ಬೆಳಗಾವಿ: ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ ಪ್ರಕರಣ, ಜೈಲಿನಿಂದ ಹೊರಬಂದ ಆರೋಪಿಗಳಿಗೆ ಹೂ, ಹಾರ ಹಾಕಿ ಸ್ವಾಗತ..!

By Girish GoudarFirst Published Apr 23, 2024, 7:43 PM IST
Highlights

ಪ್ರಕರಣ ಸಂಬಂಧ 14 ಜನ ಆರೋಪಿಗಳನ್ನು ಹಿಂಡಲಗಾ ಕಾಗಾರೃಹದಲ್ಲಿಡಲಾಗಿತ್ತು. ಜಾಮೀನು ಸಿಗುತ್ತಿದ್ದಂತೆಯೇ ಕಾರಾಗೃಹದಿಂದ ಹೊರಬಂದ ಆರೋಪಿಗಳ ಪೈಕಿ ಬಸಪ್ಪ ನಾಯಕ್‌ ಎಂಬುವನಿಗೆ ಹೂವಿನ ಮಾಲೆ ಹಾಕಿ, ಸಿಹಿ ತಿನ್ನಿಸಿ ಕಾರಾಗೃಹದ ಎದುರೇ ಸ್ವಾಗತ ಕೋರಲಾಗಿದೆ. 

ಬೆಳಗಾವಿ(ಏ.23):  ಜಿಲ್ಲೆಯ ಹೊಸವಂಟಮೂರಿ ಗ್ರಾಮದಲ್ಲಿ ಮಹಿಳೆಯೊಬ್ಬರನ್ನು ವಿವಸ್ತ್ರಗೊಳಿಸಿ, ಕಂಬಕ್ಕೆ ಕಟ್ಟಿ ಹಲ್ಲೆ ನಡೆಸಿದ ಅಮಾನವೀಯ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲ್ಪಟ್ಟಿದ್ದ ಆರೋಪಿಗಳು ಹಿಂಡಲಗಾ ಕಾರಾಗೃಹದಿಂದ ಬಿಡುಗಡೆ ಆಗಿದ್ದಾರೆ. ಬಿಡುಗಡೆಯಾದ ಆರೋಪಿಗಳಿಗೆ ಹೂ, ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.

ಕಳೆದ ಡಿಸೆಂಬರ್‌ ತಿಂಗಳಲ್ಲಿ ಮಹಿಳೆಯನ್ನ ವಿವಸ್ತ್ರಗೊಳಿ, ಕಂಬಕ್ಕೆ ಕಟ್ಟಿ ಹಾಕಿ ಥಳಿಸಲಾಗಿತ್ತು. ಈ ಪ್ರಕರಣ ದೇಶದ ಗಮನ ಸೆಳೆದಿತ್ತು. ನಾಲ್ಕು ತಿಂಗಳ ಬಳಿಕ ಆರೋಪಿಗಳಿಗೆ ಕೋರ್ಟ್‌ ಜಾಮೀನು ನೀಡಿದೆ. 

ಬೆಳಗಾವಿಯಲ್ಲಿ ಮತ್ತೊಬ್ಬ ಮಹಿಳೆ ವಿವಸ್ತ್ರಗೊಳಿಸಿ ಹಲ್ಲೆ; ಅಮಾನವೀಯ ಘಟನೆಗೆ ಕೊನೆಯೇ ಇಲ್ವಾ?

ಈ ಪ್ರಕರಣ ಸಂಬಂಧ 14 ಜನ ಆರೋಪಿಗಳನ್ನು ಹಿಂಡಲಗಾ ಕಾಗಾರೃಹದಲ್ಲಿಡಲಾಗಿತ್ತು. ಜಾಮೀನು ಸಿಗುತ್ತಿದ್ದಂತೆಯೇ ಕಾರಾಗೃಹದಿಂದ ಹೊರಬಂದ ಆರೋಪಿಗಳ ಪೈಕಿ ಬಸಪ್ಪ ನಾಯಕ್‌ ಎಂಬುವನಿಗೆ ಹೂವಿನ ಮಾಲೆ ಹಾಕಿ, ಸಿಹಿ ತಿನ್ನಿಸಿ ಕಾರಾಗೃಹದ ಎದುರೇ ಸ್ವಾಗತ ಕೋರಲಾಗಿದೆ. 

ಮಹಿಳೆಯನ್ನ ವಿವಸ್ತ್ರಗೊಳಿ, ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ ಪ್ರಕರಣದ ಆರೋಪಿಗಳಿಗೆ ಹೂ, ಹಾರ ಹಾಕಿ ಅದ್ಧೂರಿಯಾಗಿ ಸ್ವಾಗತಿಸಿದ ಮಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗಿದೆ.   

click me!