್ವಜನಾಂಗದ ಶಾಂತಿಯ ತೋಟ ಕರುನಾಡಲ್ಲಿ,.ಎರಡು ಸಮಾಜದ ಸಂಘಟನೆಗಳು ತಮ್ಮ ತೆವಲು ತೀರಿಸಿಕೊಳ್ಳಲು ಅಮಾಯಕರನ್ನ ಬಲಿ ಕೊಡುತ್ತಿದ್ದಾರೆ ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಬೀದರ್‌ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಸಮಾಜ ಒಡೆಯುವಂತ ಕೆಲಸ ಎರಡು ಪಕ್ಷದಿಂದ ನಡೆಯುತ್ತಿದೆ. ಇದು ಕೇವಲ 10 ದಿನದ ಸಮಸ್ಯೆ ಇಲ್ಲ, ಕಳೆದ 15-20 ವರ್ಷಗಳ ಸಮಸ್ಯೆ, ಅವರಿಗೆ ಸರಿಯಾದ ದಾರಿಯಲ್ಲಿ ಮತ ಕೇಳಲು ಬೇರೆ ದಾರಿ ಇಲ್ಲ, ಈ ರೀತಿಯಾದರೇ ಬಿಜೆಪಿಯವರು ಒಂದು ವರ್ಗದ ಮತ ಕೇಳುತ್ತಾರೆ. ಕಾಂಗ್ರೆಸ್ ನವರು ಒಂದ ಸಮುದಾಯ ಮತ ಕೇಳುತ್ತಾರೆ ಎಂದರು.

Tap to resize

Latest Videos

ಕರ್ನಾಟಕದಲ್ಲಿ ಯುಪಿ ಮಾದರಿ ಬೇಕೆನ್ನುವವರಿಗೆ ಜಾಡಿಸಿದ ಕುಮಾರಸ್ವಾಮಿ

ಜನರಿಗೆ ಮೆಚ್ಚಿಸೋಕೆ ಎರಡು ರಾಷ್ಟ್ರೀಯ ಪಕ್ಷಗಳು ಟೀಕೆ ಟಿಪ್ಪಣಿ ಮಾಡುತ್ತಿದ್ದಾರೆ. ಶಾಂತಿಯ ವಾತಾವರಣ ತರಲು ಸರ್ಕಾರ ಗಮನ ಕೊಡಬೇಕಾಗಿದೆ. ಎಲ್ಲಾ ಧರ್ಮದ ಸ್ವಾಮೀಜಿಗಳನ್ನ ಕರೆದು, ಸ್ವಾಮೀಜಿಗಳಿಂದ ಜನರಲ್ಲಿ ಶಾಂತಿ ಕಾಪಾಡಲು ಸಂದೇಶ ಕೊಡಬೇಕು. ಇದನ್ನ ಸರಿಪಡಿಸಿಕೊಂಡರೇ ಉಳಿಯುತ್ತಾರೆ ಇಲ್ಲದಿದ್ದರೆ ಸರ್ವನಾಶವಾಗುತ್ತಾರೆ ಎಂದು ಹೇಳಿದರು.

‌ ಎರಡು ರಾಷ್ಟ್ರೀಯ ಪಕ್ಷಗಳನ್ನ ಕಿತ್ತು ಹೊರಹಾಕಿದರೇ ಇದನ್ನ ನಿಲ್ಲಿಸಬಹದು. ನಾನು 14 ತಿಂಗಳು ಮುಖ್ಯಮಂತ್ರಿಯಾಗಿದ್ದಾಗ ಒಂದೇ ಒಂದು ಕೋಮುಗಲಭೆಯಾಗಿಲ್ಲ, ಇವತ್ತು ಯಾಕೆ ಆಗುತ್ತಿದೆ, ಸಿದ್ದರಾಮಯ್ಯ ಇದ್ದಾಗ ಯಾಕೆ ಆಯ್ತು,.. ಯಾವ ಕಾರಣಕ್ಕೆ ಇವತ್ತು ಇದು ನಡೆಯುತ್ತಿದೆ ಎಂದು ಪ್ರಶ್ನಿಸಿದರು.

‌ಹುಬ್ಬಳಿಯಲ್ಲಿ ಇದ್ಗಾ ಮೈದಾನದ ಗಲಾಟೆಯಿಂದ ಪ್ರತಿವರ್ಷ ಎರಡ್ಮೂರು ಕೊಲೆಯಾಗುತ್ತಿದ್ದವು,. ಆಗ ನಮ್ಮ ಸರ್ಕಾರ ಅಧಿಕಾರದಲ್ಲಿತ್ತು,. ನಾವು ಆ ಸಂದರ್ಭದಲ್ಲಿ ತೆಗೆದುಕೊಂಡ ನಿರ್ಧಾರದಿಂದ ಇವತ್ತು ೩೦ ವರ್ಷ ಆದರೂ ಒಂದು ಕೊಲೆಯಾಗಿಲ್ಲ ಎಂದು ಬಿಜೆಪಿ ಮತ್ತು ಕಾಂಗ್ರೆಸ್ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು,.

ಇವತ್ತು ಬೆಂಗಳೂರಲ್ಲೂ ಪುಡಿ ರೌಡಿಗಳು ಹುಟ್ಟಿಕೊಂಡಿವೆ
ಇವತ್ತು ಬೆಂಗಳೂರಲ್ಲಿ ಪುಡಿ ರೌಡಿಗಳ ಹಾವಳಿ ಜಾಸ್ತಿಯಾಗಿದೆ. ಆಡಳಿತ ಕಾರ್ಯವೈಖರಿ ಸಂಪೂರ್ಣ ಕುಸಿದಿದೆ. ಒಂದು ವೇಳೆ ಪ್ರವೀಣ್ ಹತ್ಯೆ ನಡೆದ ಗ್ರಾಮೀಣ ಭಾಗದಲ್ಲಿ ಒಂದು ಪ್ರಾಥಮಿಕ ಆರೋಗ್ಯ ಕೇಂದ್ರ ಇದ್ದರೇ ಪ್ರವೀಣ್ಗೆ ಉಳಿಸಿಕೊಳ್ಳಬಹುದಾಗಿತ್ತು,. ಇದು ಸರ್ಕಾರದ ಆಡಳಿತದ ವೈಫಲ್ಯ, ಈ ವಿಚಾರ ಸಿಎಂ ಮುಖಕ್ಕೆ ಪ್ರವೀಣ್ ಪತ್ನಿ ಹೇಳಿದರು,. ಸಿಎಂ ಭೇಟಿ ಮಾಡಿ 50 ಲಕ್ಷ ಪರಿಹಾರ ಕೊಟ್ಟ ತಕ್ಷಣ ಹತ್ಯೆಯಾದ ವ್ಯಕ್ತಿ ತಂದು ಕೊಡಲು ಸಾಧ್ಯನಾ..? ಸಿಎಂಗೆ ಕನಿಷ್ಠ ತಿಳಿವಳಿಕೆ ಇದ್ದರೇ ಜನರಿಗೆ ಶಾಂತಿಯಿಂದ ಇರಲು ಸಂದೇಶ ಕೊಡಬೇಕಾಗಿತ್ತು,. ಶಾಂತಿ ಕಾಪಾಡುವಂತೆ ಎರಡೂ ರಾಷ್ಟ್ರೀಯ ಪಕ್ಷಗಳು ಮನವಿ ಮಾಡುತ್ತಿಲ್ಲ ಕೇವಲ ಇಂತಹ ಘಟನೆಗಳಿಂದ ಓಟ್ ಬ್ಯಾಂಕ್ ಮಾಡಿಕೊಳ್ಳಲು ಮುಂದಾಗುತ್ತಿವೆ ಎಂದು ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
 

click me!